ಪ್ರೇಮ ಮಂದಿರ
ಪ್ರೇಮಮಂದಿರ.
( ಐತಿಹಾಸಿಕ ಕಾದಂಬರಿಯು)
ಭೀಮಾಜಿ ಜೀವಾಜಿ ಹುಲಿ ಕವಿ,
ಗವರ್ನಮೆಂಟ್ ಟ್ರೇನಿಂಗ್ ಕಾಲೇಜ, ಮೈಸೂರು.
[ಸರ್ವಾಧಿಕಾರವು ಲೇಖಕನ ವಶದಲ್ಲಿದೆ ]
ಬೆಳಗಾವಿಯೊಳಗೆ ದೇವೇಂದ್ರ ಫಡೆಪ್ಪಾ ಚೌಗುಲೆಯವರು ತಮ್ಮ "ಶ್ರೀಮಹಾವೀರ" ಮುದ್ರಣಾಲಯದಲ್ಲಿ ಮುದ್ರಿಸಿದರು.
ಮತ್ತು
ಧಾರವಾಡದೊಳಗೆ ಶ್ರೀ ಕೆ. ಬಿ. ಅಂಕಲ ಮ್ಯಾನೇಜರ ವಾಗ್ಭೂಷಣ ಧಾರವಾಡ ಇವರು ಪ್ರಸಿದ್ಧ ಮಾಡಿದರು.
ಸನ್ ೧೯
ಬೆಲೆ ೮ ಆಣೆ.
ಸಮರ್ಪಣಂ
ಲಲಿತಕರುಣಸಿಂಹರಂತೆ
ಪರಿಶುದ್ಧ ಪ್ರೇಮವುಳ್ಳವರೂ, ಕುಲಾಚಾರಸಂಪನ್ನರೂ, ಉಚ್ಚ ಮನೋಭಾವದವರೂ, ಏಕಹೃದಯರೂ ಆದ
ಕರ್ಣಾಟಕಸ್ಥ ಪ್ರಿಯದಂಪತಿಗಳಿಗೆ
ಈ "ಪ್ರೇಮಮಂದಿರ" ವನ್ನು ಸಂತೋಷದಿಂದ ಸಮರ್ಪಿಸಿದ್ದೇನೆ.
ಭೀ. ಜೀ. ಹುಲಿಕವಿ.
ಸದ್ಯಕ್ಕೆ ಪ್ರಸಿದ್ಧವಾದ, ಪ್ರಸ್ತುತಲೇಖಕರಿಂದಲೇ ಬರೆಯಲ್ಪಟ್ಟ ಕೆಲವು ಪುಸ್ತಕಗಳು.
(೧) ಸುನಂದಿನಿ ಅಥವಾ ಪವಿತ್ರ ಪತಿಭಕ್ತಿ
(೨) ದುಷ್ಕರ್ಮಪರಿಪಾಕ ಅಥವಾ ಉನ್ಮಾದಿನಿಯಾದ ಮೋಹಿನಿ
(೩) ನನ್ನ ಕನಸು
(೪) ಶ್ರೀವಿಷ್ಣು ಸಹಸ್ರನಾಮಮೀಮಾಂಸೆ
(೫) ಯಶೋಮತಿ
(೬) ಅತ್ತೆಯ ಮನೆಯ ಕಾಟ ಅಥವಾ ಸುಶೀಲಾವಸಂತರ ದುರ್ದೈವ
(೭) ಶ್ರೇಯಃಸಾಧನ
(೮) ಪತಿತಪರಾವರ್ತನ
(೯) ಹತಭಾಗಿನಿಯಾದ ವಿಮಲೆ
C/o ಹನುಮಾನ್ ಮತ್ತು ಕಂಪನಿ ಹುಬ್ಬಳ್ಳಿ.
ಕಾದಂಬರಿಗಳ ಮುಖ್ಯ ಉದ್ದೇಶವು ವಾಚಕರನ್ನು ಆನಂದಗೊಳಿಸುವುದೋ ಅಥವಾ ಅವರಿಗೆ ಒಳ್ಳಡೆಯನ್ನು ಕಲಿಸುವುದೋ? ಈ ಪ್ರಶ್ನೆಯನ್ನು ಕುರಿತು ಅನೇಕ ಆಂಗ್ಲವಿದಗ್ಧರೂ, ಜರ್ಮನ್ ವಿದ್ವಾಂಸರೂ ಅನೇಕ ವಿಧವಾಗಿ ಚರ್ಚಿಸಿದ್ದಾರೆ. ಆ ಎಲ್ಲ ಚರ್ಚೆಗಳ ಬಹುಮತದ ಸಾರಾಂಶವನ್ನು ಸಂಗ್ರಹಿಸಿ ಹೇಳಬೇಕಾದರೆ ಹೀಗೆ ಹೇಳ ಬಹುದು. * ಕಾದಂಬರಿಕಾರನಿಗೆ ನೈತಿಕೋದ್ದೇಶವು ಮುಖ್ಯವಾದ ಲಕ್ಷವಲ್ಲ; ವಾಚಕರ ಚಿತ್ತವನ್ನು ಸಂಪೂರ್ಣವಾಗಿ ಆಕರ್ಷಿಸುವಂತಹ ಸೌಂದರ್ಯಯುಕ್ತವಾದ ರೀತಿಯಲ್ಲಿ ತಾನು ಹೇಳತಕ್ಕುದನ್ನು ಹೇಳಿ, ವ್ಯಂಗ್ಯಮರ್ಯಾದೆಯಲ್ಲಿ ಗೋಚರವಾಗುವ ನೈತಿಕಭಾವಗಳಿಂದಲೇ ಆತನು ತೃಪ್ತನಾಗುತ್ತಾನೆ. ” ಕಾದಂಬರಿಯು ವಾಚಕರಲ್ಲಿ ಅಸ ಕೈಯನ್ನು ಹುಟ್ಟಿಸಬೇಕು; ಅವರನ್ನು ಆನಂದಗೊಳಿಸಬೇಕು; ಅವರ ನೀಚವಾದ ಮನೋವಿಕಾರಗಳನ್ನೂ, ಅಸಮಾಧಾನಕರವಾದ ತೊಂದರೆಗಳಿಂದುಂಟಾದ ಬೇಸರ ವನ್ನೂ ಹೋಗಲಾಡಿಸಿ ಲೀಲೆಯಿಂದಲೇ ಅವರನ್ನು ಉಚ್ಚವಿಚಾರಗಳಲ್ಲಿ ತಲ್ಲೀನರನ್ನಾಗಿ ಮಾಡಬೇಕು; ಅವರ ದಣಿವನ್ನೂ ಪೀಡೆಯನ್ನೂ ಮರೆಯಿಸಬೇಕು; ಮುಖ್ಯಪಾತ್ರದ ಪ್ರತಿಯೊಂದು ಚಲನವಲನೆಯ ವಿಷಯದಲ್ಲಿಯೂ ಸಹಾನುಭೂತಿಯುಕ್ತರಾಗಿರುವಂತೆ ಅವರ ಮನೋವಿಕಾರಗಳನ್ನು ಸ್ಪೂರ್ತಿಗೊಳಿಸಬೇಕು; ಅವರ ಆತ್ಮವು ಅಸಾಧಾರಣ ವಾದ ಮತ್ತು ಗಭೀರವಾದ ವಾತಾವರಣದಲ್ಲಿ ವಿಹರಿಸುವಂತೆ ಮಾಡಬೇಕು. ಈ ರೀತಿ ಯಲ್ಲಿ ಬರೆದ ಕಾದಂಬರಿಯು ನಿಶ್ಚಯವಾಗಿಯೂ ಅತ್ಯುತ್ತಮವಾದ ನೈತಿಕಪರಿಣಾಮ ವನ್ನು ಂಟುಮಾಡುವುದು. ನೀತಿಪರಿಣಾಮವನ್ನುಂಟುಮಾಡುವುದು ಅವಶ್ಯಕವೆಂಬುದೇ ಮೋ ನಿಜ; ಆದರೆ ಅದು ಕವಿಯ (Saasi ಹfa: ) ಮುಖ್ಯ ಕರ್ತವ್ಯವಲ್ಲ. ಕವಿಗೂ ಉಪನ್ಯಾಸಕನಿಗೂ, ಕಾವ್ಯಕ್ಕೂ ಉಪನ್ಯಾಸಕ್ಕೂ ಇರುವ ಭೇದವಿದೇ, ಸಾರಾಂಶ ವೇನಂದರೆ-ಕಾದಂಬರಿಗಳಲ್ಲಿ ವಾಚಕರ ಚಿತ್ತಾಕರ್ಷಣವು ಲೇಖಕನ ಆದ್ಯ ಕರ್ತ ವ್ಯವು; ನೀತಿಬೋಧೆಯು ವ್ಯಂಗ್ಯ ಮರ್ಯಾದೆಯಿಂದ ತೋರಬೇಕಲ್ಲದೆ ವಾಚ್ಯವಾಗಿ ರಕೂಡದು. ಈ ಉದ್ದೇಶದಿಂದಲೇ ನಾನು ಒಂದೆರಡು ಕಾದಂಬರಿಗಳನ್ನು ಬರೆದಿದ್ದೇನೆ. “ಉತ್ತಮೋತ್ತಮವಾದ ಸ್ವತಂತ್ರ ಗ್ರಂಥಗಳನ್ನು ಬರೆಯುವ ಯೋಗ್ಯತೆಯು ನನ್ನಲ್ಲಿ ಇಲ್ಲದೆ ಇದ್ದುದರಿಂದಲೂ, ಇದ್ದ ಯೋಗ್ಯತೆಗೆ ಅನುಗುಣವಾದ ಗ್ರಂಥಗಳನ್ನು ರಚಿಸು ವುದಕ್ಕೆ ಸಾಕಷ್ಟು ವೇಳೆಯು ದೊರೆಯದೆ ಇದ್ದುದರಿಂದಲೂ ನನಗೆ ತಿಳಿದ ಅನ್ಯ ಭಾಷೆಗಳೊಳಗಿನ ಪುಸ್ತಕಗಳನ್ನು ಕೂಡಿದ ವೇಳೆಯಲ್ಲಿ ಭಾಷಾಂತರಿಸಿ ಕೈಲಾದಮಟ್ಟಿಗೆ ಕನ್ನಡಿಗರ ಸೇವೆಯನ್ನು ಮಾಡುತ್ತಲಿದ್ದೇನೆ. ಈ ಪ್ರಕಾರದ ನನ್ನ ಅಲ್ಪ ಸೇವೆಯನ್ನೇ ಬಹುವಾಗಲಿಸಿ ( ಸುನಂದಿನೀ ಅಥವಾ ಪವಿತ್ರ ಪತಿಭಕ್ತಿ, ಶ್ರೀಯಃಸಾಧನ ಎಂಬ ಪುಸ್ತಕಗಳಿಗೆ ಕರ್ನಾಟಕ ವಿದ್ಯಾವರ್ಧಕಸಂಘದವರು ಬಹುಮಾನವನ್ನಿತ್ತು ನಿದುದಕ್ಕಾಗಿ ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಅದರಂತೆ ಪ್ರಸ್ತುತ ಪುಸ್ತಕವನ್ನು ವಾಗ್ಯೂಷಣದ್ವಾರದಿಂದ ಪ್ರಕಟಿಸಿದುದಕ್ಕಾಗಿ ಈ ಸಂಘ ದವರಿಗೆ ಆಭಾರಿ ಯಾಗಿರುವೆನಲ್ಲದೆ, ಬಹುಮಾನವನ್ನು ಕೊಟ್ಟು ಈ ಕೆಲಸದಲ್ಲಿ ನನಗೆ ಹೆಚ್ಚಾದ ಹುರು « ಹುಟ್ಟಿಸುವರೆಂದು ನಂಬಿದ್ದೇನೆ. ಇನ್ನು ಮುಂದೆ ಭಾಸ ಮಹಾಕವಿಯ ಸಂಸ್ಕೃತ ನಾಟಕದ ಭಾಷಾಂತರದ CC ಕರ್ಣಾಟಿಕಸ್ವಪ್ನ ವಾಸವದತ್ತಂ ” ಎಂಬ ನಾಟಕ ರಸವನ್ನು ವಾಗ್ಯೂಷಣದ ವಾಚಕರ ಹೃದಯಪಾತ್ರದಲ್ಲಿ ಬಡಿಸಲು ಬರುವೆನೆಂಬುದನ್ನು ತಿಳಿಸಲು ಸಂತೋಷಬಡುತ್ತೇನೆ. ಮತ್ತು ಈ ಸುಯೋಗವನ್ನು ಒದಗಿಸಿಕೊಡಲು ಒಪ್ಪಿರುವ ವಾಗ್ಯೂಷಣದ ವ್ಯವಸ್ಥಾಪಕರಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. - ಮಹಾರಾಷ್ಟ್ರಭಾಷೆಯಿಂದ ನಾನು ಕನ್ನಡಕ್ಕೆ ಪರಿವರ್ತಿಸಿದ ಕಾದಂಬರಿಗಳಲ್ಲಿ ಇದು ಮೂರನೆಯದಾಗಿದೆ. ಈ ಪುಸ್ತಕದ ಗುಣದೋಷವಿಮರ್ಶೆಯನ್ನು ಮಾಡುವುದು, ನಿಷ್ಪಕ್ಷಪಾತಿಗಳೂ ವಿದ್ವಾಂಸರೂ ಆದ ವಾಚಕರ ಕೆಲಸವಾದುದರಿಂದ ಆ ವಿಷಯ ವಾಗಿ ನಾನೇನೂ ಬರೆಯುವ ಆವಶ್ಯಕತೆಯಿಲ್ಲವೆಂದು ತಿಳಿಯುತ್ತೇನೆ. ಇದರ ಮೂಲವ್ರ (- ಮಾಸಿಕಮನೋರಂಜನ ”ದಲ್ಲಿ ಪ್ರಸಿದ್ಧವಾಗಿತ್ತು. ಆ ಪತ್ರಿಕೆಯ ಸಂಪಾದಕರಾದ ಶ್ರೀ. ಕಾಶೀನಾಥ ರಘುನಾಥ ಮಿತ್ರರವರು ಕೀರ್ತಿಶೇಷರಾದ ವೃತ್ತಾಂತವನ್ನು ಈ ಉಪೋದ್ಘಾತದಲ್ಲಿ ಉಲ್ಲೇಖಿಸುವ ಪ್ರಸಂಗವು ಒದಗಿದುದಕ್ಕಾಗಿ ಅತ್ಯಂತವಾಗಿ ವಿಷಾ ದಿಸುತ್ತೇನೆ! ಇದು ವಂಗಭಾಷೆಯಿಂದ ಮಹಾರಾಷ್ಟ್ರಭಾಷೆಗೆ ಪರಿವರ್ತಿತವಾಗಿರ ಬೇಕೆಂದು ಹೇಳಬಹುದಾಗಿದೆ. ನಾನು ಮರಾಠಿಭಾಷೆಯ ಮೂಲವನ್ನೇ ಅನುಸರಿಸಿ ರುಪಿನಾದುದರಿಂದ ವಂಗಭಾಷಾವಿಶಾರದರಾದ ವಾಚಕರು, ಇದರಲ್ಲಿ ಏನಾದರೂ ನ್ಯೂನಾತಿರೇಕಗಳು ಕಂಡರೆ ಅವುಗಳಿಗೆ ನನ್ನನ್ನು ಹೊಣೆ ಮಾಡಲಿಕ್ಕಿಲ್ಲವೆಂದು ನಂಬಿದ್ದೇನೆ. ಕರ್ಣಾಟಕಭಕ್ತ ಭೀಮಾಜಿ ಜೀವಾಜಿ ಹುಲಿ ಕವಿ. ಪರಿಚ್ಛೇದ ಸೂಚಿ. ಮೊದಲನೆಯ ಪರಿಚ್ಛೇದ-ವಿಮೋಚನ ? •••••• ಎರಡನೆಯ ಪರಿಚೆ ದ-ಪ್ರೇಮಸಂಚಾರ ! ಮೂರನೆಯ ಪರಿಚ್ಛೇದ-ಚಿತ್ರದಮನ ! ನಾಲ್ಕನೆಯ ಪರಿಚ್ಛೇದ-ಗುಪ್ತ ಸಂದರ್ಶನ! ೧೯ ಐದನೆಯ ಪರಿಚ್ಛೇದ-ಭೈರವಿ. ಆರನೆಯ ಪರಿಚ್ಛೇದ-ಪರಿಚಯ. ನಿಳನೆಯ ಪರಿಚ್ಛೇದ-ವಿಲಕ್ಷಣ ಕುಲಾಚಾರ. ... ಎಂಟನೆಯ ಪರಿಚ್ಛೇದ-ಪ್ರೇಮಮಂದಿರ. C L ೩೦
- : : : : : : :
- : : : : :
ಮೊದಲನೆಯ ಪರಿಚ್ಛೇದ.
[ಸಂಪಾದಿಸಿ]ವಿಮೋಚನ !
[ಸಂಪಾದಿಸಿ]“ಹಾ! ರಕ್ಷಿಸಿ! ರಕ್ಷಿಸಿ! ಯಾರಾದರೂ ಓಡಿ ಬಂದು ನನ್ನ ಪ್ರಾಣವನ್ನು ಉಳಿಸಿರಿ!” ಯಾವಳೋ ಒಬ್ಬ ತರುಣಿಯು ಅತ್ಯಂತ ಕರುಣಸ್ವರದಿಂದ ಈ ಪ್ರಕಾರವಾಗಿ ಒದರುತ್ತಿದ್ದಳು. ಅವಳ ಆಕ್ರೋಶದಿಂದ ಕನಕಗಡದ ಸುತ್ತುಮುತ್ತಲಿನ ಗುಡ್ಡಗಾಡ ಪ್ರದೇಶವೆಲ್ಲ ಪ್ರತಿಧ್ವನಿತವಾಯಿತು! ಪರ್ವತದ ಪ್ರತಿಯೊಂದು ದರಿಯಲ್ಲಿಯೂ ಕಂದರ ದಲ್ಲಿಯೂ ಆ ಕರುಣಸ್ವರವು ತುಂಬಿ ಹೋಯಿತು.
ತರುಣಿಯು ಈ ಪ್ರಕಾರ ಆರ್ತಸ್ವರದಿಂದ ಕೂಗಿಕೊಳ್ಳುತ್ತಿದ್ದ ಸ್ಥಳದಿಂದ ಸ್ವಲ್ಪ ಅಂತ
ರದ ಮೇಲೆ ಗಡ್ಡದೊಳಗೆ ಒಂದು ದಾರಿಯು ಹೋಗಿತ್ತು; ಆ ದಾರಿಯ ಪಕ್ಕದಲ್ಲಿ ಒಂದು
ಝರಿಯು ಮಂದವಾಗಿ ಹರಿಯುತ್ತಿತ್ತು, ಪ್ರವಾಸದ ಶ್ರಮದಿಂದ ದಣಿದು ತೃಷಾರ್ತನಾದ
ಇಒಬ್ಬ ತರುಣುಪಾಯಿಯು ಆ ಝರಿಯ ದಂಡೆಯ ಮೇಲೆ ಕುಳಿತು ತನ್ನ ನೀರಡಿಕೆಯನ್ನು
ಶಾಂತಮಾಡಿಕೊಳ್ಳುತ್ತಿದ್ದನು. ಆತನು ಇಂದು ಬಹುದೂರದ ಪ್ರವಾಸವನ್ನು ಮಾಡಿದ್ದ
ನೆಂಬಂತೆ ತೋರುತ್ತಿತ್ತು. ಆತನು ತೀರ ನಿಸ್ತೇಜನಾಗಿದ್ದನು. ಆತನ ಮುಖಮಂಡಲವು
ಬೆವರಿನಿಂದ ತೊಯ್ದು ಹೋಗಿದ್ದರೂ ಒಣಗಿ ಹೋದ ಕಮಲದ ಹಾಗೆ ಕಾಣುತ್ತಿತ್ತು,
ನೀರಡಿಕೆಯಿಂದ ವ್ಯಾಕುಲಿತನಾಗಿ ನೀರಿಗೋಸ್ಕರ ಇತ್ತಲು ಬಹುಕಾಲದವರೆಗೆ ಸುತ್ತಿದ
ಕಟ್ಟಕಡೆಗೆ ಅವನು ಆ ಝರಿಯನ್ನು ಕಂಡನು. ಕೂಡಲೇ ಅದರ ದಂಡೆಗೆ ಬಂದು
ಬೊಗಸೆಯನ್ನು ತುಂಬಿ ಒಂದೆರಡು ಗುಟುಕು ನೀರನ್ನು ಕುಡಿಯುವಷ್ಟರಲ್ಲಿಯೇ ಮೇಲೆ
ಹೇಳಿದ ತರುಣಸ್ತ್ರೀಯ ಆರ್ತವಾದ ಕಂಠಸ್ವರವು ಪರ್ವತಪ್ರದೇಶವನ್ನೆಲ್ಲ ನಿನಾದಿತವಾಗಿ
ಮಾಡಿ ಆತನ ಕರ್ಣರಂಧ್ರವನ್ನು ಪ್ರವೇಶಿಸಿತು. ಆಗಲಾ ತರುಣನು ನೀರು ಕುಡಿಯುವು
ದನ್ನು ಅಷ್ಟಕ್ಕೇ ಬಿಟ್ಟನು. ಬೊಗಸೆಯೊಳಗಿನ ನೀರನ್ನು ಹಾಗೆಯೇ ಕೆಳಗೆ ಎಸೆದು
ನಮ್ಮ ತಿಪಾಯಿಯು ಎದ್ದು ನಿಂತುಕೊಂಡನು.
ನಾಗೂ ಷಣ.
- # # 3 + 4 + + ++ - *
• • • • • • •• • •••••• • • • • • • • •••••••••••• ಆ ತರುಣನು ತನ್ನ ಕುದುರೆಯನ್ನು ಸಮೀಪದಲ್ಲಿಯೇ ಒಂದು ಒಣ ಮರದ ಬೇರಿಗೆ ಕಟ್ಟಿದ್ದನು. ಅಲ್ಪಾವಧಿಯಲ್ಲಿಯೇ ಆತನು ಅದರ ಹತ್ತಿರ ಹೋಗಿ, ಲಗುಬಗೆಯಿಂದ ಅದರ ಬೆನ್ನು ಚಪ್ಪರಿಸಿ ಟಣ್ಣನೆ ಹಾರಿ ಅದರ ಮೇಲೆ ಕುಳಿತು ಮಾತನಾಡಿದನು. ( ಮಗೂ, ಅಜಯಾ! ನಡೆ. ಇಂದು ನಮಗೆ ವಿರಾಮವು ದೊರೆಯಲೇ ಇಲ್ಲ. ಅಜಯನನ್ನು ವೇಗವಾಗಿ ನಡೆಯಿಸುತ್ತ ಆ ಶಿಪಾಯಿಯು ಆ ಆಕ್ರಂದನದ ಧೋರ ಣೆಯಿಂದಲೇ ಮಾರ್ಗವನ್ನು ಕ್ರಮಿಸಹತ್ತಿದನು. ಆ ಗುಡ್ಡಗಾಡ ಪ್ರದೇಶದಲ್ಲಿ ಹೆಚ್ಚಾಗಿ ತಗ್ಗು ಮಿಟ್ಟಿಗಳಿದ್ದದರಿಂದ ಇಷ್ಟ ಸ್ಥಳವನ್ನು ಮುಟ್ಟಲು ಆತನಿಗೆ ಸ್ವಲ್ಪ ಅವಕಾಶವು ಬೇಕಾ ಆಯಿತು. ಆ ಸ್ಥಳಕ್ಕೆ ಬಂದೊಡನೆಯೇ ಅವನೊಂದು ವಿಲಕ್ಷಣವಾದ ನೋಟವನ್ನು ಕಂಡ ನು. ಅತ್ಯಂತ ರೂಪವತಿಯಾದ ಒಬ್ಬ ತರುಣ ಸ್ತ್ರೀಯನ್ನು ಒಂದು ಗಿಡಕ್ಕೆ ಬಿಗಿದು, ಪಿಶಾ ಚಾಕಾರನಾದ ಒಬ್ಬ ಪುರುಷನು ಕೆಂಗಣ್ಣಿನಿಂದ ನೋಡುತ್ತ ಅವಳ ಎದುರಿನಲ್ಲಿ ನಿಂತು ಕೊಂಡಿದುದು ಅವನ ಕಣ್ಣಿಗೆ ಬಿತ್ತು. ಆ ಪುರುಷನು ನರಕಲೋಕದ ಭಯಂಕರನಾದ ದ್ವಾರಪಾಲಕನೋ ಎಂಬ ಸಂಶಯವು ನಮ್ಮ ಶಿಪಾಯಿಯ ಮನಸ್ಸಿನಲ್ಲಿ ಹುಟ್ಟಿತು. ಸಮೀ ಪದಲ್ಲಿಯೇ ಒಂದು ಮೇಣೆಯು ತುಂಡುತುಂಡಾಗಿ ಮುರಿದು ಬಿದ್ದಿತ್ತು. ನಮ್ಮ ತರುಣವೀರನು ಅಲ್ಲಿ ಬಂದೊಡನೆಯೇ ಕೈಯೊಳಗಿನ ಕತ್ತಿಯನ್ನು ಒರೆ ಯೊಳಗಿಂದ ಹಿರಿದನು, ಮತ್ತು ಬಡ್ಡದ ಹಿಡಿಕೆಯಿಂದ ಆತನ ಭುಜದ ಮೇಲೊಂದು ಬಲವಾದ ಏಟನ್ನು ಕೊಟ್ಟು ಕೊಧಕ೦ಪಿತ ಸ್ವರದಿಂದ ಗರ್ಬಿಸಿದನು. ((ನೀನು ಯಾರು ? ” ಭಯದಿಂದ ಬೆದರಿ ನಡುಗುತ್ತ ನಡುಗುತ್ತ ಆ ಪುರುಷನು ಉತ್ತರವಿತ್ತನು. ಮಹಾ ಸ್ವಾಮಿ, ದಯವಿಟ್ಟು ನನ್ನನ್ನು ಕ್ಷಮಿಸಿರಿ. ನಾನು ಅಪ್ಪಣೆಯಂತೆ ನಡೆಯುವ ಸೇವಕನು. ನಾನು ಸ್ವಲ್ಪಾದರೂ ಅಪರಾಧವನ್ನು ಮಾಡಿಲ್ಲ. ” (ನಿನ್ನ ಒಡೆಯನು ಎಲ್ಲಿ ಇದ್ದಾನೆ ? ” (( ಅವರು ಮೇಣಾವಾಹಕರನ್ನು ಬೆನ್ನಟ್ಟಿ ಹೋಗಿದ್ದಾರೆ. ” ( ಈ ಮುರಕ ಮೇಣೆಯು ಯಾರದು? ಅದನ್ನು ಹೊರುವವರು ಎಲ್ಲಿಹೋದರು ?” ಜೀವದ ಆಶೆಯಿಂದ ಅವರು ಓಡಿಹೋದರು. ಈ ಮೇಣೆಯು ಈ ಅಮ್ಮನವರದು, ದೇವದರ್ಶನವನ್ನು ಮಾಡಿಕೊಂಡು ಇವರು ಈ ದಾರಿಯಿಂದ ಹೋಗುತ್ತಿರಲು ನಮ್ಮ ಯಜಮಾನರು ಮೇಣವಾಹಕರನ್ನು ಹೊಡೆದು ಓಡಿಸಿದರು. ” 'ನೀನು ಯಾರು? ರಜಪೂತನೋ ? ” ಹೌದು-ನಾನು ಚಂದ್ರಾವತನು. ” `««ದುಷ್ಟನಾದ ಆ ನಿನ್ನ ಯಜಮಾನನು ಯಾರು ? ೨೨ (ಅವರೂ ಚಂದ್ರಾವತರೇ, ಪ್ರೇಮಮಂದಿರ. MvÀ » 1 2 1 1 • • • • • • • “ನೀವು ಚಂದ್ರಾವತ ರಜಪೂತಜಾತಿಗೆ ನಿಜವಾಗಿಯೂ ಕಲಂಕಪ್ರಾಯರು. ಈ ಹೆಣ್ಣು ಮಗಳು ಯಾರೆಂಬದನ್ನು ನೀನು ಬಲ್ಲೆಯಾ ? ೨೨ (ನಾನರಿಯೆನು, ” ಕತ್ತಿಯ ಅಲಗನ್ನು ಆತನ ಹೆಗಲಮೇಲಿಟ್ಟು ನಮ್ಮ ತರುಣ ಶಿಪಾಯಿಯು ಕರ್ಕ ಶಸ್ವರದಿಂದ ಮಾತಾಡಿದನು. ನಿಜವಾಗಿ ಹೇಳು, ಮೂರ್ಖಾ ! ಇಲ್ಲದಿದ್ದರೆ ನಿನ್ನ ಸಂತೆ ಯು ಮುಗಿಯಿತೆಂದು ತಿಳಿ, ” ನಡುಗುತ್ತ ನಡುಗುತ್ತ ಆ ಪುರುಷನು ಹೇಳಿದನು. “ಏಕಲಿಂಗದೇವರ ಶಪಥದಿಂದ ಹೇಳುತ್ತೇನೆ. ನಿಜವಾಗಿ ನನಗೆ ಯಾವ ಸಂಗತಿಯೂ ಗೊತ್ತಿಲ್ಲ. ” 'ಈ ಹೆಣ್ಣು ಮಗಳನ್ನು ಇಲ್ಲಿ ಕಟ್ಟಿದವರಾರು ? ” (ಯಜಮಾನರವರೇ” ಆತನ ಹೆಗಲಮೇಲಿನ ಖಡ್ಗವನ್ನು ತೆಗೆದುಕೊಂಡು ನಮ್ಮ ತರುಣನು ಉಚ್ಚಸ್ವರ ದಿಂದ ಆ ಪುರುಷನನ್ನು ಬೆದರಿಸುತ್ತ ಮಾತನಾಡಿದನು. ಇಲ್ಲಿಂದ ಓಡಿಹೋಗುವದಕ್ಕೆ ಕೊಂಚಮಟ್ಟಿಗಾದರೂ ಪ್ರಯತ್ನ ಪಡುವೆಯಾದರೆ ಸತ್ತೆಯೆಂದೇ ತಿಳಿದುಕೋ ! ನನ್ನ ಕೆಲಸವೆಲ್ಲ ಮುಗಿಯುವ ವರೆಗೆ ಬಾಯಿಮುಚ್ಚಿಕೊಂಡು ಇಲ್ಲಿ ನಿಲ್ಲು, ” ಹೀಗೆ ಆತನನ್ನು ಆಜ್ಞಾಪಿಸಿ, ಮೃತಪ್ರಾಯಳಾದ ಆ ರಮಣಿಯ ಕಟ್ಟಿನ ಹಗ್ಗಗ ಳನ್ನು ತ್ವರೆಯಿಂದ ಹರಿದು ಆಕೆಯನ್ನು ಬಂಧನದಿಂದ ಬಿಡಿಸಿದನು. ಚೋರರಿಂದ ತನಗೆ ಪ್ರಾಪ್ತವಾದ ಅವಸ್ಥೆಯಮೂಲಕ ಆ ಕೋಮಲಾಂಗಿಯು ಗದಗದ, ನಡುಗುತ್ತಿದ್ದಳು. ಶೂನ್ಯದೃಷ್ಟಿಯಿಂದ ಅವಳು ಆ ತರುಣವೀರನನ್ನು ನೋಡಹತ್ತಿದಳು. ಪರಿಪರಿಯಿಂದ ಅವಳಿಗೆ ಅಭಯವನ್ನಿತ್ತು ನಮ್ಮ ತರುಣವೀರನು ಕೋಮಲ ಸ್ವರ 'ದಿಂದ ಮಾತಾಡಿದನು. ( ಇನ್ನು ಮೇಲೆ ತಾವು ಹೆದರಬೇಕಾದುದಿಲ್ಲ. ತಾವು ಈಗ ಸಂಕಟದೊಳಗಿಂದ ಪಾರಾಗಿರುವಿರಿ. ತಾವು ಯಾರೆಂಬುದನ್ನು ನನಗೆ ನಿರ್ಭಯದಿಂದ ಹೇಳುವದಾಗಬೇಕು. ನನ್ನ ಹೆಸರು ಕರುಣಸಿಂಹ, ನಾನು ಅಕಬರಬಾದಶಹನ ಸೇನಾ ಪತಿಗಳಲ್ಲೊಬ್ಬನು. ಮೊಗಲರು ರಾಜಸ್ಥಾನದಲ್ಲಿ ಹೊಸದಾಗಿ ಗೆದ್ದುಕೊಂಡಿರುವ ಪ್ರದೇ ಶಕ್ಕೆ ನಾನೊಬ್ಬ ಪ್ರಮುಖನಾದ ಅಧಿಕಾರಿಯಾಗಿದ್ದೇನೆ. ನಿಃಸಂದೇಹವಾಗಿ ತಾವು ನನ್ನ ಮೇಲೆ ವಿಶ್ವಾಸವನ್ನಿಡಿರಿ. ” ಕರುಣಸಿಂಹನ ಪರಿಚಯದಿಂದ ಆ ಹೆಂಗಸು ಚಕಿತಳಾದಳು. “ ಕರುಣಸಿಂಹ! ಕರುಣಸಿಂಹ! ಆ ಪ್ರಸಿದ್ಧರಾದ ಕರುಣಸಿಂಹರು ಇವರೇ ಏನು? !ಆ ರಮಣಿಯ ಹೃದಯದಲ್ಲಿದ್ದ ಭಯದ ಸ್ಥಳದಲ್ಲಿ ಈಗ ಆನಂದವು ತಾಂಡವವನ್ನು ಮಾಡತೊಡಗಿತು. ಇನ್ಯಾವನಾದರೂ ಒಬ್ಬ ಪುರುಷನಿಗೆ ಈ ಪ್ರಸಂಗದಲ್ಲಿ ತನ್ನ ಪರಿಚಯವನ್ನು ಸಹಜವಾಗಿ ಹೇಳಿಬಿಡಬಹುದಾಗಿತ್ತು; ಆದರೆ ಈ ವೀರನಿಗೆ ತನ್ನ ಪರಿಚಯವನ್ನುಂಟುಮಾಡಿಕೊಡು ವಾಗ್ಯೂಷಣ, Aff 1 ವುದು ಯೋಗ್ಯವಲ್ಲವೆಂದು ಆಲೋಚಿಸಿ ಆ ತರುಣಿಯು ಮಾತನಾಡಿದಳು. « ನೀರ ಶ್ರೇಷ್ಠರೇ ! ತಾವು ಈ ದಿನ ನನ್ನ ಮೇಲೆ ಮಾಡಿದ ಉಪಕಾರವನ್ನು ಜನ್ಮ ಜನ್ಮಾಂತರ ದಲ್ಲಿಯೂ ತೀರಿಸುವುದು ಅಸಾಧ್ಯವಾಗಿದೆ. ವೀರೋಚಿತವಾದ ಧರ್ಮದಿಂದ ವರ್ತಿಸಿ ತಾವು ಭಯಂಕರವಾದ ಪ್ರಾಣಸಂಕಟದೊಳಗಿಂದ ನನ್ನನ್ನು ಸಂರಕ್ಷಿಸಿದಿರಿ. ಆದರೆ ನಾನು ಯಾರೆಂಬುದನ್ನು ತಮಗೆ ತಿಳಿಸುವಂತಿಲ್ಲ; ಆದುದರಿಂದ ನನ್ನನ್ನು ಕ್ಷಮಿಸುವುದಾಗ ಬೇಕು. ದಯವಿಟ್ಟು ತಾವು ನನ್ನನ್ನು ಈ ಗುಡ್ಡಗಾಡ ಪ್ರದೇಶದಿಂದ ಆಚೆಗೆ ಕರೆದು ಕೊಂಡು ಹೋಗುವುದಾಗಬೇಕು. ಆ ಮೇಲೆ ನಾನೇ ಹೋಗುವೆನು. ಸಮೀಪದಲ್ಲಿಯೇ ಗ್ರಾಮವಿದೆ; ಅಲ್ಲಿ ಮೇಣೆಯಾಗಲಿ, ಡೋಲಿಯಾಗಲಿ ಸಿಕ್ಕಬಹುದು. ” « ತಮ್ಮ ಅಪೇಕ್ಷೆಯಂತೆಯೇ ಆಗಬಹುದು! ಆದರೆ ತಾವು ಒಬ್ಬರೇ ಇರುವಿರಿ. ಆದುದರಿಂದ ಒಂದು ವೇಳೆ ತಮಗೆ ಪುನಃ ಸಂಕಟವು ಪ್ರಾಪ್ತವಾಗಬಹುದು ? ಮುಗುಳಗೆಯಿಂದ ಆ ರಮಣಿಯು ಮಾತನಾಡಿದಳು, (( ಬಾದಶಹನ ನೂತನ ಸೇನಾಪತಿಗಳ ಖಡ್ಡಧಾರಿಯಾದ ಹಸ್ತವು ದುರ್ಬಲವಾಗಿಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತು ! ಆದರೆ! ” ನಮ್ಮ ತರುಣಶಿಪಾಯಿಯು ಆ ರಮಣಿಯ ಅತುಲವಾದ ಸೌಂದರ್ಯದಿಂದ ಮೊದಲೇ ದೇಹಭಾವವನ್ನು ಮರೆತಿದ್ದನು. ಈಗ ಅವಳ ಮಂಜುಲವಾದ ಕಂಠಸ್ವರವನ್ನು ಕೇಳಿ ಮಂತ್ರಮೂಢಮನುಷ್ಯನಂತೆ ಸ್ತಬ್ಬನಾದನು ? ಆ ಮೇಲೆ ಏನನ್ನೋ ಜ್ಞಾಪಿಸಿ ಕೊಂಡು ಹಿಂದಕ್ಕೆ ಹೊರಳಿ ನೋಡಿದನು. ಅಲ್ಲೇನಿದೆ? ಯೋಗ್ಯವಾದ ಸಂಧಿಯನ್ನು ಸಾಧಿಸಿ, ಆ ಹಸ್ತಗತನಾದ ಚಂದ್ರಾವತನು ಆಗಲೇ ಓಡಿಹೋಗಿದ್ದನು. ಆ ಪರ್ವತ ಪ್ರದೇಶವು ನಮ್ಮ ಶಿಪಾಯಿಗೆ ಅಪರಿಚಿತವಾಗಿತ್ತು. ಈಗಲವನು ಮಾಡಬೇಕಾದುದೇನು? ದುರ್ಗಮವಾದ ಆ ಪರ್ವತವನ್ನು ಆತನು ದಾಟಿ ಹೋಗುವುದೆಂತು? ವೀಣಾರವವನ್ನು ಕೂಡ ನಾಚಿಸುವಂತಹ ಮಧುರವಾದ ಸ್ವರದಿಂದ ಆ ಸುಂದರಿ ಯು ಮತ್ತೆ ಮಾತನಾಡಿದಳು. ( ತಾವು ಅದಾವ ವಿಚಾರವನ್ನು ಮಾಡುತ್ತಿರುವಿರಿ? ನಡೆ ಯಿರಿ, ನಾವು ಜಾಗ್ರತೆಯಾಗಿ ಈ ಪ್ರದೇಶವನ್ನು ದಾಟಿಹೋಗುವ. ಆ ಅಧಮರಾದ ಚಾಂಡಾಲರು ಇಲ್ಲಿ ಬಹಳವಾಗಿ ಇದ್ದಾರೆ. ಅವರು ಮತ್ತೆ ಇಲ್ಲಿಗೆ ಬಂದು ನಮ್ಮಿಬ್ಬ ರನ್ನೂ ಸಂಕಟಕ್ಕೆ ಗುರಿಮಾಡಬಹುದು. ” - ಅಹಹಾ! ಅದೆಷ್ಟು ಮಧುರಸ್ವರವದು! ಸಜ್ಜಾಗಿ ಮೇಳಯಿಸಿದ ಸತಾರದ ತಂತಿ ಯ ಮೇಲೆ ಬೆರಳನ್ನು ಆಡಿಸಿ ರಸಿಕರಾರಾದರೂ ಮೋಹಕವಾದ ಝಂಕಾರವನ್ನು ಉತ್ಪನ್ನ ಮಾಡಿದರೋ! ಅಹಹಾ! ಆ ರಮಣಿಯ ರೂಪವಾದರೂ ಎಷ್ಟು ರಮಣೀಯ ? ಎಷ್ಟು ಹೃದಯಂಗಮ !ಹೊತ್ತಾರೆಯಲ್ಲಿ ಅರಳಿದ ಸುಂದರವಾದ ಕಮಲದಂತೆ ನಿಷ್ಠ ಲಂಕವಾದ ಆ ಸುಂದರಿಯ ಮುಖಮಂಡಲವು ಭಗವತಿಯಾದ ಪ್ರೀತಿದೇವತೆಯ ಪ್ರೇಮಮಂದಿರ. ಮನೋಹರ ವಿಲಾಸದ ಕ್ರೀಡಾಂಗಣವಾಗಿತ್ತು! ವಿಶಾಲವೂ ತೇಜಃಪುಂಜವೂ ಆದ ಲೋಚನಯುಗಲದ ನೋಟವು ಎಷ್ಟು ಚಂಚಲ! ಎಷ್ಟು ಮೋಹಕ !! ವೇನೇರೂಪ ದಿಂದ ಬಂಧಿತವಾದ, ಭ್ರಮರಗಳಂತೆ ಶೋಭಾಯಮಾನವಾದ ಕೃಷ್ಣಕೇಶರಾಜಿಯು ಎಷ್ಟು ಮನೋಹರ ! ಅವಳ ಬಾಹುಯುಗ್ಯವು ಎಷ್ಟು ಚಿತ್ತಾಕರ್ಷಕ ! ಎಷ್ಟು ರಮ್ಮ!! ಹೆಚ್ಚು ಎತ್ತರವಾಗಿಯೂ ಹೆಚ್ಚು ಗಿಡ್ಡವಾಗಿಯೂ ಅಲ್ಲದ ಮಧ್ಯಮಾಕಾರದ ಅವಳ ದೇಹಯಷ್ಟಿಯು ಎಷ್ಟು ಸೂಕ್ಷ್ಮ! ವಿಧಾತೃವಿನ ಈ ಸುಂದರವಾದ ಸೃಷ್ಟಿಯನ್ನು ನೋಡುತ್ತಿರುವಾಗ ಕಣ್ಣ ರೆಪ್ಪೆಗಳು ಅಲೆಯುವುದೇ ಇಲ್ಲ! ಒಮ್ಮೆ ನೋಡಿದರೆ ಸಾಕುದರ್ಶನಾಪೇಕ್ಷೆಯು ಹೆಚ್ಚುತ್ತಲೇ ಹೋಗುವುದು; ಜನ್ಮ ಜನ್ಮಾಂತರಗಳಲ್ಲಿಯೂ ದರ್ಶ ನೇಚ್ಚೆಯು ತೃಪ್ತವಾಗುವುದಿಲ್ಲ. ಪ್ರಿಯವಾಚಕರೇ, ವಸಂತಋತುವಿನ ಮೃದುಶೀತಲವಾಯುವಿನಿಂದ ಪ್ರೇಮಭರ ದಿಂದ ಚುಂಬಿತವಾದ ಉಳ್ಳ ಲರ್ದ ಗುಲಾಬಿಯ ಸೌಂದರ್ಯವನ್ನು ನೀವು ಎಂದಾದರೂ ನೋಡಿರುವಿರೋ? ಹೇಮಂತಋತುವಿನ ತಂಪಾದ ಇಬ್ಬನಿಯಿಂದ ಸ್ವಾತವಾದ ಮುಗ್ಧ ವಾದ ಜಾದಿಯ ಕಲಿಕೆಯ ಮನೋರಮವಾದ ಲಾವಣ್ಯವನ್ನು ನೀವು ಎಂದಾದರೂ ಅವಲೋಕಿಸಿರುವಿರೋ? ವರ್ಷಾಕಾಲದ ತುಂತುರದೃಷ್ಟಿಯಿಂದ ಭೌತವಾದ ಪೂರ್ಣ ವಿಕಸಿತವಾದ ಚಂಪಕದ ಗೌರಕಾಂತಿಯ ರಮ್ಯಜ್ಞಾಯೆಯನ್ನು ನೀವು ಎಂದಾದರೂ ನಿರೀಕ್ಷಿಸಿರುವಿರೋ? ನೀಲಮೇಘಗಳಿಂದ ಅಚ್ಚನ್ನ ವಾದ ವಿಸ್ತೀರ್ಣವಾದ ಗಗನದಲ್ಲಿ ಥಳಥಳಿಸುವ ಸೌದಾಮಿನಿಯ ಪ್ರಖರರೂಪಜ್ಯೋತಿಯನ್ನು ನೀವು ಎಂದಾದರೂ ಕಂಡಿ ರುವಿರೋ? ಬ್ರಹ್ಮದೇವನ ಈ ಮನೋಹರವಾದ ಸೃಷ್ಟಿಯನ್ನು ನೋಡಿ ನಿಮ್ಮ ಮನಸ್ಸು ಕ್ವಚಿತ್ಪಸಂಗದಲ್ಲಿ ಮೋಹಿತವಾಗಲಿಕ್ಕಿಲ್ಲ; ಆದರೆ ಆ ರಜಪೂತ ಬಾಲಿಕೆಯನ್ನು ನೋಡಿ ಸೃಷ್ಟಿಕರ್ತನ ಸೃಷ್ಟಿಚಾತುರ್ಯದ ವಿಷಯಕ್ಕೆ ಅಚ್ಚರಿಪಡುತ್ತ ಮೂಢರಾಗುವಿರಿ; ಆ ಲಾವಣ್ಯಮಾಧುರಿಯಿಂದ ನಿಶ್ಚಯವಾಗಿಯೂ ವಿಸ್ಕೃತಿಯನ್ನು ಹೊಂದುವಿರಿ! ನಮ್ಮ ತರುಣ ಶಿಪಾಯಿಯು ಆ ಮನೋಮೋಹಿನಿಯ ಸ್ಥಿರವೂ ಉಜ್ವಲವೂ ಆದ ನೇತ್ರ ಕಟಾಕ್ಷದ ಬಲೆಯಲ್ಲಿ ಸಿಕ್ಕಿದನೋ ಇಲ್ಲವೋ ಎಂಬುದನ್ನು ಖಂಡಿತವಾಗಿ ಹೇಳ ಲಾರೆವು. ಆದರೂ ಇಂದಿನವರೆಗೆ ಯಾವ ಕರುಣಸಿಂಹನ ಹೃದಯದ ಮೇಲೆ ರಮಣೀ ಪ್ರೇಮದ ಅಮೋಘಶಕ್ತಿಯಿಂದ ಲವಮಾತ್ರವಾದರೂ ಪರಿಣಾಮವಾಗಿದ್ದಿಲ್ಲವೋ ಅಂತಹ ಆತನ ಅಭೇದ್ಯ ಹೃದಯವು ಇಂದು ಕಂಪಿಸತೊಡಗಿತೆಂಬುದನ್ನು ಮಾತ್ರ ನಿಶ್ಚಯವಾಗಿ ಹೇಳಬಲ್ಲೆವು. ಪ್ರವಾಸದ ದಣುವಿನಿಂದ ಕರುಣಸಿಂಹನು ದಣಿದಿದ್ದ ನೆಂಬುದು ವಾಚಕರಿಗೆ ಗೊತ್ತೇ ಇದೆ. ಅದರಲ್ಲಿಯೂ ಆತನ ದುರ್ದೈವದಿಂದ ಅತ್ಯಂತ ವಾಗಿದ್ದ ತನ್ನ ನೀರಡಿಕೆಯನ್ನು ಕಳೆದುಕೊಳ್ಳುವುದಕ್ಕೆ ಕೂಡ ಅವಕಾಶವಾಗಲಿಲ್ಲ! ಈ ಪ್ರಕಾರ ಆತನು ಅತ್ಯಂತ ಕ್ಲಾಂತನಾಗಿದ್ದರೂ ಈ ಸಮಯದಲ್ಲಿ ಆತನ ಮುಖದ ವಾಗ್ಯೂಷಣ, • “+++++ +++ +,, My • • • • •
- * * * *
ಮೇಲೆ ಒಂದು ಪ್ರಕಾರದ ಆನಂದರಸವು ಹರಿದಾಡುತ್ತಿತ್ತು. ಕೆಲಹೊತ್ತಿಗೆ ಮುಂಚೆ ಕರುಣಸಿಂಹನು ಆ ಸುಂದರಿಯೊಡನೆ ನಿಃಸಂಕೋಚವಾಗಿ ಮಾತನಾಡುತ್ತಿದ್ದನು; ಆದರೆ ಈಗ ಅವಳೊಡನೆ ಮಾತನಾಡಲು ಒಂದು ತರದ ಸಂಕೋಚಭಾವವು ಅವನ ಮನಸ್ಸಿ ನಲ್ಲಿ ಆಕಸ್ಮಿಕವಾಗಿ ಉದ್ಭವಿಸಿತು. ಅಲ್ಪಕಾಲದಲ್ಲಿಯೇ ಈ ರಮಣಿಯನ್ನಗಲಿ ಹೋಗ ಬೇಕಾಗುವುದೆಂಬ ವಿಚಾರದಿಂದ ಆತನ ಮನಸ್ಸಿಗೆ ವ್ಯಥೆಯಾಗಹತ್ತಿತು. ಯಾವನು ಏಕಾಕಿಯಾಗಿದ್ದರೂ ಕರ್ತವ್ಯಪಾಲನಕ್ಕೋಸ್ಕರವಾಗಿ ಸಂಕಟವನ್ನು ಸಹ ಲೆಕ್ಕಿಸದೆ ಓಡಿ ಬಂದಿದ್ದನೋ ಅದೇ ಕರುಣಸಿಂಹನಿಗೆ ಈಗ ಕರ್ತವ್ಯದ ಸ್ಮರಣೆಯೇ ಇಲ್ಲ ದಾಯಿತು. ನಿಶಾದೇವಿಯು ತನ್ನ ಕೃಷ್ಟ ಕರಾಲವಾದ ಛಾಯೆಯಿಂದ ಮೆಲ್ಲ ಮೆಲ್ಲನೆ ಜಗ ಇನ್ನು ಗಭೀರವಾಗಿ ವ್ಯಾಪಿಸುತ್ತಿರುವುದು ಈಗ ನಮ್ಮ ತರುಣವೀರನಿಗೆ ಗೊತ್ತಾಯಿತು. ಆ ಪರ್ವತಪ್ರದೇಶದ ನೈಸರ್ಗಿಕವಾದ ಶ್ಯಾಮಲತೆಯು ಇಲ್ಲದಂತಾಗಿ ಕಪ್ಪು ಬಣ್ಣದ ತೆರೆಯು ಅದರ ಮೇಲೆ ಬೀಳತೊಡಗಿತು. ಕರುಣಸಿಂಹನು ಈಗ ಚಿಂತಾಮಗ್ನನಾದನು. ಆಗಲವನು ಪ್ರೇಮದ ಸರದಿಂದ ಆ ಸೀಯನು ಕುರಿತು ಮಾತನಾಡಿದನು. • ಸುಂದರೀ, ಕಷ್ಟಕರವಾದ ಈ ಗುಡ್ಡದ ದಾರಿಯಲ್ಲಿ ಮಾರ್ಗವನ್ನು ಕ್ರಮಿಸುವುದು ನಿನ್ನಿಂದ ಹೇಗೆ ಸಾಧ್ಯವೋ ನಾನರಿಯೆನು ! ಆದುದರಿಂದ ನನ್ನ ಕೈಯನ್ನು ಹಿಡಿ. ಸಮೀಪದಲ್ಲಿಯೇ ನನ್ನ ಕುದುರೆಯನ್ನು ಕಟ್ಟಿದ್ದೇನೆ; ಅಲ್ಲಿಯವರೆಗೆ ಹೋಗುವ, ” ಇನ್ನಾವುದಾದರೂ ಸಂದರ್ಭವಿದ್ದರೆ ಆ ತರುಣಿಯು ಪರಪುರುಷನ ಹಸ್ತವನ್ನು ಹಿಡಿಯಲು ಒಡಂಬಡುತ್ತಿದ್ದಿಲ್ಲ. ಆದರೆ ಈಗ ಗತ್ಯಂತರವೇ ಇದ್ದಿಲ್ಲ. ಗುಡ್ಡಗಾಡಿನ ದಾರಿಯು ಅತ್ಯಂತ ಕಷ್ಟಕರವಾಗಿತ್ತು; ಸಾಲದುದಕ್ಕೆ ಸಂಧ್ಯಾಕಾಲವಾಗಿ ಅಂಧಕಾ ರವು ಎಲ್ಲೆಡೆಯಲ್ಲಿಯೂ ಪಸರಿಸುತ್ತಿತ್ತು. ಅದರಲ್ಲಿಯೂ ಶತ್ರುಗಳು ಬಂದು ಯಾವಕಾ ಲಕ್ಕೆ ತೊಂದರೆ ಕೊಡುವರೋ ಎಂಬ ಅಂಜಿಕೆ, ಆದುದರಿಂದ ಅವಳು ಕರುಣಸಿಂಹನ ಕೈಯನ್ನು ಹಿಡಿದಳು. ಇಬ್ಬರೂ ಒಳ್ಳೇ ಜಾಗರೂಕತೆಯಿಂದ ನಡೆಯಹತ್ತಿದರು. ದಾರಿಯು ಮೊದಲೇ ಸಂಕುಚಿತವಾಗಿತ್ತು; ಅದರಲ್ಲಿಯೂ ಕಲ್ಲು-ಬಂಡೆಗಳೂ ತಗ್ಗು-ಮಿಟ್ಟಿಗಳೂ ಎಲ್ಲೆಡೆಯಲ್ಲಿಯೂ ತುಂಬಿದ್ದುವು. ಎರಡೂ ಪಕ್ಕಗಳಲ್ಲಿ ಎತ್ತರವಾದ ಗುಡ್ಡದ ತುದಿಗಳು ನಿಂತಿದ್ದುವು. ನಾಲ್ಕೂ ಕಡೆಗಳಲ್ಲಿಯೂ ಶ್ಯಾಮಲಪತ್ರಗಳಿಂದ ಆಚ್ಛಾ ದಿತವಾದ ಚಿಕ್ಕ-ದೊಡ್ಡ ಸಾಸಿರಾರು ವೃಕ್ಷಗಳಿದ್ದುವು. ಎಲ್ಲೆಡೆಯಲ್ಲಿಯೂ ನಿಸ್ತಬ್ಧತೆ. ಅಸ್ತಗಾಮಿಯಾದ ಸೂರ್ಯನ ಆರಕ್ತ ಕಿರಣಗಳು ಮಲಿನವಾಗಿದ್ದುವು. ಈ ಮೇಲೆ ಹೇಳಿದಂತೆ ಅವರಿಬ್ಬರೂ ಮೆಲ್ಲ ಮೆಲ್ಲನೆ ಹೋಗುತ್ತಿರಲು, ಗುಡ್ಡದೊಳ ಗಿನ ಒಂದು ಗುಹೆಯಿಂದ ಎಂಟು ಹತ್ತು ಜನರು ಹೊರಬಿದ್ದು ಅವರ ದಾರಿಗೆ ಅಡ್ಡ ಬಂದರು. ಎಂಟು ಹತ್ತು ತೀಕ್ಷವಾದ ನಗ್ನ ಖಡ್ಡಗಳು ಸಾಯಂಕಾಲದ ಕ್ಷೀಣವಾದ ಪ್ರೇಮಮಂದಿರ. 24 ,, ,, , , , , , 4 # #Y * * * * * * *
- : - vv * * * * * * *
- * * * * *
ಕತ್ತಲೆಯಲ್ಲಿ ಹೊಳೆಯಹತ್ತಿದುವು! ಕರುಣಸಿಂಹನು ಒಬ್ಬನೇ; ಅದರಲ್ಲಿಯೂ ಅನಾಥ ಳಾದ ಅಬಲೆಯೊಬ್ಬಳು ಆತನ ಆಶ್ರಯದಲ್ಲಿದ್ದಳು. ಬಂದಂತಹ ಆ ಜನರು ಇವರಿಬ್ಬರ ಮೇಲೆಯೂ ಸಾಗಿಬಂದರು. ಆ ಸ್ತ್ರೀಯನ್ನು ತನ್ನ ಬೆನ್ನ ಹಿಂದೆ, ತೆಗೆದುಕೊಂಡು, ವಿಷ ಧ್ವಂಜಕನಾದ ಪರಮೇಶ್ವರನನ್ನು ಸ್ಮರಿಸಿ ಕರುಣಸಿಂಹನು ಕತ್ತಿಯನ್ನು ಒರೆಯಿಂದ ಹಿರಿ ದನು. ಮತ್ತು ಎದುರಾಳಿಗಳನ್ನು ಪ್ರತಿಭಟಿಸಿ ನಿಂತನು. ತನ್ನ ಮೇಲೆ ನಾಗಿಬಂದಿರುವ ಸಮೂಹದಲ್ಲಿ ಮೊದಲು ಮೋಸಗಾರಿಕೆಯಿಂದ ಓಡಿಹೋದ ಚಂದ್ರಾವತನೂ ಸೇರಿರುವುದು ಕರುಣಸಿಂಹನ ಕಣ್ಣಿಗೆ ಬಿತ್ತು. ಆದುದ ರಿಂದ ಆ ನೀಚನೇ ಈ ಸಂಕಟವನ್ನು ತನಗೆ ಉಂಟುಮಾಡಿರಲಿಕ್ಕೆ ಬೇಕೆಂದು ಅವನು ಊಹಿಸಿದನು. ಕರುಣಸಿಂಹನು ಕತ್ತಿಯ ಒಂದೇ ಒಂದು ಹೊಡತದಿಂದ ಮೊಟ್ಟಮೊ ದಲು ಆತನ ತಲೆಯನ್ನು ಮುಂಡದಿಂದ ಬೇರೆ ಮಾಡಿದನು. ಉಳಿದವರೆಲ್ಲರೂ ಒಳ್ಳೆ ಆವೇಶದಿಂದ ಆತನ ಮೇಲೆ ಕೈಮಾಡಿದರು. ಕರುಣಸಿಂಹನು ಅತ್ಯಂತ ಚಾತುರ್ಯ ದಿಂದ ಅವರೆಲ್ಲರ ಮೇಲೂ ತನ್ನ ಖಡ್ಗವನ್ನು ನಡೆಯಿಸುತ್ತಿದ್ದನು ! ಆದರೆ ಏಳೆಂಟು ಜನರ ಮುಂದೆ ಒಬ್ಬನ ಆಟವು ಎಷ್ಟು ಹೊತ್ತಿನವರೆಗೆ ನಡೆಯಬೇಕು ? ಹಾಯ ! ಕರುಣ ಸಿಂಹನು ಅಸಹಾಯನಾಗಿ ಬಿದ್ದು ಕೊಂಡನು. ನಮ್ಮ ಶಿಪಾಯಿಯು ಈ ಪ್ರಕಾರ ಸಂಕಟಕ್ಕೆ ಒಳಗಾಗಿರಲು, ಮೇಲ್ಗಡೆಯ ಪರ್ವತಪ್ರದೇಶದಲ್ಲಿ ಬೇರೊಂದು ಸಂಗತಿಯು ನಡೆದಿತ್ತು. ಐವತ್ತು ಜನ ಸೈನಿಕರ ಒಂದು ಪದಕದೊಡನೆ ಒಬ್ಬ ವೀರಪುರುಷನು ಸರ್ವತದ ತಟದಿಂದ ಕೆಳಗೆ ಇಳಿಯುತ್ತಿದ್ದನು, ಕೆಳಗಡೆಯಲ್ಲಿ ಜರುಗುತ್ತಿದ್ದ ಪ್ರಕಾರವನ್ನು ಆತನು ಮೇಲಿಂದಲೇ ನೋಡಿದನು. ಕy ಲೆಯು ಈಗ ಹೆಚ್ಚಾಗಿದ್ದುದರಿಂದ ಗುಡ್ಡದಿಂದ ಕೆಳಗೆ ಇಳಿಯುವುದಕ್ಕೆ ಸ್ವಲ್ಪ ತೊಂದ ರೆಯಾಗುತ್ತಿತ್ತು. ಆತನು ಗಂಭೀರಸ್ವರದಿಂದ ತನ್ನ ಅನುಯಾಯಿಗಳಿಗೆ ಅಪ್ಪಣೆ ಮಾಡಿ ದನು. “ ನಿಮ್ಮೊಳಗಿಂದ ಸುಮಾರು ಹದಿನೈದು ಇಪ್ಪತ್ತು ಜನರು ಈಗಲೇ ಕೆಳಗೆ ಇಳಿದು ಹೋಗಿ ಆತನನ್ನು ಸಂರಕ್ಷಿಸಿರಿ, ” ಅಲ್ಪಾವಕಾಶದಲ್ಲಿಯೇ ಆ ಪ್ರದೇಶವೆಲ್ಲ ( ಅಲ್ಲಾ ಹೋ ಅಕಬರ ! ಎಂಬ ಪ್ರಚಂಡವಾದ ಕೂಗಾಟದಿಂದ ಪ್ರತಿಧ್ವನಿತವಾಯಿತು. ಇದೇ ಸಂಧಿಯಲ್ಲಿ ಕರುಣ ಸಿಂಹನು ಮನಸ್ಸಿನಲ್ಲಿಯೇ ಪರಮೇಶ್ವರನಿಗೆ ಧನ್ಯವಾದಗಳನ್ನು ಕೊಡುತ್ತ ಮತ್ತೆ ಇಬ್ಬರು ಪ್ರತಿಸ್ಪರ್ಧಿಗಳನ್ನು ತುಂಡರಿಸಿದನು. ತಮಗಿಂತಲೂ ದೊಡ್ಡದಾದ ಮೊಗಲ ಸೈನ್ಯವನ್ನು ನೋಡಿ ಕರುಣಸಿಂಹನೊಡನೆ ಕಾದಾಡುತ್ತಿದ್ದವರು ಓಡಿ ಹೋಗುವುದಕ್ಕೆ ಪ್ರಯತ್ನ ಮಾಡಹತ್ತಿದರು. ಆದರೆ ಹಾಗೆ ಓಡಿಹೋಗಲು ಈಗ ಅವರು ಮೊದಲಿನಷ್ಟು ಸ್ವತಂತ್ರರಿದ್ದಿಲ್ಲ; ಅವರೊಳಗಿನ ಕೆಲವರು ಗಾಯಪಟ್ಟವರಾಗಿ ಬಿದ್ದು ಕೊಂಡಿದ್ದರು. ಅವರ ರಕ್ತದಿಂದ ಆ ಗುಹೆಯು ಕೆಂಪಗಾಗಿತ್ತು. ಇ . ಪಾಗ್ಯೂಷಣ. ) * ಸುಂದರವಾದ ಮೈಕಟ್ಟಿನ ಒಬ್ಬ ಸೌಮ್ಯಾಕೃತಿಯ ಪುರುಷನು ಕರುಣಸಿಂಹನ ಮುಂದೆ ಬಂದು ನಿಂತನು. ಮತ್ತು ತನ್ನ ಅನುಯಾಯಿಗಳನ್ನು ಕುರಿತು ಹೀಗೆ ಹೇಳಿ ದನು. ವೀರರೇ, ಶಾಂತರಾಗಿರಿ. ಇನ್ನು ರಕ್ತಪಾತವನ್ನುಂಟು ಮಾಡುವ ಕಾರಣ ವಿಲ್ಲ. ಗುಡ್ಡದೊಳಗಿನ ಇಲಿಗಳಂತಿರುವ ಇವರನ್ನು ಸೆರೆ ಹಿಡಿಯಿರಿ, ” ಇದಕ್ಕಿಂತ ಸ್ವಲ್ಪ ಹೊತ್ತು ಮುಂಚಿತವಾಗಿಯೇ ನಮ್ಮ ರಜಪೂತ ವೀರನ ಹೆಗಲ ಮೇಲೊಂದು ಬಲವಾದ ಪೆಟ್ಟು ತಗಲಿತ್ತು. ಅದರೊಳಗಿಂದ ನೆತ್ತರವು ಪುಟಿಯ ಹತ್ತಿ ದುದರಿಂದ ಆತನು ಕ್ವಾಂತನಾಗಿದ್ದನು. ಹಿಂದಿನಿಂದ ಬಂದ ಆ ವೀರಪುರುಷನು ತನ್ನ ಬಹುಮಲ್ಯವಾದ ಉತ್ತರೀಯ ವಸ್ತದಿಂದ ಕರುಣಸಿಂಹನ ಗಾಯವನ್ನು ತಾನೇ ಕಟ್ಟಿದನು. ಆ ಮೇಲೆ ಪ್ರೇಮಲ ಸ್ವರದಿಂದ ಮಾತನಾಡಿದನು. (( ಕರುಣಾ, ಏಟು ಬಲ ವಾಗಿ ತಾಗಿದಂತೆ ತೋರುತ್ತದೆ. ನಿನ್ನನ್ನು ಈ ಕಡೆಗೆ ಒಬ್ಬನನ್ನೇ ಕಳಿಸಿದುದು ನನ್ನ ಮನಸ್ಸಿಗೆಕೋ ನೆಟ್ಟಗೆನಿಸಲಿಲ್ಲ. ಆದುದರಿಂದ ನಾನೂ ನಿನ್ನ ಬೆನ್ನ ಹಿಂದಿಂದೆಯೇ ಬಂದೆನು. ನಿನ್ನ ಕುದುರೆಯನ್ನು ನೋಡಿದ ಮೇಲೆ ನಮಗೆ ದಾರಿಯು ಗೊತ್ತಾಯಿತು. ಕರುಣಾ, ಸಮಯಕ್ಕೆ ಸರಿಯಾಗಿ ನಾನು ಈ ಹೊತ್ತು ಬರದೆ ಹೋದ ಪಕ್ಷದಲ್ಲಿ ನಿನ್ನ ನ್ನು ಕಳೆದುಕೊಂಡು ಕೂಡಬೇಕಾಗುತ್ತಿತ್ತು. ಕರುಣಸಿಂಹನು ಕೃತಜ್ಞತೆಯ ಸ್ವರದಿಂದ ಮಾತನಾಡಿದನು. (( ಜಹಾಪನಾಹ, ಈಶ್ವರನು ತಮಗೆ ಮಂಗಲವನ್ನುಂಟು ಮಾಡಲಿ. ತಾವು ಹೀಗೆ ಪ್ರೇಮಪೂರ್ವಕವಾಗಿ ದಯ ತೋರಿಸಿದುದನ್ನು ನಾನು ಜನ್ಮ ಜನ್ಮಾಂತರಗಳಲ್ಲಿಯೂ ಮರೆಯಲಾರೆನು. ” ಆ ಎರಡನೆಯ ನೀರನು ವೃಕ್ಷದ ಹಿಂದುಗಡೆಯಲ್ಲಿ ನಿಂತುಕೊಂಡಿರುವ ಆ ತರು ಣಿಯನ್ನು ಇನ್ನೂ ವರೆಗೆ ನೋಡಿದ್ದಿಲ್ಲ. ಈಗ ಅಕಸ್ಮಾತ್ತಾಗಿ ಅವಳನ್ನು ಕಂಡನು. ಕೂಡಲೇ ಆಶ್ಚರ್ಯದಿಂದ ಕರುಣಸಿಂಹನನ್ನು ಕುರಿತು ಪ್ರಶ್ನೆ ಮಾಡಿದನು. “ ಕರುಣಾ, ಈ ತರುಣಿಯು ಯಾರು? ಕರುಣಸಿಂಹನು ಇಷ್ಟು ಹೊತ್ತಿನವರೆಗೆ ನಡೆದಿದ್ದ ಸಮಾಚಾರವನ್ನೆಲ್ಲ ಸವಿಸ್ತಾರ ವಾಗಿ ಆತನಿಗೆ ಹೇಳಿದನು. ಆಗಲಾ ವೀರನು ತನ್ನ ಸೇನೆಯೊಳಗಿನ ಒಬ್ಬ ಹಿಂದೂ ಸೈನಿಕನನ್ನು ಕರೆದು ಹೀಗೆ ಹೇಳಿದನು. “ ನೀನು ಕರುಣನನ್ನೂ ಈ ಹೆಣ್ಣು ಮಗಳನ್ನೂ ಕರೆದುಕೊಂಡು ಆ ಹಿಂದಯೋಗಿಯ ಗುಡಿಸಲಕ್ಕೆ ಹೋಗು. ನಾನು ನಿಮ್ಮ ಹಿಂದಿ ನಿಂದಲೇ ಬರುತ್ತೇನೆ. ” - ಆತನ ಅಪ್ಪಣೆಯಂತೆ ಸರ್ವ ವ್ಯವಸ್ಥೆಯ ಮಾಡಲ್ಪಟ್ಟಿತು. ವಾಚಕರೇ ಆ ಎರ ಡನೆಯ ನೀರನು ಮತ್ತಾರೂ ಅಲ್ಲ.-ಅಕಬರ ಬಾದಶಹನು? ಕರುಣಸಿಂಹನು ಆತನ ನೂತನ ಸೇನಾಪತಿಯು || ಒು ಏa ಪ್ರೇಮಮಂದಿರೆ.
- # # # # # # #Y /YY
ಎರಡನೆಯ ಪರಿಚ್ಛೇದ
- +0+=
ಪ್ರೇಮಸಂಚಾರ ! ಕರುಣಸಿಂಹನು ಪರ್ಣಶಯ್ಯಯ ಮೇಲೆ ಮಲಗಿಕೊಂಡಿದ್ದನು. ಅವನ ಹತ್ತಿರದ ಲ್ಲಿಯೇ ಆ ಸುಂದರಿಯು ಕುಳಿತುಕೊಂಡಿದ್ದಳು. ಚೇತನಾಹೀನನಾಗಿ ಬಿದ್ದು ಕೊಂಡಿರುವ ಕರುಣಸಿಂಹನ ಮಲಿನಮುಖವನ್ನು ಅವಳು ಅನಿಮಿಷ ನೇತ್ರದಿಂದ ನೋಡುತ್ತಿದ್ದಳು. ಆಗಿಂದಾಗ್ಗೆ ಕಪ್ಪು ಬಣ್ಣದ ಒಂದು ತರದ ಮಲಾಮನ್ನು ಅವಳು ಕರುಣಸಿಂಹನ ಗಾಯ ಕ್ಕೆ ಹಚ್ಚುತ್ತಿದ್ದಳು. ಆ ಗುಡಿಸಲವಿದ್ದ ಪ್ರದೇಶವ್ರ ಅತ್ಯಂತ ನಿರ್ಜನವಾಗಿತ್ತು. ಕರುಣಸಿಂಹನ ಹಾಸು ಗೆಯ ಬಳಿಯಲ್ಲಿ ಕುಳಿತ ಆ ತರುಣಿಯ ಮಂದಶ್ವಾಸೋಚ್ಛಾಸದ ಹೊರತು ಅಲ್ಲಿ ಇನ್ನಾವ ಶಬ್ದವೂ ಕೇಳಬರುತ್ತಿದ್ದಿಲ್ಲ. ಆ ತರುಣಿಯು ಏಕಾಗ್ರಚಿತ್ತದಿಂದ ಕರುಣಸಿಂಹನ ಪರಿಚ ರ್ಯೆಯಲ್ಲಿ ನಿರತಳಾಗಿದ್ದಳು. ಇಷ್ಟರಲ್ಲಿ ಜಟಾಜೂಟದಿಂದ ಭೂಷಿತಮಸ್ತಕನಾದ ಒಬ್ಬ ಯೋಗಿಯು ಅಲ್ಲಿ ಒಂದನು. ಮತ್ತು ಪ್ರೇಮಾದ್ರ್ರಸ್ವರದಿಂದ ಆ ತರುಣಿಯನ್ನು ಕೇಳಿದನು, “ ವತ್ತೇ ? ಕರುಣನು ಈಗ ಹೇಗೆ ಇದ್ದಾನೆ ? ” ಯೋಗಿಯು ಬಂದೊಡನೆಯೇ ಆ ಸ್ತ್ರೀಯು ಹಾಸುಗೆಯಿಂದ ಸ್ವಲ್ಪ ದೂರ ಸರಿದು ಮಾತನಾಡಿದಳು. ( ಅಪ್ಪಾ, ಇವರ ಪ್ರಕೃತಿಯು ಈಗ ಮೊದಲಿಗಿಂತ ಎಷ್ಟೋ ಚನ್ನಾ ಗಿದೆ. ಸ್ವಲ್ಪ ಹೊತ್ತಿಗೆ ಮೊದಲು ಅವರು ಎಚ್ಚರವಾಗಿದ್ದರು. ಆದರೆ ಈಗ ಪನಃ ಇವ ರಿಗೆ ನಿದ್ದೆ ಹತ್ತಿದೆ. ” ಈ ನುಡಿಯನ್ನು ಕೇಳಿ ಯೋಗಿಯ ಮುಖದ ಮೇಲೆ ಆನಂದದ ಚಿಹ್ನವು ತೋರ ಹತ್ತಿತು. ಆಗಲವನು ಉಲ್ಲಾಸದಿಂದ ಮಾತನಾಡಿದನು. ( ಜಗದಂಬಾಮಾತೆಯ ಕೃಪೆ ಯಿಂದ ಕರುಣಸಿಂಹನು ಈ ಪ್ರಾಣಸಂಕಟದಿಂದ ಪಾರಾದನು ! ಔಷಧವ ಗುಣಕಾರಿ ಯಾಗಿ ಪರಿಣಮಿಸಿತಲ್ಲವೇ ? ೨ | ಇಷ್ಟು ಮಾತನಾಡಿ ಸನ್ಯಾಸಿಯು ಹೊರಟುಹೋದನು. ಆ ಸುಂದರಿಯು ತನ್ನ ಪ್ರಣವನ್ನುಳಿಸಿದ ಆ ರಜಪೂತವೀರನನ್ನು ಕರುಣದೃಷ್ಟಿಯಿಂದ ನೋಡಹತ್ತಿದಳು. ಎಷ್ಟು ಹೊತ್ತಿನ ವರೆಗೆ ಆತನ ಮೊಗವನ್ನು ನೋಡಿದರೂ ಅವಳ ದರ್ಶನಾಪೇಕ್ಷೆಯು ತೃಪ್ತ ಗಲೊಲ್ಲದು ! ಒಮ್ಮೆ ಕರುಣಸಿಂಹನನ್ನು ನೋಡಿ ಕಣ್ಣೆವೆಗಳನ್ನು ಬಡಿಯುವಷ್ಟರಲ್ಲಿಯೇ ಮತ್ತೆ ನೋಡಬೇಕೆಂಬ ಒಯಕೆಯು ಅವಳಲ್ಲಿ ಹುಟ್ಟುವುದು, ದೇವದಾನವರ ಯುದ್ದೆ ವಾಗೊ ಸಣ. • • • • •v , ದಲ್ಲಿ ಕ್ಲಾಂತನಾಗಿ ದೇವೇಂದ್ರಕುಮಾರನಾದ ಜಯಂತನೇ ವಿಶ್ರಾಂತಿಗೋಸ್ಕರವಾಗಿ ಈ ಪರ್ಣಕುಟೀರದಲ್ಲಿ ಬಂದು ಮಲಗಿರುವನೆಂದು ಆ ರಮಣಿಯು ಭಾವಿಸಿದಳು ! ಪ್ರಿಯವಾಚಕರೇ, ಇಷ್ಟು ಹೊತ್ತಿನ ವರೆಗೆ ನಿಮಗೆ ಹೇಳದೆ ಇದ್ದ ಆ ಸುಂದರಿಯ ಹೆಸರು ಲಲಿತೆ ' ಯೆಂಬುದಾಗಿತ್ತೆಂದು ಈಗ ಹೇಳಿಬಿಡುವೆವು. ರಾಜಕುಮಾರಿಯು ತನ್ನಲ್ಲಿಯೇ ಅಲೋಚಿಸಹತ್ತಿದಳು. ಎಲೈ ಭಗವಂತಾ, ಯಾಕೆ ನನ್ನ ಪರೀಕ್ಷೆಯನ್ನು ಮಾಡುತ್ತಲಿರುವೆ ? ಈ ರೂಪವಷ್ಟಿಯಲ್ಲಿ ನಾನೇತಕ್ಕೆ ಹಾರಿ ಕೊಂಡೆನೋ ? ಅಪೂರ್ವ ಸಂಘಟನೆಯಿಂದ ಈ ಕುಮಾರನು ನನ್ನ ದೃಷ್ಟಿಗೇಕೆ ಬೀಳ ಬೇಕು ? ಯಾವನು ನನಗೆ ಎಂದೂ ಲಭಿಸವಂತಿಲ್ಲವೋ, ಯಾವನನ್ನು ಆಸಿಸುವದಕ್ಕೆ ನನಗೆ ಆಸ್ಪದವಿಲ್ಲವೋ ಅಂತಹನ ವಿಷಯವಾಗಿ ಈ ನನ್ನ ಹೃದಯವ ಹೀಗೇಕೆ ಉನ್ನ ತವಾಗಿರುವದು ? ಚಾಣರೂ ಚಂದ್ರಾವತರೂ ಅನ್ನೋನ್ಯವಾಗಿ ಬದ್ಧವೈರಿಗಳು. ಅದರ ಲಿಯೂ ನನ್ನ ತಂದೆಯು ಈ ವೀರಶ್ರೇಷನಾದ ಕರುಣಸಿಂಹನಿಗೆ ಮುಖ್ಯ ಶತ್ರುವ! ನನ್ನ ತಂದೆಯೇ ಈ ಕುಮಾರನ ಸರ್ವಸ್ವವನ್ನೂ ಅಪಹರಿಸಿದ್ದಾನೆ. ನನ್ನ ತಂದೆಯ ಈ ಅತ್ಯಾ ಚಾರದ ಮೂಲಕವಾಗಿಯೇ ಕರುಣಸಿಂಹನ ಸರ್ವಸ್ವವು ನಾಶವಾಗಿ ಆತನು ಬಾದಶಹನ ಸೇನಾಪತಿಯಾಗಬೇಕಾಯಿತು. ಕರುಣಸಿಂಹನು ನಿಜವಾಗಿಯೂ ನನ್ನವನಾಗಬಹುದು ! ಆದರೆ ನನ್ನ ಅಪ್ಪನು ಇದಕ್ಕೆ ಸಮ್ಮತಿಸುವುದೆಂತು ? ” ರಾಜನಂದಿನಿಯಾದ ಲಲಿತೆಯ ಚಿಂತನಪ್ರವಾಹಕ್ಕೆ ಒಮ್ಮೆಲೆ ತಡೆಯುಂಟಾ ಡಿತು. ಪತ್ರಶಯ್ಕೆಯಮೇಲೆ ಮಲಗಿಕೊಂಡಿದ್ದ ಕುಮಾರನು ಈ ಕಾಲಕ್ಕೆ ಮೆಲ್ಲ ಮೆಲ್ಲನೆ ಕಣ್ಣೆರೆದನು, ಮತ್ತು ಅಸ್ಪಷ್ಟವಾದ ವಾಣಿಯಿಂದ ಮಾತಾಡಿದನು. ( ನಾನು ಎಲ್ಲಿ ಇದ್ದೇನೆ. ಈ ಮೋಹಪೂರ್ಣ ಪ್ರದೇಶದಲ್ಲಿ ನನ್ನನ್ನು ತಂದವರಾರು ? ನನ್ನ ಹಾಸುಗೆಯ ಬಳಿಯಲ್ಲಿ ಕುಳಿತಿರುವ ದೇವಬಾಲೆ ನೀನಾರು ??? ಲಲಿತೆಯು ದೊಡ್ಡ ಸಂಕಟದಲ್ಲಿ ಬಿದ್ದಳು. ನಾಚುಗೆಯಿಂದ ಆಕೆಯ ಕುತ್ತಿಗೆಯು ಜಗಿದುಹೋಯಿತು. ಲಲಿತೆಯು ಕರುಣಸಿಂಹನಿಗೆ ನಾಚುವುದು ಸ್ವಾಭಾವಿಕವಾಗಿಯೇ ಇತ್ತು. ಆದರೆ ಯಾವನು ನಿನ್ನ ಪ್ರಾಣವನ್ನು ಬದುಕಿಸಿದನೋ, ಆತನಿಗೆ ನಾಚಬೇಕಾದ ಕಾರಣವೇನೂ ಇಲ್ಲ. ' ಎಂದು ಆ ಯೋಗಿಯು ಅವಳಿಗೆ ಎಷ್ಟೋ ಸಾರಿ ಹೇಳಿದ್ದನು. ಲಲಿತೆಯು ಕಂಪಿತವಾದ ಮೃದುಸ್ವರದಿಂದ ಮಾತಾಡಿದಳು. “ ತಾವು ಯಾವ ವಿಷ ಯಕ್ಕೂ ಚಿಂತೆಯನ್ನು ಮಾಡಬೇಡಿರಿ. ತಾವು ಒಳ್ಳೇ ಸುರಕ್ಷಿತವಾದ ಸ್ಥಳದಲ್ಲಿಯೇ ಇದ್ದೀರಿ, ” “ ನೀನು ಯಾರು ? ಮತ್ತು ಇಷ್ಟೊಂದು ಪ್ರೇಮದಿಂದ ನನ್ನ ಶುಶೂಷೆಯನ್ನೇಕೆ ಮಾಡುತ್ತಿರುವೆ ? " ಪ್ರೇಮಮಂದಿರ. M +++ ++ "... " ( ತಮಗೆ ಆಶ್ರಯವನ್ನಿತ್ಯ ಯೋಗಿವರರಿಗೆ ನಾನೊಬ್ಬಳು ಶಿಷ್ಯಳು. ಆಜ್ಞೆಯನ್ನು ಶಿರಸಾವಹಿಸುವದು ನನ್ನ ಕರ್ತವ್ಯವು, ತಮ್ಮ ಸೇವೆಯನ್ನು ಮಾಡುವದಕ್ಕೋಸ್ಕರ ನಾನು ನಿಯಮಿಸಲ್ಪಟ್ಟಿದ್ದೇನೆ. ” ( ಈ ಕೆಲಸಕ್ಕೆ ನಿನ್ನನ್ನು ಯಾರು ನಿಯಮಿಸಿದರು. ? ” • ಆ ಯೋಗಿವರ್ಯರೇ, ” ( ಆ ಯೋಗಿವಯ್ಯರು ಯಾರು ? ” «« ಅವರೊಬ್ಬ ಮಾಹಾತಪಸ್ವಿಗಳು. ೨) « ಹೀಗೊ-ಆದರೆ ನಾನು ಈ ಸ್ಥಳಕ್ಕೆ ಹೇಗೆ ಬಂದೆನು ? ೨೨ ಲಲಿತೆಯು ಕರುಣಸಿಂಹನಿಗೆ ಹಿಂದಿನ ವೃತ್ತಾಂತವನ್ನೆಲ್ಲ ಹೇಳಿದಳು. ಅವಳು ಹೇಳುತ್ತ ಹೋದಂತೆ ಕರುಣಸಿಂಹನಿಗೂ ಹಿಂದಿನ ಸಂಗತಿಗಳು ನೆನಪಾಗಹತ್ತಿದವು, ಆಗಲವನು ಉತ್ಕಂಠತೆಯಿಂದ ಪ್ರಶ್ನೆ ಮಾಡಿದನು. " ಶಹಾನಶಹರು ಎಲ್ಲಿ ಇದ್ದಾರೆ ? ” - ( ತಮ್ಮ ಶುಕ್ರೂಷೆಯ ವ್ಯವಸ್ಥೆಯನ್ನು ಮಾಡಿ ಜಹಾಪನಾಹರು ದಿಲ್ಲಿಗೆ ಹೊರಟು ಹೋದರು. ತಮಗೋಸ್ಕರ ಗಾಡಿಯು ಸಿದ್ದವಾಗಿದೆ. ತಮಗೆ ವಾಸಿಯಾಯಿತೆಂದರೆ ಎಲ್ಲಿಗೆ ಹೋಗತಕ್ಕದ್ದೂ ಅಲ್ಲಿಗೆ ಹೊರಡಬಹುದು, ” - « ಈ ಪ್ರಾಣಸಂಕಟದಲ್ಲಿ ನೀನು ನನ್ನನ್ನು ಜೋಪಾನಮಾಡಿದೆ. ಈ ನಿನ್ನ ಉಪಕಾ ರವನ್ನು ನಾನು ಹೇಗೆ ತೀರಿಸಲಿ ? ನಿನ್ನ ವಿಷಯವಾಗಿ ನನ್ನಲ್ಲಿರುವ ಕೃತಜ್ಞತೆಯನ್ನು ನಾನು ಹೇಗೆ ತೋರಿಸಲಿ ? ನೀನು ಸ್ವರ್ಗದೊಳಗಿನ ದೇವಕನ್ಯಯೋ? ಯಾಕಂದರೆ ನೀನು ಶುಕ್ರೂಷೆ ಮಾಡಿದುದರಿಂದ ನನ್ನ ಯಾತನೆಗಳೆಲ್ಲವೂ ಇಲ್ಲದಂತಾದುವು. ೨೨ ಈ ಮಾತನ್ನು ಕೇಳಿ ಲಲಿತೆಯು ಲಜ್ಜಿತಳಾದಳು. ಅಸ್ಪುಟಸ್ವರದಿಂದಲೂ ಗಾಂಭೀ ರ್ಯದಿಂದಲೂ ಅವಳು ಮಾತನಾಡಿದಳು. “ ಮೊದಲು ತಾವೇ ನನ್ನ ಪ್ರಾಣವನ್ನು ಉಳಿಸಿದಿರಿ. ನನ್ನ ಈ ಕ್ಷುದ್ರವಾದ ಪ್ರಾಣದ ಮೇಲೆ ಇನ್ನು ತಾವೇ ಪೂರ್ಣ ಅಧಿಕಾ ರಿಗಳು.- ೨೨ - ಲಲಿತೆಯ ಬಾಯಿಂದ ಹೆಚ್ಚಾಗಿ ಮಾತುಗಳು ಹೊರಡಲಿಲ್ಲ. ಆಕೆಯು ತನ್ನ ಲ್ಲಿಯೇ ನಕ್ಕು ಮಾತನಾಡಿಕೊಂಡಳು. “ ನಮ್ಮ ವ್ಯಾ! ಎಂತಹ ಧೈರ್ಯದು ? ನಾನು ಸ್ಪಷ್ಟವಾಗಿ ನುಡಿದು ಬಿಟ್ಟೆನಲ್ಲ!... "
- ಕರುಣಸಿಂಹನು ಕಿಂಚಿತ್ಸಂಕೋಚದಿಂದ ಪ್ರಶ್ನೆ ಮಾಡಿದನು. ಸುಂದರೀ! ನಿನ್ನ ಪರಿಚಯವನ್ನು ನನಗೆ ಹೇಳಲು ನಿಜವಾಗಿ ಏನಾದರೂ ಪ್ರತಿಬಂಧಕವಿದೆಯೇ ? ”
ಈ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಲಲಿತೆಯ ಹೃದಯವು ವಿದೀರ್ಣವಾಗ ಹತ್ತಿತು. ಯಾವ ಕರುಣಸಿಂಹನು ಅವಳ ತಂದೆಯ ನಿಷ್ಟುರವಾದ ಮತ್ತು ನಿಂದ್ಯವಾದ ಆಚರಣೆಗಳಿಂದ ಭಿಕ್ಷುಕನಂತೆ ಸಿಕ್ಕಸಿಕ್ಕಲ್ಲಿ ಹುಡು ಹಡು ತಿರುಗುತ್ತಿದ್ದನೋ ಅವನಿಗೆ ನಾಗೂಷಣ. ಒಂದಾನೊಂದು ಕಾಲದಲ್ಲಿ ಸ್ವತಂತ್ರವಾದ ರಾಜ್ಯವಿತ್ತು; ಅವನಿಗೆ ವಿಪುಲವಾದ ಐಶ್ವ ರ್ಯವಿತ್ತು; ಆತನನ್ನು ಎಲ್ಲರೂ ಮರ್ಯಾದೆಯಿಂದ ಕಾಣುತ್ತಿದ್ದರು; ಆತನ ಕೀರ್ತಿಯು ಎಲ್ಲೆಡೆಯಲ್ಲಿಯೂ ಹರಡಿತ್ತು. ಕರುಣಸಿಂಹನು ದುರ್ಗಾಧಿಪತಿಯಾದ ವಿಮಲಸಿಂಹನ ಮಗನು. ಐಶ್ವರ್ಯಶಾಲಿಯಾದ ಕುಣಸಿಂಹನು ಕೇವಲ ಹೊಟ್ಟೆ ಹೊರಕೊಳ್ಳುವದಕ್ಕಾಗಿ ಈಗ ಬಾದಶಹನ ಕೈಕೆಳಗಿನ ಸೇನಾಪತಿಯಾಗಿ ನಿಲ್ಲಬೇಕಾಯಿತು. ಆ ಸನ್ಯಾಸಿಗೆ ಕರು ಣಸಿಂಹನ ಪೂರ್ವ ಪೀಠಿಕೆಯ ಚರಿತ್ರೆಯ ಪೂರ್ಣವಾಗಿ ಗೊತ್ತಿತ್ತು. ಆತನೇ ಲಲಿ ತೆಗೆ ಎಲ್ಲ ವೃತ್ತಾಂತವನ್ನೂ ಹೇಳಿದ್ದನು. ಆ ವರ್ತಮಾನವನ್ನು ಕೇಳಿದ ಬಳಿಕ ಕರುಣ ಸಿಂಹನ ವಿಷಯಕವಾದ ಲೀಲೆಯ ಕೃತಜ್ಞತೆಯು ನೂರು ಮಡಿ ಹೆಚ್ಚಾಯಿತು ! ಅವಳ ಸಹಾನುಭೂತಿಯು ಮೆಲ್ಲ ಮೆಲ್ಲನೆ ಪ್ರೇಮದಲ್ಲಿ ರೂಪಾಂತರವನ್ನು ಹೊಂದಹತ್ತಿತು. ತಂದೆ ತಾಯಿಗಳು, ಪಿತೃಸ್ನೇಹ, ಸಂಸಾರ ಇವು ಒಂದು ಕಡೆಯಿಂದಲೂ, ಪರ್ಣಶ ಮೈಯ ಮೇಲೆ ಮಲಗಿಕೊಂಡಿದ್ದು ರಜಪೂತ ವೀರಕುಮಾರನು ಇನ್ನೊಂದು ಕಡೆ ಯಿಂದಲೂ ಆಕೆಯನ್ನು ಎಳೆಯಹತ್ತಿದುವು. ಒಂದು ವೇಳೆ ಈ ರಜಪೂತ ಕುಮಾರನು ತನ್ನನ್ನು ಪರಿಗ್ರಹಿಸಿದರೆ, ತುಚ್ಚವಾದ ತನ್ನ ಶರೀರವನ್ನೂ ಕುದ್ರವಾದ ಪ್ರಾಣವನ್ನೂ ಕರುಣಸಿಂಹನ ಹಿತಾರ್ಥವಾಗಿ ಉಪಯೋಗಿಸುವ ಸಂದರ್ಭವು ಪ್ರಾಪ್ತವಾದರೆ, ಮತ್ತು ಹತಭಾಗಿನಿಯಾದ ತನ್ನನ್ನು ಸ್ವೀಕರಿಸಲು ಈ ವೀರನು ಸಮ್ಮತಿಸಿದರೆ ತನ್ನ ಹೃದಯ ವನ್ನು ಅತ್ಯಾನಂದದಿಂದ ಕರುಣಸಿಂಹನಿಗೆ ದಾನಮಾಡಿ ತನ್ಮೂಲಕ ತನ್ನ ತಂದೆಗೆ ಪಾಪದ ಪ್ರಾಯಶ್ಚಿತ್ತವನ್ನು ಉಂಟುಮಾಡಬೇಕೆಂದು ಲಲಿತೆಯು ಮನಃಪೂರ್ವಕವಾಗಿ
- ಮೆಲ್ಲನೆ ತೆ ಮಾನವನ್ನು
ಇಚ್ಛಿಸಹತ್ತಿದಳು ಈ ಪ್ರಕಾರ ಚಿಂತಾಮಗ್ನ ಳಾದ ಲಲಿತೆಯನ್ನು ನೋಡಿ, ತನ್ನ ಪರಿಚಯವನ್ನು ಹೇಳುವುದಕ್ಕೆ ಅವಳಿಗೆ ಯಾವುದೋ ಒಂದು ಪ್ರತಿಬಂಧಕ ಕಾರಣವಿರಬಹುದೆಂದು ನಮ್ಮ ರಜಪೂತ ವೀರನು ತಿಳಿದುಕೊಂಡನು. ಆದುದರಿಂದ ಅವನು ಆ ವಿಷಯವಾಗಿ ಅವಳನ್ನು ಹೆಚ್ಚಾಗಿ ಏನೂ ಕೇಳಲಿಲ್ಲ. ಮತ್ತೆ ಆತನಿಗೆ ಸ್ವಲ್ಪ ಬಳಲಿಕೆಯುಂಟಾಯಿತು. ತನ್ನ ಕಣ್ಣುಗಳನ್ನು ಅರ್ಧ ಮುಚ್ಚಿ ಆತನು ಕರುಣಸ್ವರದಿಂದ ಮಾತನಾಡಿದನು. ನೀರು ಬೇಕು ! ನೀರು ಬೇಕು! ನೀರಡಿಕೆಯು ಬಹಳವಾಗಿದೆ! ಗಂಟಲೊಣಗಿದೆ ! ” ಸುಗಂಧಿತವಾದ ಔಷಧದ ಮಿಶ್ರಣದಿಂದ ಮಧುರವಾದ ಪಾನೀಯವನ್ನು ಆ ಭುವನಸುಂದರಿಯಾದ ಲಲಿತೆಯು ಕರುಣಸಿಂಹನಿಗೆ ಕುಡಿಸಹತ್ತಿದಳು. ಅದನ್ನು ನೋಡಿ, ದೇವಲೋಕದೊಳಗಿನ ಯಾವಳೋ ಒಬ್ಬ ಅಪ್ಪರೆಯು ತನ್ನ ಬಾಯಲ್ಲಿ ಅಮ್ಮ ತವನ್ನು ಹಾಕಿ ತನಗೆ ನವಜೀವನವನ್ನುಂಟು ಮಾಡುತ್ತಿರುವಳೋ ಎಂದು ಕರುಣಸಿಂಹ ನಿಗೆ ಎನಿಸಹತ್ತಿತು. ಆ ಅಮೃತಸೇವನೆಯಿಂದ ಕರುಣಸಿಂಹನಿಗೆ ಅಲ್ಪಾವಧಿಯಲ್ಲಿಯೇ ನಿದೆ ಹತ್ತಿತ್ತು. ಪ್ರೇಮಮಂದಿರ. ಮೂರನೆಯ ಪರಿಚ್ಛೇದ. ಚಿತ್ರದಮನ ! “ನಸ್ಸೇ, ಭವಾನೀಮಾತೆಯ ಆದೇಶವನ್ನೇ ನಾನು ನಿನಗೆ ಹೇಳುತ್ತಲಿದ್ದೇನೆ. ಭವಾ ನಿಯ ಕೃಪೆಯಿಂದ ನನಗೆ ತಿಳಿದುಬಂದುದನ್ನೇ ನಿನಗೆ ಸ್ಪಷ್ಟ ಪಡಿಸಿ ಹೇಳಹತ್ತಿದ್ದೇವೆ. ನಿಮ್ಮಿಬ್ಬರ ಮೇಲನವು ಎಂದೂ ಸುಖಪ್ರದವಾಗಲಾರದು. ನಿನ್ನಿನ ರಾತ್ರಿಯೆಲ್ಲ ಜಾಗ ರಣೆಮಾಡಿ, ನಿನಗೋಸ್ಕರವಾಗಿಯೇ ಗಣಿತವನ್ನು ಮಾಡುತ್ತ ಕುಳಿತುಕೊಂಡಿ ದ್ದೆನು. ” ( ತಮ್ಮ ಗಣಿತದಿಂದ ಏನು ಹೊರಟಿತು ? ” * ನಿಮ್ಮ ವಿವಾಹದಲ್ಲಿ ಅಡಿಗಡಿಗೆ ನಿಮ್ಮ ಗಳೇ ಬರುವವೆಂದು ಹೊರಟಿತು. ” ಆ ನಿರ್ಜನಪ್ರದೇಶದಲ್ಲಿ ಆ ಪರ್ಣಶಾಲೆಯಿಂದ ಸ್ವಲ್ಪ ಅ೦ತರದ ಮೇಲೆ .೦ದು ತಮಾಲವೃಕ್ಷದ ಬುಡದಲ್ಲಿ ನಿಂತುಕೊಂಡು ನಮ್ಮ ಪರಿಚಿತನಾದ ಯೋಗಿಯು ಮೇಲೆ ಹೇಳಿದಂತೆ ಲಲಿತೆಯೊಡನೆ ಸಂಭಾಷಣ ಮಾಡುತ್ತಿದ್ದನು; ಮತ್ತು ರಾಜನಂದಿನಿಯಾದ ಲಲಿತೆಯು ಮಸ್ತಕವನ್ನು ಬಗ್ಗಿಸಿಕೊಂಡು ವಿಷಣ್ಣ ಮಲಿನಮುಳಾಗಿ ಶುಷ್ಕ ತಮಾಲಪತ್ರವೊಂದನ್ನು ಕೈಯಿಂದ ಹರಿದು ಚೂರುಚೂರು ಮಾಡುತ್ತ ಆತನ ಆದೇಶ ವನ್ನು ಕೇಳುತ್ತಿದ್ದಳು.
- ಹಿಂದಿನ ಪರಿಚ್ಛೇದದಲ್ಲಿ ಹೇಳಿದ ಸಂಗತಿಯು ಸಂಘಟಿಸಿದ ಬಳಿಕ ಆರೇಳುದಿನ ಸಗಳು ಕಳೆದು ಹೋಗಿದ್ದವು. ಕರುಣಸಿಂಹನಿಗೆ ಸಾಧಾರಣರೀತಿಯಿಂದ ವಾಸಿಯಾಗಿ ಆತನು ದಿಲ್ಲಿಗೆ ಹೊರಟುಹೋಗಿದ್ದನು. ಲಲಿತೆಯ ತಂದೆಯಾದ ದುರ್ಗಾಧಿಪತಿ ಭೀಮ ಸಿಂಹನಿಗೆ ಪತ್ರ ಬರೆದು ಆ ಯೋಗಿಯು ಸರ್ವವೃತ್ತಾಂತವನ್ನೂ ತಿಳಿಸಿದ್ದನು. ಮತ್ತು ಆತನ ಅನುಮತಿಯಿಂದಲೇ ಲಲಿತೆಯನ್ನು ಇನ್ನೂ ಎರಡುಮೂರು ದಿವಸಗಳವರೆಗೆ ತನ್ನಲ್ಲಿ ಇರಿಸಿಕೊಂಡಿದ್ದನು. ಆ ಯೋಗಿಯ ಹೆಸರು ಚಂದ್ರಚೂಡನೆಂಬುದು, ತೀಕ. ಬುದ್ದಿಯವನೂ ಅತ್ಯಂತಧೋರಣಿಯೂ ಆದ ಆ ಬೈರಾಗಿಯು ಮುಂದೆ ಒದಗಬಹುದಾ ದುದನ್ನು ತಿಳಿದಿದ್ದನು, ಲಲಿತಕರುಣಸಿಂಹರ ಹೃದಯದಲ್ಲಿ ಪರಸ್ಪರವಾಗಿ ಪ್ರಬಲವಾದ ಅನುರಾಗವು ಉತ್ಪನ್ನವಾಗಿದೆಯೆಂಬುದನ್ನು ಆತನು ಕಂಡು ಹಿಡಿದಿದ್ದನು. ಆದುದ ರಿಂದಲೇ ಕರುಣಸಿಂಹನು ಅಲ್ಪಮಟ್ಟಿಗೆ ಸ್ವಾಸ್ಥ್ಯವನ್ನು ಹೊಂದಿದ ಕೂಡಲೇ ಅವನನ್ನು ದಿಲ್ಲಿಗೆ ಕಳಿಸಿ ಬಿಟ್ಟಿದ್ದನು?
ಚಂದ್ರಚೂಡನ ಮುಖದ ಕಡೆಗೆ ನೋಡುತ್ತ ಲಲಿತೆಯು ಕರುಣಸ್ವರದಿಂದ ಪ್ರಶ್ನೆ ಮಾಡಿದಳು, “ ಸ್ವಾಮಿ, ಹಾಗಾದರೆ ಇದಕ್ಕೆ ಯಾವ ಉಪಾಯವೂ ಇಲ್ಲವೇ ಇಲ್ಲವೇನು?” ೧೪ ವಾಗ್ಯೂಷಣ, • • • • • • • • • • • • • • • • • • • • • •++ ಚಂದ್ರಚೂಡನು ಖಿನ್ನ ಸ್ವರದಿಂದ ಮಾತನಾಡಿದರು. ಇಲ್ಲ. ಮಗಳೇ ! ಇಲ್ಲ. ಇದಕ್ಕೆ ಒಂದೂ ಉಪಾಯವಿಲ್ಲ. ಕುಮಾರನೊಡನೆ ನಿನ್ನ ವಿವಾಹವಾದರೆ ವೈಧವ್ಯಯೋ ಗವೇ ನಿನ್ನ ಹಣೆಯಲ್ಲಿದೆ. ಇಂದಿನಿಂದ ಒಂದು ವರುಷದವರೆಗೆ ನೀವು ಉಭಯತರೂ ಪರಸ್ಪರದರ್ಶನವನ್ನು ಕೂಡ ತೆಗೆದುಕೊಳ್ಳಲಾಗದು. ಇದು ನನ್ನ ಅಪ್ಪಣೆಯು, ನೀವು ಒಬ್ಬರನ್ನೊಬ್ಬರು ನೋಡುತ್ತಿರುವುದರಿಂದ ಭಯಂಕರವಾದ ಅನರ್ಥವು ಪ್ರಾಪ್ತವಾ ಗುವ ಸಂಭವವಿದೆ. ದೈವಘಟನೆಯು ಎಂದೂ ಸುಳ್ಳಾಗಲಾರದು. ಅದಕ್ಕೋಸ್ಕರ ವ್ಯರ್ಥ ವಾಗಿ ದುಃಖಪಟ್ಟು ಪ್ರಯೋಜನವೇನು ? ಲಲಿತೆಯ ಕಣೋಳಗಿಂದ ಅಶ್ರುಬಿಂದುಗಳು ಉದುರಿದವು. ಅವಳು ಬಿಕ್ಕುತ್ತ ಬಿಕ್ಕುತ್ತ ಮಾತನಾಡಿದಳು. “ ಹಾಗಾದರೆ ಸ್ವಾಮಿ ನಾನು ಇನ್ನು ಮೇಲೆ ದುರ್ಗಕ್ಕೆ ಹೋಗುವುದಿಲ್ಲ. ಸನ್ಯಾಸಿನಿಯಾಗಿ ನಿಮ್ಮ ಸೇವೆಯಲ್ಲಿಯೇ ಅಯುಷ್ಯವನ್ನು ಕಳೆ ಯುವೆನು. ೨) ಚಂದ್ರಚೂಡನು ಸ್ನೇಹಭರದಿಂದ ಮಾತನಾಡಿದನು. ( ಮಗಳೇ, ಹೀಗೆ ಮಾತ ನಾಡಬೇಡ. ನಾನು ಸಂಸಾರತ್ಯಾಗಿಯಾದ ಬೈರಾಗಿಯು, ಜಗತ್ತಿನೊಡನೆ ನನ್ನ ಸಂಬಂಧವ್ರ ಬಹಳ ಕಡಿಮೆ. ನಾನು ಎಲ್ಲಿ ಇರುತ್ತೇನೆ, ಏನು ಮಾಡುತ್ತಿರುತ್ತೇನೆ, ಎಲ್ಲಿ ತಿರುಗುತ್ತಿರುತ್ತೇನೆ, ಎಂಬುದಾವುದೂ ನಿಶ್ಚಿತವಿಲ್ಲ. ನನ್ನ ಆಯುಷ್ಯಕ್ರಮಕ್ಕೆ ತಾಳವೂ ಇಲ್ಲ ತಂತ್ರವೂ ಇಲ್ಲ! ಲಲಿತೇ, ಮಗೂ, ಸುಮ್ಮನೇ ನನ್ನನ್ನೇಕೆ ಮಾಯಾ-ಬಂಧನಕ್ಕೆ ಗುರಿಮಾಡುವೆ? ” ಚಂದ್ರಚೂಡನ ಈ ಪ್ರಶ್ನೆಗೆ ಏನೆಂದು ಉತ್ತರ ಕೊಡಬೇಕೆಂಬುದು ಲಲಿತೆಗೆ ತಿಳಿಯದಾಯಿತು. ಆಕೆಗೆ ಒಳ್ಳೆ ಕಠಿಣಪ್ರಸಂಗವು ಪ್ರಾಪ್ತವಾಯಿತು. (( ಒಂದು ವರುಷ! ಅಬಬಾ ? ಎಷ್ಟೊಂದು ದೀರ್ಘಕಾಲವಿದು! ಇಷ್ಟು ದೀರ್ಘಕಾಲವನ್ನು ಹೇಗೆ ಕಳೆಯುವೆನೋ ಯಾರಿಗೆ ಗೊತ್ತು ! ಇನ್ನು ದುರ್ಗಕ್ಕೆ ಪುನಃ ಹೋಗಿ ತಾಯಿಗೂ ತಂದೆಗೂ ಸುಮ್ಮ ಸುಮ್ಮನೆ ದುಃಖವನ್ನೇಕೆ ಉಂಟು ಮಾಡಬೇಕು ? ವಿಮಲಪ್ರೇಮದ ಸ್ಕೃತಿಯನ್ನು ಪ್ರಜ್ವಲಿಸುವ ಪ್ರಖರವಾದ ವತ್ನಿಯನ್ನು ಹೃದಯದಲ್ಲಿಟ್ಟು ಕೊಂಡು ಈ ದೀರ್ಘಕಾಲವನ್ನು ಹೇಗಾದರೂ ಕಳೆಯುವೆನು ; ಕಟ್ಟ ಕಡೆಗೆ ನನ್ನ ಹೃದಯೇಶ್ವರ ನನ್ನು ದೊರಕಿಸುವೆನು; ಶೇಷಾಯುಷ್ಯದಲ್ಲಿ ಸೌಖ್ಯವನ್ನು ಅನುಭವಿಸುವೆನು. ದುರ್ದೈ ವದಿಂದ ಈ ಪ್ರಕಾರ ಸಂಘಟಿಸದಿದ್ದರೆ ಸ್ವರ್ಗದೊಳಗಿನ ನಮ್ಮಿಬ್ಬರ ಸಮಾಗಮಕ್ಕೆ ಯಾರೂ ವಿಘ್ನವನ್ನುಂಟುಮಾಡಲಾರರು ! ” ಈ ಪ್ರಕಾರದ ವಿಚಾರತರಂಗಗಳು ಈ ಸಮ ಯಕ್ಕೆ ಲಲಿತೆಯ ಮನಃಸಮುದ್ರದಲ್ಲಿ ಉತ್ಪನ್ನವಾಗುತ್ತಿದ್ದುವು. ( ಹೋಗು ಮಗಳೇ ! ಹೋಗು. ಸುಮ್ಮನೇ ಹುಚ್ಚಿಯ ಹಾಗೆ ಮಾಡಬೇಡ ಪ್ರೇಮಮಂದಿರ. ha 4/+. • + - - - ತಂದೆ ತಾಯಿಗಳಿಗೂ ನನಗೂ ಕೇಶವನ್ನುಂಟು ಮಾಡಬೇಡ. ” ಚಂದ್ರಚೂಡನು ವಾತ್ಸಲ್ಯಭರದಿಂದ ಮಾತನಾಡಿದನು. - ಲಲಿತೆಯ ಕಣ್ಣುಗಳಲ್ಲಿ ಬಾಷ್ಟ್ರಗಳು ತುಂಬಿದುವು. ಅಳುದನಿಯಿಂದ ಅವಳು ಮಾತನಾಡಿದಳು, “ ತಮ್ಮ ಇಚ್ಛೆಯೇ ಹಾಗಿದ್ದ ಮೇಲೆ ನಾನು ಮನೆಗೆ ಹೋಗಲಿಕ್ಕೆ ಬೇಕು.”
- ಹೋಗು. ಮಗಳೇ ಹೋಗು.”
ಸೇವಕರು ಲಲಿತೆಯ ಮೇಣೆಯನ್ನು ಇಟ್ಟುಕೊಂಡು ಸಮೀಪದಲ್ಲಿಯೇ ಕುಳಿತು ಕೊಂಡಿದ್ದರು. ಲಲಿತೆಯು ಚಟಕ್ಕನೆ ಎದ್ದು , ಚಂದ್ರಚೂಡನ ಚರಣಕಮಲಗಳಿಗೆ ಭಕ್ತಿ ಪೂರ್ವಕವಾಗಿ ವಂದಿಸಿ ಮೇಣೆಯಲ್ಲಿ ಕುಳಿತುಕೊಂಡಳು. ಸೇವಕರು ಮೇಣೆಯನ್ನು ಎತ್ತಿದರು. (ಮಗಳೇ, ಹೋಗಿ ಬಾ, ಭವಾನೀ ಮಾತೆಯ ಕೃಪೆಯಿಂದ ನಿನ್ನ ಮನೋರ ಥವ ಪೂರ್ಣವಾಗಲಿ, ” ಹೀಗೆಂದು ಚಂದ್ರಚೂಡನು ಆಶೀರ್ವದಿಸಿದ ಕೂಡಲೇ ಮೇಣಾ ವಾಹಕರು ನಡೆಯಹತ್ತಿದರು. ಆ ಮೇಣೆಯು ಕಣ್ಮರೆಯಾಗುವವರೆಗೂ ಚಂದ್ರಚೂ ಡನು ಆಶ್ರಮದ ಹೊರಬದಿಯಲ್ಲಿ ನಿಂತುಕೊಂಡು ನೋಡುತ್ತಿದ್ದನು. ಆತನನ್ನು ನೋಡಿ ದರೆ, ಶಕುಂತಲೆಗೆ ನಿರೋಪವನ್ನಿತ್ತು ಆಕೆಯ ಗಮನಪಥವನ್ನೇ ನೋಡುತ್ತ ನಿಂತು ಕೊಂಡಿದ್ದ ಕಣ್ವ ಮಹರ್ಷಿಯೋ ಎಂಬಂತೆ ತೋರುತ್ತಿದ್ದನು. ಅಲ್ಪಾವಧಿಯಲ್ಲಿಯೇ ಲಲಿತೆಯ ಮೇಣೆಯು ಕಾಣದಂತಾಯಿತು. ವನ್ಯವೃಕ್ಷಲತೆಗಳ ಆತನ ದೃಷ್ಟಿ ಪಥಕ್ಕೆ ಅಡ್ಡವಾದ ಒಳಿಕ ಚಂದ್ರಚೂಡನು ಕಣ್ಮರೆಸಿಕೊಂಡು ಆಶ್ರಮದ ಕಡೆಗೆ ತಿರುಗಿದನು. ಆಶ್ರಮದ್ವಾರದಲ್ಲಿ ಬಂದೊಡನೆಯೇ ಚಂದ್ರಚೂಡನು ಕೋಮಲಸ್ವರದಿಂದ ಕೂಗಿ ದನು. “ ಕೃಷ್ಣ! ” ಆತನ ಕೂಗನ್ನು ಕೇಳಿದೊಡನೆಯೇ ಕಾವಿಯ ಒಟ್ಟೆಯನ್ನು ಪರಿಧಾನ ಮಾಡಿ ಕೊಂಡಿದ್ದ ಒಬ್ಬ ಸುಂದರ ಯುವತಿಯು ಆಶ್ರಮದ ಬಾಗಿಲಿಗೆ ಬಂದು ನಿಂತುಕೊಂಡಳು. ಅವಳ ನೈಸರ್ಗಿಕವಾದ ಸೌಂದರ್ಯವು ಆ ಕಾವಿಯ ವಸ್ತ್ರದಿಂದ ಅಧಿಕೋಜ್ವಲವಾಗಿ ತೋರುತ್ತಿತ್ತು, ಆ ರೂಪವತಿಯ ಲಾವಣ್ಯದಲ್ಲಿ ಕೋಮಲತೆಯಿದ್ದಿಲ್ಲ; ಆದರೆ ಒಂದು ಪ್ರಕಾರದ ತೀವ್ರತೆಯು ದೃಗ್ಗೋಚರವಾಗುತ್ತಿತ್ತು. ಪ್ರಿಯವಾಚಕರೇ, ಶ್ರಾವಣಮಾಸ ದಲ್ಲಿ ದೊಡ್ಡದೊಂದು ಮಳೆಯ ಸೆಳಕು - ಧಬ ಧಬ' ಸುರಿಯುತ್ತಿರಲು ಇರ್ತಡಿಗಳ ಲ್ಲಿಯೂ ತುಂಬಿ ಹೊರಸೂಸಿ ಹರಿಯುತ್ತಿರುವ ಗಂಗಾನದಿಯಂತಹ ದೊಡ್ಡ ಪ್ರವಾಹದ ಭಯಂಕರ ಸ್ವರೂಪವನ್ನು ಲಕ್ಷಕ್ಕೆ ತಂದುಕೊಳ್ಳಿರಿ. ಆ ಉದ್ಧಾಮವಾದ ಚಂಚಲಭಾ ವೆಗಳೆಲ್ಲವೂ ಕೃಷ್ಣಾ ಕುಮಾರಿಯ ಮೊಗವನ್ನು ನೋಡಿದೊಡನೆಯೇ ಕಣ್ಣ ಮುಂದೆ ಕಟ್ಟಿದಂತಾಗುತ್ತಿದ್ದುವು. ವಾಗ್ಯೂಷಣ. ವಾಗೂ ಚಂದ್ರಚೂಡನು ಅವಳನ್ನು ನೋಡಿ ಮಮತೆಯಿಂದ ಪ್ರಶ್ನೆ ಮಾಡಿದನು. ಈ ಚಿತ್ರದ ಮನವು ಕೊನೆಗೆ ನಿನಗೆ ಸಾಧ್ಯವಾಯಿತೋ ಇಲ್ಲವೋ ? ” ಕೃಷ್ಣಾ ಕುಮಾರಿಯು ಸ್ವಲ್ಪ ಹೊತ್ತಿನವರೆಗೆ ಸುಮ್ಮನಿದ್ದು ಆ ಮೇಲೆ ಮುಖವನ್ನು ತಗ್ಗಿಸಿಕೊಂಡು ಮಾತನಾಡಿದಳು. “ ಸ್ವಾಮಿ, ನಿಮ್ಮ ಮುಂದೆ ನಾನು ಸತ್ಯವನ್ನು ಹೇಗೆ ಬಚ್ಚಿಡಲಿ, ಲಜ್ಞಾದೇವಿಯ ಆಣೆಯಿಂದ ಹೇಳುತ್ತೇನೆ; ಮನಸನ್ನು ಬಿಗಿಹಿಡಿಯುವದು ನನ್ನಿಂದ ಆಗುವದಿಲ್ಲ. ಸ್ವಾಮಿ, ನನಗೆ ಅಪ್ಪಣೆಯನ್ನು ಕೊಡಿರಿ, ನಾನು ಆಶ್ರಮದಿಂದ ಹೊರಟು ಹೋಗುತ್ತೇನೆ. ಈ ಪವಿತ್ರ ಸ್ಥಾನವು ಹತಭಾಗಿನಿಯಾದ ಈ ಪಾಪಿಷ್ಠೆಯಿಂದ ಇನ್ನು ಮುಂದೆ ಕಲಂಕಿತವಾಗುವದು ಬೇಡ. ” ಕೃಷ್ಣ ಯು ತನಗೆ ಈ ಪ್ರಕಾರದ ಉತ್ತರವನ್ನು ಕೊಡಓಹುದೆಂದು ಚಂದ್ರಚೂ ಡನು ತಿಳಿದಿರಲಿಲ್ಲ. ಅವಳ ಮಾತಿನಿಂದ ಆತನ ಮನಸ್ಸು ಕಲ್ಲೋಲವಾಯಿತು. ಆಗಲ ವನು ಕ್ರುದ್ಧ-ಸ್ವರದಿಂದ ಮಾತನಾಡಿದನು. ಪಾಪಾತ್ಮ, ನಿನ್ನ ಅದೃಷ್ಟದ ಭವಿಷ್ಯವ ತಿಳಿದ ಒಳಿಕಾದರೂ ನೀನು ಚಿತ್ರದಮನ ಮಾಡಬಹುದೆಂದು ನಾನು ತಿಳಿದಿದ್ದೆನು. ಕೃಷ್ಣ! ನಿನ್ನ ಈ ಅಹಂಕಾರವು ಶೀಘ್ರವಾಗಿಯೇ ಚೂರುಚೂರಾಗಿ ಹೋಗುವುದು. ಯಾವ ಅನಿಷ್ಟವನ್ನು ಪ್ರತೀಕಾರಮಾಡುವದಕ್ಕಾಗಿ ನಾನು ಇಷ್ಟೊಂದು ಪ್ರಯತ್ನ ಪಡು ಇರುವೆನೋ, ಆ ಅಸಿಷ್ಟವ ನಿಶ್ಚಯವಾಗಿ ಪ್ರಾಪ್ತವಾಗುವದು! ” ಕೃಷ್ಣಕುಮಾರಿಯು ಮೋರೆಯನ್ನು ತಗ್ಗಿಸಿ ನಿಂತುಕೊಂಡಳು. ಸಮೀಪದಲ್ಲಿಯೇ ಬಿದ್ದಿದ್ದ ಒಂದು ಕರಿಯ ಕಲ್ಲಿನ ಮೇಲೆ ಕುಳಿತುಕೊಂಡು ಚಂದ್ರಚೂಡನು ಮತ್ತೆ ಅವ ಇನ್ನು ಕುರಿತು ಮಾತನಾಡಿದನು. ( ಕೃಷ್ಣ! ಕರುಣಸಿಂಹನು ಯಾರೆಂಬುವದನ್ನು ಇಂದು ನಿನಗೆ ಹೇಳುತ್ತೇನೆ. ದುರ್ಗಾಧಿಪತಿಯಾದ ವಿಮಲಸಿಂಹನು ನನ್ನ ಶಿಷ್ಯನು ಆತನ ದುರ್ಗವು ಈಗ ಚಂದ್ರಾವತನಾದ ಭೀಮಸಿಂಹನ ವಶದಲ್ಲಿದೆ. ಭೀಮಸಿಂಹನು ದಾಂಭಿಕನು, ಕಪಟಿಯು, ಭಯಂಕರಮನುಷ್ಯನು! ಯುಕ್ತಿಯಿಂದಲೂ ಕೌಶಲ್ಯ ದಿಂದಲೂ ವಿಮಲಸಿಂಹನ ವಿರುದ್ದವಾಗಿ ದಿಲೀಪತಿಗೆ ದೂರ ಹೇಳಿ, ವಿಮಲಸಿಂಹನಿಂದ ದುರ್ಗವನ್ನು ಕಿತ್ತುಕೊಂಡನು. ಅಭಿಮಾನಿಯಾದ ವಿಮಲಸಿಂಹನು ಸರ್ವಸ್ವವನ್ನು ಪರಿ ತ್ಯಜಿಸಿ ರಾತ್ರಿಯಲ್ಲಿಯೇ ದುರ್ಗವನ್ನು ಬಿಟ್ಟು ಹೊರಟುಹೋದನು. ಆಗ ನಾನು ತೀರ್ಥಯಾತ್ರೆಗೆ ಹೋಗಿದ್ದೆನು. << ವಿಮಲಸಿಂಹನು ಮುಕಶಿವಲೀನದಿಯನ್ನು ದಾಟುತ್ತಿದ್ದಾಗ ಆತನ ನೌಕೆಯು ಒಂದು ಬಂಡೆಯ ಮೇಲೆ ಅಪ್ಪಳಸಿ ಒಡೆದು ಮುಳುಗಿಹೋಯಿತು. ಅದರಲ್ಲಿ ಒಬ್ಬ ಹುಡುಗನೂ, ಒಬ್ಬ ಹುಡಿಗೆ ಇದ್ದರು. ಆ ಹುಡುಗನೇ ವಿಮಲಸಿಂಹನ ಒಬ್ಬನೇ ಒಬ್ಬ ಮಗನಾದ ಕರುಣಸಿಂಹನು! ಮತ್ತು ಆ ಹುಡುಗೆಯೇ ಸೀನು!! ಪ್ರೇಮಮಂದಿರ, ೧೭ Avry - * * * * * * ವಿಮಲಸಿಂಹನು ತನ್ನ ಪ್ರಾಂತವನ್ನೂ ದುರ್ಗವನ್ನೂ ಕಳೆದುಕೊಂಡಾಗ ವಿಧುರ ವಸ್ಥೆಯಲ್ಲಿದ್ದನು. ಆತನ ಮೊದಲನೆಯ ಹೆಂಡತಿಯು ಸತ್ತ ತರುವಾಯ ಮತ್ತೊಬ್ಬ ರೂಪ ವತಿಯನ್ನು ಮದುವೆಮಾಡಿಕೊಂಡಿದ್ದನು. ಆ ತರುಣಿಯ ಚಾರಿತ್ರ್ಯದ ಸಂಬಂಧವಾಗಿ ಆತನ ನಗರದಲ್ಲಿ ಎಷ್ಟೋ ದುರ್ವತ್ತಾಂತಗಳು ಹರಡಿದ್ದುವು. ಈಗಿನ ದುರ್ಗಪತಿಯಾದ ಭೀಮಸಿಂಹನು ಸೇನಾಪತಿಯಾಗಿದ್ದನು. ನೂತನ ರಾಜ್ಜಿ ಮತ್ತು ಭೀಮಸಿಂಹ ಇವರ ವಿಷಯವಾಗಿ ಕಲಂಕದ ವರ್ತಮಾನವ ಪಟ್ಟಣದಲ್ಲಿ ಪಸರಿಸಿತು. ಈ ಅಪಮಾನವನ್ನು ಸಹಿಸಲಾರದೆ ,ವಿಮಲಸಿಂಹನು ಪತ್ನಿಗೆ ವಿಷಪ್ರಾಶನ ಮಾಡಿಸಿ ಅವಳನ್ನು ಕೊಂದು ಬಿಟ್ಟನು. (( ಅನಂತರ ಸ್ವಲ್ಪ ದಿವಸಗಳಲ್ಲಿಯೇ ವಿಮಲಸಿಂಹನ ದುರ್ದೈವಕ್ಕೆ - ಮೊದಲ ಯಿತು ! ಭೀಮಸಿಂಹನ ಕಪಟವನ್ನು ಅರಿಯದೆ ಅವನು ಹೇಳಿದುದೆಲ್ಲ ನಿಜವೆಂದು ತಿಳಿದು ದಿಲೀಪತಿಯು ದುರ್ಗವನ್ನು ಬಿಟ್ಟು ಬಿಡುವಂತೆ ವಿಮಲಸಿಂಹನಿಗೆ ಆಜ್ಞಾಪಿಸಿದನು. ಅದೇ ದಿವಸ ರಾತ್ರಿ ದುರ್ಗಾಧಿಪತಿಯು ಓಡಿಹೋದನು. ನಿನ್ನ ತಾಯಿಯ ದುರಾಚಾರವು ಚೆನ್ನಾಗಿ ಗೊತ್ತಿದ್ದರೂ ಪ್ರೀತಿ ವಿಶೇಷದ ಮೂಲಕ ಅವನು ನಿನ್ನನ್ನು ತ್ಯಜಿಸಲಿಲ್ಲ. ನೀವು ಕುಳಿತುಕೊಂಡಿದ್ದ ಹಡಗವು ಒಡೆದು ಹೋದ ಬಳಿಕ ಮುಕ್ತಾವಳಿಯ ದಂಡೆಯ ಮೇಲೆ ವಾಸವಾಗಿದ್ದ ಒಬ್ಬ ಬೈರಾಗಿಯು ನಿಮ್ಮನ್ನು ಬದುಕಿಸಿದನು. ಕೃಷ್ಣ ! ಆ ಬೈರಾ ಗಿಯೇ ನಾನು, ” - “ ನಾನು ಸಂಸಾರತ್ಯಾಗಿಯಾದ ಬೈರಾಗಿಯು ನಿನ್ನನ್ನು ಕಟ್ಟಿಕೊಂಡು ನಾನು ಮಾಡತಕ್ಕದ್ದೇನು ? ಆದರೂ ವಿಮಲಸಿಂಹನ ಮೇಲಿದ್ದ ನನ್ನ ಪ್ರೇಮವು ನನ್ನನ್ನು ಬಿಟ್ಟು ಹೋಗಲಿಲ್ಲ. ನಾನು ಯಾವಾಗಲೂ ಆಗ್ರಾ ಪಟ್ಟಣಕ್ಕೆ ಹೋಗುತ್ತಿದ್ದೆನು. ಅಲ್ಲಿ ಒಬ್ಬ ಸಾವುಕಾರನು ನನ್ನ ಪ್ರಮುಖ ಶಿಷ್ಯನಾಗಿದ್ದನು. ನಿಮ್ಮಿಬ್ಬರ ಪಾಲನಸೋಷಣದ ಭಾರ ವನ್ನು ನಾನು ಆತನಿಗೆ ಒಪ್ಪಿಸಿದೆನು. " ( ಮಾಘಮಾಸದಲ್ಲಿ ಪೌರ್ಣಿಮೆಯ ದಿವಸ ನಾನೊಮ್ಮೆ ಅಗ್ರಕ್ಕೆ ಹೋಗಿ ದ್ದೆನು. ಆಗ ಕರುಣಸಿಂಹನು ಬಾದಶಹನ ಬಳಿಯಲ್ಲಿ ಕೆಲಸ ಮಾಡುತ್ತಿದ್ದುದು ನನಗೆ ತಿಳಿಯಬಂತು. ಅದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ನಾನು ನಿಂತ ನಾದೆನು. ಆದರೆ ನಿಮ್ಮಿಬ್ಬರ ಬಾಲ್ಯಸ್ನೇಹವು ಪ್ರೇಮದಲ್ಲಿ ರೂಪಾಂತರ ಹೊಂದುತ್ತ ನಡೆದಿರುವುದೆಂಬುದು ಆ ಸಾವಕಾರನ ಹೆಂಡತಿಯಿಂದ ನನಗೆ ಗೊತ್ತಾಯಿತು. ಇದನ್ನು ಕೇಳಿ ನನಗೆ ಅತ್ಯಂತ ವ್ಯಸನವಾಯಿತು, ” - - - ಕೃಷ್ಣ! ಮನಸ್ಸಿನಲ್ಲಿ ಕಳವಳಪಡಬೇಡ. ನಿನ್ನ ತಾಯಿಯ ಮೇಲಿನ ಕಲಂಕವು ಮರೆತುಹೋಗುವುದು ಅಶಕ್ಯವಾಗಿತ್ತು. ಕರುಣಸಿಂಹನೊಡನೆ ನಿನ್ನ ವಿವಾಹವಾಗು ವುದೂ ಅಶಕ್ಯವಾಗಿತ್ತು. ಈ ಸಂಗತಿಯು ನನಗೊಬ್ಬನಿಗೇ ಗೊತ್ತಿತ್ತು. ಆದುದರಿಂದ ೧೮ ವಾಗ್ಯೂಷಣ, vvvvvvvvvvvvvvvvvvvvvvvvvvv ಮುಂದೆ ಸಂಭವಿಸಬಹುದಾದ ಅನರ್ಥವನ್ನು ತಡೆಯುವದಕ್ಕೋಸ್ಕರ ನಿಮ್ಮಿಬ್ಬರನ್ನು ಅಗಲಿಸಿ ನಿನ್ನನ್ನು ನನ್ನ ಆಶ್ರಮದಲ್ಲಿ ತಂದಿಟ್ಟು ಕೊಂಡೆನು. • ದೈವಘಟನೆಯಿಂದ ಕುಮಾರನು ಗಾಯಪಟ್ಟವನಾಗಿ ನನ್ನ ಆಶ್ರಮಕ್ಕೆ ಬರಲು, ಆತನ ಹತ್ತಿರ ಹೋಗಬೇಡವೆಂದು ನಾನು ನಿನ್ನನ್ನು ಆಜ್ಞಾಪಿಸಿದ್ದೆನು. ಆದರೂ ಅದನ್ನು ಮೀರಿ ನೀನು ಆತನ ದರ್ಶನವನ್ನು ತೆಗೆದುಕೊಂಡೆ. ಕೃಷ್ಣ ! ನನ್ನ ಅಪ್ಪಣೆಯನ್ನು ವಿರುವ ಪಾತಕಕ್ಕೆ ನೀನು ಹೇಸಲಿಲ್ಲ. ಆ ಪಾಪಕ್ಕೆ ಚಿತ್ರದಮನವೇ ಪ್ರಾಯಶ್ಚಿತ್ತವು ! ಮೂರು ದಿವಸಗಳವರೆಗೆ ನಿನ್ನನ್ನು ಉಪವಾಸದಿಂದ ಇರಿಸಿದೆನು. ಮನಸ್ಸನ್ನು ಸಿರಗೊಳಿ ಸೆಂದು ಉಪದೇಶ ಮಾಡಿದನು. ಆದರೆ ನಿನಗದು ಸಾಧ್ಯವಾಗಲಿಲ್ಲ. ಕೃಷ್ಣ ! ನಿನ್ನ ಅದೃ ಷ್ಟದಲ್ಲಿ ಏನಿದೆಯೆಂಬುದು ಈಗ ನಿನಗೆ ಗೊತ್ತಾಗಿದೆಯಷ್ಟೇ ? ಇನ್ನು ಮೇಲಾದರೂ ಜಾಗರೂಕಳಾಗು, ಕರುಣಸಿಂಹನೊಡನೆ ನಿನ್ನ ವಿವಾಹವಾಗುವದು ಹೇಗೆ ಅಶಕ್ಯವಾಗಿ ದೆಯೆಂಬದು ಈಗ ನಿನಗೆ ಗೊತ್ತೇ ಆಯಿತು. ಕರುಣನಿಗೆ ತಾಯಿಯಿಲ್ಲ; ತಂದೆಯಿಲ್ಲ; ನಾನೇ ಪ್ರತಿಪಾಲಕನು. ನಾನು ಆತನ ಹಿತದ ಕಡೆಗೆ ಲಕ್ಷಗೊಡದಿದ್ದರೆ ಇನ್ನಾರು ಕೊಡ ಬೇಕು. ನಿನಗೆ ಇನ್ನೂ ನಾಲ್ಕು ಪ್ರಹರಗಳ ಅವಕಾಶವನ್ನು ಕೊಡುತ್ತೇನೆ. ನಾಳೆ ಮುಂಜಾನೆ ನನಗೆ ಮತ್ತೆ ಭೆಟ್ಟಿಯಾಗು. ” ಇಷ್ಟು ಮಾತನಾಡಿ ಚಂದ್ರಚೂಡನು ಹೊರಟುಹೋದನು. ಕೃಷ್ಣಾ ಕುಮಾರಿಯು ಒಂದು ನಿಶ್ವಾಸವನ್ನು ಬಿಟ್ಟು ತನ್ನಲ್ಲಿಯೇ ವಿಚಾರಮಾಡಹತ್ತಿದಳು. ಎರಡೂ ಕೈಗಳನ್ನು ಜೋಡಿಸಿ ಆಕಾಶದ ಕಡೆಗೆ ನೋಡುತ್ತ ಅವಳು ಮಾತನಾಡಿದಳು. “ ಪ್ರಭೋ, ದಯಾ ಮಯಾ! ಈ ಪ್ರಬಲವಾದ ಪ್ರೇಮಕಾಂಕ್ಷೆಯನ್ನು ಹೇಗೆ ಪ್ರತಿಬಂಧಿಸಲಿ ? ಕರುಣಸಿಂಹ ವಿಷಯಕವಾದ ಪ್ರೇಮವನ್ನು ಹೃದಯದಲ್ಲಿ ತಳೆದೇ ಸತ್ತು ಹೋದರೆ ಒಳಿತಲ್ಲವೇ? ಈ ವಿಶಾಲವಾದ ಜಗತ್ತಿನಲ್ಲಿ ನನ್ನವರು ಯಾರಿದ್ದಾರೆ? ಕೇವಲ ಪ್ರೇಮಚಿಂತನವೊಂದು ಮಾತ್ರ ನನ್ನ ಸಹಚಾರಿಯಾಗಿದೆ. ಚಂದ್ರಚೂಡರೇ ? ಮಹಾಸ್ವಾಮಿಗಳೇ! ನೀವಂತೂ ಬೈರಾಗಿಗಳು. ನಿಮಗೆ ಹೃದಯವೆಲ್ಲಿರುವುದು ? ಪ್ರೇಮದ ಮರ್ಮವು ನಿಮಗೆ ಹೇಗೆ ಗೊತ್ತಾಗುವುದು ? ” ಕೃಷ್ಣಾಕುಮಾರಿಯ ಎರಡೂ ಕಣ್ಣುಗಳೊಳಗಿಂದ ಅಶ್ರುಪ್ರವಾಹವು ಹರಿಯತೊ ಡಗಿತು. ಒಂದೆರಡು ಅಶ್ರುಬಿಂದುಗಳು ಆ ಕರಿಯ ಕಲ್ಲಮೇಲೆಯೂ ಉದುರಿದುವು. ಆದರೆ ಆ ಪಾಷಾಣವು ನೇತ್ರಜಲದಿಂದ ಕರಗುವದುಂಟೇ ? ಕೃಷ್ಣಯು ಎದ್ದು ನಿಂತಳು. ಮೆಲ್ಲಡಿ ಗಳನ್ನಿ ಕ್ಕುತ್ತ ಆಶ್ರಮದ ಅಂತರ್ಭಾಗವನ್ನು ಸೇರಿದಳು. ಹೋಗುವಾಗ ಮನಸ್ಸಿನಲ್ಲಿಯೇ ಇಂತು ಪ್ರತಿಜ್ಞೆ ಮಾಡಿದಳು « ಕರುಣಸಿಂಹನನ್ನು ತ್ಯಾಗಮಾಡುವ ಸಂದರ್ಭವು ಒಂದು ವೇಳೆ ಪ್ರಾಪ್ತವಾದರೆ ಇನ್ನೊಮ್ಮೆ ಆರೂಪಜ್ಯೋತಿಯ ದರ್ಶನವನ್ನು ತೆಗೆದುಕೊಂಡು ಪತಂಗಿಯಂತೆ ಅದರ ಮೇಲೆ ಹಾರಿ ಸಟ್ಟು ಕೊಂಡು ಸಾಯುವೆನು, ” ಪ್ರೇಮಮಂದಿರ.
- * *
ಈ ಸಂಗತಿಯು ನಡೆದ ಮಾರನೇ ದಿವಸವೇ ಕೃಷ್ಣಾ ಕುಮಾರಿಯು ಎಲ್ಲಿರುವ ಳೆಂಬದುಚಂದ್ರ ಚೂಡನಿಗೆ ಗೊತ್ತಾಗಲೇ ಇಲ್ಲ. !! ನಾಲ್ಕನೆಯ ಪರಿಚ್ಛೇದ --- ಗುಪ್ತ ಸಂದರ್ಶನ ! ಸಂಧ್ಯಾಕಾಲವಾಯಿತು. ಆಕಾಶದಲ್ಲಿ ಒಂದು ಪ್ರಕಾರದ ಉದಾಸವೂ ಕ್ಷೀಣವೂ ಆದ ಕೆಂಬಣ್ಣದ ಕಳೆಯು ಪಸರಿಸಿತ್ತು. ಬಿಳಿದು, ಕರಿದು, ಕೆಂಪದು, ಹಳದಿ, ಮಿಶ್ರ ಮೊದಲಾದ ವಿಚಿತ್ರವರ್ಣದ ಮೇಘಗಳು ಒಂದರ ಮೇಲೊಂದು ಎಸೆಯುತ್ತಿದ್ದವು. ಆ ಮೇಘಗಳಲ್ಲಿ ಎಷ್ಟೊಂದು ಬಣ್ಣಗಳಿದ್ದುವು! ಎಷ್ಟೊಂದು ವೈಚಿತ್ರ್ಯವಿತ್ತು ! ಈ ಪ್ರಕಾರ ಮೇಘವಡಂಬರದಿಂದ ವ್ಯಾಪ್ತವಾದ ಆಕಾಶವು ಎಷ್ಟೇ ವಿಶಾಲವಾಗಿ ದ್ದರೂ ಮುಕ್ತಾವಲೀ ನದಿಯ ಚಿಕ್ಕ ಪಾತ್ರದಲ್ಲಿಯೇ ಪ್ರತಿಬಿಂಬಿತವಾಗಿತ್ತು. ಅಹಹಾ | ಆಕಾಶಕ್ಕಾದರೂ ದುಃಖವಿದೆಯಲ್ಲವೇ ? ಸಂಧ್ಯಾಕಾಲದ ಆ ಸೃಷ್ಟಿಸ್ವರೂಪವನ್ನು ನೋಡಿ ಪ್ರೇಮಿಕಜನರ ಮನಸ್ಸಿನಲ್ಲಿ ಅನೇಕ ಪ್ರಕಾರದ ಕಲ್ಪನೆಗಳು ಉದ್ಭವಿಸುವುದು ಸಾಹಜಿಕವಾಗಿತ್ತು. ಮುಕ್ತಾವಲೀ ನದಿಯ ತೀರದಲ್ಲಿ ಒಂದು ಮಧ್ಯಮಾಕೃತಿಯ ದುರ್ಗವು ಆಕಾಶದಲ್ಲಿ ತಲೆಯನ್ನೆತ್ತಿ ಆದ್ಯತೆಯಿಂದ ಸೆಟೆದು ನಿಂತುಕೊಂಡಿತ್ತು. ಎಲ್ಲಕ್ಕೂ ಎತ್ತರವಾದ ಆ ದುರ್ಗದ ಶಿಖರ ದಲ್ಲಿ ಹದಿನಾರು ವರುಷದ ಒಬ್ಬ ತರುಣಿಯು ಕುಳಿತುಕೊಂಡಿದ್ದಳು. ಕ್ಷಣಕ್ಷಣಕ್ಕೆ ಬದ ಲಿಸುತ್ತಿರುವ ಪ್ರಕೃತಿಯ ಮಧುರವೂ ವಿಚಿತ್ರವೂ ಆದ ನೋಟವನ್ನು ನೋಡುವುದರಲ್ಲಿ ಅವಳ ಮನಸ್ಸು ಲೀನವಾಗಿತ್ತು. ಆಕೆಯ ಹೃದಯದಲ್ಲಿ ಯಾವ ಪ್ರಕಾರದ ವಿಚಾರತ ರಂಗಗಳು ಉದ್ಭವಿಸುತ್ತಿದ್ದುವೆಂಬುದನ್ನು ಯಾರು ಹೇಳಬಲ್ಲರು ? ಸಂಧ್ಯಾಕಾಲದ ಗಗನಶೋಭೆಯನ್ನು ನೋಡುವದಕ್ಕಾಗಿ ಅರಮನೆಯ ಶಿಖರವ ನೇರಿ ಸಂಗಮರವರೀ ಕಲ್ಲಿನ ಆಸನದ ಮೇಲೆ ಕುಳಿತು ಹೃದಯದ ಉರಿಯನ್ನು ಶಾಂತ ಮಾಡಿಕೊಳ್ಳಲಪೇಕ್ಷಿಸುತ್ತಿದ್ದ ಆ ತರುಣಿಯು ಇನ್ನಾರೂ ಆಗಿರದೆ ದುರ್ಗಾಧಿಪತಿಯಾದ ಭೀಮಸಿಂಹನ ಮಗಳೂ ನಮ್ಮ ಪೂರ್ವ ಪರಿಚಿತಳೂ ಆದ ಲಲಿತೆಯೇ ಆಗಿದ್ದಳು. * ನಮ್ಮ ಕಥಾನಾಯಿಕೆಯಾದ ಲಲಿತೆಯು ದೇವದರ್ಶನಕ್ಕೆ ಹೋದಾಗ ದಾರಿ ಯಲ್ಲಿ ಬೋರರ ಕೈಯಲ್ಲಿ ಸಿಕ್ಕಳೆಂಬುದೂ ಕುಮಾರ ಕರುಣಸಿಂಹನು ಅವಳನ್ನು ಹೇಗೆ ರಕ್ಷಿಸಿದನೆಂಬುದೂ ಗಾಯ ಹೊಂದಿದ ಕರುಣಸಿಂಹನಿಗೆ ಚಂದ್ರಚೂಡನ ಪ್ರಯತ್ನಗ ಳಿಂದ ಹೇಗೆ ವಾಸಿಯಾಯಿತೆಂಬುದೂ ನಮ್ಮ ವಾಚಕರಿಗೆ ಗೊತ್ತೇ ಇದೆ, 90 ವಾಗ್ಯೂಷಣ, Mhhhhhhhhhh h} { f {\ # # # # # # # ಅರಮನೆಯ ಶಿಖರದ ಮೇಲಿನ ಆ ಏಕಾಂತವಾದ ಸ್ಥಳದಲ್ಲಿ ಕುಳಿತು ಲಲಿತೆಯು ಕರುಣಿಸಿಂಹನ ವಿಷಯವಾಗಿಯೇ ಆಲೋಚನೆ ಮಾಡುತ್ತಿದ್ದಳು. ಮುಕ್ಕಾವಲಿಯ ತರಂಗಗಳ ಮೇಲೆ ಹಾಯ್ದು ಬರುವ ಶೀತಲವಾಯುವಿನಿಂದ ಅವಳ ತಸ್ಯಹೃದಯವು ಶಾಂತಿಯನ್ನು ಹೊಂದಲಿಲ್ಲ. ತನ್ನ ತಂದೆಯ ಶತ್ರುವಿನ ಮಗನಿಗೆ ತನ್ನನ್ನು ವಿವಾಹ ಮಾಡಿಕೊಡನೆಂದು ಅವಳಿಗೆ ಪೂರ್ಣವಾಗಿ ತಿಳಿದಿತ್ತು. ಕುಮಾರನಾದರೂ ಸಾಹಸ ದಿಂದ ದುರ್ಗವನ್ನು ಪ್ರವೇಶಿಸುವದು ಶಕ್ಯವಾಗಿದ್ದಿಲ್ಲ. ಆದರೂ ಚಂದ್ರಚೂಡನ ಆಶ್ರ “ಮದಿಂದ ಲಲಿತೆಯು ದುರ್ಗಕ್ಕೆ ಬಂದ ಬಳಿಕ ಕುಮಾರಸಿಂಹನು ಒಂದು ಬಾರಿ ಅವ ಳನ್ನು ಕಂಡು ಹೋಗಿದ್ದನು. ಇರಲಿ, ಪ್ರಿಯಕರನ ಚಿಂತನದಿಂದಾದರೂ ಲಲಿತೆಯ ಮನಸ್ಸು ಶಾಂತವಾಯಿತೆಂದು ಹೇಳೋಣವೇ ? ಅದೂ ಇಲ್ಲ! ಮುಕ್ತಾವಲೀ ನದಿಯ ಮೇಲೆ ಬೀಸುತ್ತಿರುವ ಮೃದು ಶೀತಲವಾಯುವು ಇಷ್ಟೊಂದು ಎತ್ತರವಾದ ಸ್ಥಳದಲ್ಲಿ ಕುಳಿತುಕೊಂಡಿದ್ದ ಲಲಿತೆಯ ತಪ್ಪಹೃದಯಕ್ಕೆ ಶಾಂತಿದೇವಿಯನ್ನು ಕಳಿಸಲು ಸಮರ್ಥವಾಗಲಿಲ್ಲವೊ ಏನೊ !! ಲಲಿತೆಯು, ಆ ಸ್ಥಳದಿಂದ ಇಳಿದು ಸ್ವಲ್ಪ ಕೆಳಗೆ ಬಂದಳು. ವಿಕಸಿತ ಸರಸಿಜದಂತಿ ರುವ ಅವಳ ವದನದಲ್ಲಿ ಇಷ್ಟು ಅಲ್ಪಶ್ರಮದಿಂದಲೇ ಉಂಟಾದ ಘರ್ಮಬಿಂದುಗಳು ಶಿಶಿರ ಶೀಕರದಂತೆ ಶೋಭಿಸಹತ್ತಿದುವು. ಸೀರೆಯ ಸೆರಗನ್ನು ಮೊಗದಮೇಲೆ ಆಡಿಸಿಕೊಂಡು ಆಕಾಶದ ಕಡೆಗೆ ನೋಡುತ್ತ ಖಿನ್ನಳಾಗಿ ಲಲಿತೆಯು ತನ್ನಲ್ಲಿಯೇ ಮಾತಾಡಿದಳು. ಹೌದು. ಇದೇ ಸ್ಥಳದಲ್ಲಿಯೇ ಇದೇ ಕಾಲದಲ್ಲಿಯೇ ಅವರ ದರ್ಶನವು ನನಗಾಗಿತ್ತು. ದುರ್ಗದ ಈ ಶಿಲಾತಟಕ್ಕೆ ರಜ್ಜುವಿನ ಏಣಿಯನ್ನು ಮಾಡಿಕೊಂಡು ಬಂದು ತಮ್ಮ ಸುಖಕರ ಸಹವಾಸದ ಲಾಭವನ್ನು ಅವರು ನನಗೆ ಕೊಟ್ಟಿದ್ದರು. ಅಹಹಾ! ಆ ಸುಖವು ಎಷ್ಟು ಅಲ್ಪಾವಧಿಯಲ್ಲಿಯೇ ನಾಶವಾಗಿ ಹೋಯಿತಲ್ಲ! ಚಂದ್ರಾವತ ಕುಲಕ್ಕೂ ಚವ್ಹಾ ಣವಂಶಕ್ಕೂ ಮೊದಲಿನಿಂದಲೂ ಹಗೆತನವಿದೆ. ಪ್ರಾಣ ಹೋದರೂ ನಮ್ಮಪ್ಪನು ಶತ್ರು ವಂಶದೊಳಗಿನ ಆ ನೀರನೊಡನೆ ನನ್ನ ಮದುವೆಯನ್ನು ಮಾಡಲು ಒಡಂಬಡುವುದಿಲ್ಲ. ಅಂದಮೇಲೆ ಇನ್ನು ಮುಂದೆ ನಾನು ಜೀವಿಸಿಯಾದರೂ ಪ್ರಯೋಜನವೇನು? ಮುಕ್ತಾ ವಲಿಯ ಭಯಂಕರವಾದ ಈ ಕರ್ಮಡುವಿನಲ್ಲಿ ಹಾಕಿಕೊಂಡು ಸತ್ತು ಹೋಗುವುದೇ ಶ್ರೇಯಸ್ಕರವಲ್ಲವೇ? ಆದರೆ ಅದಕ್ಕಿಂತಲೂ ಪೂರ್ವದಲ್ಲಿ ಆ ಸುಂದರಮುಖ ಚಂದ್ರನ ದರ್ಶನವು ಈ ಹತಭಾಗಿನಿಗೆ ಆಗಬಹುದೇ? ದೇವಾ, ಒಮ್ಮೆ ಅವರ ದರ್ಶನವು ನನಗಾದರೆ ಇಷ್ಟರಲ್ಲಿ ತಟದ ಕೆಳಬದಿಯಿಂದ ಲಲಿತೆ ಎಂದು ಯಾರೋ ಪ್ರೇಮಾದ್ರ್ರ ಸ್ವರದಿಂದ ಕರೆಯುತ್ತಿರುವುದು ಕೇಳಬಂತು. ಅದನ್ನು ಕೇಳಿ ಲಲಿತೆಯು ಬೆರಗಾದಳು. Y / + * * * * * * * + +++ ++ +++ ++ */+ P4 mmm. ಪ್ರೇಮಮಂದಿರ .. ' ,, , , , « ಲಲಿತೇ, ನಾನು ಬಂದಿದ್ದೇನೆ. ” PA PAK ಕ್ಷಣಾರ್ಧದಲ್ಲಿಯೇ ಲಲಿತೆಯು ಸ್ವರವನ್ನು ಗುರ್ತಿಸಿದಳು. ಕರುಣಸಿಂಹನು ತನ್ನನ್ನು ಕಾಣುವುದಕ್ಕೋಸ್ಕರ ಸಾಹಸದಿಂದ ಬಂದಿದ್ದಾನೆಂಬುದು ಆಕೆಗೆ ತಿಳಿಯಿತು. ರಾಜಕು ಮಾರನು ಎದುರಿನಲ್ಲಿರುವುದನ್ನು ನೋಡಿ ನಾಚಿಕೆಯಿಂದ ಕೆಳಗೆ ನೋಡಹತ್ತಿದಳು. ಕರುಣಸಿಂಹನು ರಾಜಕನೆಯ ಮುಂದೆ ಬಂದು ನಿಂತನು. ಕಿಂಚಿತ್ಕಾಲದವರೆಗೆ ಇಬ್ಬರೂ ಸ್ತಬ್ದರಾಗಿದ್ದರು. ಸ್ವಲ್ಪ ಹೊತ್ತಿನ ಮೇಲೆ ಬಂದು ನಿಶ್ವಾಸವನ್ನು ಬಿಟ್ಟು ಆತನು ಖಿನ್ನ ಸ್ವರದಿಂದ ಮಾತನಾಡಿದನು. « ಲಲಿತೇ, ಹೀಗೆಯೇ ಇನ್ನೂ ಎಷ್ಟು ದಿನ ಸಗಳ ವರೆಗೆ ಕಳ್ಳನಂತೆ ನಿನ್ನ ದರ್ಶನಕ್ಕಾಗಿ ನಾನು ಈ ದುರ್ಗಕ್ಕೆ ಬರಬೇಕು?” ನನ್ನ ಮನಸ್ಸಿನಲ್ಲಿದ್ದುದನ್ನು ನಿಮ್ಮ ತಂದೆಗೆ ಸ್ವಷ್ಟವಾಗಿ ತಿಳಿಸಿ ಬಿಟ್ಟು ನಿನ್ನನ್ನು ನನಗೆ ಮದು ವೆಮಾಡಿ ಕೊಡುವಂತೆ ಕೇಳಬೇಕೆಂದು ಬಹು ದಿವಸಗಳಿಂದಲೂ ಯೋಚಿಸಿದ್ದೇನೆ. ಆದರೆ ಭೀಮಸಿಂಹನ ಉದ್ದ ತವಾದ ಕೂರಸ್ವಭಾವವು ನೆನಪಿಗೆ ಬಂದೊಡನೆಯೇ ಆ ವಿಚಾರವನ್ನು ಬಿಟ್ಟು ಬಿಡಬೇಕಾಗುವುದು. ಭೀಮಸಿಂಹನು ನನ್ನ ಪ್ರಾಣಪ್ರಿಯ ಲಲಿ ತೆಯ ಜನ್ಮದಾತೃವೆಂದು ತಿಳಿದು ಅವನೊಡನೆ ಇದ್ಧ ಶತ್ರುತ್ವವನ್ನು ಮರೆತು ಬಿಟ್ಟಿದ್ದೇನೆ. ಅವನು ನನ್ನ ಆಪ್ತನೆಂದಾಗಲಿ ಮಿತ್ರನೆಂದಾಗಲಿ ತಿಳಿಯುತ್ತೇನೆ. ಚಂದ್ರಚೂಡರವರು ಬೇಡವೆಂದು ಹೇಳಿದ್ದರೂ ಅನೇಕ ಭಯಂಕರವಾದ ವಿಘ್ನಗಳನ್ನು ಸಹ ಲೆಕ್ಕಿಸದೆ ಈ ಶತ್ರುದುರ್ಗದಲ್ಲಿ ಬಂದು ನಿನ್ನ ದರ್ಶನವನ್ನು ತೆಗೆದುಕೊಳ್ಳುತ್ತಿರುವೆನು. ಲಲಿತೇ, ಪ್ರಿಯೇ ಈ ಸ್ಥಾನವನ್ನು ಬಿಟ್ಟು ನನ್ನ ಸಗಂಡ ಬಾ. ಅವಶ್ಯವಾಗಿಯೂ ನನ್ನೊಡನೆ ಬಾ, ನಿನ ಗೋಸ್ಕರವಾಗಿ ಮೊಗಲರ ದಂಡಾಳುತನವನ್ನು ಕೂಡ ಬಟ್ಟು ಬಿಡಲು ನಾನು ಸಿದ್ಧ ನಿದ್ದೇನೆ. ಒಂದು ಮುರಕ ಗುಡಿಸಲಿನಲ್ಲಿದ್ದರೂ ಕೂಡ ನಿನ್ನ ಸ್ವರ್ಗಿಯ ಸಹವಾಸದ ಮೂಲಕ ನನಗೆ ಅಪೂರ್ವವಾದ ಸೌಖ್ಯವೇ ಆಗುವುದು. ನಿನ್ನ ಪ್ರೇಮಲ ಸಂಗತಿ ಯಿಂದ ವಿಜನವನವೂ ನನಗೆ ನಂದನವನಸಮಾನವಾಗುವುದು. ” ಲಲಿತೆಯು ಮೊದಲು ಏನೂ ಮಾತಾಡಲಿಲ್ಲ. ಸುಮ್ಮನೆ ಇದ್ದಳು. ಕೆಲವು ವೇಳೆಯ ಅನಂತರ ಅಸ್ಟುಟಸ್ವರದಿಂದ ಕರುಣಸಿಂಹನನ್ನು ಕುರಿತು ಹೇಳಿದಳುಃ ( ಪ್ರಿಯರೇ, ಈ ಜನ್ಮದಲ್ಲಂತೂ ನಮಗೆ ಸೌಖ್ಯವು ದೊರೆಯುವದು ಅಶಕ್ಯವಾಗಿಯೇ ತೋರುತ್ತದೆ. ನಮ್ಮಿಬ್ಬರ ವಿವಾಹಕ್ಕೆ ಒದಗಬಹುದಾದ `ವಿಘ್ನಗಳನ್ನು ನೆನಿಸಿಕೊಂಡು ನಾನಂತೂ ಪೂರ್ಣವಾಗಿ ನಿರಾಶಳಾಗಿದ್ದೇನೆ. ಇದೆಲ್ಲದರ ಪರಿಣಾಮವೇನಾಗಬಹುದೆಂದು ದರ ಕಲ್ಪನೆಯನ್ನು ಮಾಡುವದು ಕೂಡ ನನಗೆ ಅಶಕ್ಯವಾಗಿದೆ. ತಾವು ನನ್ನನ್ನು ಎಲ್ಲಿ ಕರೆದುಕೊಂಡು ಹೋಗುವಿರೋ ಆ ಸ್ಥಾನವು ಎಷ್ಟೇ ದರಿದ್ರವಾಗಿದ್ದರೂ ಅಲ್ಲಿ ನನಗೆ ಪರಮಸೌಖ್ಯವೇ ಆಗುವುದು. ಆದರೆ ದುರ್ದೈವಿಯಾದ ನನ್ನ ಹಣೆಯಲ್ಲಿ ಆ ಸುಖವಿಲ್ಲ. ನಮ್ಮ ದಾರಿಯಲ್ಲೊಂದು ಹೊಸದಾದ ವಿಘ್ನವು ಉಪಸಿ ತವಾಗಿದೆ. ನನ್ನ 99 ವಾಗ್ಯೂಷಣ. ವಿವಾಹದ ಮುಹೂರ್ತವನ್ನು ನಿಶ್ಚಯಿಸುವುದಕ್ಕೋಸ್ಕರ ನನ್ನ ತಂದೆಯು ಸರತಾನ ಸಿಂಹನ ಕಡೆಗೆ ಹೋಗಿದ್ದಾನೆ. ಯುವರಾಜನಾದ ದುರ್ಜಯಸಿಂಹನನ್ನು ಕರೆದುಕೊಂಡೇ ಇತ್ತ ಕಡೆಗೆ ನಮ್ಮ ಪ್ರನು ಬರುತ್ತಾನೆಂದು ನಾನು ಕೇಳಿದ್ದೇನೆ. ಕುಮಾರ! ತಾವು ಈ ಸಂಕಟದೊಳಗಿಂದ ನನ್ನನ್ನು ಬದುಕಿಸದಿದ್ದರೆ ನಾನು ಬದುಕುವುದಕ್ಕೆ ಮಾರ್ಗವೇ ಇಲ್ಲ. ಆದರೆ ಗೋಪ್ಯವಾಗಿ ಓಡಿಹೋಗುವುದೆಂದರೆ ನನಗೂ ನನ್ನ ವಂಶಕ್ಕೂ ಭಯಂಕರ ನಾದ ಕಲಂಕವನ್ನು ತೊಡೆದುಕೊಂಡಂತಾಗುವುದಿಲ್ಲವೇ? ನಾನು ಸರ್ವವನ್ನೂ ಸಹಿಸ ಬಲ್ಲೆನು. ಆದರೆ ಕುಲಕ್ಕೆ ಹತ್ತುವ ಕಲಂಕವನ್ನು ಸಹನಮಾಡಲಾರೆನು ! ಓಡಿ ಹೋಗು ವುದರ ಹೊರತು ನಾನು ಪಾರಾಗುವುದಕ್ಕೆ ಬೇರೆ ಉಪಾಯಗಳೇ ಇಲ್ಲವೇ? ೨ - ಹೃದಯವನ್ನು ಸ್ಥಿರಗೊಳಿಸಿ ಕರುಣಸಿಂಹನು ಬಹಳ ಹೊತ್ತಿನವರೆಗೆ ಯೋಚನೆ ಮಾಡುತ್ತ ಸುಮ್ಮನೆ ನಿಂತುಕೊಂಡನು. ಬಳಿಕ ಕ್ರಿಯೆಯ ಕರಣಪೂರ್ಣ ಮುಖ ಮಂಡಲವನ್ನು ನಿರೀಕ್ಷಿಸುತ್ತ ಇಂತು ನುಡಿದನು. (( ಲಲಿತೇ, ಎಷ್ಟು ವಿಚಾರಮಾಡಿದರೂ ಈ ಸಂಗತಿಗೆ ಅನ್ಯ ಉಪಾಯವೇ ತೋಚಲೊಲ್ಲದು. ಇಂದಿಗೆ ಎಂಟನೆಯ ದಿವಸ ಬಂದು ನಾನು ನಿನಗೆ ಭೆಟ್ಟಿಯಾಗುತ್ತೇನೆ.” (( ಯಾವ ಸ್ಥಾನದಲ್ಲಿ! ” « ಇದೇ ದುರ್ಗದಲ್ಲಿಯೇ, ” (( ಪ್ರಿಯರೇ, ತಾವು ಹೀಗೆ ವಿಪರೀತವಾದ ಧೈರ್ಯವನ್ನು ಮಾಡಬೇಡರಿ. ತಾವು ಮೊದಲನೆಯ ಸಾರೆ ಇಲ್ಲಿಗೆ ಬಂದಾಗಿನಿಂದ ದುರ್ಗದೊಳಗಿನ ಜನರಿಗೆ ಆವುದೋ ಒಂದು ಪ್ರಕಾರದ ಸಂಶಯವು ಬಂದಿದೆ. ಆ ದಿವಸಮೊದಲ್ಗೊಂಡು ಕೆಲವು ದಿವಸಗಳ ವರೆಗೆ ಪಹರೆಯವರು ನದಿಯ ಕಡೆಗೆ ಪ್ರದೇಶವನ್ನು ಒಳ್ಳೆ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ತಂದೆಯು ಇಲ್ಲಿಂದ ಹೊರಟು ಹೋದಾಗಿನಿಂದ ಮಾತ್ರ ಆ ವ್ಯವಸ್ಥೆಯು ಇಲ್ಲದಂತಾಗಿದೆ. ಆದುದರಿಂದಲೇ ತಾವು ಈ ಹೊತ್ತಿನ ದಿವಸ ಇಷ್ಟು ಸುಲಭವಾಗಿ ಇಲ್ಲಿ ಬರುವದು ಸಾಧ್ಯವಾಯಿತು, ದೈವಾನುಕೂಲವೆಂದೇ ಹೇಳಬೇಕು; ಇಲ್ಲದಿದ್ದರೆ? « ಹಾಗಾದರೆ ಇನ್ನು ಮುಂದೆ ನಾನು ದುರ್ಗದಲ್ಲಿ ಪ್ರವೇಶ ಮಾಡುವದೆಂತು? ” ಕರುಣಸಿಂಹನು ಚಿಂತಾತುರನಾಗಿ ಪ್ರಶ್ನೆ ಮಾಡಿದನು. ಸ್ವಲ್ಪ ಹೊತ್ತು ವಿಚಾರಿಸಿ ರಾಜಕನ್ಯಯು ಇಂತು ನುಡಿದಳು. “ ಒಂದೆರಡು ದಿವೆ ಸಗಳೊಳಗಾಗಿಯೇ ನಾನು ತಮಗೊಂದು ಯುಕ್ತಿಯನ್ನು ತಿಳಿಸುತ್ತೇನೆ, ” ಒಂದು ದೀರ್ಘಶ್ವಾಸವನ್ನು ಬಿಟ್ಟು, ಲಲಿತೆಯ ಸುಂದರವಾದ ಮುಖಕಮಲವ ನ್ನೊಮ್ಮೆ ಚುಂಬಿಸಿ, ಹಗ್ಗದ ಏಣಿಯಿಂದ ಕೆಳಗಿಳಿದು ಮೆಲ್ಲಡಿಯನ್ನಿಕ್ಕುತ್ತ ಕರುಣ - ಸಿಂಹನು ಹೊರಟು ಹೋದನು. ಪ್ರೇಮಮಂದಿರ J/+++++++++ ೯ ಮುಕ್ಕಾವಲಿಯ ದಂಡೆಯ ಮೇಲೆ ಕರುಣಸಿಂಹನ ವಿಶ್ವಾಸುವಾದ ಸೇವಕನು, ಆತನ ಮಾರ್ಗವನ್ನೇ ಪ್ರತೀಕ್ಷಿಸುತ್ತ ಕುಳಿತುಕೊಂಡಿದ್ದನು. ಕರುಣಸಿಂಹನು ಅವನನ್ನು ಕುರಿತು ಮಾತನಾಡಿದನು. • ಸುಂದರಾ, ಏಕೆ ? ನೌಕೆಯನ್ನು ತೆಗೆದುಕೊಂಡು ಬಾ ” ನೌಕೆಯು ಬಂದೊಡನೆಯೇ ಅದರಲ್ಲಿ ಕುಳಿತು ಕರುಣಸಿಂಹನು ಹೊರಟು ಹೋದನು. ಕರುಣಸಿಂಹನು ಹೊರಟು ಹೋದಬಳಿಕ ಲಲಿತೆಯು ವಿಷಣ್ಣ ಹೃದಯದಿಂದ ಇತ್ಯಲತ್ತ ಸುತ್ತಲಾರಂಭಿಸಿದಳು. ಕರುಣಸಿಂಹನು, ಹೋದ ದಾರಿಯನ್ನು ನಿರೀಕ್ಷಿಸಬೇ ಕೆಂದು ಅತ್ತ ಕಡೆಗೆ ಮೊಗದಿರುವಿ ನಿಂತುಕೊಂಡಳು. ಇಷ್ಟರಲ್ಲಿ ಕತ್ತಲೆಯಲ್ಲಿ ಮಾರ್ಗ ವನ್ನು ಹುಡುಕುತ್ತ ಯಾರೋ ತನ್ನ ಕಡೆಗೇ ಬರುತ್ತಿರುವದು ಅವಳ ದೃಷ್ಟಿಗೆ ಬಿತ್ತು ! ಆ ಮೂರ್ತಿಯನ್ನು ನೋಡಿ ರಾಜಕನ್ಯಯು ಬೆರಗಾದಳು; ಆದರೆ ಬೆದರಲಿಲ್ಲ. ಅಂಧಕಾರಪರಿವೃತವಾದ ಆ ಅಜ್ಞಾತಮೂರ್ತಿಯು ಇನ್ನೂ ಸ್ವಲ್ಪ ಅಂತರದಲ್ಲಿರುವಾಗಲೇ ಲಲಿತೆಯು ಆಶ್ಚರ್ಯಪ್ರದರ್ಶಕಸ್ವರದಿಂದ ನುಡಿದಳು. “ ಯಾರವರು.? ನೀನು ಯಾರು, ಹೇಳು ?” ಎದುರಿನಲ್ಲಿ ಬರುತ್ತಿರುವ ' ಆ ಮೂರ್ತಿಯು ಲಲಿತೆಯ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ. ಮೆಲ್ಲಮೆಲ್ಲನೆ ನಡೆಯುತ್ತ ಸಮಸಮೀಪಕ್ಕೆ ಬರುತ್ತಿತ್ತು, ಆ ಅಂಧಕಾರದಲ್ಲಿ ಚಮತ್ಕಾರಿಕವಾದ ಒಂದು ಹಾಸ್ಯಧ್ವನಿಯು ಅಕಸ್ಮಾತ್ತಾಗಿ ಲಲಿತೆಗೆ ಕೇಳಿಸಿತು. ಈಗ ಮಾತ್ರ ಅವಳು ಹೆದರಿದಳು. ಅಂಧಕಾರವೇಷ್ಟಿತವಾದ ಆ ಮೂರ್ತಿಯನ್ನವಲೋಕಿಸಿ ಲಲಿತೆಯ ಹೃದಯವು ಕಂಪಿತವಾಯಿತು. ನೋಡನೋಡುವಷ್ಟರಲ್ಲಿ ಆ ಮೂರ್ತಿಯು ಲಲಿತೆಯ ಸಮೀಪದಲ್ಲಿ ಬಂದು ನಿಂತಿತು. ಇಷ್ಟೇ ಅಲ್ಲ; ಇನ್ನೂ ಸಮೀಪಕ್ಕೆ ಬಂದು ಲಲಿತೆಯ ಕೈಯನ್ನು ಹಿಡಿದು ಮೃದು ಸ್ವರದಿಂದ ಮಾತನಾಡಿತು. ರಾಜಕನ್ಯಯೋ, ಸ್ವಲ್ಪವೂ ಹೆದರಬೇಡ; ನಾನೂ ನಿನ್ನಂತೆ ಯೇ ಒಬ್ಬ ಹೆಂಗಸು, ” ಆ ಮೂರ್ತಿಯು ತನ್ನ ಕೈಯನ್ನು ಹಿಡಿದಿದ್ದರೂ ಲಲಿತೆಯು ಚೀರಲಿಲ್ಲ. ಆಕೆಯು ಅಧೀರತೆಯಿಂದ ಆ ಸ್ತ್ರೀಯನ್ನು ವಿಚಾರಿಸಿದಳು. “ ನೀನು ಯಾರು? ನೀನು ಇಲ್ಲಿಗೆ ಹೇಗೆ ಬಂದೆಯೆಂಬದು ನನಗೆ ಬಹಳೇ ಆಶ್ಚರ್ಯವನ್ನುಂಟು ಮಾಡುತ್ತಿದೆ ! ನೀನು ಸ್ತ್ರೀಯೆಂದು ಹೇಳುತ್ತೀ; ಆದರೆ ನಿನ್ನ ಸಾಹಸವಾದರೋ ಅತ್ಯಂತ ವಿಲಕ್ಷಣವಾಗಿದೆ ! ಏನಮ್ಮ, ನಾನು ಏಕಾಂತದಲ್ಲಿದ್ದಾಗ ಈ ಪ್ರಕಾರ ನನ್ನ ಹತ್ತಿರ ಬರಲು ನಿನ್ನ ಉದ್ದೇಶವಾದರೂ ಏನು ? ” ವಾಗ್ಯೂಷಣ, •••••••••••, , .• • • • • ••••• ಆ ಅಜ್ಞಾತಸ್ತ್ರೀಮೂರ್ತಿಯು ಮತ್ತೊಮ್ಮೆ ಬೊಳನೊಳಗೆ ನಕ್ಕಿತು. ಅವಳ ಅರ್ಥ ಸೂಚಕವಾದ ಹಾಸ್ಯದಿಂದ ಲಲಿತೆಯ ಮನಸ್ಸಿನ ಮೇಲೆ ವಿಲಕ್ಷಣಪರಿಣಾಮವಾಯಿತು ! ಆಕೆಗೆ ಯಾವದೂ ತಿಳಿಯದಾಯಿತು !! - ಲಲಿತೆಯ ಮನಃಸ್ಥಿತಿಯನ್ನು ನೋಡಿ ಆ ಸ್ತ್ರೀಗೆ ಸೋಜಿಗವಾಯಿತು. ಆಕೆಯು ಪುನಃ ವಿಕಟಹಾಸ್ಯಮಾಡಿ ಮಾತಾಡಿದಳು. “ ರಾಜಕನೈಯೇ, ಸ್ವಲ್ಪವೂ ಹೆದರಬೇ ಡಮ್ಮಾ ! ಏನೇ, ನಾನೇನು ಹುಲಿಯೋ ಕರಡಿಯೋ ! ಇಷ್ಟೇಕೆ ಹೆದರಿಕೊಂಡಿರುವೆ ? ಮೇಲಾಗಿ ನಾನೇನು ನಿನ್ನ ಶತ್ರುವೂ ಅಲ್ಲ; ಆದುದರಿಂದ ನಿನಗೆ ಅಪಾಯವನ್ನುಂಟುಮಾ ಡುವುದಕ್ಕೂ ಕಾರಣವಿಲ್ಲ.” ಇದನ್ನು ಕೇಳಿ ಲಲಿತೆಯ ಮನಸ್ಸಿನ ಸ್ಥಿತಿಯು ಇನ್ನೂ ವಿಲಕ್ಷಣವಾಯಿತು ? ತಾನು ನನ್ನ ಶತ್ರುವಲ್ಲವಂತೆ; ಆದರೂ ಇನ್ನೂ ವರೆಗೆ ತನ್ನ ಪರಿಚಯವನ್ನೇ ಹೇಳಲಿಲ್ಲ; ಅಂದಮೇಲೆ ಇವಳು ಯಾರಿರಬಹುದೆಂಬದು ಅವಳಿಗೆ ತಿಳಿಯದಾಯಿತು ! ಆ ಅಜ್ಞಾತಸ್ತ್ರೀಯು ಮತ್ತೆ ಮಾತನಾಡಿದಳು. “ ರಾಜಕನೆಯೇ, ನಾನು ನಿನ ಗೊಂದು ಪ್ರಶ್ನೆ ಮಾಡುತ್ತೇನೆ. ನನ್ನನ್ನು ಕ್ಷಮಿಸು. ನೀನು ನೋಡುವುದಕ್ಕೇನೋ ಚದುರೆ ಯಂತೆ ತೋರು, ಆದರೆ ನಿಜವಾಗಿಯೂ ಹೇಳು-ನಿನಗೆ ಪ್ರೇಮದ ಮರ್ಮವು ಗೊತ್ತಾಗಿದೆಯೇ? ” - ಈ ಪ್ರಶ್ನೆಯನ್ನು ಶ್ರವಣಮಾಡಿ ಲಲಿತೆಗೆ ಅತ್ಯಂತ ಆಶ್ಚರ್ಯವಾಯಿತು. ಗುರುತ್ತಿಲ್ಲ, ಪರಿಚಯವಿಲ್ಲ ಒಬ್ಬರನ್ನೊಬ್ಬರು ಇದಕ್ಕೂ ಮೊದಲು ಒಮ್ಮೆ ಸಹ ನೋಡಿಲ್ಲ, ಹೀಗಿ ದ್ದರೂ ಈ ಸ್ತ್ರೀಯು ಆಕಸ್ಮಿಕವಾಗಿ ಪ್ರೇಮವಿಷಯಕ ಪ್ರಶ್ನೆಯನ್ನೇ ಮಾಡುತ್ತಾಳಲ್ಲ ! ಇದರ ಅರ್ಥವೇನು ? ಈಪ್ರಕಾರ ಮನಸ್ಸಿನಲ್ಲಿಯೇ ದಿಗಿಲುಬಡುತ್ತ ಆಶ್ಚರ್ಯ ಪ್ರದರ್ಶಕ ಸ್ವರದಿಂದ ಲಲಿತೆಯು ಮಾತನಾಡಿದಳು. “ ನೀನು ಯಾವಳಾದರೂ ಇರು, ನಿನ್ನ ಈ ದಿಟ್ಟತನವನ್ನು ಕಂಡು ನನಗೆ ಬಹಳೇ ಆಶ್ಚರ್ಯವಾಗುತ್ತದೆ. ನಾನು ಯಾರೆಂಬದು ಒಂದುವೇಳೆ ನಿನಗೆ ತಿಳಿದಿದ್ದರೂ ನೀನು ಯಾರೆಂಬದು ನನಗೆ ಗೊತ್ತಿಲ್ಲ. ನಿನಗೂ ನನಗೂ ಗುರುತಿಲ್ಲ, ಪರಿಚಯವಿಲ್ಲ; ಹೀಗಿದ್ದು ಆಕಸ್ಮಿಕವಾಗಿ ನೀನು ಇಂತಹ ಪ್ರಶ್ನೆಯನ್ನು ಕೇಳುತ್ತೀಯಲ್ಲ! ಇದರ ಅರ್ಥವೇನು ? ”
- ಆಸ್ತಿಯು ಮುಗುಳಗೆಯನ್ನು ನಕ್ಕಳು. ಮತ್ತು ತನ್ನ ತುಟಿಯಮೇಲೆ ಕೈಬೆರಳನ್ನಿ ಟ್ಟುಕೊಂಡು ಮಾತಾಡಿದಳು. ನಿನನಗೂ 'ನನಗೂ ಪರಿಚಯವಿಲ್ಲದಿದ್ದರೇನಾಯಿತು? ಪ್ರೇಮದ ಮರ್ಮವನ್ನು ಕೂಡ ನಿನಗೆ ವಿಚಾರಿಸ ಕೂಡದೇ? ರಾಜಕಸ್ಯೆಯೇ, ನೀನು ಒಳ್ಳೆ ಚದುರೆಯೆಂದು ನಾನು ತಿಳಿದುಕೊಂಡಿದ್ದೆನು.
ದುರೆಯಾಗಿರಲಿಕ್ಕಿಲ್ಲ; ಆದರೆ ನೀನು ಆಕಸ್ಮಿಕವಾಗಿ ಬಂದು ಈ ವಿಲಕ್ಷಣವಾದ ಪ್ರಶ್ನೆಯನ್ನೇಕೆ ಕೇಳಬೇಕು? ” ಪ್ರೇಮಮಂದಿರ, dev• • • • • • • • • • ••• <ry • •\r\n\nt ( ಈ ಪ್ರಶ್ನೆಗೆ ಉತ್ತರವನ್ನು ಕೊಟ್ಟರೆ ನಿನ್ನ ಗಂಟಾದರೂ ಏನುಹೋಗುತ್ತದೆ. ? ” ಲಲಿತೆಯು ಏನೂ ಮಾತಾಡಲಿಲ್ಲ. ತೀಕ್ಷದೃಷ್ಟಿಯಿಂದೊಮ್ಮೆ ಆ ಸ್ತ್ರೀಯನ್ನು ನೋಡಿ ದಳು. ಆ ದೃಷ್ಟಿಯಲ್ಲಿ ಕ್ರೋಧಕ್ಕಿಂತಲೂ ತುಚ್ಚತೆಯ ಛಾಯೆಯು ಹೆಚ್ಚಾಗಿತ್ತು, ಆ ಸ್ತ್ರೀಯು ತನ್ನ ಪ್ರಶ್ನದ ಉತ್ತರಕ್ಕೋಸ್ಕರ ಸ್ವಲ್ಪ ಹೊತ್ತು ಸುಮ್ಮನಿದ್ದಳು. ಲಲಿತೆಯು ಯಾವ ಉತ್ತರವನ್ನೂ ಕೊಡುವದಿಲ್ಲವೆಂದು ತಿಳಿದು ಅವಳು ತನ್ನಲ್ಲಿಯೇ ನಕ್ಕು ಇಂತು ನುಡಿದಳು. “ ರಾಜಕನೈಯೇ ! ನನ್ನ ಪ್ರಶ್ನೆಗೆ ನೀನು ಉತ್ತರವನ್ನು ಕೊಡಲಿಲ್ಲ. ಹೀಗೆ ಮರೆಮಾಜುವುದರಿಂದ ನಿನಗೆ ನಿಜವಾಗಿಯೂ ಲಾಭವಿಲ್ಲ; ಕಂಡೆಯಾ ? ” ಈಗ ಮಾತ್ರ ಲಲಿತೆಯು ಆ ಸ್ತ್ರೀಯಮೇಲೆ ಕೋಪಿಸಿಕೊಂಡಳು. ಆ ವಿಲಕ್ಷಣ ಸ್ತ್ರೀಯನ್ನು ಕೆಂಗಣ್ಣಿನಿಂದ ನೋಡುತ್ತ ಕರ್ಕಶಶ್ವರದಿಂದ ಒದರಿ ಮಾತನಾಡಿದಳು. * ನಿನ್ನಂತಹ ಉದ್ದತೆಯಾದ ಹೆಂಗಸಿನೊಡನೆ ಮಾತನಾಡತಕ್ಕುದೇನು ? ನಿನ್ನೊಡನೆ ಒಂದಕ್ಷರವನ್ನು ಕೂಡ ಮಾತನಾಡಲು ನನ್ನ ಮನಸ್ಸಿಲ್ಲ. ಇಕೋ ನೋಡು. ನಾನು ಹೊರಟೆನು, ” ಹೀಗೆಂದು ಲಲಿತೆಯು ನಿಜವಾಗಿಯೂ ಅಲ್ಲಿಂದ ಹೊರಟುಹೋಗಲು ಆರಂಭಿಸಿ ದಳು. ಆ ವಿಲಕ್ಷಣಸ್ತ್ರೀಯು ಲಲಿತೆಯೊಡನೆ ಮಾತಾಡಬೇಕೆಂದೂ ಅವಳಿಗೆ ಏನನ್ನೂ ಕೇಳಬೇಕೆಂದೂ ಅಲ್ಲಿಗೆ ಬಂದಿದ್ದಳು. ಆದುದರಿಂದ ಲಲಿತೆಯು ಹೊರಟುಹೋದರೆ ತನ್ನ ಹೇತುವು ಸಫಲವಾಗುವುದಿಲ್ಲವೆಂದೂ, ಹಗ್ಗವು ಹರಿಯುವವರೆಗೂ ಜಗ್ಗುವುದು ಒಳಿತಲ್ಲವೆಂದೂ ಭಾವಿಸಿ, ಲಲಿತೆಯು ದಾರಿಗೆ ಅಡ್ಡವಾಗಿ ಬಂದು ಮಾತನಾಡಿದಳು (( ಹಾ! ಹಾ! ರಾಜಕನ್ಯಯೇ ! ಹೋಗಬೇಡ! ಹೋಗಬೇಡ ! ನಾನು~ ನಾನು ” ಲಲಿತೆಯು ಅಚ್ಚರಿಗೊಂಡು ನಿಂತಲ್ಲಿಯೇ ನಿಂತಳು. ಆ ಉದ್ದ ತಕ್ಷೀಯ ಮಾತಿಗೆ ಅಸಹ್ಯಪಟ್ಟು, ಅಲ್ಲಿ ನಿಲ್ಲುವುದು ಉಚಿತವಲ್ಲವೆಂದು ಅವಳು ತಿಳಿದಿದ್ದಳು. ಆದರೆ ಈಗ ಅವಳಾಡಿದ ನುಡಿಯನ್ನು ಕೇಳಿ ಮುಂದಕ್ಕೆ ಹೋಗಲಾರದೆ ನಿಂತುಕೊಂಡಳು, ಏನೋ ತಿರಸ್ಕಾರವ್ಯಂಜಕಸ್ವರದಿಂದ ಮಾತನಾಡಿದಳು ' ನಮ್ಮವ್ವಾ ! ಇನ್ನು ಮುಂದೆ ಉಪಾಯವೇ ಇಲ್ಲ. ಮೊದಲಿನಿಂದಲೂ ಒಂದೇಸಮನೆ ನನ್ನನ್ನು ಈ ಪ್ರಕಾರ ಕಾಡುತ್ತ ಲಿರುವ ನೀನಾರು ? ಇಲ್ಲಿ ಬಂದಾಗಿನಿಂದಲೂ ಒಂದೇಸಮನೆ ಬಡಬಡಿಸುತ್ತಲಿರುವೆ. ಆದರೆ ನೀನು ಯಾರು ? ಎಲ್ಲಿಯವಳು ? ಎಂಬ ವಿಷಯವನ್ನೇ ಎತ್ತಲಿಲ್ಲ. ನಿಜವಾಗಿಯೂ ಹೇಳುತ್ತೇನೆ-ಬೇಕಾದರೆ ನಿನ್ನ ಕಾಲಿಗೆರಗು ತ್ತೇನೆ-ನಿನ್ನ ಅಪೇಕ್ಷೆಯೇನಿರುವುದೆಂಬು ದನ್ನು ನನಗೆ ತಿಳಿಸು. ಕನಿಷ್ಠ ಪಕ್ಷಕ್ಕೆ ನೀನು ಯಾರೆಂಬದನ್ನಾದರೂ ಹೇಳು !!” . ವಾಗ್ಯೂಷಣ. ••••••••••••••••••••••••••••••• ಆ ಸ್ತ್ರೀಯು ಪುನಃ ನಕ್ಕಳು. ಅವಳ ಆ ಮೊದಲಿನ ಸ್ವಭಾವವು ಇನ್ನೂ ವರೆಗೆ ದೂರವಾಗಿಲ್ಲವೆಂಬಂತೆ ತೋರಿತು. ನಗುನಗುತ್ತ ಅವಳು ಮಾತನಾಡಿದಳು, “ ನನ್ನ ಪರಿಚಯವನ್ನು ನಿನಗೆ ಹೇಳದೆ ಇದ್ದರೆ ಏನುಮಾಡುವೆ ? ” ಲಲಿತೆಗೆ ಈಗ ಬಹಳೇ ಬೇಸರವುಂಟಾಯಿತು. ಹುಬ್ಬು ಗಂಟಿಕ್ಕಿ ಅವಳು ಉಚ್ಛ ಧ್ವನಿಯಿಂದ ಮಾತನಾಡಿದಳು. “ ನಿನ್ನ ಪರಿಚಯವನ್ನು ಹೇಳದಿದ್ದರೆ ನಾನು ಬೇರೆ ಏನೂ ಮಾಡುವಂತಿಲ್ಲ. ” 1 ಹಾಗಾದರೆ ಏನು ಮಾಡುವೆ ? : « ಈಗಿಂದೀಗಲೇ ಒದರಿ ಪಹರೆಯವನನ್ನು ಇಲ್ಲಿಗೆ ಕರೆಯುವೆನು. ” ಲಲಿತೆಯ ಈ ಸಿಟ್ಟಿನಿಂದ ಆ ಸ್ತ್ರೀಯ ಮನಸ್ಸಿನ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ. ಆಕೆಯು ನಕ್ಕು ರಾಜಕಸ್ಯೆಯನ್ನು ಕುರಿತು ಮಾತನಾಡಿದಳು (( ಪಹರೆಯವನು ನನಗೆ ಏನು ಮಾಡಬಲ್ಲನು ? ನಾನಂತೂ ಹೇಳಿಕೇಳಿ ಹೆಂಗಸು. ನಿನ್ನ ಆ ಪಹರೆಯವನು ನನ್ನ ಶರೀರವನ್ನು ಮುಟ್ಟಲು ಕೂಡ ಸಮರ್ಥನಾ ಗಲಾರನು. ೨೨ ಆ ವಿಲಕ್ಷಣ ಸ್ತ್ರೀಯ ಮುಂದೆ ಯಾವ ರೀತಿಯಿಂದಲೂ ತನ್ನ ಆಟವು ಸಾಗುವು ದಿಲ್ಲವೆಂದು ತಿಳಿದ ಲಲಿತೆಯು ತನ್ನಲ್ಲುಂಟಾದ ಸಂತಾಪವನ್ನೆಲ್ಲ ನಿಗ್ರಹಿಸಿದಳು. ಮತ್ತು ಶಾಂತಸ್ವರದಿಂದ ಮಾತನಾಡಿದಳು. “ ಒಳ್ಳೇದು. ಹಾಗಾದರೆ ನಾನು ಪಹರೆ ಯವನನ್ನು ಕರೆಯುವುದಿಲ್ಲ. ನೀನು ಈ ಕಾಲದಲ್ಲಿ ಇಲ್ಲಿ ಏಕೆ ಬಂದಿರುವೆಯೆಂಬುದನ್ನು ಮಾತ್ರ ನನಗೆ ಹೇಳು, ” - ತನ್ನ ಮನಸ್ಸಿನೊಳಗಿನ ಉದ್ದೇಶವನ್ನು ಲಲಿತೆಗೆ ಹೇಳಬೇಕೋ ಹೇಳಬಾ ರಜೋ ಎಂದು ಆ ಸ್ತ್ರೀಯು ಆಲೋಚನೆ ಮಾಡಹತ್ತಿದಳು. ಆದರೆ ಈ ವಿಚಾರವು ಕ್ಷಣಮಾತ್ರ ನಡೆದಿತ್ತು! ದೃಢಸ್ವರದಿಂದ ಅವಳು ಕೂಡಲೇ ಉತ್ತರವಿತ್ತಳು. ( ನಿನ್ನ ಬಳಿಯಲ್ಲಿ ನಾನೊಂದು ವಸ್ತುವನ್ನು ಬೇಡಬೇಕಾಗಿದೆ. ” ( ಏನ ಬೇಡುವೆ? ನಿನಗೆ ಏನು ಬೇಕಾಗಿದೆ ? ” ಲಲಿತೆಯು ಆಶ್ಚರ್ಯದಿಂದ ಕೇಳಿದಳು.
- ನನಗೆ ಏನು ಬೇಕೆಂದು ಕೇಳುತ್ತೀಯಾ? ನಿಜವಾಗಿಯೂ ನನಗೆ ಏನು ಬೇಕು? ಆ ಸ್ತ್ರೀಯು ಭ್ರಮೆಗೊಂಡು ತನ್ನಲ್ಲಿಯೇ ವಿಚಾರಿಸಹತ್ತಿದಳು.
ಆ ಸ್ತ್ರೀಯು ಹುಚ್ಚಿಯಾಗಿರಬೇಕೆಂದು ಈಗ ಲಲಿತೆಯು ತಿಳಿದುಕೊಂಡಳು. ಆದುದರಿಂದ ಇಷ್ಟು ಹೊತ್ತಿನವರೆಗೆ ಆ ಸ್ತ್ರೀಯ ವಿಷಯದಲ್ಲಿ ಉತ್ಪನ್ನವಾದ ತಿರಸ್ಕಾರ ಭಾವವೆಲ್ಲ ಇಲ್ಲದಂತಾಗಿ ಈಗ ದಯೆಯು ಹುಟ್ಟಿತು. ಲಲಿತೆಯು ಆವಳ ಸಮೀಪಕ್ಕೆ ಪ್ರೇಮಮಂದಿರ, ೨ V-44 /vvvvvvvvvvvv
- * * * *••••••••••••••••• •r Prow
ಹೋಗಿ ಅವಳ ಹೆಗಲ ಮೇಲೆ ಕೈಯಿಟ್ಟು ಸ್ನೇಹದಿಂದ ಮಾತನಾಡಿದಳು. “ ನಿನಗೆ ಏನು ಬೇಕಮ್ಮಾ ? ಹೇಳು. ನನಗೆ ಹೇಳು, ” ರಾಜಕನ್ಯಯೋ, ನನಗೆ ಏನು ಬೇಕೆಂಬುದನ್ನು ಹೇಳಿ ಬಿಡಲಾ? ಯಾವುದು ನನಗೆ ಎಂದೂ ದೊರೆಯುವಂತಿಲ್ಲವೋ, ಯಾವುದನ್ನು ದೊರಕಿಸುವ ಆಶೆಯನ್ನು ನಾನು ಪೂರ್ಣವಾಗಿ ಬಿಟ್ಟು ಬಿಡಬೇಕಾಗಿದೆಯೋ, ಯಾವುದು ನನ್ನ ಕೈಯಲ್ಲಿ ಸಿಕ್ಕಿದ್ದರೂ ಕ್ಷಣಾರ್ಧದಲ್ಲಿ ದೂರ ಹೊರಟು ಹೋಯಿತೋ, ಮತ್ತು ಯಾವುದು ನನಗೆ ಎಂದೂ ಸಿಕ್ಕಲಾರದೋ ಅದು ನನಗೆ ಬೇಕಾಗಿದೆ. ರಾಜಕನ್ಯಯೇ ಅದು ನನಗೆ ಬೇಕಾಗಿದೆ. ಅದನ್ನು ನನಗೆ ಕೊಡುವೆಯಾ ? ” ಮಾತಾಡುತ್ತಾಡುತ್ತ ಅವಳ ಸ್ವರವು ಕ್ರುದ್ಧವಾಯಿತು; ಬಾಯಿಂದ ಶಬ್ದಗಳು ಹೊರಡದಾದವು! ಆಕೆಯು ತನ ಸೆರಗಿನಿಂದ ಕಣ್ಣುಗಳನ್ನೊ ರಸಿಕೊಂಡುದೂ ಲಲಿತೆಗೆ ಗೋಚರವಾಯಿತು? ಕೋಮಲಹೃದಯದ ಆ ಲಲಿತೆಯಲ್ಲಿ ಸಹಾನುಭೂತಿಯು ಉತ್ಪನ್ನವಾಯಿತು, ಸ್ನೇಹಾದ್ರ್ರಸ್ಕರದಿಂದ ಅವಳು ಮಾತಾಡಿದಳು. < ಈಗ ನೀನು ಹೇಳಿದುದನ್ನು ನನಗೆ ಸ್ವಲ್ಪ ಚೆನ್ನಾಗಿ ತಿಳಿಯುವಂತೆ ಹೇಳಮ್ಮಾ! ನಿಜವಾಗಿಯೂ ನನಗೆ ನೀನು ಹೇಳಿದು ದರ ಅರ್ಥವೇ ತಿಳಿಯಲಿಲ್ಲ. ” ಆ ಸ್ತ್ರೀಯು ಈಗ ಸ್ವಲ್ಪ 'ಶಾಂತಳಾಗಿದ್ದಳು. ಆದರೂ ಖಿನ್ನ ಸ್ವರದಿಂದಲೇ ನುಡಿ ದಳು. * ಲಲಿತೇ, ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಅದಕ್ಕೆ ನೀನು ಕೋಪಿಸಿಕೊಳ್ಳುವುದಿಲ್ಲವೆಂದು ನನಗೆ ವಚನಕೊಡು. ” ಒಂದು ಕ್ಷಣಹೊತ್ತು ವಿಚಾರಮಾಡಿ ಲಲಿತೆಯು ಹೇಳಿದಳು. “ ಒಳ್ಳೇದು. ನಾನು ನಿನ್ನ ಮೇಲೆ ಸಿಟ್ಟಾಗುವುದಿಲ್ಲ. ಆಯಿತೋ ಇಲ್ಲವೋ ? ” ಆ ಸ್ತ್ರೀಯು ಒಂದು ದೀರ್ಘನಿಶ್ವಾಸವನ್ನು ಬಿಟ್ಟು ಕೇಳಿದಳು. ( ಲಲಿತೇ, ನಿಜವಾಗಿ ಹೇಳು, ಚವ್ಹಾಣರಾಜಕುಮಾರನಾದ ಕರುಣಸಿಂಹನ ಮೇಲೆ ನಿನ್ನ ಪ್ರೇಮ ವೇಕೆ ಕೂತಿದೆ? ೨ - ಆಕೆಯ ಈ ಅನಪೇಕ್ಷಿತವಾದ ಪ್ರಶ್ನೆಯನ್ನು ಕೇಳಿ ಲಲಿತೆಯು ಆಶ್ಚರ್ಯದಿಂದ ಚಕಿತಳಾದಳು. ಕುಮಾರ ಕರುಣಸಿಂಹನಿಗೂ ತನಗೂ ಪರಸ್ಪರವಾಗಿದ್ದ ಪ್ರೇಮಭಾ ವವು ಬೇರೆಯವರಾರಿಗಾದರೂ ಗೊತ್ತಿರಬಹುದೆಂದು ಲಲಿತೆಯು ಇನ್ನೂವರೆಗೆ ತಿಲ ಮಾತ್ರವೂ ತಿಳಿದಿದ್ದಿಲ್ಲ. ವಿಸ್ಮಯದ ಸ್ವರದಿಂದ ಅವಳು ಆ ಸ್ತ್ರೀಯನ್ನು ಕುರಿತು ಮಾತ ನಾಡಿದಳು. “ ನಿನ್ನ ಈ ಚಮತ್ಕಾರಿಕ ಪ್ರಶ್ನೆಯನ್ನು ಕೇಳಿ ನಾನು ಆಶ್ಚರ್ಯದಿಂದ ಹತಬುದ್ದಿಯಾಗಿದ್ದೇನೆ! ಏನಮ್ಮಾ ! ಅವರ ಮೇಲೆ ನನ್ನ ಪ್ರೇಮವಿದೆಯೆಂದು ನಿನಗೆ ಹೇಳಿದವರಾದರೂ ಯಾರು ??? ೨೪ ವಾಗ್ಯೂಷಣ, ++\\r\ #vhhff st fits? 2 + ## # # # # # # #
- *ಕೆ 1
ರಾಜಕುಮಾರಿಯ ಈ ಮಾತಿನಿಂದ ಆ ಸ್ತ್ರೀಗೆ ಸ್ವಲ್ಪ ತ್ರಾಸವಾದಂತೆ ತೋರಿತು. ಆಕೆಯ ಹೃದಯದಲ್ಲಿ ಆವುದೋ ಒಂದು ಗೂಢವಿಚಾರವು ಉತ್ಪನ್ನವಾಗಿರಬಹು ದೆಂದು, ಅವಳ ಮುಖವನ್ನು ನೋಡುವ ಯಾವನಾದರೂ ತರ್ಕಿಸುವಂತಿತ್ತು. ಪ್ರಬ ಲವಾದ ಆವೇಗಭರದಿಂದ ಅವಳು ಒಮ್ಮೆಲೆ ಹರಿಹಾಯ್ದು ಸ್ವಲ್ಪ ಕುದ್ಧ ಸ್ವರದಿಂದ ಮಾತನಾಡಿದಳು. (( ಲಲಿತೇ, ಲಲಿತೆ, ಈ ಮಾತನ್ನು ನನ್ನ ಮುಂದೆ ಬಚ್ಚಿಡುವ ಪ್ರಯ ತವನ್ನು ಸ್ವಲ್ಪಾದರೂ ಮಾಡಬೇಡ, ಆ ನಿನ್ನ ಪ್ರಯತ್ನವು ಎಂದೂ ಸಫಲವಾಗುವುದಿಲ್ಲ. ತಿಳಿಯಿತೇ? ನಿಮ್ಮಿಬ್ಬರ ಪ್ರೇಮಕಥೆಗಳನ್ನು ನಾನು ಪೂರ್ಣವಾಗಿ ತಿಳಿದಿದ್ದೇನೆ ! ಇಂತಹನನ್ನಿಂದ ನೀನಾ ಸಂಗತಿಗಳನ್ನು ಬಚ್ಚಿಡುವೆಯಾ ? ನಾನು ಒಂದೇ ಒಂದು ಮಾತನ್ನು ನಿನಗೆ ಹೇಳುತ್ತೇನೆ ಕೇಳು; ಅಂದರೆ ನನ್ನ ಮಾತಿನ ಸತ್ಯತೆಯು ನಿನಗೆ ಕಂಡು ಬರುವುದು, ೨೨ ( ಹೇಳು. ಅದಾವ ಮಾತನ್ನು ಹೇಳುತ್ತೀ ? ಸ್ವಲ್ಪ ಕೌತುಕದಿಂದಲೂ ಸ್ವಲ್ಪ ದಿಟ್ಟತನದಿಂದಲೂ ಲಲಿತೆಯು ಮಾತನಾಡಿದಳು. ಆ ಸ್ತ್ರೀಯು ಮಂದಹಾಸದಿಂದ ಮಾತನಾಡಿದಳು. (( ಕುಮಾರಕರುಣಸಿಂಹನು ಈಗಲೇ ಇಲ್ಲಿಂದ ಹೊರಟುಹೋದನು. ಲಲಿತೇ, ನೀವಿಬ್ಬರೂ ಆಡಿದ ಮಾತುಗಳೆ ಲ್ಲವನ್ನೂ ನಾನು ಕೇಳಿದೆನು; ತಿಳಿಯಿತೇ? ೨೨ ಈ ಮಾತಿನಿಂದ ಲಲಿತೆಯ ಆಶ್ಚರ್ಯವು ದ್ವಿಗುಣಿತವಾಯಿತು. ಆದರೆ ಆ ಆಶ್ಚ ರ್ಯವನ್ನು ವ್ಯಕ್ತಗೊಳಿಸದೆ ಅವಳು ಮಾತನಾಡಿದಳು. ( ಒಳ್ಳೇದು. ನೀನು ಹೇಳಿ ದುದು ನಿಜವಾಗಿದ್ದರೆ, ಮುಂದೆ ಮಾಡತಕ್ಕವಳೇನು ? ನಾನು ಈ ವಿಷಯದಲ್ಲಿ ಏನು ಮಾಡಬೇಕೆಂದು ನೀನನ್ನುತ್ತೀ? ” - ಆ ಸ್ತ್ರೀಯು ಸ್ವಲ್ಪ ಅಧಿಕಾರದ ಸ್ವರದಿಂದ ಹೇಳಿದಳು. ರಾಜಕನ್ಯಯೋ, ನಾನು ಹಿತಕರವಾದ ಮಾತನ್ನೇ ನಿನಗೆ ಹೇಳುತ್ತಿದ್ದೇನೆ ಕೇಳು. ಕುಮಾರನ ಮೇಲೆ ಪ್ರೇ ಮಾಡುವುದನ್ನು ಬಿಟ್ಟು ಬಿಡು. ಅದರ ಪರಿಣಾಮವು ಒಳ್ಳೆಯದಾಗುವುದಿಲ್ಲ. ' ಕುಮಾ ರನನ್ನು ಮರೆತು ಬಿಡುತ್ತೇನೆಂ' ದು ಈಗ ನನ್ನ ಸಮಕ್ಷದಲ್ಲಿ ನೀನು ಒಪ್ಪಿಕೊ, ಮತ್ತೆ ಆತನ ದರ್ಶನವನ್ನೇ ತೆಗೆದುಕೊಳ್ಳುವುದಿಲ್ಲವೆಂದು ನನಗೆ ವಚನಕೊಡು. ಇಷ್ಟೇ ಅಲ್ಲ; ಆತನ ದರ್ಶನಕ್ಕೋಸ್ಕರ ನೀನು ಪ್ರಯತ್ನವನ್ನು ಕೂಡ ಎಂದೂ ಮಾಡ ತಕ್ಕುದಲ್ಲ.” ಇಷ್ಟು ಮಾತನಾಡಿ ಆ ವಿಲಕ್ಷಣ ಸ್ತ್ರೀಯು ಕೆಲಹೊತ್ತು ಸುಮ್ಮನೆ ನಿಂತಳು, ಪಾಪ! ಲಲಿತೆಯು ಕಲ್ಲಬೊಂಬೆಯಂತೆ ನಿಂತಲ್ಲಿಯೇ ನಿಂತುಬಿಟ್ಟಳು. ವಿಸ್ಮಯಾತಿ ರೇಕದಿಂದ ಆಕೆಯ ಬಾಯಿಂದ ಶಬ್ದಗಳೇ ಹೊರಡದಾದವು ! ಪ್ರೇಮಮಂದಿರ 9 $# #1 # # # # # #*#* tina ತನ್ನ ಮಾತಿಗೆ ಲಲಿತೆಯು ಉತ್ತರವನ್ನು ಕೊಡುವುದಿಲ್ಲವೆಂದು ತಿಳಿದು ಆ ಸ್ತಿಯು ಮತ್ತೆ ಮಾತಾಡಹತ್ತಿದಳು. '(ಲಲಿತೇ, ನಿನ್ನ ಪ್ರೇಮವು ಯಾವನ ಮೇಲೆ ಕೂತಿ ರುವುದೋ ಆ ಕರುಣಸಿಂಹನು ನನ್ನವನಾಗಿದ್ದಾನೆ. ಆತನ ಪ್ರೇಮದ ಮೇಲೆ ನನ್ನ ಪೂರ್ಣ ಅಧಿಕಾರವಿದೆ. ಚಿಕ್ಕಂದಿನಿಂದಲೂ ನಾವಿಬ್ಬರೂ ಕೂಡಿಯೇ ಆಡಿದವರು; ಕೂಡಿಯೇ ಬೆಳೆದವರು; ಆಗಿನಿಂದಲೇ ಆತನು ನನ್ನ ಹೃದಯೇಶ್ವರನಾಗಿದ್ದಾನೆ. ಅಂದಿನಿಂದಲೇ ನನ್ನ ಪ್ರೇಮವು ಆತನ ಮೇಲೆ ದೃಢವಾಗಿ ಕೂತಿದೆ. ರಾಜಕನೈಯೇ, ನನ್ನ ಹೃದಯೇಶ್ವರನನ್ನು ಈಗ ನೀನು ಅಪಹರಿಸುತ್ತಿರುವೆ! ಕುಮಾರನ ವಿಷಯಕ ವಾದ ಪ್ರೇಮತರುವಿನ ಬೇರುಗಳು ನನ್ನ ಹೃದಯಭೂಮಿಯಲ್ಲಿ ತಳತನಕ ಇಳಿದು ಹೋಗಿವೆ. ನಿನ್ನ ಕೃತ್ಯದ ಮೂಲಕ ಆ ಭೂಮಿಯು ಈಗ ವಿದೀರ್ಣವಾಗುತ್ತಲಿದೆ! ನಾನು ಕುಮಾರನಿಗೋಸ್ಕರ- ಆತನ ಪ್ರೇಮಪ್ರಾಪ್ತಿಗೋಸ್ಕರ-ಭಿಕ್ಷುಕಿಯಾಗಿ ಹುಚ್ಚಿಯಂತೆ ದೇಶಾಂತರಗಳಲ್ಲಿ ಸಂಚರಿಸುತ್ತಲಿದ್ದೇನೆ ! ಲಲಿತೇ, ನನ್ನ ಪ್ರಾಣನಾಥ ನನ್ನು ಸೆಳೆದುಕೊಳ್ಳಬೇಡ; ನನ್ನ ಶಾಪವು ನಿನಗೆ ಹತ್ತದೆ ಎಂದೂ ಬಿಡಲಾರದು! ” ರಾಜಕುಮಾರಿಯಾದ ಲಲಿತೆಯು ಆ ಸ್ತ್ರೀಯ ಮಾತಿನಿಂದ ಚಕಿತಳಾಗಿದ್ದಳಾ ದರೂ ಅವಳ ಭಾಷಣದೊಳಗಿನ ಕೆಲವು ಸಂಗತಿಗಳು ಅಸ್ಪಷ್ಟವಾಗಿ ಆಕೆಗೆ ತಿಳಿಯ ಹತ್ತಿದುವು. ಆದರೂ ಆಶ್ಚರ್ಯಾತಿರೇಕದ ಮೂಲಕ ಲಲಿತೆಯ ಬಾಯಿಂದ ಶಬ್ದ ಗಳು ಹೊರಡಲಿಲ್ಲ. ಕೆಲಹೊತ್ತಿನ ವರೆಗೆ ನೆಲನ್ನು ನೋಡುತ್ತ ಅವಳು ಸ್ತಬ್ಧಳಾಗಿ ದ್ದಳು. ಅಷ್ಟು ಅಲ್ಲಾವಕಾಶದಲ್ಲಿಯೇ ಅವಳ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರ ತರಂಗಗಳು ಉದ್ಗತವಾಗಿ ನಿಲಯಹೊಂದುತ್ತಿದ್ದುವು. ಸ್ವಲ್ಪ ವೇಳೆಯ ಮೇಲೆ ಎಚ್ಚರಗೊಂಡು ಲಲಿತೆಯು ಮೇಲಕ್ಕೆ ಮೊಗವೆತ್ತಿ ನೋಡಿದಳು. ಇನ್ನು ಮೇಲೆ ಈ ವಿಲಕ್ಷಣ ಸ್ತ್ರೀಗೆ ಸಲಿಗೆಯನ್ನು ಕೊಡುವುದು ತಕ್ಕು ದಲ್ಲ; ಅವಳಿಗೆ ತಕ್ಕ ಶಾಸನವನ್ನು ಮಾಡಿಬಿಡಬೇಕು; ಎಂಬುದಾಗಿ ಆಲೋಚಿಸಿ ಆಕೆಯ ಮುಖವನ್ನು ನೋಡಬೇಕೆಂದು ಲಲಿತೆಯು ದೃಷ್ಟಿಯನ್ನು ತಿರುಗಿಸುವಷ್ಟರ ಲ್ಲಿಯೇ ಆ ವಿಲಕ್ಷಣಸ್ತ್ರೀಯು ಅಲ್ಲಿ ಕಾಣಲೇ ಇಲ್ಲ ! ! ಎಲ್ಲಿಯೋ ಹೊರಟು ಹೋಗಿ ದ್ದಳು !!! ಆಕಸ್ಮಿಕವಾದ ರೀತಿಯಿಂದ ಅವಳು ಹೇಗೆ ಅಲ್ಲಿ ಬಂದಿದ್ದಳೋ ಅದೇ ರೀತಿಯಿಂದಲೇ ಮಾಯವಾದಳು !!! ವಾಗ್ಯೂಷಣ, • ೧M+++++++++++++++++++++ ಐದನೆಯ ಪರಿಚ್ಛೇದ. e ಭೈರವಿ. ಲಲಿತೆಯ ಅಚ್ಚರಿಯು ಈಗ ಕಡಿಮೆಯಾಯಿತು. ಪ್ರಿಯಕರನ ದರ್ಶನದಿಂದ ಅವಳ ಹೃದಯವೇನೋ ಉಲ್ಲಸಿತವಾಗಿತ್ತು, ಆದರೆ ತದನಂತರದ ಸಂಘಟನೆಯಿಂದ ಅಂದರೆ ಆ ಅಜ್ಞಾತಳಾದ ವಿಲಕ್ಷಣ ಸ್ತ್ರೀಯ ಸಂದರ್ಶನದಿಂದ ಲಲಿತೆಯ ಹೃದಯವು ವಿಷಣ ವಾಯಿತು. ಆಕೆಗೆ ಯಾವುದೂ ತೋಚದಾಯಿತು ! - ದುರ್ಗದ ಮೇಲೆ ತಾನು ನಿಂತುಕೊಂಡಿದ್ದ ಸ್ಥಳದಿಂದ ಲಲಿತೆಯು ಖಿನ್ನ ಹೃದ ಯದಿಂದ ಕೆಳಗಿಳಿದು ತನ್ನ ಮಂದಿರಕ್ಕೆ ಬಂದಳು. ಇದೇ ಈಗ ಬಂದು ಅದೃಶ್ಯಳಾದ ಆ ವಿಲಕ್ಷಣ ಸ್ತ್ರೀಸಂಬಂಧವಾದ ವಿಚಾರಗಳ ತಾಕಲಾಟವು ಅವಳ ಮನಸ್ಸಿನಲ್ಲಿ ನಡೆ ದಿತ್ತು. ಮಂದಿರದಲ್ಲಿ ಬಂದೊಡನೆಯೇ ಒಬ್ಬ ದಾಸಿಯು ಅವಳಿಗೆ ಭೆಟ್ಟಯಾದಳು. ಇಲ್ಲಿಂದ ಹಾದು ಹೋಗುವಾಗ ಆ ವಿಲಕ್ಷಣ ಸ್ತ್ರೀಯು ಪ್ರಾಯಶಃ ಈ ದಾಸಿಗೆ ಗೋಚ ರವಾಗಿರಬಹುದೆಂದು ತಿಳಿದು ಲಲಿತೆಯು ಅವಳನ್ನು ಕುರಿತು ಪ್ರಶ್ನೆ ಮಾಡಿದಳು. « ಮೋಹನೇ, ದುರ್ಗದ ಮೇಲಿನಿಂದ ಯಾವಳಾದರೂ ಒಬ್ಬ ಹೆಂಗಸು ಕೆಳಗಿಳಿದು ಹೋಗುವುದನ್ನು ನೀನು ನೋಡಿದೆಯಾ? ” ( ಅಮ್ಮನವರೇ, ಯಾವಾಗ ? ” * ಸುಮಾರು ಅರ್ಧ ಗಂಟೆಗೆ ಮೊದಲು. ೨ ( ಇಲ್ಲ; ಅಮ್ಮನವರೇ! ನನಗಂತೂ ಯಾರೂ ಕಾಣಿಸಲಿಲ್ಲ. ” ಮೊಹನೆಯು ಇಲ್ಲವೆಂದು ಹೇಳಿದುದನ್ನು ಕೇಳಿ ಲಲಿತೆಗೆ ಅತ್ಯಂತ ಆಶ್ಚರ್ಯ ವಾಯಿತು. ಆ ಸ್ತ್ರೀಯ ವಿಷಯಕವಾದ ಜಿಜ್ಞಾಸೆಯು ಅತ್ಯಂತವಾಗಿ ಬೆಳೆಯಿತು. ಮಂದಿರದ ಬಳಿಯಲ್ಲಿದ್ದ ಪಹರೆಯವನನ್ನು ಕರೆದು, ಆ ಸ್ತ್ರೀಯ ವಿಷಯವನ್ನು ಕೇಳಿ ದಳು, ಪಾಪ! ಅವನೂ ಆ ಸ್ತ್ರೀಯನ್ನು ನೋಡಿಯೇ ಇರಲಿಲ್ಲ ! ಅಂದಮೇಲೆ ಅವ ನಾದರೂ ಏನು ಹೇಳಬಲ್ಲನು ? ಈಗ ಮಾತ್ರ ಲಲಿತೆಗೆ ಅತಿಶಯವಾದ ಚಿಂತೆಯು ಉತ್ಪನ್ನ ವಾಯಿತು. ರಾಜಕ ನೈಯು ಸ್ವಾಭಾವಿಕವಾಗಿಯೇ ನಿರ್ಭಯಹೃದಯದವಳಾಗಿದ್ದುದೇನೋ ನಿಜ; ಆದರೂ ಈ ಸಂದರ್ಭದಲ್ಲಿ ಅವಳ ಹೃದಯದಲ್ಲಿ ಭೀತಿಯು ಉತ್ಪನ್ನವಾಯಿತು. ಆ ಹೆಂಗಸು ಯಾರು ? ನನಗೂ ಕುಮಾರನಿಗೂ ಪರಸ್ಪರವಾಗಿದ್ದ ಪ್ರೇಮವು ಅವ ಳಿಗೆ ಹೇಗೆ ಗೊತ್ತಾಯಿತು ? ಕುಮಾರನ ಮೇಲೆ ಪ್ರೀತಿಯನ್ನಿಡಬೇಡವೆಂದೂ, ಆತನ ದರ್ಶನಕ್ಕೋಸ್ಕರವಾಗಿ ಸಹ ಪ್ರಯತ್ನ ಮಾಡಬೇಡವೆಂದೂ ಅಧಿಕಾರಯುಕ್ತವಾದ ಪ್ರೇಮಮಂದಿರ, ೩d , , , , , , • ••• ವಾಣಿಯಿಂದ ಅವಳು ನನ್ನನ್ನು ಬೆದರಿಸುವುದಕ್ಕೆ ಕಾರಣವೇನು ? ಇದರ ಅರ್ಥವಾ ದರೂ ಏನು ? ಇಷ್ಟೊಂದು ಇಕ್ಕಟ್ಟಿನೊಳಗಿಂದ ಪಾರಾಗಿ ನನ್ನ ಮಂದಿರದವರೆಗೆ ಅವಳು ಹೇಗೆ ಬಂದಳು ? ಮತ್ತು ಯಾರಿಗೂ ತಿಳಿಯದಂತೆ ಇಲ್ಲಿಂದ ಹೇಗೆ ಹೊರಟು ಹೋದಳು ? ಇವೇ ಮೊದಲಾದ ಅನೇಕ ಪ್ರಶ್ನೆಗಳು ಆಕೆಯ ಮನಸ್ಸಿನಲ್ಲಿ ಉದ್ಭವಿಸಿ ದವು. ಎಲ್ಲವೂ ಗೂಢ! ಎಲ್ಲವೂ ವಿಲಕ್ಷಣ ! ! ಎಲ್ಲವೂ ಅಜ್ಞಾತ ! !! ಲಲಿತೆಯ ಮಸ್ತ ಕವು ಈ ವಿಚಾರದಲ್ಲಿಯೇ ಭ್ರಮಣಮಾಡಹತ್ತಿತು, ಆದರೆ ಇದೊಂದೇ ಪ್ರಶ್ನೆಯನ್ನು ವಿಚಾರಿಸಲು ಲಲಿತೆಗೆ ಅವಕಾಶವಾದರೂ ಎಲ್ಲಿ ಇತ್ತು ? ಆಕೆಯ ಆಯುಷ್ಯದೊಳಗಿನ ಅತ್ಯಂತ ಮಹತ್ವದ ಪ್ರಶ್ನೆಯು ಇದೇ ಕಾಲದಲ್ಲಿಯೇ ಉಪಸ್ಥಿತವಾಗಿತ್ತು. ಆಕೆಯ ತಂದೆಯಾದ ಭೀಮಸಿಂಹನು ಆಕೆಯ ವಿವಾಹದ ಪ್ರಸ್ತಾಪವನ್ನು ಮಾಡುವುದಕ್ಕೋಸ್ಕರ ಸರತಾನಸಿಂಹನ ಕಡೆಗೆ ಹೋಗಿ ದ್ದನು. ಇನ್ನು ಒಂದೆರಡು ದಿವಸಗಳಲ್ಲಿಯೇ ಭೀಮಸಿಂಹನು ದುರ್ಜಯಸಿಂಹನನ್ನು ಕರೆದುಕೊಂಡು ಇಲ್ಲಿಗೆ ಬರತಕ್ಕವನಿದ್ದನು. ಅವನು ಒಮ್ಮೆ ಬಂದು ಬಿಟ್ಟನೆಂದರೆ ಲಲಿ ತೆಯ ಆಶೆಗಳೆಲ್ಲವೂ ಸುಟ್ಟು ಬೂದಿಯಾಗಿ ಹೋಗುತ್ತಿದ್ದುವು. ಈ ಒಂದೆರಡು ದಿವಸ ಗಳ ಅವಧಿಯಲ್ಲಿ ಕುಮಾರನ ದರ್ಶನವಾಗದಿದ್ದರೆ ಮುಂದೆ ಮಾಡತಕ್ಕುದೇನು ? ತಂದೆಯ ಅಪ್ಪಣೆಯಂತ ದುರ್ಜಯಸಿಂಹನೊಡನೆ ವಿವಾಹಮಾಡಿಕೊಳ್ಳುವ ಸಂದ ರ್ಭ ಪ್ರಾಪ್ತವಾಗುವದಲ್ಲವೇ ? ಹಾಗೆ ಒಂದು ವೇಳೆ ಆದರೆ ನನ್ನ ಪ್ರೇಮದ ವಿಡಂಬನೆ ಯಾಗದಂತೆ ಅವ ಉಪಾಯವನ್ನು ಮಾಡತಕ್ಕದ್ದು ? ವಜ್ರದ ಉಂಗರವನ್ನು ತೇದು ಕುಡಿಯುವುದೇ ಉಪಾಯ !! ಅದರ ಹೊರತು ಗತ್ಯಂತರವೇ ಇಲ್ಲ!!! ಈ ಪ್ರಕಾರದ ಅನೇಕ ವಿಚಾರಗಳು ಲಲಿತೆಯ ಮನಸ್ಸಿನಲ್ಲಿ ಬಂದವು. ಆಕೆಗೆ ಸೃತಿಯು ತಪ್ಪಿಹೋಯಿತು. ತನ್ನ ಮನಸ್ಸಿನ ಸ್ಥಿತಿಯು ಪರಿಜನರಿಗೆ ಗೊತ್ತಾಗಬಾರ ದೆಂದು ಅವಳು ಹೇಗೆ ಹೇಗೆ ಒಂದೆರಡು ತುತ್ತು ಬಾಯಲ್ಲಿ ಹಾಕಿಕೊಂಡು ಶಯನ ಮಂದಿರಕ್ಕೆ ಬಂದು ಮಂಚದ ಮೇಲೆ ಬಿದ್ದು ಕೊಂಡಳು. ಹೀಗೆ ಅವಳು ತನ್ನ ಪರಿಜನ ರನ್ನೇನೋ ಮೋಸಗೊಳಿಸಿದಳು. ಆದರೆ ಸರ್ವಾಂತರ್ವ್ಯಾಸಿಯಾದ ನಿದ್ರಾದೇವಿ ಯನ್ನು ಠಕ್ಕಿಸುವುದೆಂತು ? ಆ ಸ್ಥಿತಿಯಲ್ಲಿ ರಾಜಕನ್ಯಗೆ ನಿದ್ದೆ ಬರುವುದು ಅಸಂಭವನೀ ಯವೇ ಆಗಿತ್ತು, ಅವಳು ನಿದ್ರಾದೇವಿಯನ್ನು ಪ್ರಾರ್ಥನೆ ಮಾಡಿದ ಹಾಗೆಲ್ಲ ದೇವಿಯು ಹೆಚ್ಚು ಹೆಚ್ಚು ದೂರದಲ್ಲಿಯೇ ಉಳಿಯುತ್ತಿದ್ದಳು! ಲಲಿತೆಯು ಈ ಮಗ್ಗಲಿನಿಂದ ಆ ಮಗ್ಗಲಿಗೊ ಆ ಮಗ್ಗಲಿನಿಂದ ಈ ಮಗ್ಗಲಿಗೂ ಒಂದೇ ಸವನೆ ಹೊರಳಾಡುತ್ತಿದ್ದಳು. ವಿಚಾರಗಳ ಆವೇಗವು ಅಸಹ್ಯವಾಗಲು ಅವಳು ಎದ್ದು ಕೂಡುತ್ತಿದ್ದಳು, ಆ ಸ್ಥಿತಿಯಲ್ಲಿ ಕೆಲವು ಕಾಲವನ್ನು ಕಳೆದ ಬಳಿಕ, ೩೨ ವಾಗ್ಯೂಷಣ, - a : • • • • • • ಅವಳು ಕೆಳಗಿಳಿದು ಸ್ವಲ್ಪ ಹೊತ್ತಿನವರೆಗೆ ಇತ್ತಿಂದತ್ತ ಅತ್ತಿಂದಿತ್ತ ಅಡ್ಡಾಡುತ್ತಿದ್ದಳು. ಹೀಗೆ ತಿರುಗಾಡುತ್ತಿರುವಾಗ ಕಿಟಕಿಯ ಸಮೀಪಕ್ಕೆ ಹೋದಳೆಂದರೆ, ನೀಲವರ್ಣದ ಆಕಾಶವನ್ನೂ ತನ್ನ ದಾರುಣವಾದ ಮನಃಸ್ಥಿತಿಯನ್ನೂ ತಿಳಿದು ಹಾಸ್ಯ ಮಾಡುತ್ತಿದ್ದ ತಾರಕೆಗಳನ್ನು ನೋಡುತ್ತ ಎಷ್ಟೋ ಹೊತ್ತಿನವರೆಗೆ ನಿಂತುಕೊಳ್ಳುತ್ತಿದ್ದಳು. ಈ ಪ್ರಕಾ ರದ ಆಚರಣೆಗಳಿಂದ ಮಸ್ತಕದಲ್ಲಿ ನಡೆದಿರುವ ವಿಚಾರಗಳ ಕಲ್ಲೋಲವು ಹೇಗೆ ಶಾಂತ ವಾಗಬೇಕು ? ಆದುದರಿಂದ ಮತ್ತೆ ಕಿಟಕಿಯನ್ನಿಕ್ಕಿ ಮಂಚದ ಮೇಲೆ ಬಿದ್ದು ಕೊಳ್ಳುತ್ತಿ ದ್ದಳು. ಮತ್ತು ಸಂಕಟದೊಳಗಿಂದ ತನ್ನ ನ್ನು ಪಾರಗಾಣಿಸುವುದಕ್ಕಾಗಿ ಅತಿ ನವ್ರತೆ ಯಿಂದ ನಿದ್ರಾದೇವಿಯನ್ನು ಪ್ರಾರ್ಥಿಸುತ್ತಿದ್ದಳು. ಆದರೆ ಈ ಹತಭಾಗಿನಿಯ ವಿಷಯ ವಾಗಿ ಆ ಪಾಪಾಣಹೃದಯೆಗೆ ಕಿಂಚಿತ್ತಾದರೂ ದಯೆಯುಂಟಾಗಲಿಲ್ಲ ! ಲಲಿತೆಯ ಪ್ರಾರ್ಥನೆಯನ್ನು ಕೇಳಿ ಹತ್ತಿರ ಬರುವದಕ್ಕೆ ಬದಲಾಗಿ ಅವಳು ಇನ್ನೂ ದೂರದಲ್ಲಿ ಹೋಗಿ ನಿಂತಳು !!! ಎಷ್ಟೋ ಹೊತ್ತಿನವರೆಗೆ ಲಲಿತೆಯು ಇದೇ ಕ್ರಮವನ್ನೆ ನಡೆಯಿಸಿದ್ದಳು. ಇಷ್ಟರಲ್ಲಿ ರಾತ್ರಿಯ ಗಂಭೀರವಾದ ನಿಸ್ತಬ್ದತೆಯು ಭಂಗವಾಯಿತು; ದುರ್ಗದ ಸಿಂಹ ದ್ವಾರದಲ್ಲಿದ್ದ ವಾದ್ಯಗೃಹದಲ್ಲಿ ನೌಬತ್ತಿನ ಧ್ವನಿಯಾಗಹತ್ತಿತು; ಕ್ಷಣಾರ್ಧದಲ್ಲಿಯೇ ಆ ಧ್ವನಿಯು ನಾಲ್ಕೂ ಕಡೆಯಲ್ಲಿ ಪಸರಿಸಿತು. ಆ ಶಬ್ದವು ಕಿವಿಯಲ್ಲಿ ಬಿದ್ದೊಡನೆಯೇ ರಾತ್ರಿಯ ಮೂರನೆಯ ಪ್ರಹರವು ಕಳೆದು ಹೋಯಿತೆಂಬುದು ಲಕ್ಷದಲ್ಲಿ ಬಂದು ಲಲಿತೆಯು ಬೆದರಿದಳು. ನಕ್ಷತ್ರಮಣಿಖಚಿತವಾದ ನೀಲನಭೋವ.೦ಡಲವನ್ನು ಒಮ್ಮೆ ಅವಲೋಕಸಿ, ಕಿಟಕಿಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿ ಮಂಚದ ಮೇಲೆ ಬಿದ್ದು ಕೊಂಡಳು ಲಲಿತೆಯ ಮಸ್ತಕದಲ್ಲಿ ಅನೇಕ ವಿಧವಾದ ಚಿಂತನಲಹರಿಗಳು ಮತ್ತೆ ಕಲ್ಲೋಲಿತವಾಗಹತ್ತಿದುವು. ಆದರೆ ಈ ಸಾರೆ ಮಾತ್ರ ಅವಳು ಬಹಳ ಹೊತ್ತಿನವ ರೆಗೆ ಮೇಲೆ ಹೇಳಿದಂತಹ ಯಾತನೆಗಳನ್ನು ಸಹಿಸುತ್ತ ಬಿದ್ದು ಕೊಳ್ಳಬೇಕಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಅವಳ ಕಣ್ಣುಗಳು ಜಡವಾಗಿ ಬೆಳಗಿನ ಸಕ್ಕರೆನಿದ್ದೆಯು ಆವ ಳಿಗೆ ಹತ್ತಿತು. ಆದರೆ ಆಗಲಾದರೂ ಅವಳಿಗೆ ಗಡದ್ದು ನಿದ್ದೆ ಹತ್ತಲಿಲ್ಲ; ಅವಳ ಮಸ್ತ ಕವು ಶಾಂತವಾಗಿಯೂ ಸ್ಥಿರವಾಗಿಯೂ ಇದ್ದಿಲ್ಲ. ಸಾಯ೦ಕಾಲದಿಂದ ನಡೆದು ಹೋದ ಬೇರೆ ಬೇರೆ ಸಂಗತಿಗಳ ಸಂಬಂಧವುಳ್ಳ ಸ್ವಪ್ನಗಳನ್ನು ಅವಳು ಕಾಣುತ್ತಿದ್ದಳು! ಅರುಣೋದಯದ ಸುಮಾರಕ್ಕೆ ಒಂದು ಭಯಂಕರವಾದ ಸ್ವಪ್ನದ ಆಘಾತ ದಿಂದ ಅವಳು ಎಚ್ಚೆತ್ತಳು, ಕಿಟಕಿಯೊಳಗಿನ ತೆರೆಯಿಂದ ಪ್ರಭಾತಕಾಲದ ಸೌಮ್ಯ ವಾದ ಮಂದಪ್ರಕಾಶವು ಒಳಸೇರಿದುದನ್ನು ಕಂಡು ಅವಳು ಎದ್ದಳು. ಸರಿಜನರೊ ಡನೆ ಒಂದು ಶಬ್ದವನ್ನು ಕೂಡ ಮಾತನಾಡದೆ ಅವಳು ತನ್ನ ನಿತ್ಯವಿಧಿಯನ್ನು ತೀರಿಸಿ ದಳು; ಮತ್ತು ಬೇಗನೇ ಸ್ನಾನ ಮಾಡಿ ತನ್ನ ಮಂದಿರದೊಳಗಿಂದ ಹೊರಬಿದ್ದಳು. . ಪ್ರೇಮಮಂದಿರ. ೩೬ Y Vy ' # /
- • •v\vvvvvvvvvvvv vv vv
ದುರ್ಗದ ಉತ್ತರ ದಿಕ್ಕಿಗೆ ಕೆಲವು ಅಂತರದ ಮೇಲೆ ಮುಕ್ತಾವಲೀ ನದಿಯ ತೀರ ದಲ್ಲಿ ಶಾಂತವಾದೊಂದು ವೃಕ್ಷರಾಜೆಯ ಮಧ್ಯದಲ್ಲಿ ಕಲ್ಯಾಣೀದೇವಿಯ ಪಾಷಾಣ ನಿರ್ಮಿತವಾದ ಚಿಕ್ಕದೊಂದು ಸುಂದರ ಮಂದಿರವಿತ್ತು. ರಜಪೂತಸ್ಥಾನದೊಳಗಿನ ಚಂದ್ರಾವತರಿಗೂ, ಚವ್ಹಾಣರಿಗೂ ಕಲ್ಯಾಣೀದೇವಿಯು ಕುಲದೈವತವು. ಅವಳ ಉಪಾ ಸನೆಯಿಂದ ತಮ್ಮ ಕುಲಕ್ಕೂ ಗೃಹಕ್ಕೂ ಮಂಗಳವುಂಟಾಗುವುದೆಂದೂ, ಅವಳ ಆರಾಧ ನೆಯಿಂದಲೇ ತಮ್ಮ ಯೋಗಕ್ಷೇಮವೂ ನಡೆಯುವದೆಂದೂ ಎರಡೂ ಕುಲದವರು ಮನಃ ಪೂರ್ವಕವಾಗಿ ತಿಳಿದಿದ್ದರು. ವರುಷದೊಳಗಿನ ಕೆಲವು ನಿಯಮಿತ ದಿವಸಗಳಲ್ಲಿ ಸ್ವತಃ ದುರ್ಗಾಧಿಪತಿಯೇ ಕಲ್ಯಾಣೀಮಂದಿರಕ್ಕೆ ಬಂದು ಷೋಡಶೋಪಚಾರಗಳಿಂದ ದೇವ ತೆಯನ್ನು ಪೂಜಿಸುತ್ತಿದ್ದನು. ಜಳಕ ಮಾಡಿ ಬಿಳಿಯ ರೇಷಿಯ ಸೀರೆಯನ್ನುಟ್ಟು ಕೊಂಡು ಪೂಜಾಸಾಹಿತ್ಯದ ಳನ್ನು ತೆಗೆದುಕೊಂಡು ತನ್ನ ಮಂದಿರದಿಂದ ಹೊರಟ ರಾಜನಂದಿನಿಯಾದ ಲಲಿತೆಯು ಒಬ್ಬಳೇ ಈ ಕಲ್ಯಾಣೀದೇವಿಯ ಮಂದಿರಕ್ಕೆ ಬಂದಳು. ಅವಳ ಪರಿಜನರು ಸಂಗಡ ಬರುತ್ತೇವೆಂಬ ಇಚ್ಛೆಯನ್ನು ತೋರ್ಪಡಿಸಿದರೂ ಲಲಿತೆಯು ಒಬ್ಬಳನ್ನೂ ಕರೆದು ಕೊಂಡು ಬಂದಿದ್ದಿಲ್ಲ. ಮಂದಿರದಲ್ಲಿ ಬಂದೊಡನೆಯೇ ಲಲಿತೆಯು ದೇವಿಯ ಪಾದತಳದ ಹತ್ತಿರ ಕುಳಿ ತುಕೊಂಡಳು. ತಂದಂತಹ ಸಾಹಿತ್ಯದಿಂದ ಭಕ್ತಿಯುಕ್ತವಾದ ಮನಸ್ಸಿನಿಂದ ದೇವಿಯ ಪೂಜೆಯನ್ನು ಮಾಡಿ ಲಲಿತೆಯು ಎಷ್ಟೋ ಕಾಲದವರೆಗೆ ಕಣ್ಣು ಮುಚ್ಚಿಕೊಂಡು ದೇವಿಯ ಎದುರಿನಲ್ಲಿ ಕುಳಿತುಕೊಂಡಿದ್ದಳು. ಆ ಕಾಲದಲ್ಲಿ ಲಲಿತೆಯು ಸ್ತಿಮಿತವೂ ನಿಷ್ಪಂದವೂ ಆದ ನೇತ್ರಗಳಿಂದ ಎದುರಿನಲ್ಲಿದ್ದ ದೇವತೆಯನ್ನು ಬೇಡಿಕೊಳ್ಳುತ್ತಿರುವಾಗ ಸ್ಥಿರವೂ ನಿಶ್ಚಲವೂ ಆದ ಸ್ವರ್ಣ ಪ್ರತಿಮೆಯಂತೆ ಗೋಚರವಾಗುತ್ತಿದ್ದಳು! ಈ ಪ್ರಕಾರ ಮೂಕಪ್ರಾರ್ಥನೆಯಿಂದ ತನ್ನ ಮನಸ್ಸಿನೊಳಗಿನ ಅಭಿಪ್ರಾಯವನ್ನು ಕಲ್ಯಾಣೀದೇವಿಗೆ ತಿಳಿಸಿದ ಬಳಿಕ ಅವಳು ಕಮಲಸಮಾನವಾದ ತನ್ನ ನೇತ್ರಯುಗವನ್ನು ತೆರೆದಳು; ಮತ್ತು ಭಕ್ತಿಪೂರಿತವಾದ ನಿಶ್ಚಲ ದೃಷ್ಟಿಯಿಂದ ದೇವಿಯನ್ನು ನೋಡುತ್ತ ಆಕೆಗೆ ಸಾಷ್ಟಾಂಗ ಪ್ರಣಿಪಾತವನ್ನು ಮಾಡಿದಳು. ಆ ಮೇಲೆ ಲಲಿತೆಯು ಅಲ್ಲಿಂದ ಎದ್ದಳು. ಒಂದೆರಡು ಸಾರೆ ದೇವಿಯನ್ನು ಮತ್ತೆ ನೋಡಿ ಬಳಿಕ ಮಂದಿರದಿಂದ ಹೊರಬಿದ್ದಳು. ಮಂದಿರದಿಂದ ಸ್ವಲ್ಪ ಅಂತರದ ಮೇಲೆ ಪ್ರತಿಮ ದಿಕ್ಕಿನಲ್ಲಿ ಒಂದು ಚಿಕ್ಕದಾದ ಪರ್ಣಕುಟಿಯಿತ್ತು. ಲಲಿತೆಯು ಅಲ್ಲಿಗೆ ನಡೆ ದಳು. ಗುಡಿಸಲದ ಬಾಗಿಲವು ಮುಚ್ಚಲ್ಪಟ್ಟಿತ್ತು. ಲಲಿತೆಯು ಸ್ವಲ್ಪ ಹೊತ್ತಿನವರೆಗೆ ಯೋಚನೆ ಮಾಡಿ ತನ್ನ ಕೋಮಲವಾದ ಕರಾಂಗುಲಿಯಿಂದ ಬಾಗಿಲದ ಮೇಲೆ ಮೆಲ್ಲನೆ , 5 ೩ ವಾಗ್ಯೂಷಣ, tr * * * * * * * ** * • • ಆಘಾತವನ್ನು ಮಾಡಿದಳು. ಪರ್ಣಕುಟಿಯಲ್ಲಿ ಯಾರಾದರೂ ಇದ್ದರೋ ಇಲ್ಲವೋ ಯಾರಿಗೆ ಗೊತ್ತು ? ಬಾಗಿಲವನ್ನಂತೂ ಯಾರೂ ತೆರೆಯಲಿಲ್ಲ. ಸ್ವಲ್ಪ ಹೊತ್ತು ನಿಂತು ಲಲಿತೆಯು ಪುನಃ ಮೊದಲಿನಂತೆಯೇ ಸಪ್ಪಳವನ್ನು ಮಾಡಿದಳು. ಆಗ ಒಳಗಿನಿಂದ ಯಾರೋ ಗಂಭೀರಸ್ಕರದಿಂದ ಕೇಳಿದರು. ಈ ಯಾರ ವರು ? ಲಲಿತೆಯು ಆನಂದದಿಂದ ಉತ್ತರವಿತ್ತಳು. “ ನಾನು; ಲಲಿತೆ? ಅಮ್ಮನವರೇ ನಾನೇ ಬಂದಿದ್ದೇನೆ. ” (( ಮಗಳೇ ಒಳಗೆ ಬಾ ಅನುಜ್ಞೆಯು ದೊರೆತ ಕೂಡಲೇ ಲಲಿತೆಯು ಮೆಲ್ಲನೆ ಒಳಗೆ ಹೋದಳು. ಗುಡಿ ಸಲು ಚಿಕ್ಕದಾಗಿಯೇ ಇತ್ತು; ಆದರೂ ಅದರಲ್ಲಿ ಎರಡು ಭಾಗಗಳಿದ್ದುವು. ಒಳಗಿನ ಭಾಗದಲ್ಲಿ ಲಲಿತೆಯು ನೋಡದ ನೋಟವನ್ನು ಇನ್ನಾರಾದರೂ ಅಪರಿಚಿತರು ನೋಡಿ ದ್ದರೆ ಭಯದಿಂದ ಮೂರ್ಚ್ಛಿತರಾಗಿಯೇ ಹೋಗುತ್ತಿದ್ದರು. ಆದರೆ ಲಲಿತೆಗೆ ಈ ದೃಶ್ಯವು ಪರಿಚಿತವಾದುದೇ ಇದ್ದುದರಿಂದಲೋ, ಅಥವಾ ನಾನು ಒಳಹೊಕ್ಕ ಕೂಡಲೆ ಇಂತಹ ನೋಟವು ನನ್ನ ಕಣ್ಣಿಗೆ ಬಿದ್ದೇ ಬಿಳುವುದೆಂಬ ಕಲ್ಪನೆಯು ಅವಳಲ್ಲಿದ್ದುದರಿಂದಲೋ ಆಕೆಯು ಸ್ವಲ್ಪವೂ ಹೆದರಲಿಲ್ಲ. ಗುಡಿಸಲಿನ ಒಳ ಅಂಗಣದಲ್ಲಿ ಭಯಂಕರವಾದ ವನ್ಯಪಶುವಿನ ತರ್ಮದ ಮೇಲೆ ಪ್ರೌಢವಯಸ್ಸಿನ ಒಬ್ಬ ಭೈರವಿಯು ಕುಳಿತುಕೊಂಡಿದ್ದಳು. ಆಕೆಯ ಮುಖಮುದ್ರೆಯು ಮಾತ್ರ ಉಗ್ರವಾಗಿದ್ದಿಲ್ಲ. ಶಾಂತಿ ಮತ್ತು ವಿವೇಕಗಳು ಆಕೆಯ ಅಂಗದಲ್ಲಿ ವಾಸವಾಗಿ ದ್ದುವು. ಭೈರವಿಯ ಎದುರಿನಲ್ಲಿ ಕರಾಲವೇಷದ ಅಷ್ಟಭುಜಾದೇವಿಯ ಮೂರ್ತಿ ಹೊಂದಿದ್ದು ಅದು ಸಿಂದೂರದಿಂದ ವ್ಯಾಪ್ತವಾಗಿತ್ತು. ಆ ದೇವಿಯು ಭೈರವಿಯ ಉಪಾ ಸ್ಯದೇವತೆಯಾಗಿರಬಹುದೆಂಬಂತೆ ತೋರುತ್ತಿತ್ತು. ಭೈರವಿಯ ಒಂದು ಪಕ್ಕದಲ್ಲಿ ಸಿಂದೂ ರವನ್ನು ಬಳೆದ ಒಂದು ತ್ರಿಶೂಲವಿದ್ದು ಇನ್ನೊಂದು ಪಕ್ಕದಲ್ಲಿ ವಿದ್ರೂಪವಾದ ಒಂದೆರಡು ತಲೆಬುರುಡೆಗಳು ಬಿದ್ದಿದ್ದುವು. ಸಮೀಪದಲ್ಲಿಯೇ ಒಬ್ಬ ಹೆಂಗಸಿನ ಹೆಣವು ಬಿದ್ದಿತ್ತು, ಒಂದೆಡೆಯಲ್ಲಿ ದೊಡ್ಡದಾದ ಭಸ್ಮದ ರಾಶಿಯು ಬಿದ್ದಿತ್ತು. ಭೈರವಿಯ ಕೊರಳಲ್ಲಿ ದೊಡ್ಡ ದೊಡ್ಡ ರುದ್ರಾಕ್ಷಗಳ ಮಾಲೆಯಿದ್ದು ಹಣೆಯಲ್ಲಿ ಉದ್ದವಾದ ಸಿಂದೂರದ ನಾಮವನ್ನು ಹಚ್ಚಿಕೊಂಡಿದ್ದಳು; ಮತ್ತು ಅದರ ಮೇಲೆ ಬಿಳಿಯ ಚಂದನಗಂಧದ ಎಷ್ಟೋ ಟಿಕಳ ಗಳು ಕಾಣುತ್ತಿದ್ದುವು. ಆಕೆಯು ತನ್ನ ಮೈತುಂಬ ವಿಭೂತಿಯನ್ನು ಬಳಿದುಕೊಂಡಿದ್ದಳು. - ಲಲಿತೆಯು ಒಳಗೆ ಬಂದೊಡನೆಯೇ ಭೈರವಿಯು ಮಂದಹಾಸಮಾಡಿದಳು. ಆದರೆ ವಿಚಾರನಿಮಗ್ನ ಳಾದ ಲಲಿತೆಗೆ ಅದು ಲಕ್ಷದಲ್ಲಿ ಬರಲಿಲ್ಲ. ಅವಳು ಭೈರವಿಯ ಪ್ರೇಮಮಂದಿರ.
- * * * * * * * *
ಸನ್ನಿಧಿಗೆ ಹೋಗಿ ನಮಸ್ಕಾರ ಮಾಡಿದಳು. ಭೈರವಿಯ ಗಂಭೀರವಾದ ಮುಖವು ಈಗ ಇನ್ನೂ ಗಂಭೀರವಾಗಿ ತೋರಹತ್ತಿತು. ಭೈರವಿಯು ಸುಮ್ಮನೆ ಇದ್ದಳು. ಸ್ವಲ್ಪಹೊತ್ತಿನ ಮೇಲೆ ಲಲಿತೆಯು ಉತ್ಸುಕತೆ ಯಿಂದ ಪ್ರಶ್ನೆ ಮಾಡಿದಳು. “ ತಾಯಿ, ನನ್ನ ಕೆಲಸವಾಯಿತೇ ? ?” ಭೈರವಿಯು ಇನ್ನೂ ವರೆಗೆ ಸುಮ್ಮನೇ ಇದ್ದಳು. ಈ ಕಾಲದಲ್ಲಿ ಅವಳ ಮನಸ್ಸಿ ನಲ್ಲಿ ಆವ ವಿಚಾರಗಳು ನಡೆದಿದ್ದು ಎಂಬುದನ್ನು ಹೇಳುವುದು ಕಷ್ಟವಾಗಿದೆ. ಆದರೆ ರಾಜಕನೆಯ ಪ್ರಶ್ನೆಯನ್ನು ಕೇಳಿದ ಬಳಿಕ ಭೈರವಿಯ ಲಲಾಟಪ್ರದೇಶದಲ್ಲಿ ಚಿಂತೆಯ ರೇಖೆಗಳು ಕಾಣಹತ್ತಿದುದು ಮಾತ್ರ ನಿಜ ! ಲಲಿತೆಗೆ ಈ ಸಂಗತಿಯು ಗೊತ್ತಾಗದೆ ಹೋಗಲಿಲ್ಲ! ತನ್ನ ಪ್ರಶ್ನೆಗೆ ಉತ್ತರವು ದೊರೆಯಲಿಲ್ಲವೆಂಬುದನ್ನು ತಿಳಿದು ಲಲಿತೆಯು ಪುನಃ ಸಂಬೋಧಿಸಿದಳು. ( ತಾಯಿ ! » ಭೈರವಿಯು ಒಮ್ಮೆಲೆ ಎಚ್ಚತ್ತವಳಾಗಿ ಮಾತನಾಡಿದಳು, " ಮಗಳೇ, ಏನು ? " “ ನಾನು ವಿನಂತಿಯನ್ನು ಮಾಡಿಕೊಂಡ ಮೇರೆಗೆ ತಾವು ನನ್ನ ಕೆಲಸವನ್ನು ಮಾಡಿದಿರಾ ? ” (( ಹೌದು. ಮಾಡಿದ್ದೇನೆ. ? (( ಅದರ ಫಲಿತಾರ್ಥವೇನು ? ೨೨ ಭೈರವಿಯು ಸ್ವಲ್ಪ ಹೊತ್ತಿನವರೆಗೆ ವಿಚಾರಮಾಡುತ್ತ ಸುಮ್ಮನಿದ್ದಳು. ಆಮೇಲೆ ಅವಳು ರಾಜಕಸ್ಯೆಯನ್ನು ವಿಚಾರಿಸಿದಳು. << ಮಗಳೇ, ನೀನು ಈ ಸಂಕಷ್ಟದಲ್ಲಿ ಏಕೆ ಬೀಳುತ್ತೀ ? ಭವಿಷ್ಯವನ್ನು ತಿಳಿದುಕೊಂಡು ನೀನು ಏನು ಮಾಡುವೆ? ಲಲಿತೇ, ನಾನು ಹೇಳುವುದನ್ನು ಕೇಳು.-ಅದರ ಗೊಡವೆಗೆ ಹೋಗಬೇಡ-ಸುಮ್ಮನೆ ಸುಖದ ಜೀವ ವನ್ನು ದುಃಖದಲ್ಲಿ ಕೆಡಹುವುದರಿಂದ ಪ್ರಯೋಜನವೇನು ಮಗಳೇ ? ) ಭೈರವಿಯ ಈ ಸಲಹೆಯು ಲಲಿತೆಯ ಮನಸ್ಸಿಗೆ ಬರಲಿಲ್ಲವೆಂಬಂತೆ ತೋರಿತು. ತನ್ನ ಹಣೆಯಲ್ಲಿ ಏನು ಬರೆದಿದೆಯೆಂಬುದನ್ನು ತಿಳಿದುಕೊಳ್ಳುವ ಉತ್ಕಂಠಯು ಅವಳಲ್ಲಿ ಅತಿಶಯವಾಗಿತ್ತು. ಈಗ ವಿವೇಕದಿಂದ ತನ್ನ ಮನಸ್ಸನ್ನು ದಮನಮಾಡಲು ಆಕೆಯು ಅಸಮರ್ಥಳಾಗಿದ್ದಳು. ಲಲಿತೆಯು ದೀನಸ್ವರದಿಂದ ಭೈರವಿಯನ್ನು ಕುರಿತು ಮತ್ತೆ ಮಾತಾಡಿದಳು. “ ನಾನು ಮೊದಲು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಂಡಾಗಲೇ ನಾನು ಎಲ್ಲ ಸಂಗತಿಗಳ ವಿಚಾರವನ್ನು ಮಾಡಿರುತ್ತೇನೆ. ತಾಯಿ, ತಮ್ಮ ಲೆಕ್ಕದಿಂದ ಏನು ತಿಳಿದು ಬಂತೋ ಅದನ್ನು ಸ್ಪಷ್ಟವಾಗಿ ಹೇಳುವುದಾಗಬೇಕು. ಸ್ವಲ್ಪಾದರೂ ಸಂಕೋಚವನ್ನು ಮನಸ್ಸಿನಲ್ಲಿ ತರಬೇಡಿರಿ. ತಾಯಿ, ಈ ಸಂಶಯಿಸ್ಥಿತಿಯ ಯಾತ ನೆಯೇ ನನ್ನನ್ನು ಬಲವಾಗಿ ಬಾಧಿಸುತ್ತದೆ? ” ವಾಗ್ಯೂಷಣ, +- , + + +++ ++ ಭೈರವಿಯು ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಗಂಭೀರಸ್ವರದಿಂದ ಮಾತನಾಡಿ ದಳು. ಈ ವತ್ತೇ, ಹಾಗಾದರೆ ಆ ಸಂಗತಿಯನ್ನು ಹೇಳಿದ ಹೊರತು ಗತ್ಯಂತರವೇ ಇಲ್ಲ ದಾಯಿತು. ನಾನು ನಿನ್ನಿನ ರಾತ್ರಿಯನ್ನೆಲ್ಲ ನಿನ್ನ ಸಂಬಂಧದ ಗಣಿತವನ್ನು ಮಾಡುವುದ ರಲ್ಲಿಯೇ ಕಳೆದೆನು. ” ಲಲಿತೆಯು ಉತ್ಸುಕತೆಯಿಂದ ನಡುವೆ ಮಾತನಾಡಿದಳು. ( ತಾಯಿ ನನ್ನ ಮೇಲೆ ತಮ್ಮ ಉಪಕಾರವು ಬಹಳವಾಯಿತು ! ” ಭೈರವಿಯು ಸ್ನೇಹಭರದಿಂದ ಮಾತನಾಡಿದಳು. “ ಲಲಿತೇ, ಇದರಲ್ಲಿ ನನ್ನ ಉಪ ಕಾರವೇನು? ನಿನ್ನಂತಹ ಸದ್ದು ಣಿಯಾದ ಸುವರ್ಣಲಕ್ಷ್ಮಿಯ ಮೇಲೆ ಯಾರ ಪ್ರೇಮವು ತಾನೆ ಕೂಡ್ರಲಿಕ್ಕಿಲ್ಲ ? ?” ಲಲಿತೆಯು ಸ್ವಲ್ಪ ನಾಚಿದಳು. ಮತ್ತು ಇಂತು ಮಾತಾಡಿದಳು. ( ತಾಯಿಯ ಪರೇ, ಇರಲಿ; ಮೊದಲು ತಮ್ಮ ಗಣಿತದ ಫಲಿತಾಂಶವನ್ನು ನನಗೆ ಹೇಳಿರಿ. ? « ಲಲಿತೇ ! ಕರುಣಸಿಂಹಲಲಿತೆಯರ ಪ್ರೇಮಮಿಲನವು ಕೊನೆಯಲ್ಲಿ ಆಗತಕ್ಕ ದ್ದೆಂದೇ ನನಗೆ ಕಂಡುಬಂತು- ?? ರಾಜಕನೆಯು ಆನಂದದಿಂದ ಮಾತನಾಡಿದಳು. “ ಹೀಗೆಯೋ ? ಹಾಗಾದರೆ ಇದನ್ನು ಹೇಳುವುದಕ್ಕೆ ತಾವು ಇಷ್ಟೊಂದು ಹಿಂದೆಮುಂದೆ ಯಾಕೆ ನೋಡುತ್ತಿದ್ದಿರಿ? ” ಭೈರವಿಯು ಗಂಭೀರಸ್ವರದಿಂದ ಮಾತನಾಡಿದಳು. “ ಅಷ್ಟೊಂದು ತ್ವರಾಯುತ ಳಾಗಬೇಡ. ನಾವು ಹೇಳುವುದನ್ನೆಲ್ಲ ಮೊದಲು ಲಕ್ಷಗೊಟ್ಟು ಕೇಳು. ನಿಮ್ಮಿಬ್ಬರ ಮಿಲನವಾಗುವುದೇನೋ ನಿಜ. ಆದರೆ ಅದರ ಪರಿಣಾಮವು ಸುಖಕರವಾದೀತೆಂಬಂತೆ ತೋರುವುದಿಲ್ಲ! ?” ಭೈರವಿಯ ಈ ಭವಿಷ್ಯವಾಣಿಯಿಂದ ಲಲಿತೆಯ ಹೃದಯಕ್ಕೆ ಪೆಟ್ಟು ತಗಲಿತು. ಆದರೆ ಅವಳು ಇಂತಹ ಆಘಾತವನ್ನು ಸಹಿಸಲು ಮೊದಲಿನಿಂದಲೂ ತನ್ನ ಮನಸ್ಸನ್ನು ಗಟ್ಟಿ ಮಾಡಿದ್ದಳು. ಆಕೆಯು ಭೈರವಿಯನ್ನು ಕೇಳಿದಳು. “ ಹಾಗಾದರೆ ತಾಯಿ, ಪರಿ ಣಾಮವು ಹೇಗಾಗುವುದು ? ” ” « ಹೇಗಾಗುವುದೆಂಬುದನ್ನು ನಾನೂ ಹೇಳಲಾರೆನು. ಆದರೆ ನಿಮ್ಮಿಬ್ಬರ ಮೇಲನ ದಿಂದ ಆವುದೋ ಒಂದು ಅಶುಭವು ಸಂಘಟಿಸುವುದರಲ್ಲಿ ಸಂದೇಹವಿಲ್ಲ !” ಲಲಿತೆಯು ಒಂದು ದೀರ್ಘನಿಶ್ವಾಸವನ್ನು ಬಿಟ್ಟಳು. ಕೆಲಹೊತ್ತಿನವರೆಗೆ ಅವರಿ ಬ್ಬರೂ ತಮ್ಮ ತಮ್ಮ ವಿಚಾರದಲ್ಲಿ ಮಗ್ನರಾಗಿದ್ದರು. ಅನಂತರ ರಾಜಕನ್ಯಯು ಮಾತ ನಾಡಿದಳು, « ತಾಯಿ, ತಮಗೆ ಇನ್ನೂ ಏನಾದರೂ ಹೆಚ್ಚಾಗಿ ತಿಳಿದುಬಂದಿತೋ? ” ಪ್ರೇಮಮಂದಿರ, GL
- 44 + + Y•
(( ಹೌದು. ಇನ್ನೂ ಒಂದು ಸಂಗತಿಯು ತಿಳಿದಿದೆ. ಮತ್ತು ಅದು ನಿನಗೆ ಆನಂದ ಕಾರಕವಾಗಿಯೇ ಇದೆ. " «« ಅದಾವುದು? ” ಲಲಿತೆಯು ಉತ್ಕಂಠಯಿಂದ ಕೇಳಿದಳು «« ಕರುಣಸಿಂಹನಿಗೂ ನಿನಗೂ ಮೀಲನವುಂಟಾಯಿತೆಂದರೆ, ನಿಮ್ಮಬ್ಬರಿಗೂ ವಿಯೋಗವಾಗುವುದೇ ಇಲ್ಲ. ವೈಧವ್ಯಯೋಗವು ನಿನ್ನ ಹಣೆಯಲ್ಲಿಲ್ಲ ! ” ಭೈರವಿಯ ಈ ಆಶ್ವಾಸನದಿಂದ ಲಲಿತೆಯು ಆ ಎರಡನೆಯ ಭವಿಷ್ಯವನ್ನು ಮರೆತೇ ಬಿಟ್ಟಳು. ಆಕೆಯ ಆನಂದವು ಆಕಾಶದಲ್ಲಿ ಹಿಡಿಸದಾಯಿತು ! ಭೈರವಿಯ ಚರಣಗಳಿಗೆ ವಂದನೆಮಾಡಿ ಲಲಿತೆಯು ತನ್ನ ಮಂದಿರದ ಕಡೆಗೆ ತೆರಳಿದಳು. ಆಕೆಯ ಹೃದಯದಲ್ಲಿ ಭಿನ್ನ ಭಿನ್ನ ವೃತ್ತಿಗಳು ಕಲ್ಲೋಲವನ್ನುಂಟುಮಾಡಹತ್ತಿದ್ದುವು. ಚಂದ್ರಚೂಡನು ಹೇಳಿದ ಭವಿಷ್ಯವೂ ಭೈರವಿಯ ಭವಿಷ್ಯವೂ ಪರಸ್ಪರ ವಿಸದೃಶವಾಗಿರುವುದನ್ನು ತಿಳಿದು ಜ್ಯೋತಿಷ್ಯದ ಮೇಲಿದ್ದ ಅವಳ ವಿಶ್ವಾಸವೇ ಹಾರಿಹೋಯಿತು. ಅದರ ಕಡೆಗೆ ಲಕ್ಷವನ್ನೇ ಕೊಡದೆ ತನಗೆ ಯೋಗ್ಯವೆನಿಸಿದ ಮಾರ್ಗದಿಂದ ನಡೆಯುವುದೇ ಜಾಣತನ ವೆಂದು ಆಕೆಯು ಮನವರಿಕೆ ಮಾಡಿಕೊಂಡಳು. ಆರನೆಯ ಪರಿಚ್ಛೇದ
- 4 ,
ಪರಿಚಯ! ರಾತ್ರಿಯ ಎರಡನೆಯ ಪ್ರಹರವು ಮೀರಿಹೋಗಿತ್ತು. ಕೃಷ್ಣ ಪಕ್ಷದ ರಾತ್ರಿಯಾದುದ ರಿಂದ ನಾಲ್ಕೂ ಕಡೆಯಲ್ಲಿಯೂ ಸೂಚಿಭೇದ್ಯವಾದ ಅಂಧಕಾರವು ಪಸರಿಸಿತ್ತು. ನಿಬಿಡ ವಾದ ವನಪ್ರದೇಶದೊಳಗಿನ ಕಾಲ್ದಾರಿಯಲ್ಲಂತೂ ಒಂದೆರಡು ಮೊಳ ದೂರದಲ್ಲಿರುವ ಪದಾರ್ಥವು ಕೂಡ ಕಾಣಿಸುತ್ತಿಲ್ಲ! ಗಿಡಗಳ ತುದಿಯಲ್ಲಿರುವ ದಟ್ಟತ್ತಾದ ಚಿಗುರೆಲೆ ಗಳ ಮೇಲಿನ ಕತ್ತಲೆಗಿಂತಲೂ ಅವುಗಳ ಕೆಳಗಿನ ಕೊಂಬೆಗಳ ಮೇಲಿನ ಕತ್ತಲೆಯು ಹೆಚ್ಚಾಗಿಯೂ, ಆ ಕೊಂಬೆಗಳಿಗಿಂತ ಇನ್ನೂ ಕೆಳಗಿರುವ ಶಾಖೆಗಳ ಮೇಲೆ ಅದಕ್ಕೂ ಹೆಚ್ಚಾಗಿಯೂ ಇತ್ತು. ಹೀಗೆ ಅಂಧಕಾರವು ಭೂತಲದ ಮೇಲೆ ಅತ್ಯಂತ ಸಾಂದ್ರವಾಗಿ ಪಸರಿಸಿತ್ತು. ಗಿಡಗಳ ಬುಡದಲ್ಲಿದ್ದ ದೂರ್ವಾಂಕುರ ಮತ್ತು ಒಣಗಿದ ತರಗಲೆಗಳ ನಿಜಸ್ವರೂಪವು ಕತ್ತಲೆಯ ಪ್ರಭಾವದಿಂದ ಲುಪ್ತವಾಗಿ ಸರ್ವವೂ ಅಂಧಕಾರಮಯ ವಾಗಿತ್ತು ! ಸಮಗ್ರವಾದ ವನಭೂಮಿಯು ಶಾಂತವಾಗಿತ್ತು. ಎಲ್ಲೆಡೆಯಲ್ಲಿಯೂ ನಿಸ್ತಬ್ದ ತೆಯು ತುಂಬಿತ್ತು. ವನಪ್ರದೇಶದಲ್ಲಿ ಭುಜಕ್ಕೆ ಭುಜವನ್ನು ಅನಿಸಿ ಮಿತ್ರರಂತೆ ಅನ್ನೋನ್ಯ ವಾಗೂ ಷಣ
ಸಹಾಯಾರ್ಥವಾಗಿ ನಿಂತುಕೊಂಡಿರುವ ಅಶ್ವತ್ಥ, ಶಾಲ, ತಮಾಲ ಮೊದಲಾದ ವೃಕ್ಷ ಗಳ ಪರ್ಣಸಮೂಹವು ಗಾಳಿಯ ಅಲೆಪದಿಂದ ಒಂದುತರದ ಶಬ್ದವನ್ನು ಮಾಡುತ್ತಿ ದ್ದುವು; ಅದರಿಂದ ಆ ವಿರಾಟ್‌ಶಾಂತತೆಯು ಅಲ್ಪಮಟ್ಟಿಗೆ ಭಂಗವನ್ನು ಹೊಂದುತ್ತಿತ್ತು? ಆದರೆ ಅದು ಒಂದು ನಿಮಿಷ ಮಾತ್ರ! ಶಾಂತತೆ ಮತ್ತು ಕತ್ತಲೆಗಳ ಸಾಮ್ರಾಜ್ಯವು ಮೇಲೆ ಹೇಳಿದಂತೆ ಎಲ್ಲೆಡೆಯಲ್ಲಿ ಯೂ ಪಸರಿಸಿತು. ಆದರೆ ಆ ಸಾಮ್ರಾಜ್ಯಗಳೆರಡೂ ಏಕತಂತ್ರಿಗಳಲ್ಲ. ಆಕಾಶದಲ್ಲಿ ಮಿನುಗುತ್ತಿರುವ ತಾರಕೆಗಳ ಅಲ್ಪಪ್ರಕಾಶವೂ, ವೃಕ್ಷಶಾಖೆಗಳಲ್ಲಿ ಪುಂಜಗಳನ್ನು ಕಟ್ಟಿ ಕೊಂಡು ವಾಸಮಾಡುತ್ತಲಿದ್ದ ಹೊನ್ನೆಯ ಹುಳದ ಕ್ಷುದ್ರವಾದ ಬೆಳಕೂ ಅಂಧಕಾರದ ಸಾಮ್ರಾಜ್ಯಕ್ಕೆ ಪ್ರತಿರೋಧಿಗಳಾಗಿ ಬಂಡಾಯವೆನ್ನೆಬ್ಬಿಸುತ್ತಿದ್ದುವು! ಅದರಂತೆಯೇ ಶಾಂತತೆಯ ಸಾಮ್ರಾಜ್ಯದ ಪ್ರತಿಸ್ಪರ್ಧಿಗಳೂ ಕೆಲವರಿದ್ದರು. ಗಗನಚುಂಬಿತವಾದ ವೃಕ್ಷರಾಜಿಯ ಸಾಂದ್ರವಾದ ಪಲ್ಲವಗಳನ್ನು ಆಶ್ರಯಸಿಕೊಂಡಿದ್ದ ಒಂದಾನೊಂದು ನಿಶಾ ಚರ ಪಕ್ಷಿಯು ನಡುನಡುವೆ ಕರ್ಕಶವಾದ ಧ್ವನಿಯಿಂದ ಕೂಗುತ್ತ ಆ ವಿರಾಟ್ ಶಾಂತತೆ ಯನ್ನು ಕಿಂಚಿದ್ಭಂಗಗೊಳಿಸುತ್ತಿತ್ತು! ಇಂತಹ ಗಭೀರವಾದ ರಾತ್ರಿಯಲ್ಲಿ ಶಾಂತವೂ ನಿಸ್ತಬ್ದವೂ ಆದ ಆ ವನದೊಳ ಗಿನ ಒಂದು ಕಾಲ್ದಾರಿಯಿಂದ ಒಬ್ಬ ತರುಣನು ಅತಿ ಕಷ್ಟದಿಂದ ತನ್ನ ಕುದುರೆಯನ್ನು ನಡೆಯಿಸುತ್ತ ಮಾರ್ಗವನ್ನು ಕ್ರಮಿಸುತ್ತಿದ್ದನು. ಅಂಧಕಾರವು ಅತಿಶಯವಾಗಿದ್ದುದ ರಿಂದ ನಡುನಡುವೆ ಆತನಿಗೆ ಬಹಳೇ ವಿಘ್ನ ವಾಗುತ್ತಿತ್ತು. ಒಂದೆರಡು ಮೊಳಗಳ ದೂರ ದಲ್ಲಿ ಕೂಡ ಏನಿದೆಯೆಂಬುದು ಆತನಿಗೆ ಕಾಣುತ್ತಿದ್ದಿಲ್ಲ! ಹಗಲಿನಲ್ಲಿ ಕಟ್ಟಿಗೆಯನ್ನು ಕಡಿಯುವುದಕ್ಕೆ ಬರುವ ಜನರ ತುಳಿದಾಟದಿಂದ ಉತ್ಪನ್ನವಾದ ಆ ಹಾದಿಯು ಅತ್ಯಂತ ವಕ್ರವಾಗಿತ್ತು; ಪ್ರತಿಕ್ಷಣಕ್ಕೂ ಒಂದಿಲ್ಲೊಂದು ಕಡೆಗೆ ಹೊರಳಬೇಕಾಗುತ್ತಿತ್ತು. ಆದು ದರಿಂದ ಆ ಕುದುರೆಯು ಮಾರ್ಗವನ್ನು ಕ್ರಮಿಸುವುದಕ್ಕೆ ಹೆಜ್ಜೆ ಹೆಜ್ಜೆಗೂ ಸಂದೇಹ ಬಡುತ್ತಿತ್ತು. ಆ ವನಮಾರ್ಗದ ಪರಿಚಯವು ಆ ತರುಣನಿಗೆ ಸ್ವಲ್ಪಮಟ್ಟಿಗೆ ಇದ್ದುದ ರಿಂದ ಅವನು ಇಷ್ಟಾದರೂ ವಾರ್ಗಕ್ರಮಣ ಮಾಡುತ್ತಿದ್ದನು. ಅದರಲ್ಲಿಯೂ ಆತನು ಅತ್ಯಂತ ಶೂರನಾಗಿದ್ದುದರಿಂದ ಇಂತಹ ಭಯಂಕರವಾದ ರಾತ್ರಿಯಲ್ಲಿ ಒಬ್ಬನೇ ಈ ಅರಣ್ಯದಲ್ಲಿ ಪ್ರವಾಸಮಾಡುತ್ತಿದ್ದನು. ಇನ್ನಾರಾದರೂ ಆಗಿದ್ದರೆ ಭಯಭೀತರಾಗಿ ಪ್ರಾಣವನ್ನೇ ಬಿಡುತ್ತಿದ್ದರು ! ಆತನ ಕುದುರೆಯು ಎಡವುತ್ತಲೂ ಮುಗ್ಗರಿಸುತ್ತಲೂ ನಡೆಯುತ್ತಿತ್ತು, ಆದರೆ ಅದು ಎಲ್ಲಿಯೂ ನಿಂತುಕೊಳ್ಳುತ್ತಿದ್ದಿಲ್ಲ. ಆದರೆ ಹೋಗ ಹೋಗುತ್ತ ಈಗ ಮಾತ್ರ ಒಂದು ಸ್ಥಳದಲ್ಲಿ ನಿಂತುಕೊಂಡಿತು. ಏನು ಮಾಡಿದರೂ ಅದು ಮುಂದಕ್ಕೆ ಹೆಜ್ಜೆಯನ್ನು ಇಡಲಿಲ್ಲ! ಆ ತರುಣನು ಸವಿಮಾತಿನಿಂದಲೂ, ಸಂಜ್ಞಾ ಶಬ್ದಗಳಿಂದೂ ಅದನ್ನು ಸಮುತ್ತೇಜಿಸಿದನು; ಆತನ ಯಾವ ಪ್ರಯತ್ನವೂ ಸಫಲವಾಗ ಪ್ರೇಮಮಂದಿರ. L - - - - - - - -•••rrrrr+MMM: ( . ممرمرم به ಲಿಲ್ಲ. ಆ ಕುದುರೆಯು ಇಂದಿನವರೆಗೆ ಎಷ್ಟೋ ಪ್ರಸಂಗಗಳಲ್ಲಿ ತನ್ನ ಯಜಮಾನನ ವಿಜಯಕ್ಕೆ ಕಾರಣೀಭೂತವಾಗಿತ್ತು. ಆದರೆ ಇಂದಿನಂತೆ ಅದು ಹೇಡಿತನವನ್ನೆಂದೂ ತೋರ್ಪಡಿಸಿದ್ದಿಲ್ಲ! ಆದುದರಿಂದ ಅಲ್ಲಿ ಏನಾದರೂ ವಿಶೇಷವಿರಲಿಕ್ಕೆ ಬೇಕೆಂದು ತಿಳಿದು ಆ ತರು ಣನು ಚಟ್ಟನೆ ಕುದುರೆಯ ಮೇಲಿಂದ ಇಳಿದನು; ಮತ್ತು ಕುದುರೆಯ ಕಡಿವಾಣವನ್ನು ಕೈಯಲ್ಲಿ ಹಿಡಿದು ನಾಲ್ಕೂ ಕಡೆಗೆ ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸುತ್ತ ಒಂದೊಂದೇ ಹೆಜ್ಜೆಯನ್ನು ನಡೆಯಹತ್ತಿದನು. ಆತನ ಊಹೆಯು ನಿಜವಾಗಿಯೇ ಇತ್ತು. ಕೆಲವು ಹೆಜ್ಜೆಗಳನ್ನು ನಡೆದುಹೋದ ಬಳಿಕ ಎದುರಿನ ಒಂದು ಗಿಡದ ಬುಡದಲ್ಲಿ ಅಸ್ಪಷ್ಟವಾ ದೊಂದು ಮೂರ್ತಿಯ ಛಾಯೆಯು ಆತನಿಗೆ ಗೋಚರವಾಯಿತು ! - ನಮ್ಮ ತರುಣನು ಈ ಪ್ರಸಂಗದಲ್ಲಿ ಸ್ವಲ್ಪಾದರೂ ಭಯಪಡಲಿಲ್ಲ. ಕೈಯೊಳಗಿನ ದೀರ್ಘವಾದ ಭಾಲೆಯನ್ನು ಗಟ್ಟಿಯಾಗಿ ಹಿಡಿದು ಧೀರಸ್ವರದಿಂದ ಆತನು ಅಂಧಕಾರ ವೇಷ್ಟಿತವಾದ ಆ ಮೂರ್ತಿಯನ್ನು ಕೇಳಿದನು. ( ಅಲ್ಲಿ ನಿಂತುಕೊಂಡಿರುವವರು ಯಾರು ? ” ಆ ವ್ಯಕ್ತಿಯು ಮಾತಾಡಲಿಲ್ಲ; ಆದರೆ ಮೊಳನೊಳನೆ ನಗಹತ್ತಿತು! ನಮ್ಮ ತರುಣವೀರನು ಚಕಿತನಾದನು ! ಮತ್ತೆ ಆತನು ರೇಗಿನಿಂದ ಮಾತನಾಡಿ ದನು. “ ಯಾರೆಂಬುದನ್ನು ಹೇಳು, ಇಲ್ಲದಿದ್ದರೆ ಪ್ರಾಣಕ್ಕೆ ಎರವಾಗುವೆ. ” ಆ ಮೂರ್ತಿಯು ಎರಡು ಹೆಜ್ಜೆ ಮುಂದಕ್ಕೆ ಬಂದು ತರುಣವೀರನ ಮುಂದೆ ನಿಂತುಕೊಂಡು ಮಾತನಾಡಿತು. ( ಕುಮಾರನಿಗೆ ಜಯಜಯಕಾರವಿರಲಿ! ಮಹಾರಾಜ ರಿಗೆ ಇನ್ನೂ ವರೆಗೆ ನನ್ನ ಗುರುತು ಹತ್ತಲೇ ಇಲ್ಲವೆಂಬಂತೆ ತೋರುತ್ತದೆ!” ಕಂಠಸ್ವರದ ಮೇಲಿಂದ ತರುಣನಿಗೆ ಆ ಮೂರ್ತಿಯ ಪರಿಚಯವುಂಟಾಯಿತು. ಆತನ ಎದುರಿನಲ್ಲಿ ನಿಂತುಕೊಂಡಿದ್ದ ವ್ಯಕ್ತಿಯು ಇನ್ನಾರೂ ಆಗಿರದೆ ಆತನ ವಿಶ್ವಾಸ ಪಾತ್ರ ಸಹಚರನಾದ ಸಮರಸಿಂಹನಾಗಿದ್ದನು ! ಕಿಂಚಿದ್ದ ಂಭೀರಸ್ವರದಿಂದ ಕುಮಾರನು ಆತನಿಗೆ ಪ್ರಶ್ನೆ ಮಾಡಿದನು. (( ಸಮರಾ ನಿನಗೆ ಇಷ್ಟೇಕೆ ತಡವಾಯಿತು ? ನಿಯಮಿತಸ್ಥಾನದಲ್ಲಿ ಎಷ್ಟೋ ಹೊತ್ತಿನವರೆಗೆ ನಾನು ನಿನ್ನ ದಾರಿಯನ್ನು ನೋಡಿ ನೋಡಿ ಬೇಸತ್ತನು; ಮತ್ತು ಹಾಗೆಯೇ ತಿರುಗಬೇಕೆಂದೂ ಯೋಚಿಸಿದ್ದೆನು; ನಿನ್ನ ಪ್ರಯತ್ನಗಳೆಲ್ಲವೂ ನಿಷ್ಪಲವಾದುವೆಂದೇ ನಾನು ಭಾವಿಸಿದೆನು. ” ಸಮರಸಿಂಹನು ನಮ್ರತೆಯಿಂದ ಕುಮಾರನಿಗೆ ಪ್ರಣಾಮಮಾಡಿ ಮಾತನಾಡಿದನು. «ತಮ್ಮ ಆಶೀರ್ವಾದದಿಂದ ಕೈಕೊಂಡ ಕಾರ್ಯದಲ್ಲಿ ನನಗೆ ಯಶಸ್ಸು ಪ್ರಾಪ್ತವಾ ಯಿತು; ಆದರೆ ನನಗೆ ಕಷ್ಟಗಳು ಮಾತ್ರ ಬಹಳ ಪ್ರಾಪ್ತವಾದುವು! ೨೨ ವಾಗ್ಯೂಷಣ.
- * * * *
ಆತನ ಬೆನ್ನನ್ನು ಚಪ್ಪರಿಸುತ್ತ ಕುಮಾರನು ಮಾತನಾಡಿದನು. (( ಶಾಬಾಸ ಶಾಬಾಸ - ಸಮರಾ! ನಡೆ ಇನ್ನು, ಸಂಕಟವನ್ನು ಭುಜದ್ವಯದಿಂದ ಆಲಿಂಗಿಸಲು ನಾವು ಸಿದ್ದರೇ ಇದ್ದೇವೆ. ಇನ್ನು ಮೇಲೆ ಸ್ವಲ್ಪಾದರೂ ಹಿಂದೆಸರಿಯುವ ಹಾಗಿಲ್ಲ. ” « ಇಂದೇ ತಾವು ಆ ಕೆಲಸವನ್ನು ಕೈಕೊಳ್ಳುವಿರಾ? ” ( ಹೌದು ಇಂದೇ; ಈ ರಾತ್ರಿಯಲ್ಲಿಯೇ; ಈ ಕ್ಷಣದಲ್ಲಿಯೇ ? ?ಉತ್ತೇಜಿತ ಸ್ವರದಿಂದ ಕುಮಾರನು ಮಾತನಾಡಿದನು. ( ಹಾಗಾದರೆ ದೊರೆಗಳೇ, ನನ್ನದೊಂದು ವಿನಂತಿಯನ್ನು ಕೇಳಿರಿ. ತಮ್ಮ ಕುದು ರೆಯನ್ನು ಇಲ್ಲಿಯೇ ಕಟ್ಟಿ ನೀವು ಮುಂದಕ್ಕೆ ಹೋಗಿರಿ. ನಾವೀಗ ದುರ್ಗಕ್ಕೆ ತೀರ ಸಮೀಪದಲ್ಲಿಯೇ ಇದ್ದೇವೆ. ” ( ಹೌದು-ಸಮರಾ! ನೀನನ್ನುವುದು ನಿಜ. ಆದರೆ ಅಜಯನನ್ನು ಎಲ್ಲಿ ಕಟ್ಟಿ ಬೇಕು? ೨೨
- ಸಮೀಪದಲ್ಲಿರುವ ಆ ಗಿಡಕ್ಕೆ ನಾನು ಅದನ್ನು ಕಟ್ಟುತ್ತೇನೆ. ಹಿಂದಿರುಗಿ ಬರು ವಾಗ ನಾನು ಅದನ್ನು ತೆಗೆದುಕೊಂಡು ಹೋಗುವೆನು. ”
« ಒಳ್ಳೇದು. ನಿನ್ನ ಮನಸ್ಸಿಗೆ ಬಂದಂತೆಯೇ ಮಾಡು. ಆದರೆ ಈ ಭಾಲೆಯನ್ನೂ ಖಡ್ಗವನ್ನೂ ಯುದ್ಧವೇಷವನ್ನೂ ತೆಗೆದುಕೊಂಡು ಏನು ಮಾಡಬೇಕು ? ” ಆ ಸೂಚಿಭೇದ್ಯ ಅಂಧಕಾರದಲ್ಲಿಯೂ ಕೂಡ ಪದಾರ್ಥವನ್ನಾಗಲಿ ವ್ಯಕ್ತಿಯನ್ನಾ ಗಲಿ ಸ್ಪಷ್ಟವಾಗಿ ಕಂಡುಕೊಳ್ಳುವ ಅದ್ಭುತ ಸಾಮರ್ಥ್ಯವು ಯಾರಿಗಿರುವದೋ ಅಂತ ಹರಿಗೆ ಈ ಸಮಯದಲ್ಲಿ ಸಮರಸಿಂಹನ* ಮುಖಮುದ್ರೆಯ ಮೇಲೆ ಹಾಸ್ಯರೇಷೆಯು ಅಂಕಿತವಾಗಿದ್ದುದು ಸ್ಪಟವಾಗಿ ಕಂಡುಬರುತ್ತಿತ್ತು. ಸಮರಸಿಂಹನು ಸಗನಗುತ್ತ ತನ್ನ ಲ್ಲಿಯೇ ಮಾತಾಡಿಕೊಂಡನು. ( ಇದೇನು ನಮ್ಮ ಒಡೆಯರ ಸ್ವಭಾವವೋ ಏನೋ ! ತಾವು ಪ್ರಣಯಿನಿಯ ಸಂದರ್ಶನಕ್ಕೆ ಹೊರಟಿರುವುದರಿಂದ ಭಾಲೆಖಡ್ಡಗಳ ಅವಶ್ಯಕತೆ ಯಿಲ್ಲವೆಂದು ಅವರು ತಿಳಿಯುತ್ತಾರೆ! ” 'ಆಮೇಲೆ ಸಮರಸಿಂಹನು ಕುಮಾರನನ್ನುದ್ದೇಶಿಸಿ ಮಾತನಾಡಿದನು. ( ಭಾಲೆಯು ಅಷ್ಟೊಂದು ಆವಶ್ಯಕವಿಲ್ಲವೆಂದು ತಿಳಿಯುತ್ತಿದ್ದರೆ ಅದನ್ನು ಇಲ್ಲಿಯೇ ಇಟ್ಟು ಹೋಗಿ, ಆದರೆ ಯಾವ ವೇಷದಿಂದ ನೀವು ಇಲ್ಲಿಯವರೆಗೆ ಬಂದಿರುವಿರೋ ಅದೇ ವೇಷದಿಂದಲೇ ಮುಂದೆ ನಡೆಯಿರಿ ಮತ್ತು ಖಡ್ಗವನ್ನು ಅವಶ್ಯವಾಗಿಯೂ ಸಂಗಡ ತಗೆದುಕೊಳ್ಳಿರಿ. ಒಡೆಯರೇ, ತಾವು ಪ್ರಿಯೆಯ ಸಂದರ್ಶನಕ್ಕೆ ಹೋಗುವುದೇನೋ ನಿಜ; ಆದರೆ ಶತ್ರು ಗಳ ದುರ್ಗವನ್ನು ಪ್ರವೇಶಿಸುತ್ತೀರೆಂಬುದನ್ನು ಮಾತ್ರ ಮರೆಯಬೇಡಿರಿ, ಪ್ರೇಮಮಂದಿರ. ೪ WwwwY ಹೀಗೆಂದು ಸಮರಸಿಂಹನು ಅಜಯನನ್ನು ಹಿಡಿದುಕೊಂಡು ಹೋಗಿ ಒಂದು ಗಿಡಕ್ಕೆ ಕಟ್ಟಿಹಾಕಿದನು. ಮತ್ತು ಭಾಲೆಯನ್ನು ಅದೇ ಗಿಡದ ಕೊಂಬೆಯಲ್ಲಿ ಭದ್ರ ವಾಗಿಟ್ಟು ಕುಮಾರನಿಗೆ ದಾರಿಯನ್ನು ತೋರಿಸುವುದಕ್ಕಾಗಿ ಅವನ ಮುಂದೆ ಮುಂದೆ ಹೊರಟನು. ಕೆಲವು ಹೊತ್ತಿನವರೆಗೆ ಅವರಿಬ್ಬರೂ ಏನೂ ಮಾತನಾಡದೆ ಮೌನವಾ ಗಿಯೇ ನಡೆಯುತ್ತಲಿದ್ದರು. ಅಲ್ಪಾವಧಿಯಲ್ಲಿಯೇ ಅವರು ಒಂದು ಸಂಕೇತಸ್ಥಳಕ್ಕೆ ಬಂದು ಮುಟ್ಟಿದರು. ಆ ನಿಬಿಡವಾದ ವನದ ಸಮೀಪದಲ್ಲಿಯೇ ಒಂದು ಬೆಟ್ಟವಿತ್ತು. ಆ ಬೆಟ್ಟದ ಮೇಲಿಂದ ಒಂದು ಚಿಕ್ಕ ಹೊಳೆಯು ಹರಿಯುತ್ತಿತ್ತು. ಇದೇ ನದಿಯು ಮುಂದೆ ಮುಕ್ತಾ ವಲಿಗೆ ಕೂಡಿ ಅನಂತರ ದುರ್ಗವನ್ನು ಪರಿವೇಷ್ಟಿಸಿತ್ತು. ಸಮರಸಿಂಹನು ಅತ್ಯಂತ ಕಷ್ಟದಿಂದ ಮಾರ್ಗವನ್ನು ಪರಿಶೋಧಿಸಿ ಕುಮಾರನನ್ನು ಆ ಕ್ಷುದ್ರವಾದ ಗಿರಿನದಿಯ ಆಚೆಯ ದಡವನ್ನು ಮುಟ್ಟಿಸಿದನು. ನದಿಯ ಆಚೆಯ ತೀರಕ್ಕೆ ಬಂದಮೇಲೆ ಮುಂದಕ್ಕೆ ಹೋಗುತ್ತಲೇ ಕರುಣ ಸಿಂಹನು ತನ್ನ ಅನುಚರನನ್ನು ಕುರಿತು ಮಾತನಾಡಿದನು. ' ಸಮರಾ ! ಗೊತ್ತಾದ ವೇಳೆಯಲ್ಲಿ ನಾವು ದುರ್ಗವನ್ನು ಮುಟ್ಟುವುದಿಲ್ಲವೆಂಬಂತೆ ತೋರುತ್ತದೆ. ಹಾಗೆ ಒಂದು ವೇಳೆ ಸರಿಯಾದ ಹೊತ್ತಿಗೆ ಮುಟ್ಟದೆ ಹೋದರೆ ಅತ್ಯಂತ ಕೌಶಲ್ಯದಿಂದಲೂ ಪರಿಶ್ರಮ ದಿಂದಲೂ ನನಗೋಸ್ಕರ ನೀನು ಮಾಡಿಟ್ಟ ಸಿದ್ದತೆಯು ವ್ಯರ್ಥವಾಗುತ್ತದೆ ! ಸಮರಾ ! ನಿನ್ನ ಆ ಮಿತ್ರನ ಪಹರೆಯ ಕಾಲವು ಈಗ ಮುಗಿದು ಹೋಗಿರಬ ಹುದಲ್ಲವೇ ? ೨೨ ಸಮರಸಿಂಹನು ಕುಮಾರನಿಗೆ ಉತ್ತರವನ್ನೇ ಕೊಡಲಿಲ್ಲ. ಅವನು ಹಾಗೆಯೇ ಮುಂದಕ್ಕೆ ನಡೆಯುತ್ತಿದ್ದನು. ಕುಮಾರನ ಲಕ್ಷವಾದರೂ ಬೇರೆ ಕಡೆಗೆ ತೊಡಗಿದ್ದು ದರಿಂದ ಆತನು ಮತ್ತೆ ಪ್ರಶ್ನೆ ಮಾಡಲಿಲ್ಲ. ಮೌನವಾಗಿಯೇ ಸಮರಸಿಂಹನ ಹಿಂದಿಂದೆ ನಡೆಯಹತ್ತಿದರು. ಕೆಲಕಾಲದ ಅನಂತರ ಅವರಿಬ್ಬರು ಎತ್ತರವಾದ ತಟದಿಂದ ಪರಿವೇ ಮಿತವಾದ ಆ ದುರ್ಗದ ಒಂದು ಗುಪ್ತದ್ವಾರದ ಹತ್ತಿರ ಬಂದರು. ಸಮರನು ತನ್ನ ಕೈಬೆರಳುಗಳಿಂದ ಮೆಲ್ಲನೆ ಆ ಬಾಗಿಲದ ಮೇಲೆ ಹೊಡೆದನು. ಅದೇ ರೀತಿಯಾಗಿ ಒಳ ಗಿನಿಂದ ಅವನಿಗೆ ಉತ್ತರವು ದೊರೆಯಿತು. ಸಮರನು ಪುನಃ ಬಾಗಿಲದ ಮೇಲೆ ಆಘಾತ 'ವನ್ನು ಮಾಡಿದ ಬಳಿಕ ಅದು ತೆರೆಯಲ್ಪಟ್ಟಿತು. ಯಾವನೋ ಒಬ್ಬನು ಮೆಲ್ಲನೆ ಮಾತನಾಡಿದನು. 14 ಬನ್ನಿ, ಬೇಗನೇ ನಡೆಯಿರಿ, » - ಸಮರಸಿಂಹನು ಕುಮಾರನನ್ನು ಕುರಿತು ಮಾತನಾಡಿದನು. “ ದೊರೆಗಳೇ, ತಾವು ಒಳಗೆ ನಡೆಯಿರಿ. ಆದರೆ ವಿಪರೀತವಾದ ಧೈರ್ಯದ ಸಾಹಸವನ್ನು ಮಾತ್ರ ಮಾಡಬೇಡಿರಿ, ಈ ಪಹರೆಯವನೇ ನಿಮಗೆ ದುರ್ಗದಲ್ಲಿ ದಾರಿಯನ್ನು ತೋರಿಸುವನು ೪೨ ವಾಗ್ಯೂಷಣ. hr in his p ೧೧ , - - - -
- * * * * * * * * * * *
ಒಳ್ಳೆ ಜಾಗರೂಕರಾಗಿ ಈ ಪ್ರಸಂಗದಲ್ಲಿ ನಡೆದುಕೊಳ್ಳಬೇಕೆಂದು ತಮಗೆ ನಾನೇನು ಹೇಳಬೇಕೆಂಬಂತಿಲ್ಲ ! 22 ಕರುಣಸಿಂಹನು ಒಂದು ಕ್ಷಣಕಾಲ ವಿಚಾರಮಾಡುತ್ತ ಅಲ್ಲಿಯೇ ನಿಂತುಕೊಂಡನು. ಆ ಮೇಲೆ ಸಮರಸಿಂಹನ ಕಿವಿಯಲ್ಲಿ ಆತನು ಹೀಗೆ ಹೇಳಿದನು. “ ಸಮರಾ, ನೀನಿನ್ನು ಹೊರಡು. ಹೋಗುವಾಗ ಅಜಯನನ್ನು ಶಿಬಿರಕ್ಕೆ ಹಿಡಿದುಕೊಂಡು ಹೋಗು. ಹೋದ ಕೂಡಲೆ ನೂರು ದಂಡಾಳುಗಳನ್ನು ನನ್ನ ಕಡೆಗೆ ಕಳಿಸಿಕೊಡಬೇಕೆಂದು ದಳಪತಿಗೆ ತಿಳಿಸು. ನೀವು ಬೆಳಗಾಗುವುದರೊಳಗಾಗಿಯೇ ಇಲ್ಲಿಗೆ ಬಂದು ಮುಟ್ಟುವ ಹಾಗೆ ಮಾಡಿರಿ. ಸಮೀಪದ ವನಪ್ರದೇಶದಲ್ಲಿ ಸವಾರರು ಅಡಗಿಕೊಂಡು ನಿಲ್ಲುವಂತೆ ವ್ಯವಸ್ಥೆ ಮಾಡೆಂದು ಸೇನಾಪತಿಗೆ ನನ್ನ ನಿರೋಪವನ್ನು ಹೇಳು. ನೀನಿನ್ನು ಹೊರಡು. ನನ್ನ ವಿಷಯಕ್ಕೆ ಯಾವತರದ ಚಿಂತೆಯನ್ನೂ ಮಾಡಬೇಡ. ” ಸಮರಸಿಂಹನು ಕುಮಾರನಿಗೆ ಪ್ರಣಾಮ ಮಾಡಿ ಮಾತನಾಡಿದನು. * ತಮ್ಮ ಅಪ್ಪಣೆಯಂತೆ ಎಲ್ಲವನ್ನೂ ಮಾಡುತ್ತೇನೆ. ತಾವು ಮಾತ್ರ ಇನ್ನು ವಿಲಂಬ ಮಾಡಬೇಡರಿ.” ಸ್ನೇಹಭರದಿಂದ ಒಮ್ಮೆ ಸಮರನನ್ನು ನೋಡಿ ಕುಮಾರನು ದುರ್ಗವನ್ನು ಪ್ರವೇಶಿ ಸಿದನು. ತತ್‌ಕ್ಷಣದಲ್ಲಿಯೇ ಈಷತ್ತಾದರೂ ಸದ್ದಾಗದಂತೆ ಆ ಗುಪ್ತದ್ವಾರವು ಮುಚ್ಚ ಲ್ಪಟ್ಟಿತು. ಕರ್ಮಧರ್ಮಸಂಯೋಗವು ಎಷ್ಟೊಂದು ವಿಲಕ್ಷಣವಾಗಿರುತ್ತದೆ ನೋಡಿರಿ ! ಯಾವ ರಾತ್ರಿಯಲ್ಲಿ ಕುಮಾರ ಕರುಣಸಿಂಹನು ಗುಪ್ತವಾಗಿ ಶತ್ರುಗಳ ದುರ್ಗವನ್ನು ಪ್ರವೇಶಿಸಿದನೋ, ಅದೇ ರಾತ್ರಿಯಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನು ಸರತಾನ ಸಿಂಹನನ್ನೂ, ದುರ್ಜಯಸಿಂಹನನ್ನೂ ಸಂಗಡ ಕರೆದುಕೊಂಡು ದುರ್ಗದ ಕಡೆಗೆ ನಡೆ ದಿದ್ದನು. ದುರ್ಜಯಸಿಂಹನೊಡನೆ ಲಲಿತೆಯ ವಿವಾಹ ಮಾಡುವದು ನಿಶ್ಚಿತವಾಗಿ ಆ ಸಂಬಂಧದ ನಿಬಂಧನೆಗಳೆಲ್ಲವೂ ಗೊತ್ತು ಮಾಡಲ್ಪಟ್ಟಿದ್ದವು. ಭೀಮಸಿಂಹನು ಭಾವಿ ಚಾಮಾತೃವನ್ನೂ ಬೀಗನನ್ನೂ ಆಗ್ರಹದಿಂದ ತನ್ನ ಸಂಗಡಲೇ ಕರೆದುಕೊಂಡು ಬಂದಿದ್ದನು. ದುರ್ಗದ ಸಮೀಪದ ವನಪ್ರದೇಶದಲ್ಲಿ ಬಂದೊಡನೆಯೇ ಅಜಯನ ಹೇತವು ಅವರ ಕಿವಿಗೆ ಬಿತ್ತು. ಕೂಡಲೆ ಆ ಮೂವರ ಲಕ್ಷವು ಅತ್ತ ಕಡೆಗೇ ಹೋಯಿತು ದುರ್ಗದ ಸಮೀಪದಲ್ಲಿ ಇಂತಹ ರಾತ್ರಿಯಲ್ಲಿ ಸುಂದರವಾದ ಉತ್ತಮಾಶ್ವವು ಕಟ್ಟಲ್ಪಟ ರುವುದನ್ನು ನೋಡಿ ಭೀಮಸಿಂಹನ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರಗಳು ಹುಟ್ಟಿದುವು. ಇಂತಹ ವೇಳೆಯಲ್ಲಿ ಈ ಕುದುರೆಯನ್ನು ಇಲ್ಲಿ ಕಟ್ಟಲು ಕಾರಣವೇನು ? ಯಾರು ಕಟ್ಟಿರಬಹುದು ? ಎಂಬುದಾಗಿ ಎಷ್ಟು ಯೋಚಿಸಿದರೂ ದುರ್ಗಪತಿಗೆ ಯಾವುದೂ ಗೊತ್ತಾಗಲಿಲ್ಲ. ಭೀಮಸಿಂಹನಿಗೆ ಅನೇಕ ಶತ್ರುಗಳಿದ್ದು ಅವರು ಭೀಮಸಿಂಹನಿಗೆ ಅಹಿತ ಪ್ರೇಮಮಂದಿರ Y •••••••• • • • • ••••• > --- * • • • • • • • • • ••••••••••••••••• ವನ್ನೆಸಗಲು ಯಾವಾಗಲೂ ಸಮಯವನ್ನು ನಿರೀಕ್ಷಿಸುತ್ತಿದ್ದರು. ಆದುದರಿಂದ ತನ್ನ ಅಂಗ ಇಲ್ಲಿ ಯಾರಾದರೂ ಕಪಟ ಜಾಲವನ್ನು ಬೀರಿರುವರೋ ಎಂಬ ಶಂಕೆಯು ಭೀಮಸಿಂಹ ನಲ್ಲಿ ಉತ್ಪನ್ನವಾಯಿತು. ಭೀಮಸಿಂಹನು ಸರತಾನಸಿಂಹನನ್ನು ಕುರಿತು ಠಾಕುರರೇ, ಈ ಕುದುರೆಯು ಯಾರದಿರಬಹುದೆಂದು ನೀವು ತರ್ಕಿಸುತ್ತೀರಿ ? ” ಎಂದು ಕೇಳಿದನು. ಸರತಾನಸಿಂಹನೂ, ದುರ್ಜಯಸಿಂಹನೂ ಭೀಮಸಿಂಹನಂತೆಯೇ ಬೆರಗಾಗಿ ಹೋಗಿದ್ದರು. ಭೀಮಸಿಂಹನ ಪ್ರಶ್ನೆಗೆ ಅವರೇನು ಉತ್ತರವನ್ನು ಕೊಡಬೇಕು ? ( ಇದೊಳ್ಳೆ ಆಶ್ಚರ್ಯಕರವಾಗಿದೆ ! ” ಎಂದು ಸರತಾನಸಿಂಹನು ನುಡಿದನು. ಭೀಮಸಿಂಹನು ಗಂಭೀರಸ್ವರದಿಂದ ಮಾತನಾಡಿದನು. “ ಹೌದು. ನಿಜವಾ ಗಿಯೂ ಇದು ಅತ್ಯಂತ ಆಶ್ಚರ್ಯಕರ ! ಇಂತಹ ಕಾಲದಲ್ಲಿ ಇದನ್ನು ಇಲ್ಲಿ ಯಾರು ಕಟ್ಟಿರಬಹುದು ? >> ಇಷ್ಟರಲ್ಲಿ ಆ ನಿರ್ಜನ ವನ ಪ್ರದೇಶದಲ್ಲಿ ಕೋಮಲವಾದ ಹಾಸ್ಯಮಿಶ್ರಿತ ಕಂಠ ಧ್ವನಿಯೊಂದು ಹೊರಟಿತು. ಸಮೀಪದ ಗಿಡಗುಂಪಿನೊಳಗಿಂದ ಯಾರೋ ಮೆಲ್ಲನೆ ಮಾತನಾಡಿದರು. (( ನಾನು ನಿಮಗೆ ಎಲ್ಲವನ್ನೂ ಹೇಳುತ್ತೇನೆ. ೨ ಈ ಕಂಠಧ್ವನಿಯನ್ನು ಕೇಳಿ ಸರ್ವರೂ ಆಶ್ಚರ್ಯದಿಂದ ಸ್ತಂಭಿತರಾದರು. ಯಾವ ಗಿಡಗುಂಪಿನೊಳಗಿಂದ ಆ ಧ್ವನಿಯು ಹೊರಟಿತೋ, ಅತ್ತಕಡೆಗೆ ಎಲ್ಲರೂ ಉತ್ಕಂಠ ಯಿಂದ ನೋಡಹತ್ತಿದರು. ಗಿಡಗುಂಪಿನಲ್ಲಿ ಯಾವುದೋ ಒಂದು ವ್ಯಕ್ತಿಯು ನಿಂತು ಕೊಂಡಿರಬೇಕೆಂದು ಅವರು ತರ್ಕಿಸಿದರು. ಆದರೆ ಆ ವ್ಯಕ್ತಿಯು ಯಾರು ? ಅದರ ವೇಷ ವೆಂತಹುದು? ಈ ಸಂಗತಿಗಳ ಕಲ್ಪನೆಯೇ ಅವರಲ್ಲುಂಟಾಗಲಿಲ್ಲ ! ಭೀಮಸಿಂಹನು ಸರನೆ ತನ್ನ ಕತ್ತಿಯನ್ನು ಒರೆಯಿಂದ ಹಿರಿದನು, ಮತ್ತು ತಾನಿದ್ದ ಸ್ಥಳದಿಂದ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿ ಆ ಅಸ್ಪಷ್ಟ ಮೂರ್ತಿಯನ್ನು ಕುರಿತು ಕರ್ಕಶಶ್ವರದಿಂದ ಮಾತನಾಡಿದನು. ಈ ಎಲೇ, ನೀನು ಯಾರು ಹೇಳು ? ” ಅಂಧಕಾರವೇಷ್ಟಿತವಾದ ಆ ಮೂರ್ತಿಯು ಭೀಮಸಿಂಹ ಅಬ್ಬರಣೆಯಿಂದ ಅಂಜು ವುದಕ್ಕೆ ಬದಲಾಗಿ ನಗನಗುತ್ತ ಮುಂದಕ್ಕೆ ಬಂತು. ಆದರೆ ಭೀಮಸಿಂಹನಿಗೆ ಉತ್ತರಾ ರ್ಥವಾಗಿ ಒಂದು ಶಬ್ದವನ್ನು ಕೂಡ ಅದು ನುಡಿಯಲಿಲ್ಲ. ಭೀಮಸಿಂಹನು ದ್ವೇಷದಿಂದ ಮತ್ತೆ ಇಂತೆಂದನು. ( ಹೇಳು. ಬೇಗ ಹೇಳು; ನೀನು ಯಾರು ? ಹೇಳದಿದ್ದರೆ ಇಲ್ಲಿಯೇ ನಿನ್ನನ್ನು ತುಂಡರಿಸಿ ಚೆಲ್ಲುತ್ತೇನೆ. ” ಆ ಮೂರ್ತಿಯು ಮೊಳಖೋಳನೆ ನಗುತ್ತ ಮಾತನಾಡಿತು. “ ದುರ್ಗಾಧಿಪತಿ M ಪಾಗ್ಯೂಷಣ, ಯಾದ ಭೀಮಸಿಂಹನು ಒಬ್ಬ ಅಬಲೆಯ ಮೇಲೆ ಖಡ್ಗವನ್ನೆತ್ತಬಹುದೆಂದು ನಾನು ತಿಳಿದಿಲ್ಲ” ಖಡ್ಡಧಾರಿಯಾದ ಭೀಮಸಿಂಹನ ಹಸ್ತವು ಆಶ್ಚರ್ಯದಿಂದ ಮುಗ್ಧವಾಯಿತು. ಕ್ರೋಧದ ಬದಲು ಆಶ್ಚರ್ಯಾತಿಶಯವು ಭೀಮಸಿಂಹನ ಹೃದಯವನ್ನು ವ್ಯಾಪಿಸಿತು. ಆತನು ಮತ್ತೆ ಪ್ರಶ್ನೆ ಮಾಡಿದನು. ' ನೀನು ಹೆಂಗಸೇನು ? ಇಂತಹ ವೇಳೆಯಲ್ಲಿ, ಈ ಘೋರವಾದ ಅಂಧಕಾರದಲ್ಲಿ ಇಂತಹ ನಿರ್ಜನವಾದ ಕಾಡಿನಲ್ಲಿ ನಿರ್ಭಯದಿಂದ ಏಕಾಕಿನಿಯಾಗಿ ಸಂಚಾರ ಮಾಡುವ ವಿಲಕ್ಷಣ ಸ್ತ್ರೀಯು ನೀನು ಯಾರು ? ೨೨ ( ಭೀಮಸಿಂಹಮಹಾರಾಜರೇ, ನಾನು ನಿಜವಾಗಿಯೂ ಹೆಂಗಸು. ನಾನು ತಮ್ಮ ಮೇಲೆ ಒಂದು ಮಹದುಪಕಾರವನ್ನು ಮಾಡುವುದಕ್ಕೋಸ್ಕರ ಇಲ್ಲಿಗೆ ಬಂದಿದ್ದೇನೆ, ಇದಕ್ಕಿಂತಲೂ ಹೆಚ್ಚಾಗಿ ನನ್ನ ಪರಿಚಯವನ್ನು ತಕ್ಕೊಂಡು ನೀವೇನು ಮಾಡುತ್ತೀರಿ?” ಭೀಮಸಿಂಹನು ಸ್ವಲ್ಪ ಹೊತ್ತಿನವರೆಗೆ ಸ್ತಬ್ಬನಾಗಿದ್ದನು. ಆ ಮೇಲೆ ಅವಳನ್ನು ಕುರಿತು ಮತ್ತೆ ಮಾತನಾಡಿದನು. (( ಒಳ್ಳೇದು. ಆಗಲಿ. ನೀನು ಯಾರೆಂಬದನ್ನು ನಾನು ಕೇಳುವುದಿಲ್ಲ. ಆದರೆ ಈ ಕುದುರೆಯು ಯಾರದೆಂಬುದನ್ನಾದರೂ ಹೇಳು ತ್ತೀಯಾ? ” (ಮಹಾರಾಜರೇ, ಈ ಕುದುರೆಯು ಕುಮಾರ ಕರುಣಸಿಂಹರದು. ೨೫ (( ಕುಮಾರ ಕರುಣಸಿಂಹ-ಕರುಣಸಿಂಹನಾರು? ೨೨ < ಕರುಣಸಿಂಹರಾರೆಂದರೇನು ಮಹಾರಾಜರೇ? ಅವರೇ ! ಅವರ ಪರಿಚಯವ ನಿಮಗೆ ಇಲ್ಲವೇ ? ಸ್ವರ್ಗಲೋಕವಾಸಿಗಳಾದ ವಿಮಲಸಿಂಹಮಹಾರಾಜರ ಒಬ್ಬರೇ ಒಬ್ಬ ಚಿರಂಜೀವರಾದ ಕರುಣಸಿಂಹರು ! ದಿಲೀಪತಿಯಾದ ಅಕಬರಬಾದಶಹನು ನೂತನವಾಗಿ ಗೆದ್ದು ಕೊಂಡಿರುವ ರಜಪೂತಸ್ಥಾನದೊಳಗಿನ ಪ್ರದೇಶಕ್ಕೆ ಮುಖ್ಯ ಸೇನಾಪತಿಗಳಾದ ಕರುಣಸಿಂಹರು ! ಯಾರ ದುರ್ಗವನ್ನೂ ಜಹಾಗೀರವನ್ನೂ ನುಂಗಿ ಕೊಂಡು ನೀವೀಗ - ಭೀಮಸಿಂಹಮಹಾರಾಜ ' ರಾಗಿರುವಿರೋ, ಆ ಕರುಣಸಿಂಹರು ! ಭೀಮಸಿಂಹಮಹಾರಾಜರೇ, ಈಗಾದರೂ ನಿಮಗೆ ಕರುಣಸಿಂಹರ ನಿಜವಾದ ಪರಿಚಯ ವುಂಟಾಯಿತೇ ಆ ಸ್ತ್ರೀಯ ತಿರಸ್ಕಾರಪೂರ್ಣವಾದ ಈ ಭಾಷಣವು ಭೀಮಸಿಂಹನಿಗೆ ಕೇಳಿ ಸಿತೋ ಇಲ್ಲವೋ ಯಾರಿಗೆ ಗೊತ್ತು ! ಆದರೆ ಸಂತಾಪದಿಂದ ಆತನ ಮಸ್ತಕವು ಭ್ರಮ ಣಮಾಡಹತ್ತಿತು; ಆತನ ಶರೀರವು ' ಥರಥರ ' ನಡುಗಹತ್ತಿತು. ಆತನ ಕ್ರೋಧ ಪ್ರದೀಪ್ತ ನೇತ್ರಗಳು ಮದವೇರಿದ ಹುಲಿಯ ಕಣ್ಣುಗಳಂತೆ ಅಂಧಕಾರದಲ್ಲಿ ಪ್ರಕಾಶಿಸ ಹತ್ತಿದುವು. ತನ್ನ ಗುಪ್ತ ವೃತ್ತಾಂತವೆಲ್ಲ ಆ ಸ್ತ್ರೀಗೆ ಹೇಗೆ ತಿಳಿಯಿತಂಬುದು ಭೀಮಸಿಂಹ ಪ್ರೇಮಮಂದಿರ. ೪೫ ನಿಗೆ ಗೊತ್ತಾಗಲಿಲ್ಲ! ಅವನು ನಿಂತ ಸ್ಥಳದಿಂದ ಟಣ್ಣನೆ ಹಾರಿ ಆ ಸ್ತ್ರೀಯ ಮುಂದೆ ನಿಂತುಕೊಂಡು ಕಂಪಿತಸ್ವರದಿಂದ ಮಾತನಾಡಿದನು. ( ಪಾಪಿಣೀ, ನಿನಗೆ ಜೀವದ ಆಶೆಯಿಲ್ಲವೇನು ? ಪ್ರಸಂಗಬಂದರೆ ಈ ನಿರ್ಜನವನಪ್ರದೇಶದಲ್ಲಿ ಅಬಲೆಯ ರಕ್ತದಿಂದ ತನ್ನ ಕತ್ತಿಯನ್ನು ಕಲಂಕಿತ ಮಾಡಲು ಈ ಭೀಮಸಿಂಹನು ಹಿಂದೆಮುಂದೆ ನೋಡ ನೆಂಬುದನ್ನು ಚನ್ನಾಗಿ ನೆನಪಿನಲ್ಲಿಟ್ಟುಕೋ ! ” ತಿರಸ್ಕಾರದಿಂದ ನಕ್ಕು ಆ ಸ್ತ್ರೀಯು ಮಾತನಾಡಿದಳು. “ ನಿಜವೇ, ತಾವು ಅನ್ನುವುದು ತೀರ ಅಸಂಭವನೀಯವೇನೂ ಅಲ್ಲ! ಯಾವ ದುಷ್ಕರ್ಮವನ್ನು ಮಾಡುವು ದಕ್ಕೂ ಭೀಮಸಿಂಹನು ಹಿಂದೆಗೆಯುವುದಿಲ್ಲವೆಂಬದನ್ನು ಈ ಹತಭಾಗಿನಿಯು ಚನ್ನಾಗಿ ಬಲ್ಲಳು. ಆದರೆ ಈಗ ನನ್ನನ್ನು ಕೊಂದುಹಾಕುವುದಕ್ಕಿಂತ ಒಂದೆರಡು ಗಂಟೆಗಳ ವರೆಗೆ ಜೀವದಿಂದ ಇರಗೊಟ್ಟರೆ ಅದರಿಂದ ನಿಮಗೇ ಮಹದುಪಕಾರವುಂಟಾ ಗುವುದು. ” ಭೀಮಸಿಂಹನು ನಿಂತಲ್ಲಿಯೇ ನಿಂತನು. ಸ್ವಲ್ಪ ಶಾಂತನಾಗಿ ಅವನು ತನ್ನಲ್ಲಿಯೇ ಮಾತಾಡಿಕೊಂಡನು. * ನಿಜವಾಗಿಯೂ ನಾನು ಈ ಸಮಯದಲ್ಲಿ ಅವಿಚಾರದ ಕೆಲಸ ವನ್ನೇ ಮಾಡುತ್ತಿದ್ದೆನು. ” ಆಮೇಲೆ ಮಧುರಸ್ವರದಿಂದ ಆ ಸ್ತ್ರೀಯನ್ನು ಕುರಿತು ಪ್ರಕಾ ಶವಾಗಿ ಮಾತನಾಡಿದನು. ( ನೀನು ನನ್ನ ವಿಷಯವಾಗಿ ವಿಕಲ್ಪವನ್ನು ತಿಳಿದುಕೊಳ ಬೇಡ. ರಾಜಧರ್ಮವನ್ನು ಪಾಲಿಸುವುದಕ್ಕೋಸ್ಕರ ನಾನು ಯಾವಾಗಲೂ ಜಾಗರೂಕ ನಾಗಿರಬೇಕಾದುದರಿಂದ ನಿನ್ನೊಡನೆ ಇಂತಹ ಕಠೋರ ರೀತಿಯಿಂದ ವರ್ತಿಸಿದೆನು. ಇರಲಿ, ಕರುಣಸಿಂಹನು ಇಂತಹ ಸಮಯದಲ್ಲಿ ನನ್ನ ದುರ್ಗದಲ್ಲಿ ಏಕೆ ಪ್ರವೇಶಿಸಿ ದ್ದಾನೆಂಬುದನ್ನು ಮೊದಲು ಹೇಳು, ಆತನು ಒಬ್ಬನೇ ಹೋಗಿದ್ದಾನೆಯೋ? ಅಥವಾ ಅವನ ಸಂಗಡ ಅವನ ಜನರು ಇರುತ್ತಾರೆಯೋ ? ” << ಅವರು ಒಬ್ಬರೇ ಹೋಗಿದ್ದಾರೆ. ಕರುಣಸಿಂಹರು ಸಿಂಹನ ಮಕ್ಕಳಾದುದರಿಂದ ಅವರಿಗೆ ಯಾರ ಭಯವೂ ಇಲ್ಲ ! ” ಭೀಮಸಿಂಹನು ಹಲ್ಲುಗಳಿಂದ ಅಧರೋಷವನ್ನು ಕಟ್ಟಿದನು. ಆದರೂ ಶಾಂತ ಸ್ವರದಿಂದಲೇ ಪುನಃ ಮಾತನಾಡಿದನು. ( ಹೀಗೋ, ಹಾಗಾದರೆ ಆತನು ದುರ್ಗದಲ್ಲಿ ಪ್ರವೇಶಮಾಡಲು ಕಾರಣವೇನು ? ” ಒಂದು ದೀರ್ಘ ವಿಶ್ವಾಸವನ್ನು ಬಿಟ್ಟು ಅವಳು ಮಾತನಾಡಿದಳು. “ ಮಹಾರಾಜ ರೇ, ಅದನ್ನು ತಮಗೆ ತಿಳಿಸುವುದಕ್ಕೋಸ್ಕರವೇ ನಾನಿಲ್ಲಿ ಬಂದಿದ್ದೇನೆ. ಆದರೆ ನಾನು ಮುಂದೆ ಹೇಳತಕ್ಕುದನ್ನು ಕೇಳುವ ಮೊದಲು ನೀವು ಒಂದು ಪ್ರತಿಜ್ಞೆಯನ್ನು ಮಾಡ ತಕ್ಕದ್ದು. ದೇವದೇವತೆಗಳ ವಿಷಯವಾಗಿ ತಮ್ಮಲ್ಲಿ ಪೂಜ್ಯ ಬುದ್ದಿಯು ಇರುವದೋ YL ಏಾಗೂ ಷಣ, ಇಲ್ಲವೋ ? ಇದ್ದರೆ ನಿಮ್ಮ ಕುಲಸ್ವಾಮಿನಿಯಾದ ಕಲ್ಯಾಣೀದೇವಿಯ ಆಣೆಯನ್ನು ತಗೆದುಕೊಳ್ಳಿರಿ. ಭೀಮಸಿಂಹನು ಆಶ್ಚರ್ಯದಿಂದ ಮಾತನಾಡಿದನು, ಯಾತಕ್ಕೊಸ್ಕರವಾಗಿ ನಾನು ಆಣೆಯನ್ನು ತೆಗೆದುಕೊಳ್ಳಬೇಕು. ” “ ನಾನು ಕರುಣಸಿಂಹನ ಜೀವಕ್ಕೆ ಯತ್ನಿಂಚಿತ್ತಾದರೂ ಅಪಾಯವನ್ನು ಮಾಡು ವುದಿಲ್ಲ 'ವೆಂದು ಆಣೆಯನ್ನು ತೆಗೆದುಕೊಳ್ಳಿರಿ. ಭೀಮಸಿಂಹನು ಒಮ್ಮೆಲೆ ಉಚ್ಚಸ್ವರದಿಂದ ಮಾತನಾಡಿದನು. “ ಕರುಣಸಿಂಹನು ಯಾವ ಉದ್ದೇಶದಿಂದ ದುರ್ಗದಲ್ಲಿ ಹೋಗಿರುವನೆಂಬುದು ತಿಳಿದ ಹೊರತು ನಾನು ಯಾವತರದ ಶಪಥವನ್ನು ಮಾಡುವುದಿಲ್ಲ. ” C ಕರುಣಸಿಂಹರು ಶತ್ರುಭಾವದಿಂದ ನಿಮ್ಮ ದುರ್ಗವನ್ನು ಪ್ರವೇಶಿಸಿಲ್ಲ. ಕರುಣ ಸಿಂಹರ ಪ್ರೀತಿಯು ನಿಮ್ಮ ಮಗಳಾದ ಲಲಿತೆಯ ಮೇಲೆ ಬಹಳವಿದೆಯೆಂಬುದರ ಕಲ್ಪ ನೆಯು ಕೂಡ ನಿಮಗೆ ಇರಲಿಕ್ಕಿಲ್ಲ. ಲಲಿತೆಯ ದರ್ಶನಕ್ಕೋಸ್ಕರವಾಗಿ ಈಗ ಅವರು ದುರ್ಗಕ್ಕೆ ಹೋಗಿದ್ದಾರೆ. ಇತ್ತ ನೀವಾದರೋ ಲಲಿತೆಯ ವಿವಾಹವನ್ನು ನಿಶಯಿಸಿ ಬಂದಿರುತ್ತೀರಿ. ಆದುದರಿಂದ ಸದ್ಯಕ್ಕೆ ನಾನು ಹೇಳಿದಂತೆ ಮಾಡಿರಿ. ಕರುಣಸಿಂಹರಿಗೆ ಯಾವತರದ ಪ್ರತಿಬಂಧವನ್ನು ಮಾಡದೆ ಅವರನ್ನು ದುರ್ಗದ ಹೊರಗೆ ಬಿಟ್ಟು ಬಿಡಿರಿ. ಆಮೇಲೆ ದುರ್ಜಯಸಿಂಹನೊಡನೆ ಲಲಿತೆಯ ವಿವಾಹವನ್ನು ಮಾಡಿಬಿಡಿರಿ. ಒಂದು ಕ್ಷಣಕಾಲ ಆಲೋಚಿಸಿ ಭೀಮಸಿಂಹನು ಪ್ರಶ್ನೆ ಮಾಡಿದನು ( ಕರುಣ ಸಿಂಹನಿಗೂ ನಿನಗೂ ಸಂಬಂಧವೇನು ? ” ( ಕರುಣಸಿಂಹರು ಮತ್ತಾರೂ ಅಲ್ಲ ! ನನ್ನ : ಲೇ ನನ್ನ ಪ್ರೇಮದ ಸಹಚರರು? ನಿಮ್ಮ ಮಗಳು ಅವರನ್ನು ಪ್ರೇಮಪಾಶದಿಂದ ಬಂಧಿ ಸದಿದ್ದರೆ ಅವರು ನನ್ನೊಡನೆ ವಿವಾಹವನ್ನು ಮಾಡಿಕೊಳ್ಳುತ್ತಿದ್ದರು. ” ಭೀಮಸಿಂಹನು ಕೆಲವು ಹೊತ್ತಿನವರೆಗೆ ಸುಮ್ಮನಿದ್ದು, ಆಮೇಲೆ ಹೀಗೆ ಮಾತಾಡಿ ದನು. ( ಒಳ್ಳೇದು. ನೀನು ಹೇಳಿದಂತೆಯೇ ಇಕೊ ನೋಡು, ' ನಾನು ಕರುಣ ಸಿಂಹನ ಜೀವಕ್ಕೆ ಯತ್ತಿಂಚಿತ್ತಾದರೂ ಅಪಾಯವನ್ನು ಮಾಡುವುದಿಲ್ಲ' ಎಂದು ಶಪಥ ವನ್ನು ಮಾಡುತ್ತೇನೆ. ಆದರೆ ನೀನು ಯಾರೆಂಬುದನ್ನು ನನಗೆ ನಿಜವಾಗಿ ಹೇಳು, ” “ ನಾನೇ? ನಾನು ಕೃಷ್ಣಾ ಕುಮಾರಿಯು, ” ಕಾಲಲ್ಲಿ ಸರ್ಪವನ್ನು ಕಂಡಂತೆ ಭೀಮಸಿಂಹನು ಒಮ್ಮೆಲೆ ಹಿಂದಕ್ಕೆ ಸರಿದನು. ಮತ್ತು ಕರ್ಕಶಶ್ವರದಿಂದ ಒದರಿ ಮಾತಾಡಿದನು. ( ಏನು ? ಕೃಷ್ಣಾ-ಕೃಷ್ಣಾ-ಕುಮಾ ಶರರು ! ಬಾಲ್ಯದಿಂದ ಪ್ರೇಮಮಂದಿರ. ೪೬ ರಿಯೇ ? ಪಾಪಿಣೀ.ಚಾಂಡಾಲಿನೀ-ದೂರ ಹೋಗು ಇಲ್ಲಿಂದ ? ” ಕೃಷ್ಣಾ ಕುಮಾರಿಯ ಮುಖದಿಂದ ಹೊರಟ ಒಂದೇ ಒಂದು ಶಬ್ದದಿಂದ ಭೀಮ ಸಿಂಹನ ಸ್ಥಿತಿಯು ಚಮತ್ಕಾರಿಕವಾಯಿತು. ಆತನ ಪೂರ್ವಚರಿತವೆಲ್ಲ ಕ್ಷಣಾರ್ಧದಲ್ಲಿ ಆತನ ಕಣ್ಣೆದುರಿಗೆ ಕಟ್ಟಿದಂತಾಯಿತು. ಆ ವಿಮಲಸಿಂಹನೂ, ತಾನು ಆತನ ನಂಬು ಗೆಯ ಸೇನಾಪತಿಯಾಗಿದ್ದು ದೂ, ವಿಮಲಸಿಂಹನ ನೂತನಪತ್ನಿಯೂ, ಆ ಕಾಲದ ನಿಂದ್ಯವಾದ ತನ್ನ ಆಚರಣೆಯೂ ಆತನ ನೆನಪಿಗೆ ಬಂದುವು. ಈಗ ತನ್ನ ಎದುರಿನಲ್ಲಿ ನಿಂತುಕೊಂಡಿರುವ ಕೃಷ್ಣಾ ಕುಮಾರಿಯು ತಾನು ಮಾಡಿದ ಕೃಷ್ಣ ಪಾತಕದ ಮೂರ್ತಿ ಮಂತವಾದ ಇತಿಹಾಸವೆಂದೇ ಆತನಿಗೆ ಎನಿಸಹತ್ತಿತ್ತು ! ಮುಕ್ಕಾವಲಿಯ ಮಡುವಿನಲ್ಲಿ ವಿಮಲಸಿಂಹನೊಡನೆ ಕೃಷ್ಣಾ ಕುಮಾರಿಗೂ ಜಲಸಮಾಧಿಯ ಪ್ರಾಪ್ತವಾಗಿ ತನ್ನ ಪಾತ ಕಗಳ ಮೂರ್ತಿಮಂತವಾದ ಸ್ಮಾರಕವು ನಷ್ಟವಾಗಿ ಹೇಗಿದೆಯೆಂದು ಭೀಮಸಿಂಹನು ಇಂದಿನವರೆಗೂ ತಿಳಿದಿದ್ದನು. ಆದರೆ ಕೃಷ್ಣಯ ಒಂದೇ ಒಂದು ಶಬ್ದದಿಂದ ಆ ತಿಳಿವಳಿ ಕೆಯು ತಪ್ಪಾದುದೆಂದು ತಿಳಿದು ಬಂತು. ಆತನ ಹೃದಯವು ಬೆಂದುಬೆಂಡಾಗಹತ್ತಿತು. ಸ್ವಲ್ಪ ಹೊತ್ತಿನ ವರೆಗೆ ಆತನ ಮೈಮೇಲಿನ ಎಚ್ಚರ ತಪ್ಪಿ ಹೋಯಿತು. ! ತನ್ನ ಪಾವಸ್ಕೃತಿಚಿನ್ನವನ್ನು ಜಗತ್ತಿನೊಳಗಿಂದ ಇಲ್ಲದಂತೆ ಮಾಡಿಬಿಡಬೇಕೆಂಬ ಉದ್ದೇಶದಿಂದ ಭೀಮಸಿಂಹನು ಕ್ರೋಧೋನ್ಮತ್ತನಾಗಿ ಕೃಷ್ಣಾ ಕುಮಾರಿಯನ್ನು ನಿರೀಕ್ಷಿಸ ಹತ್ತಿದನು. ಆದರೆ ಅವಳು ಅಲಕ್ಷಿತ ರೀತಿಯಿಂದ ಆಗಲೇ ಮಾಯವಾಗಿ ಹೋಗಿದ್ದಳು! ದುರ್ಗಕ್ಕೆ ಹೋದ ಬಳಿಕ ಭೀಮಸಿಂಹನು ಮೊದಲು ಆ ಗುಪ್ತಪ್ರವೇಶದ್ವಾರದ ಹತ್ತರ ಬಂದನು. ಆ ದ್ವಾರವು ನಿತ್ಯದಂತೆ ಅರ್ಗಲಬದ್ದವಾಗಿತ್ತು; ಸರ್ವವ್ಯವಸ್ಥೆಯು ಯಥಾಸ್ಥಿತವಾಗಿದ್ದಂತೆ ಆತನಿಗೆ ತೋರಿತು. ಅಲ್ಲಿಯ ಪಹರೆಯವನು ಕುಳಿತಲ್ಲಿಯೇ ಸ್ವಸ್ಥವಾಗಿ ತೂಕಡಿಸುತ್ತ ನಿದ್ದೆ ಮಾಡುತ್ತಿದ್ದನು. ಆತನಿಗೊಂದು ಲಾಪ್ರಹಾರವನ್ನು ಕೊಟ್ಟು ಭೀಮಸಿಂಹನು ಮಾತನಾಡಿದನು. “ ನಿಮಕಹರಾಮ, ಪಾಜೀ! ಹೇಳು. ಈ ದಾರಿಯಿಂದ ನೀನು ಇಂದು ಯಾರನ್ನು ಒಳಗೆ ಬಿಟ್ಟೆ? ತಡೆ, ಬೆಳಗಾಯಿತಂದರೆ ಎದು ರಿನ ಗಿಡಕ್ಕೆ ನಿನ್ನನ್ನು ಗಲ್ಲಿಗೆ ಹಾಕಿಸುತ್ತೇನೆ! ಅಂದರೆ ಇಂತಹ ಕಪಟವರ್ತನವನ್ನು ನನ್ನೊಡನೆ ಮಾಡಬಾರದೆಂಬುದು ಎಲ್ಲರಿಗೂ ಗೊತ್ತಾಗುವುದು. ” ಪಹರೆಯವನು ಭೀತಿಯಿಂದ ಗದಗದ , ನಡುಗುತ್ತ ಮಾತನಾಡಿದನು. 14 ದೊರೆ ಗಳೇ, ನನ್ನ ಕಡೆಗೆ ಎಳ್ಳಷ್ಟು ಅಪರಾಧವಿಲ್ಲ. ನನಗಿಂತ ಮೊದಲಿನ ಪಾಳಿಯವನು ಮಾತ್ರ ತನ್ನ ಒಬ್ಬ ಸ್ನೇಹಿತನನ್ನು ದುರ್ಗದೊಳಗೆ ಕರೆದುಕೊಂಡು ಹೋದನು. ” • ಒಳ್ಳೇದು ನಾಳಿನ ದಿನ ನಿನ್ನೊಡನೆ ಅವನನ್ನೂ ಗಲ್ಲಿಗೆ ಹಾಕಿಸುತ್ತೇನೆ! ಭೀಮಸಿಂಹನು ಕರುಣಸಿಂಹನನ್ನು ಹುಡುಕುವುದಕ್ಕಾಗಿ ದುರ್ಗದಲ್ಲಿ ನಾಲ್ಕೂ ಕಡೆಗೆ ಜನರನ್ನು ಕಳುಹಿಸಿದನು. ಈ ಪ್ರಕಾರ ಎಲ್ಲ ವ್ಯವಸ್ಥೆಯನ್ನು ಮಾಡಿ ತನ್ನ ಮಂದಿರದ ವಾಗ್ಯೂಷಣ, ↑ hh n # # # #f f +AYAP. ೧wwಳ ಕಡೆಗೆ ಹೊರಟಾಗ ಆತನಿಗೆ ಸೇನಾಪತಿಯು ಭೆಟ್ಟಿಯಾದನು. ಭೀಮಸಿಂಹನನ್ನು ಕಂಡ ಕೂಡಲೆ ಸಲಾಮು ಮಾಡಿ ಆತನು ಮಾತನಾಡಿದನು. (ಕರುಣಸಿಂಹನು ರಾಜಕುಮಾ ರಿಯ ಮಂದಿರದವರೆಗೂ ಹೋಗಲು ಸಮರ್ಥವಾಗಲಿಲ್ಲ. ದಾರಿಯಲ್ಲಿಯೇ ಆತನನ್ನು ಹಿಡಿದು ಗಣೇಶಮಂದಿರದಲ್ಲಿ ಬಂಧಿಸಿಟ್ಟಿದ್ದೇನೆ. ” ಸೇನಾಪತಿಯ ಬಾಯಿಂದ ಹೊರಟ ಶಬ್ದಗಳನ್ನು ಕೇಳಿ ಭೀಮಸಿಂಹನಿಗೆ ಅತ್ಯಾ ನಂದವಾಯಿತು, ಕರುಣಸಿಂಹನು ಬಂಧಿತನಾದುದರಿಂದ ಮುಂದೆ ಒದಗಬಹುದಾದ ಅನರ್ಥಗಳ ಮೂಲವೇ ದೂರವಾದ ಹಾಗಾಯಿತೆಂದು ತಿಳಿದು ಭೀಮಸಿಂಹನು ಸ್ವಸ್ಥ ನಾದನು, ಮತ್ತು ಸೇನಾಪತಿಯನ್ನು ಕುರಿತು ಮಾತನಾಡಿದನು, (( ಶಾಬಾಸ ಗಂಭೀರ ಸಿಂಹ! ಒಳ್ಳೇದು ಮಾಡಿದಿರಿ. ಆದರೆ ಕರುಣಸಿಂಹನು ಸರಕಾರೀ ಅತಿಥಿಯೆಂದು ತಿಳಿ ಯಿರಿ. ಆತನ ಆದರಾತಿಥ್ಯದಲ್ಲಿ ಯಾವ ತರದ ನ್ಯೂನತೆಯೂ ಉಂಟಾಗದಂತೆ ವ್ಯವ ಸ್ಥೆಯನ್ನಿಡಿರಿ.” ಏಳನೆಯ ಪರಿಚ್ಛೇದ. + ವಿಲಕ್ಷಣ ಕುಲಾಚಾರ, ಭೀಮಸಿಂಹನಿಗೆ ಆ ರಾತ್ರಿಯಲ್ಲಿ ನಿದ್ದೆ ಹತ್ತಲಿಲ್ಲ. ಸೂರ್ಯೋದಯವಾದೊಡನೆಯೇ ಆತನು ತನ್ನ ಭವಿಷ್ಯತ್ಕಾಲದ ಬೀಗನಾದ ಸರತಾನಸಿಂಹನಿಗೆ ಭೆಟ್ಟಿಯಾದನು. ಅರ ಮನೆಯೊಳಗಿನ ಒಂದು ಏಕಾಂತ ಸ್ಥಳದಲ್ಲಿ ಅವನನ್ನು ಕರೆದುಕೊಂಡು ಬಂದನು. ಖಿನ್ನ ಮುದ್ರೆಯಿಂದ ಭೀಮಸಿಂಹನು ಸರತಾನಸಿಂಹನನ್ನು ಕುರಿತು ಮಾತನಾಡಿ ದನು. (( ಠಾಕುರರೇ, ನಾನು ಅತ್ಯಂತ ಸಂಕಟದಲ್ಲಿ ಬಿದ್ದಿರುತ್ತೇನೆ. ಅದರೊಳಗಿಂದ ಸುಲಭವಾಗಿ ಹೇಗೆ ಪಾರಾಗಬೇಕೆಂಬ ವಿಷಯವಾಗಿ ತಮ್ಮ ಸಲಹೆಯನ್ನು ತೆಗೆದು ಕೊಳ್ಳಬೇಕೆಂದು ಇಂದು ತಮ್ಮನ್ನು ಇಲ್ಲಿಗೆ ಕರಕೊಂಡು ಬಂದಿದ್ದೇನೆ. ನಿನ್ನ ಕರುಣೆ ಸಿಂಹನನ್ನು ನನ್ನ ಸೈನಿಕರು ಹಿಡಿದು ಕಟ್ಟಿನಲ್ಲಿಟ್ಟಿರುವುದೇನೋ ನಿಜ, ಆದರೆ ಆತನಿಗೆ ಬಾಹ್ಯವಾಗಿ ಯಾವ ಶಿಕ್ಷೆಯನ್ನು ವಿಧಿಸುವುದೂ ಅಶಕ್ಯವಾಗಿದೆ. ಪ್ರತ್ಯಕ್ಷ ಅಕಬರ ಬಾದಶಹನೇ ಆತನ ಸಂರಕ್ಷಕನಿದ್ದು, ಅವನ ಪ್ರೀತಿಯ ಕರುಣಸಿಂಹನ ಮೇಲೆ ಬಹಳ ವಿದೆ. ಕರುಣಸಿಂಹನ ಜೀವಕ್ಕೆ ನಾನು ಅಪಾಯವನ್ನು ಮಾಡಿದನೆಂಬ ವಾರ್ತೆಯು ಅಕಬರನಿಗೆ ಗೊತ್ತಾದರೆ ಆತನು ನನ್ನನ್ನು ಸಮೂಲವಾಗಿ ನಾಶಮಾಡುವುದರಲ್ಲಿ ಸಂದೇ ಹವೇ ಇಲ್ಲ. ಕರುಣನನ್ನು ಹಾಗೆಯೇ ಬಿಟ್ಟು ಬಿಡುವುದೂ ನನ್ನ ಮನಸ್ಸಿಗೆ ಬರುವುದಿಲ್ಲ; ನನ್ನ ವೈರಿಯು ಇಷ್ಟೊಂದು ಸುಲಭವಾಗಿ ಕೈಯಲ್ಲಿ ಸಿಕ್ಕಿರಲು ಆತನನ್ನು ಹಾಗೆಯೇ ಪ್ರೇಮಮಂದಿರ. M ಬಿಟ್ಟು ಬಿಡಲಾ! ಸರ್ಪವನ್ನು ಕೆಣಕಿ ಹಾಗೆಯೇ ಬಿಡುವುದುಂಟೇ ? ಠಾಕುರರೇ, ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು ? ”
- ಸರತಾನಸಿಂಹನು ಕುಲದಿಂದ ರಜಪೂತರಲ್ಲಿ ಶ್ರೇಷ್ಠ ಪ್ರತಿಯವನಾಗಿದ್ದಿಲ್ಲ, ಆದರೆ ಪ್ರಚಂಡವಾದ ಸಂಪತ್ತಿನ ಮೂಲಕ ಆತನು ಹೆಸರಿಗೆ ಬಂದಿದ್ದನು. ದುರ್ಜಯಸಿಂಹನು ಆತನ ಒಬ್ಬನೇ ಒಬ್ಬ ಮಗನು. ಸರತಾನಸಿಂಹನ ಬಳಿಯಲ್ಲಿ ಅಪರಿಮಿತವಾದ ಐಶ್ವ ರ್ಯವಿದ್ದರೂ ಅವನಿಗೊಂದು ಆಶೆಯು ಉತ್ಪನ್ನವಾಗಿತ್ತು. ಭೀಮಸಿಂಹನೊಡನೆ ಶರೀರಸಂಬಂಧವನ್ನು ಮಾಡಿದರೆ ತನ್ನ ಕುಲದ ಪ್ರತಿಷ್ಟೆಯು ಬೆಳೆಯುವುದೆಂದು ಆತನು ತಿಳಿದುಕೊಂಡಿದ್ದನು. ಮತ್ತು ಈ ಸಮಯದಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನಿಗೆ ಹಣದ ಅವಶ್ಯಕತೆಯು ಬಹಳವಿತ್ತು, ಭೀಮಸಿಂಹನು ಅನೇಕ ಜನ ಸಾವಕಾರರಲ್ಲಿ ಸಾಲವನ್ನು ಮಾಡಿದ್ದನು. ಸರತಾನಸಿಂಹನೊಡನೆ ಶರೀರಸಂಬಂಧವಾದರೆ ತಾನು ಸಾಲವೆಂಬ ಸಮುದ್ರವನ್ನು ಈಸಿ ಪಾರಾಗಬಹುದೆಂದು ಅವನು ತಿಳಿದುಕೊಂಡಿದ್ದನು. ಹೀಗೆ ಉಭಯತರಿಗೂ ಪರಸ್ಪರ ಶರೀರಸಂಬಂಧದ ಅಪೇಕ್ಷೆಯು ಅಧಿಕವಾಗಿತ್ತು. ಅಪೇಕ್ಷೆಯು ಫಲದ್ರೂಪವಾಗುವುದಕ್ಕೆ ಕರುಣಸಿಂಹನು ನಿಮ್ಮ ವಾದನು. ಆದುದರಿಂದ ತಮ್ಮ ಮಾರ್ಗವನ್ನು ನಿರಾಪದವಾಗಿ ಮಾಡಿಕೊಳ್ಳವುದಕ್ಕೋಸ್ಕರ ಯಾವದಾದ ರೊಂದು ಸುಷ್ಟ ದುಷ್ಟ ಉಪಾಯದಿಂದ ಅವರನ್ನು ನಾಶಮಾಡಿಬಿಡಬೇಕೆಂದು ಇಬ್ಬರೂ ಯೋಚಿಸುತ್ತಿದ್ದರು.
ಸ್ವಲ್ಪ ಹೊತ್ತು ಆಲೋಚಿಸಿ ಸರತಾನಸಿಂಹನು ಮಾತಾಡಿದನು. << ಕರುಣಸಿಂಹ ನನ್ನು ಹೇಗೆ ನಾಶಿಸಬೇಕೆಂಬುದನ್ನು ನಿಶ್ಚಯಿಸುವ ಮೊದಲು ಒಂದು ಮಾತಿನ ವಿಷಯ ವಾಗಿ ನೀವು ಅವಶ್ಯವಾಗಿ ಜಾಗರೂಕರಾಗಿರಬೇಕೆಂದು ನನ್ನ ಅಭಿಪ್ರಾಯವಿದೆ. " ( ಯಾವ ಮಾತಿನ ವಿಷಯವಾಗಿ ? ೨೨ < ದಿಲೀಪತಿಯು ಮುಂದೆ ನಮಗೆ ಯಾವ ತರದ ಆಕ್ಷೇಪಣೆಯನ್ನು ಮಾಡಲು ಆಸ್ಪದವಾಗದಂತೆ ಕರುಣಸಿಂಹನನ್ನು ಈಗ ಇಲ್ಲಿಗೆ ಕರೆಯಿಸಿ ಅವನಿಂದ ತಿಳಿದಷ್ಟು ವೃತ್ತಾಂತವನ್ನು ತಿಳಿದುಕೊಳ್ಳಬೇಕು, ಆತನು ಹೇಳುವ ಮಾತಿನಿಂದ ಮುಂದೆ ಹೇಗೆ ನಡೆಯಬೇಕೆಂಬುದನ್ನು ಆ ಮೇಲೆ ನಾವು ನಿಶ್ಚಯಿಸುವ, ಆತನನ್ನು ನಾಶಮಾಡುವ ಯುಕ್ತಿಯು ಸಹಜವಾಗಿಯೇ ತೋಚಿದರೆ ಒಳಿತೇ ಆಯಿತು.” ಭೀಮಸಿಂಹನಿಗೂ ಈ ವಿಚಾರವು ಮನಸ್ಸಿಗೆ ಬಂತು. ಆದುದರಿಂದ ಕರುಣಸಿಂಹ ನನ್ನು ತನ್ನ ಕಡೆಗೆ ಕರೆದುಕೊಂಡು ಬರುವಂತೆ ಆಗಲೇ ಆತನು ಸೇವಕರಿಗೆ ಆಜ್ಞಾಪಿಸಿ ದನು. ಕರುಣಸಿಂಹನನ್ನು ಸೆರೆಯಲ್ಲಿ ಸಿಕ್ಕವನೆಂಬಂತೆ ತಿಳದುಕೊಳ್ಳದೆ ರಾಜಕೀಯ ಅತಿಥಿಯೆಂದು ತಿಳಿದು ತಕ್ಕ ಆದರೋಪಚಾರವನ್ನು ಮಾಡಬೇಕೆಂದು ಭೀಮಸಿಂಹನು ಮೊದಲೇ ವ್ಯವಸ್ಥೆ ಮಾಡಿದ್ದನು. ವಾಗ್ಯೂಷಣ. ಸ್ವಲ್ಪ ಹೊತ್ತಿನ ಮೇಲೆ ಕರುಣಸಿಂಹನು ಆತನ ಎದುರಿಗೆ ಬಂದು ನಿಂತನು. ಆದರೆ ಭೀಮಸಿಂಹನಿಗೆ ಆತನು ಪ್ರಣಾಮ ಮಾಡಲಿಲ್ಲ. ಭೀಮಸಿಂಹನು ಪ್ರಯತ್ನ ಪೂರ್ವಕ ವಾಗಿ ಮುಖದಲ್ಲಿ ಹಾಸ್ಯವನ್ನು ತಂದುಕೊಂಡು ಮಾತನಾಡನು. (( ಕುಮಾರ ! ನಿನ್ನೆ ರಾತ್ರಿ ನಿಮಗೆ ಯಾವತರದ ಕೊರತೆಯೂ ಉಂಟಾಗಲಿಲ್ಲವಷ್ಟೆ? ವ್ಯವಸ್ಥೆಯೆಲ್ಲವೂ ಸರಿಯಾಗಿ ಇತ್ತೇ ? ೨೨ ಕುಮಾರನು ಗಂಭೀರತೆಯಿಂದ ಉತ್ತರವಿತ್ತನು. “ ಹೌದು ಎಲ್ಲ ವ್ಯವಸ್ಥೆಯೂ ಸರಿಯಾಗಿತ್ತು. ತಮ್ಮ ಆತಿಥ್ಯದಿಂದ ನಾನು ಸಂತುಷ್ಟನಾದೆನು. ” - ಕುಮಾರನು ಅಲ್ಲಿ ಬಂದಾಗಿನಿಂದಲೂ ಎದ್ದು ನಿಂತುಕೊಂಡಿದ್ದನು. ಭೀಮ ಸಿಂಹನು ಆತನಿಗೆ ಅಭ್ಯುತ್ಥಾನವನ್ನು ಕೊಡಲಿಲ್ಲ; ಇಷ್ಟೇ ಅಲ್ಲ; ಆಸನವನ್ನು ಕೂಡ ಕೊಡಲಿಲ್ಲ. ಭೀಮಸಿಂಹನ ಬಲಬದಿಯಲ್ಲಿ ಸರತಾನಸಿಂಹನೂ ಎಡಬದಿಯಲ್ಲಿ ದುರ್ಜ ಯಸಿಂಹನೂ ಕುಳಿತುಕೊಂಡಿದ್ದರು. ಆದರೂ ಅಲ್ಲಿ ಇನ್ನೊಂದು ಆಸನವು ತೆರನಾ ಗಿಯೇ ಇತ್ತು. ಹೀಗಿದ್ದರೂ ತಾನು ಅಲ್ಲಿ ಕುಳಿತುಕೊಳ್ಳುವಂತೆ ಭೀಮಸಿಂಹನು ವಿನಂತಿ ಮಾಡಿಕೊಳ್ಳಲಿಲ್ಲವೆಂಬುದು ಕರುಣಸಿಂಹನಿಗೆ ಹೇಗೆ ಹೇಗೋ ಎನಿಸಹತ್ತಿತ್ತು, ಮಾನ ದಲ್ಲಿಯಾಗಲಿ, ವಂಶಮರ್ಯಾದೆಯಲ್ಲಾಗಲಿ ಭೀಮಸಿಂಹನಿಗಿಂತ ತಾನು ಲವಮಾತ್ರ ವಾದರೂ ಕಡಿಮೆಯವನಾಗಿರದಿದ್ದರೂ, ಆತನು ತನ್ನೊಡನೆ ಹೀಗೆ ಉದ್ದಾಮತನದಿಂದ ವರ್ತಿಸಿದುದು ತನ್ನನ್ನು ಅಪಮಾನಗೊಳಿಸುವುದಕ್ಕಾಗಿಯೇ ಎಂದು ಆತನು ತಿಳಿದು ಕೊಂಡನು! ಕರುಣಸಿಂಹನ ಹೃದಯವು ಈ ಅಪಮಾನವಷ್ಟಿಯಿಂದ ಸುಡಹತ್ತಿತು. ಕರುಣಸಿಂಹನನ್ನು ತೀವ್ರದೃಷ್ಟಿಯಿಂದ ನೋಡಿ ಭೀಮಸಿಂಹನು ಗಂಭೀರಸ್ವರ ದಿಂದ ಮಾತನಾಡಿದನು. ( ಕುಮಾರ ! ನೀವು ಉಚ್ಛ ಕುಲದಲ್ಲಿ ಜನ್ಮತಾಳಿದ ರಜ ಪೂತ ವೀರರು; ದಿಲೀಪತಿಯ ವಿಶ್ವಾಸಕೃಪೆಗಳಿಗೆ ಪಾತ್ರರಾದ ಪ್ರಮುಖ ಸೇನಾಪತಿ ಗಳು ! ಹೀಗಿದ್ದು ಹೇಡಿಯಂತೆಯೂ ಕಳ್ಳನಂತೆಯೂ ನೀವು ನನ್ನ ದುರ್ಗವನ್ನು ಏಕೆ ಪ್ರವೇಶಿಸಿದಿರಿ ? ಕರುಣಸಿಂಹ, ದಿಲೀಪತಿಯು ಇಂತಹ ಅಪಮಾನಾಸ್ಪದವಾದ ಚೋರ ತನದ ಕೆಲಸಗಳಿಗಾಗಿ ತನ್ನ ನವೀನ ಸೇನಾಪತಿಗೆ ಶಾಬಾಸಕಿಯನ್ನೇ ಕೊಡುತ್ತಾ ನೆಂದು ನೀವು ತಿಳಿದಿರುವಿರೋ ? ” ಅಪಮಾನದ ಮೇಲೆ ಅಪಮಾನ! ಕುಮಾರನ ಸಂತಾಪವು ಈಗ ಹೃದಯದಲ್ಲಿ ಹಿಡಿಸದಾಯಿತು ! ಆದರೂ ಒಳ್ಳೇ ಕಷ್ಟದಿಂದ ಅದನ್ನು ನುಂಗಿಕೊಂಡು ಕರುಣ ಸಿಂಹನು ಮಾತನಾಡಿದನು. “ ನನ್ನ ಸಮಾನನಂತೆ ಮನಕೊಟ್ಟು ನಿಮ್ಮ ಪ್ರಶ್ನೆಗಳಿಗೆ ಉತ್ತರವೀಯಲು ನನ್ನ ಇಚ್ಛೆಯಿಲ್ಲ; ಮತ್ತು ಇದಕ್ಕೆ ಇನ್ನೂ ಅನೇಕ ಕಾರಣಗಳಿವೆ. ಆದರೆ ಒಂದು ಮಾತನ್ನು ಮಾತ್ರ ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಾನು ನಿಮ್ಮ ಹೌದು ಸದ್ಯಕ್ಕೆ ನಿಮ್ಮ ದೇ-ದುರ್ಗದಲ್ಲಿ ತುಡುಗನಂತೆ ಬಂದು ಸೇರಿಕೊಳ್ಳಲಿಲ್ಲ. ಪ್ರೇಮಮಂದಿರ, ೫ • • • • • • • • • • • • • • • v• • • • • • •
- * * * * * Y JYYw
ನಿಮ್ಮ ಕನೈಯ ಅನುಮತಿಯಿಂದಲೂ ಆಕೆಯ ವಿನಂತಿಯಿಂದಲೂ ನಾನು ಇಲ್ಲಿ ಬಂದಿದ್ದೇನೆ. ಈಗ ನಾನು ನಿಮಗೇ ವಿನಂತಿ ಮಾಡಿಕೊಳ್ಳುವುದೇನಂದರೆ-ನಿಮ್ಮ ಮಗಳನ್ನು ವಿವಾಹ ಮಾಡಿಕೊಳ್ಳಲು ನೀವು ಅನುಮತಿಯನ್ನು ಕೊಡಿರಿ, ” ಭೀಮಸಿಂಹನು ಕುಮಾರನ ಕಡೆಗೆ ನೋಡಿ ತುಚ್ಚತೆಯಿಂದ ನಕ್ಕು ಮಾತನಾಡಿ ದನು. ( ಚೋರನಂತೆ ದುರ್ಗದಲ್ಲಿ ಪ್ರವೇಶಿಸುವ ರಜಪೂತನಿಗೆ ನನ್ನ ಕನೈಯನ್ನು ವಿವಾಹ ಮಾಡಿಕೊಡಲು ನಾನು ಎಂದೂ ಒಪ್ಪಲಾರೆನು, ” (ಹಾಗಾದರೆ ನಾನೂ ಈಗ ಸ್ಪಷ್ಟವಾಗಿಯೇ ಹೇಳುತ್ತೇನೆ. ದೇವಧರ್ಮದ ಸಾಕ್ಷಿಯಿಂದ ಲಲಿತೆಯೊಡನೆ ನನ್ನ ವಿವಾಹವಾಗಿದೆ. ಅವಳು ನನ್ನ ವಿವಾಹಿತ ಧರ್ಮ ಪತ್ನಿಯಾಗಿದ್ದಾಳೆ. ೨೨ | ಭೀಮಸಿಂಹನ ಮುಖಚರ್ಯೆಯು ತತ್‌ಕ್ಷಣಕ್ಕೆ ಕಪ್ಪಾಯಿತು. ಆತನು ಕುಮಾ ರನೊಡನೆ ಏನನ್ನೂ ಮಾತನಾಡದೆ ಸರತಾನಸಿಂಹನನ್ನು ಕರೆದುಕೊಂಡು ಸಮೀಪದ ಕೋಣೆಯಲ್ಲಿ ಹೋದನು. ಅವರಿಬ್ಬರೂ ಕೆಲಹೊತ್ತಿನ ವರೆಗೆ ಅಲ್ಲಿ ಆಲೋಚನೆ ಮಾಡಿ ಬಳಿಕ ಮತ್ತೆ ಕರುಣಸಿಂಹನು ನಿಂತುಕೊಂಡಿದ್ದ ಕೋಣೆಗೆ ಬಂದರು. ತನ್ನ ಆಸನದ ಮೇಲೆ ಕುಳಿತುಕೊಂಡು ಭೀಮಸಿಂಹನು ಗಂಭೀರತೆಯಿಂದ ಕುಮಾರನನ್ನು ಕುರಿತು ಮಾತನಾಡಿದನು. ( ಕುಮಾರ, ತಾವು ಪ್ರಸಿದ್ದವಾದ ಕುಲ ದಲ್ಲಿ ಹುಟ್ಟಿದ ರಜಪೂತರು. ನಿಜವಾದ ರಜಪೂತರು ಕುಲಾಚಾರಗಳನ್ನು ಪಾಲಿಸುವು ದರಲ್ಲಿ ಎಷ್ಟು ತತ್ಪರರಾಗಿರುತ್ತಾರೆಂಬುದನ್ನು ತಮಗೇನೂ ಹೇಳಬೇಕಾದುದಿಲ್ಲ. ತಾವು ಅಗ್ನಿ ಬ್ರಾಹ್ಮಣರ ಸಮಕ್ಷದಲ್ಲಿ ಲಲಿತೆಯೊಡನೆ ವಿವಾಹ ಮಾಡಿಕೊಳ್ಳುವ ಮೊದಲು ನಮ್ಮ ಕುಲಾಚಾರಗಳೆಲ್ಲವನ್ನೂ ನೀವು ಪಾಲಿಸಲಿಕ್ಕೆ ಬೇಕು. ” < ಆಗಲಿ, ಅವೆಲ್ಲವುಗಳನ್ನೂ ನಾನು ಅವಶ್ಯವಾಗಿ ಪಾಲಿಸುವೆನು. ” 4 ಹಾಗಾದರೆ ಕೇಳಿರಿ, ದುರ್ಗದ ಬಡಗಣ ದಿಕ್ಕಿನಲ್ಲಿ ಎತ್ತರವಾದ ಆ ಬೆಟ್ಟದ ಶಿಖರದ ಮೇಲೊಂದು ಚಿಕ್ಕ ಮಂದಿರವಿದೆ. ಅದಕ್ಕೆ ಪ್ರಮೋದ ಭವನ' ವೆಂದು ಹೆಸರು. ಆ ಪ್ರಮೋದಭವನದಲ್ಲಿಯೇ ನಮ್ಮ ಕುಲದ ಹುಡುಗ ಹುಡಿಗೆಯರ ವಿವಾಹ ವನ್ನು ಮಾಡುತ್ತೇವೆ. ಇಂದು ವಿವಾಹಕ್ಕೆ ಶುಭಮುಹೂರ್ತವಿದೆ. ಇಂದಿನ ದಿವಸವೆಲ್ಲ ನೀವು ಉಪವಾಸದಿಂದಲೇ ಇರಬೇಕು. ಒಂದು ಗುಟುಕು ನೀರನ್ನೂ ಕೂಡ ಬಾಯಲ್ಲಿ ಹಾಕಿಕೊಳ್ಳಕೂಡದು. ಸೂರ್ಯಾಸ್ತಕ್ಕೆ ಇನ್ನು ಒಂದೆರಡು ಗಳಿಗೆಯ ಅವಕಾಶವಿರು ವಾಗ ಲಲಿತೆಯನ್ನು ಎತ್ತಿಕೊಂಡು ಮಧ್ಯದಲ್ಲಿ ಒಂದು ಕ್ಷಣವಾದರೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಪರ್ವತಮಾರ್ಗದಿಂದ ಪ್ರಮೋದಭವನಕ್ಕೆ ಬಂದು ಮುಟ್ಟಬೇಕು. ನಮ್ಮ ವಂಶದಲ್ಲಿ ಪರಮಪವಿತ್ರವಾದ ಇದೊಂದು ಆಚಾರವು ಪರಂಪರೆಯಿಂದ ನಡೆದು ಬಂದಿದೆ. ಪ್ರತಿಯೊಂದು ವಿವಾಹದಲ್ಲಿಯೂ ವರನು ಈ ಆಚಾರವನ್ನು ಅವಶ್ಯವಾಗಿ 144f " 4/J2 # # # # # # # _ \" = + + +++ + ** * ••• • • • • •••••••••••••• ••••4. ೪೨ ದಾಗ್ಯೂಷಣ ಪಾಲಿಸಬೇಕು, ಲಲಿತೆಯನ್ನು ಎತ್ತಿಕೊಂಡು ಪ್ರಮೋದಭವನವನ್ನು ಮುಟ್ಟದಿರೆಂದರೆ ಅವಳು ಅಗ್ನಿ ಬ್ರಾಹ್ಮಣ ಸಾಕ್ಷಿಯಾಗಿ ನಿಮ್ಮ ಧರ್ಮಪತ್ನಿಯಾಗುವಳು. ಸಾಯಂಕಾ ಬದ ಶುಭಮುಹೂರ್ತದಲ್ಲಿ ನಾನು ನನ್ನ ಪ್ರಿಯ ಕನೈಯನ್ನು ನಿಮಗೆ ಅರ್ಪಿಸುವೆನು, ” ಭೀಮಸಿಂಹನ ಮಾತಿಗೆ ಕರುಣಸಿಂಹನು ತತ್‌ಕ್ಷಣದಲ್ಲಿಯೇ ಸಮ್ಮತಿಯನ್ನಿ ತನು, ಸರತಾನಸಿಂಹನೊಡನೆ ಕೆಲಹೊತ್ತು ಆಲೋಚನೆ ಮಾಡಿ ಭೀಮಸಿಂಹನು ಈ ವಿಲಕ್ಷಣ ಕುಲಾಚಾರವನ್ನು ಪಾಲಿಸುವಂತೆ ತನಗೆ ಹೇಳಿದುದರಿಂದ ಇದರಲ್ಲಿ ಏನಾ ದರೂ ಕಪಟವಿರಲಿಕ್ಕೆ ಬೇಕೆಂದು ಕರುಣಸಿಂಹನಿಗೆ ಶಂಕೆಯು ಉತ್ಪನ್ನವಾಯಿತು. ಆದರೆ ಆತನು ಅತ್ಯಂತ ಶೂರನಾದ ರಜಪೂತನಾಗಿದ್ದನು. ಎಂತಹ ಬಿಕ್ಕಟ್ಟಿನ ಕೆಲಸವಿ ದ್ದರೂ ಅದರಲ್ಲಿ ತನಗೆ ಅಪಯಶಸ್ಸು ಒದಗಬಹುದೆಂಬ ಕಲ್ಪನೆಯೇ ಅವನ ಮನಸ್ಸಿ ನಲ್ಲಿ ಬರುತ್ತಿದ್ದಿಲ್ಲ. ಆದುದರಿಂದ ಆ ಕ್ಷಣದಲ್ಲಿಯೇ ಆತನು ನಿರ್ಭಯಹೃದಯದಿಂದ ಭೀಮಸಿಂಹನ ಮಾತಿಗೆ ಒಡಂಬಟ್ಟನು. ಭೀಮಸಿಂಹನ ಪೂರ್ವಜರಲ್ಲಿ ಈ ತರದ ಒಂದು ನಡತೆಯು ಕೆಲವು ದಿವಸಗಳ ವರೆಗೆ ನಿಜವಾಗಿಯೂ ಇತ್ತು. ಆದರೆ ಕಾಲಾಂತರದಲ್ಲಿ ಆ ಆಚಾರವು ಲೋಪವನ್ನು ಹೊಂದಿ ಈ ಕಾಲಕ್ಕಂತೂ ಕೇವಲ ನಾಮಶೇಷವಾಗಿತ್ತು. ಕುಮಾರ ಕರುಣಸಿಂಹ ನನ್ನು ಈ ಕುಲಾಚಾರವನ್ನು ಪಾಲಿಸುವುದಕ್ಕೆ ಹಚ್ಚುವುದರಲ್ಲಿ ಸರತಾನಸಿಂಹನು ಅತ್ಯಂತ ದುಷ್ಟ ವಾದ ಉದ್ದೇಶವನ್ನಿಟ್ಟು ಕೊಂಡಿದ್ದನು. ಇಡೀ ದಿವಸದಲ್ಲಿ ನೀರಿನ ಹನಿಯನ್ನು ಕೂಡ ಬಾಯಲ್ಲಿ ಹಾಕದೆ ನಿರಾಹಾರದಿಂದ ಇದ್ದ ಮೇಲೆ, ಬಲಿಷ್ಠಳಾದೊಬ್ಬ ಪೂರ್ಣ ವಯಸ್ಕ ಯುವತಿಯನ್ನು ಹೊತ್ತುಕೊಂಡು ಪರ್ವತದ ಮೇಲೆ ಹೋಗುವುದು ಅತ್ಯಂತ ಕಷ್ಟಕರವಾದುದು! ಅಸಂಭವನೀಯವೆಂದೇ ಹೇಳಿದರೂ ಹೇಳಬಹುದು! ಆದುದ ರಿಂದ ಕುಮಾರನಿಗೆ ಲಲಿತೆಯು ಲಭಿಸಲಾರಳೆಂದು ಆತನು ಯೋಚಿಸಿದ್ದನು. ಭೀಮ ಸಿಂಹನ ಮನಸ್ಸಿನಲ್ಲಿ ಈ ತರದ ಉದ್ದೇಶವಾವುದೂ ಇಲ್ಲ. ಆತನ ಮನಸ್ಸಿನಲ್ಲಿ ಕರು ಣಸಿಂಹನ ವಿಷಯಕ್ಕೆ ತೀವ್ರದ್ವೇಷವು ಎಂದೂ ಇದ್ದಿಲ್ಲ. ಈ ಪ್ರಸಂಗದಲ್ಲಿಯಂತೂ ಆ ದ್ವೇಷವು ಪ್ರಾಯಶಃ ಇಲ್ಲದಂತಾಗುತ್ತಲೇ ಬಂದಿತ್ತು. ಈ ವೀರೋಚಿತ ಪರೀಕ್ಷೆ ಯಲ್ಲಿ ಕುಮಾರನು ಉತ್ತೀರ್ಣನಾದರೆ, ಇಂತಹ ಯೋಗ್ಯನಾದ ತರುಣನಿಗೆ ತನ್ನ ಮಗ ಳನ್ನು ಅರ್ಪಿಸುವುದಕ್ಕೆ ಆತನಿಗೆ ಒಂದು ವಿಧವಾದ ಆನಂದವೇ ಆಗುತ್ತಿತ್ತು. ಪರೀಕ್ಷೆ ಯಲ್ಲಿ ಒಂದು ವೇಳೆ ಆತನಿಗೆ ಯಶಸ್ಸು ಬರದೆ ಹೋಗಿದ್ದರೂ ಆತನಿಗೆ ಅಷ್ಟೊಂದು ಕೆಡಕೆನಿಸುತ್ತಿದ್ದಿಲ್ಲ. ಹೀಗೆ ಆತನು ಭಾವೀಪರಿಣಾಮದ ವಿಷಯದಲ್ಲಿ ಉದಾಸೀನ ನಾಗಿದ್ದನು. ಗಣೇಶಮಂದಿರದೊಳಗಿನ ಸುಸಜ್ಜಿತವಾದ ಒಂದು ಭಾಗದಲ್ಲಿ ಸುಂದರವಾ ದೊಂದು ಮಂಚದ ಮೇಲೆ ಕುಮಾರ ಕರುಣಸಿಂಹನು ಸ್ವಸ್ಥವಾಗಿ ಮಲಗಿಕೊಂಡಿದ್ದನು. ಪ್ರೇಮಮಂದಿರ. hr shr\ + 1 hit ht! #w ಆತನ ಪ್ರಫುಲ್ಲವಾದ ಮುಖಮಂಡಲವನ್ನು ನೋಡಿದರೆ, ಸದ್ಯಕ್ಕೆ ಆತನಿಗೆ ಯಾವದಾದ ರೊಂದು ಸುಖಸ್ವಪ್ನವು ಬಿದ್ದಿರಬಹುದೆಂದು ಯಾರಿಗಾದರೂ ತಿಳಿಯುವಂತಿತ್ತು. - ಇಷ್ಟರಲ್ಲಿ ಲಲಿತೆಯು ಮೆಲ್ಲನೆ ಅಲ್ಲಿಗೆ ಬಂದಳು. ಕರುಣಸಿಂಹನು ಇನ್ನೂ ಮಲ ಗಿದ್ದನು. ರಾಜಕನ್ಯಯು ಮೆಲ್ಲನೆ ಬಂದು ಕರುಣಸಿಂಹನ ಕಾಲೈಸೆಗೆ ಮಂಚದ ಮೇಲೆ ಕುಳಿತುಕೊಂಡಳು. ಆಕೆಯು ಬಹಳ ಹೊತ್ತಿನವರೆಗೆ ಕುಳಿತುಕೊಳ್ಳಬೇಕಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಕುಮಾರನಿಗೆ ಎಚ್ಚರವಾಯಿತು. ಆತನು ಕರೆದು ನೋಡುವ ಷ್ಟರಲ್ಲಿ ಸಮೀಪದಲ್ಲಿಯೇ ಲಲಿತೆಯನ್ನು ಕಂಡನು. ಕುಮಾರನು ಅತ್ಯಂತ ಪ್ರಸನ್ನ ಹೃದಯದಿಂದ ಲಲಿತೆಯನ್ನು ಕೇಳಿದನು, ಏ ಲಲಿತೇ, ಇದೇನು ? ಈ ಸಮಯದಲ್ಲಿ ಇತ್ತ ಕಡೆಗೆ ಬಂದು ಬಿಟ್ಟೆ ! ಭೀಮಸಿಂಹರ ವರು ನನಗೆ ಭೆಟ್ಟಿಯಾಗುವದಕ್ಕೋಸ್ಕರ ನಿನ್ನನ್ನು ಇತ್ತ ಕಡೆಗೆ ಕಳಿಸಿಕೊಟ್ಟರೇನು ? ” ಕುಮಾರನ ಊಹೆಯು ನಿಜವಾಗಿತ್ತು. ಈ ಕಾಲದಲ್ಲಿ ಭೀಮಸಿಂಹನೇ ಕರುಣ ಸಿಂಹನ ಆತಿಥ್ಯಕ್ಕೋಸ್ಕರವಾಗಿ ಲಲಿತೆಯನ್ನು ಕಳುಹಿಸಿದ್ದನು. ಕುಮಾರನ ಪ್ರಶ್ನೆಗೆ ಏನೂ ಉತ್ತರವನ್ನು ಕೊಡದೆ ಲಲಿತೆಯು ಮೊಗವನ್ನು ತಗಿ ಸಿಕೊಂಡು ನಿಂತುಕೊಂಡಳು. ಕುಮಾರನು ಪ್ರೇಮಭರದಿಂದ ಮತ್ತೆ ಲಲಿತೇ, ” ಎಂದು ಕರೆದನು. ಲಲಿತೆಯ ಸ್ವಭಾವವು ಇಂದು ಹಾಗೆ ಏಕೆ ಆಗಿತ್ತೋ ಏನೋ! ಯಾರಿಗೆ ಗೊತ್ತು! ಅವಳು ಹೆಚ್ಚಾಗಿ ಏನೂ ಮಾತಾಡಲಿಲ್ಲ. ಗದ್ಧದ ಸ್ವರದಿಂದ ( ಕುಮಾರ- ಎಂಬ ಶಬ್ದ ಮಾತ್ರವು ಅವಳ ಮುಖದಿಂದ ಹೊರಟಿತು, ಆಕೆಯ ಕಣ್ಣುಗಳೊಳಗಿಂದ ಅಶ್ರುಪ್ರವಾಹವು ಸುರಿಯಹತ್ತಿತು, ಕರುಣಸಿಂಹನಿಗೆ ಲಲಿತೆಯು ಹೀಗೇಕೆ ವರ್ತಿಸು ತಾಳೆಂಬುದು ತಿಳಿಯದಾಯಿತು. ಚಟಕ್ಕನೆ ಎದ್ದು ತನ್ನ ಉತ್ತರೀಯ ವಸ್ತ್ರದಿಂದ ಆಕೆ ಯ ಅಶ್ರುಗಳನ್ನು ಒರಸಿ ಪ್ರೇಮಸೂಚಕ ಸ್ವರದಿಂದ ಮಾತನಾಡಿದನು. ( ಛೇ! ಛೇ! ಲಲಿತೇ, ಇಂದು ನೀನು ಹೀಗೇಕೆ ಮಾಡುತ್ತಿರುವೆ? ಈ ಕಾಲದಲ್ಲಿ ನಿನ್ನ ಕಣ್ಣಳಗೆ ಅಮಂಗಲವಾದ ಅಶ್ರುಗಳೇಕೆ? ಈ ಹೊತ್ತಿನಂತಹ ಶುಭದಿವಸದಲ್ಲಿ ಹೀಗೆ ಕಣ್ಣೀರು ಗಳನ್ನು ಸುರಿಸುವುದು ನಿನ್ನಂತಹ ರಜಪೂತ ಕನೈಗೆ ಉಚಿತವಾದುದೇ ? ಕುಮಾರನ ಈ ಪ್ರೇಮಪೂರ್ಣ ಶಬ್ದಗಳಿಂದಲೂ ಲಲಿತೆಯ ಅಶ್ರುಪ್ರವಾಹವು ಕಟ್ಟಾಗಲಿಲ್ಲ. ಮುಖವನ್ನು ಕೆಳಗೆ ಬಗ್ಗಿಸಿ ಅವಳು ಒಂದೇಸಮನೆ ಕಣ್ಣೀರು ಸುರಿಸುತ್ತಿ ದ್ದುದನ್ನು ನೋಡಿ ಕರುಣಸಿಂಹನಿಗೆ ಕಸವಿಸಿಯಾಯಿತು. ಮತ್ತೊಮ್ಮೆ ಆಕೆಯ ಅಶ್ರು ಗಳನ್ನು ಒರಸಿ ಕುಮಾರನು ಪ್ರೇಮದಿಂದ ಮಾತನಾಡಿದನು. (( ಲಲಿತೇ, ಏನಿದು ? ಈ ಪ್ರಕಾರ ಅಮಂಗಲವಾದ ಕಣ್ಣೀರುಗಳನ್ನು ಇಂದು ಸುರಿಸುವುದಕ್ಕೆ ಕಾರಣವಾ ದರೂ ಏನು ? ಹೇಳು, ” ವಾಗ್ಯೂಷಣ. + v Y ಲಲಿತೆಯು ಬಿಕ್ಕುತ್ತ ಬಿಕ್ಕುತ್ತ ಮಾತನಾಡಿದಳು, ಕುಮಾರ ನಿಮಗೆ ಏನು ಹೇಳಲಿ! ನಮ್ಮ ಸರ್ವಸ್ವವೂ ಘಾತವಾಯಿತು!” ( ಲಲಿತೇ, ಏನಾಯಿತು ? ” ( ಕುಲಾಚಾರವೆಂದು ಸರತಾನಸಿಂಹನ ಸಲಹೆಯಿಂದ ನಿಮಗೆ ಹೇಳಿದ ಆಚರಣೆ ಯಿಂದ ನಮ್ಮ ಮೇಲೆ ಎಂತಹ ಭಯಂಕರವಾದ ಅನರ್ಥವು ಒದಗಬಹುದೆಂಬ ಕಲ್ಪನೆ ಯಾದರೂ ನಿಮ್ಮಲ್ಲಿದೆಯೋ? ಪ್ರಮೋದಭವನಕ್ಕೆ ಹೋಗಲು ಎರಡು ದಾರಿಗಳಿವೆ. ಅವುಗಳಲ್ಲಿ ಒಂದು ಸರಳವಾಗಿಯೂ ಸುಲಭವಾಗಿಯೂ ಇದೆ. ಎರಡನೆಯದು ಸುತ್ತಿನ ದಾರಿ ಕ್ರಮಿಸುವುದಕ್ಕೆ ಅತ್ಯಂತ ಕಷ್ಟಕರವಾದುದು! ಸರಳಮಾರ್ಗದಲ್ಲಿ ಹೋಗ ದಂತೆ ಆ ದುಷ್ಟ ಸರತಾನಸಿಂಹನು ವ್ಯವಸ್ಥೆಯನ್ನು ಮಾಡಿಸಿದ್ದಾನೆ. ಆದುದರಿಂದ ಎರ ಡನೆಯ ದಾರಿಯಿಂದಲೇ ನೀವು ನನ್ನನ್ನು ಹೊತ್ತುಕೊಂಡು ಗುಡ್ಡವನ್ನು ಹತ್ತಬೇಕಾಗು ವುದು. ನಿಯಮದಂತೆ ನೀವು ಮಧ್ಯದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತಿಲ್ಲ. ನಮ್ಮ ದುರ್ದೈವವು ನಮಗೋಸ್ಕರ ಯಾವ ಸಂಕಟವನ್ನು ಸಿದ್ದಪಡಿಸಿ ಇಟ್ಟಿರುವುದೋ ಹೇಳಲಿಕ್ಕಾಗುವುದಿಲ್ಲ ” ಇಷ್ಟು ಮಾತನಾಡಿ ಲಲಿತೆಯು ಅತ್ಯಂತ ದುಃಖದಿಂದ ಬಿಕ್ಕಿ ಬಿಕ್ಕಿ ಅಳಹತ್ತಿದಳು, ( ಲಲಿತೇ, ಇದೇ ಸಂಕಟವೇನು ? ಪ್ರೇಮಿಗೆ ಆತನ ಪ್ರಣಯಿನಿಯು ಜಾದಿಯ ಹೂವಿನಂತೆ ಹಗುರಾಗಿರುತ್ತಾಳೆ. ಇದಕ್ಕೆ ಇಷ್ಟೇಕೆ ಚಿಂತೆ ಮಾಡುವೆ? ” ಕುಮಾರನು ಲಲಿತೆಯ ಮುಖಕಮಲವನ್ನು ನೋಡಿ ನಗುತ್ತ ಮಾತನಾಡಿದನು. ( ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದರಂತಾಗಲಿ! ” ಕೈ ಕೊತಿಯನ್ನು ಆಡಿಸಿ ಇರ ಬಿಕ್ಕಿ ಎಂಟನೆಯ ಪರಿಚ್ಛೇದ •ak ಪ್ರೇಮಮಂದಿರ, CC ಕುಮಾರ” «« ಏನು ಲಲಿತೇ? ೨ «« ಅಯ್ಯೋ! ಮುಂದೆ ನಮ್ಮ ಪರಿಣಾಮವು ಹೇಗಾಗುವುದೋ ? ನನಗಂತೂ ಭಯಂಕರವಾದ ಅನರ್ಥವೇ ಗೋಚರವಾಗುತ್ತಿದೆ ! ” ಲಲಿತೆಯು ಗದ್ದದ ಸ್ವರದಿಂದ ನುಡಿದಳು. « ಲಲಿತೇ, ಅನರ್ಥವೆಂತಹುದು ? ಅರ್ಧಕ್ಕಿಂತಲೂ ಹೆಚಾ ದ ದಾರಿಯನ್ನು ಸದ್ಯಕ್ಕೆ ದಾಟಿದ್ದೇನಷ್ಟೆ? ಪ್ರೇಮಮಂದಿರ, ೫೫ VJ+ ಈ + ++++ +++ rt ov/wwwAAM ( ಈ ಅರ್ಧದಾರಿಯನ್ನು ಕ್ರಮಿಸಬೇಕಾದರೆ ನಿಮಗೆ ಅತ್ಯಂತ ಶ್ರಮವಾದಂತೆ ತೋರುತ್ತದೆ. ಅತ್ಯಂತ ಕಷ್ಟದಿಂದ ನೀವು ಶ್ವಾಸವನ್ನು ಬಿಡುತ್ತಿರುವಿರಿ. ಒಂದೊಂದು ಅಡಿಯನ್ನು ಮುಂದಕ್ಕೆ ಇಡಬೇಕಾದರೆ ನಿಮಗೆ ಲೆಕ್ಕವಿಲ್ಲದಷ್ಟು ಯಾತನೆಗಳುಂಟಾಗು ತಿವೆ. ಇನ್ನೂ ಅರ್ಧಹಾದಿಯನ್ನು ನೀವು ಕ್ರಮಿಸಬೇಕಾಗಿದೆ. ಆ ದಾರಿಯಾದರೋ ಹಿಂದಿನ ದಾರಿಗಿಂತ ಕಠಿಣವಾದುದೂ, ಏರಿನ ಪ್ರದೇಶವೂ ಆಗಿದೆ. ಕುಮಾರ ! ಈಗಲೇ ನಿಮ್ಮ ಸಾಮರ್ಥವೆಲ್ಲ ಇಲ್ಲದಂತಾದ ಹಾಗೆ ತೋರುತ್ತದೆ. ಪ್ರಿಯರೇ, ಮನು ಷ್ಯನಿಗೆ ತನ್ನ ಪ್ರಾಣಕ್ಕಿಂತಲೂ ಪ್ರಿಯವಾದ ಇನ್ನಾವ ವಸ್ತುವೂ ಜಗತ್ತಿನಲ್ಲಿಲ್ಲ. ನನ್ನನ್ನು ಕೆಳಗಿಳಿಸಿ ನೀವು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ನನ್ನ ಈ ವಿನಂತಿಯನ್ನಷ್ಟು ದಯಮಾಡಿ ಕೇಳಿರಿ. ” ಲಲಿತೆಯು ಕಣ್ಣೀರುಗಳನ್ನು ಸುರಿಸುತ್ತ ದೀನವಾಣಿಯಿಂದ ಮಾತನಾಡಿದಳು. ಕರುಣಸಿಂಹನು ಲಲಿತೆಗೆ ಉತ್ತರವನ್ನೇ ಕೊಡಲಿಲ್ಲ. ಒಳ್ಳೆ ಕಷ್ಟದಿಂದ ಒಂದೊಂದು ಹೆಜ್ಜೆಯನ್ನು ಮುಂದಕ್ಕೆ ಇಡುತ್ತ ಪರ್ವತದೊಳಗಿನ ದುರ್ಗಮವಾದ ಮಾರ್ಗವನ್ನು ಹೇಗೋ ಕ್ರಮಿಸುತ್ತಿದ್ದನು. ಲಲಿತೆಯೊಡನೆ ಪ್ರೇಮಾಲಾಪವನ್ನು ಮಾಡಲು ಅವನಿಗೆ ಅವಕಾಶವಿದ್ದಿಲ್ಲ. ಮತ್ತು ಅವನಲ್ಲಿ ಅಷ್ಟೊಂದು ಸಾಮರ್ಥವೂ ಉಳಿದಿದ್ದಿಲ್ಲ. ದುರ್ಗಾಧಿಪತಿಯಾದ ಭೀಮಸಿಂಹನೂ, ಸರತಾನಸಿಂಹನೂ, ದುರ್ಜಯ ಸಿಂಹನೂ ಅವರ ಅನುಜರರೂ ಬೆಟ್ಟದ ತುದಿಯಲ್ಲಿ ನಿಂತುಕೊಂಡು, ಲಲಿತೆಯನ್ನೆತಿ ಕೊಂಡು ಪ್ರಮೋದಭವನದ ಕಡೆಗೆ ಬರುತ್ತಿದ್ದ ಆ ರಜಪೂತವೀರನನ್ನು ಲಕ್ಷವೂ ರ್ವಕವಾಗಿ ನೋಡುತ್ತಿದ್ದರೂ ಪ್ರತಿಯೊಬ್ಬರ ಹೃದಯದಲ್ಲಿಯೂ ಅನೇಕ ತರದ ವಿಚಾ ರಗಳೂ ವಿಕಾರಗಳೂ ಈ ಕಾಲಕ್ಕೆ ಹುಟ್ಟುತ್ತಿದ್ದುವು. ತನ್ನ ಚಿರವಾಂಛಿತವಲ್ಲಭೆಯನ್ನೆತ್ತಿಕೊಂಡು ಒಂದೊಂದೇ ಹೆಜ್ಜೆಯನ್ನು ಮುಂದ ಕೈ ಇಡುತ್ತ ಕರುಣಸಿಂಹನು ಒಳ್ಳೆ ಕಷ್ಟದಿಂದ ಪ್ರಮೋದಭವನದ ಕಡೆಗೆ ಬರುತ್ತಿ ದ್ದನು. ಬೆಟ್ಟದ ತುದಿಯಲ್ಲಿರುವ ಭೀಮಸಿಂಹಾದಿ ಪ್ರೇಕ್ಷಕಮಂಡಳಿಯನ್ನು ನೋಡಿದೆ ಡನೆಯೇ ಆತನಲ್ಲಿ ಉತ್ಸಾಹವು ಹುಟ್ಟುತ್ತಿತ್ತು. ಅದರಂತೆ ತನ್ನ ಹೃದಯಕ್ಕೆ ಹೊಂದಿ ಕೊಂಡಿರುವ ಲಲಿತೆಯನ್ನು ಪ್ರೇಮಪೂರ್ಣದೃಷ್ಟಿಯಿಂದ ನೋಡಿದೊಡನೆಯೇ ಆತ ನಲ್ಲಿ ನೂತನವಾದ ಶಕ್ತಿಯು ಉಗಮಹೊಂದುತ್ತಿತ್ತು, ಈ ಪ್ರಕಾರ ಮೆಲ್ಲಮೆಲ್ಲನೆ ಕರುಣಸಿಂಹನು ತನ್ನ ಇಷ್ಟ ಸ್ಥಲದ ಕಡೆಗೆ ನಡೆದಿ ದ್ದನು. ಪ್ರತಿಯೊಂದು ಹೆಜ್ಜೆಯನ್ನು ಎತ್ತಿ ಇಡುವಾಗ ಆತನಿಗೆ ಪ್ರಾಣಾಂತವಾದ ಕಷ್ಟ, ವಾಗುತ್ತಿತ್ತು. ಆದರೂ ಅಷ್ಟೊಂದು ಶ್ರಮವನ್ನು ಕೂಡ ಲೆಕ್ಕಿಸದೆ ಅವನು ಹಾಗೂ ಹೀಗೂ ಪ್ರಮೋದಭವನಕ್ಕೆ ತೀರ ಹತ್ತರದಲ್ಲಿ ಬಂದು ನಿಂತನು ಕರುಣಸಿಂಹಸು k ಮಗ್ಗ ಷಣ. ••• • • • • • - A ಎಷ್ಟೇ ಬಲಿಷ್ಠನೂ, ಎಷ್ಟೇ ಉತ್ಸಾಹಶಾಲಿಯೂ ಆಗಿದ್ದರೂ ಅವನೂ ಒಬ್ಬ ಮನು ಷ್ಯನಷ್ಟೆ? ಅಂದ ಮೇಲೆ ನಿಸರ್ಗದ ಸಾಮರ್ಥ್ಯವನ್ನು ಮೀರಿ ನಡೆಯವುದು ಅವ ನಿಂದ ಹೇಗೆ ಆಗಬೇಕು ? ಪ್ರಮೋದಭವನದಿಂದ ಹತ್ತು ಇಪ್ಪತ್ತು ಮೊಳಗಳ ಅಂತರದಲ್ಲಿರುವಾಗ ಕರುಣ ಸಿಂಹನ ಸಾಮರ್ಥವೆಲ್ಲ ಗಲಿತವಾಯಿತು. ಆತನ ಬಾಹುಬಂಧನವು ನಿರ್ಜೀವವಾದುದ ರಿಂದ ಲಲಿತೆಯು ಭೂಮಿಯ ಮೇಲೆ ನಿಂತುಕೊಂಡಳು. ಕ್ಷಣಾರ್ಧದಲ್ಲಿಯೇ ಕರುಣ ಸಿಂಹನು ಮೂರ್ಚ್ಛಿತನಾಗಿ ದೊಪ್ಪನೆ ನೆಲಕ್ಕೆ ಬಿದ್ದನು. ರಾಜಕುಮಾರಿಯು ಹೆದರಿದಳು. ಈ ಪ್ರಸಂಗದಲ್ಲಿ ಏನು ಮಾಡಬೇಕೆಂಬುದು ಅವಳಿಗೆ ತಿಳಿಯದಾಯಿತು ! ಕರುಣಸಿಂಹನ ಬಳಿಯಲ್ಲಿ ಕುಳಿತು ಆತನಿಗೆ ಶೈತ್ಯೋಪ ಚಾರವನ್ನು ಮಾಡಹತ್ತಿದ್ದಳು. ಕುಮಾರನು ತೀರ ನಿಶ್ಚಲವಾಗಿ ಬಿದ್ದಿದ್ದನು. ಆತನ ಬಾಯೊಳಗಿಂದ ರಕ್ತವು ಸುರಿಯುತ್ತಿತ್ತು. ಆತನ ಚೈತನ್ಯವೆಲ್ಲ ಲುಪ್ತವಾಗಿತ್ತು. ಆತನ ಹೃದಯದೊಳಗಿನ ರಕ್ತ ಕೋಶದ ಬಂಧನವು ಹರಿದುಹೋಗಿತ್ತು ! ಲಲಿತೆಯ ದೈವವು ಪ್ರತಿಕೂಲವಾಯಿತು! ಕ್ಷಣಾರ್ಧದಲ್ಲಿಯೇ ಕೆಲಸವೆಲ್ಲ ತೀರಿತು ! ತನ್ನ ಪ್ರಿಯಕರನು ಈ ಮೃತ್ಯುಲೋಕವನ್ನು ಬಿಟ್ಟು ಸ್ವರ್ಗಧಾಮಕ್ಕೆ ಹೊರಟು ಹೋದನೆಂಬುದು ಆಕೆಗೆ ಆಗಲೇ ಗೊತ್ತಾಯಿತು. ಆ ಕ್ಷಣದಲ್ಲಿಯೇ ಅವಳ ಮೈ ಮೇಲಿನ ಎಚ್ಚರದಪ್ಪಿ ಅವಳು ಭ್ರಮಿಷ್ಟೆಯಾದಳು. “ ಕುಮಾರ-ಕುಮಾರ ! ) ಎಂದು 'ಕರುಣಸ್ವರದಿಂದ ಶಂಖವಾದ್ಯ ಮಾಡುತ್ತ ನೆಲದ ಮೇಲಿನ ದೂಳಿಯಲ್ಲಿ * ಗುಡುಗುಡು ' ಹೊರಳಾಡಹತ್ತಿದಳು. ಈ ಸ್ಥಿತಿಯನ್ನು ನೋಡಿ ಭೀಮಸಿಂಹ ಸರತಾನಸಿಂಹ, ದುರ್ಜಯಸಿಂಹ ಮೊದ ಲಾದವರು ಓಡಿ ಬರಹತ್ತಿದರು. ಈ ಜನರೆಲ್ಲರೂ ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿ ಲಲಿತೆಯು ಇನ್ನೂ ಭಯಭೀತಳಾದಳು. ಇನ್ನು ಮೇಲೆ ದುರ್ಜಯಸಿಂಹನೊ ಡನೆ ವಿಧಿಪೂರ್ವಕವಾಗಿ ತನ್ನ ವಿವಾಹವನ್ನು ಮಾಡುವರೆಂಬ ವಿಚಾರವು ಆಕೆಯ ಮನಸ್ಸಿನಲ್ಲೊಂದು ಕ್ಷಣಕಾಲ ಬಂತು. ತಮ್ಮ ಈ ದುಷವಾದ ಹೇತುವನ್ನು ಸಾಧಿಸಿ ಕೊಳ್ಳುವುದಕ್ಕಾಗಿಯೇ ಸರತಾನಸಿಂಹಾದಿ ನೀಚರು ಈ ವಿಧದ ಕೌಶಲ್ಯದಿಂದಲೂ ತನ್ನ ಹೃದಯವಲ್ಲಭನಿಗೆ ಮರಣವನ್ನುಂಟು ಮಾಡಿದರು. ಇನ್ನು ಮುಂದಿನ ಮಾರ್ಗವು ಅವರಿಗೆ ನಿರಾತಂಕವಾಗಿಯೇ ಇದೆ. ಪಾಷಾಣಹೃದಯಿಯಾದ ತನ್ನ ತಂದೆಯು ತನ್ನನ್ನು ದುರ್ಜಯಸಿಂಹನಿಗೆ ಸಮರ್ಪಿಸಿದ ಹೊರತು ಬಿಡುವುದಿಲ್ಲ. ಈ ಪ್ರಕಾರದ ವಿಚಾರಗಳು ಲಲಿತೆಯ ತಲೆಯಲ್ಲಿ ಸುಳಿದಾಡಹತ್ತಿದುವು. ಮುಂದಾಗತಕ್ಕ ತನ್ನ ಆ ವಿಟಂಬನೆಯನ್ನು ಕಳೆದುಕೊಳ್ಳಬೇಕಾದರೆ ಏನು ಮಾಡಬೇಕೆಂಬುದು ಅವಳಿಗೆ ತಿಳಿಯ ದಾಯಿತು? ಪ್ರೇಮಮಂದಿರ, M I v Ayy Ayyy ಇದಕ್ಕೆ ಇನ್ನಾವ ಉಪಾಯವಿದೆ? ಈ ವಿಶಾಲವಾದ ಸೃಷ್ಟಿಯಲ್ಲಿ ಯಾರಿಗೆ ತನ್ನವ ರೆಂದು ಹೇಳಿಕೊಳ್ಳಲು ಒಬ್ಬರೂ ಇಲ್ಲವೋ ಅಂತಹರಿಗೆ ಭಗವಂತನ ಹೊರತು ಇನ್ನೊಂದು ಆಧಾರವಾವುದು? ಸಜಲನೇತ್ರಗಳಿಂದಲೂ ಭಾವಾಕ್ರಾಂತಹೃದಯ ದಿಂದಲೂ ಲಲಿತೆಯು ಆಕಾಶದ ಕಡೆಗೆ ನೋಡಿದಳು. ಶುಭ್ರವಾದ ನಿರ್ಜಲ ಮೇಘ ಖಂಡಗಳು ಎಲ್ಲೆಡೆಯಲ್ಲಿಯೂ ಹರಡಿದ್ದು ಅವುಗಳಾಚೆಯಲ್ಲಿ ಸುನೀಲವಾದ ಆಕಾಶವು ತರಂಗಹೀನವೂ ಶಾಂತವೂ ಸ್ಥಿರಪ್ರಕೃತಿಯೂ ಆದ ಸಮುದ್ರದಂತೆ ಕಾಣುತ್ತಿತ್ತು. ಆ ಶಾಂತವಾದ ನೀಲಾಕಾಶದ ಒಂದು ತೇಜಃಪುಂಜಿ ಭಾಗದಲ್ಲಿ ಮಹಾಮೂಲ್ಯವಾದ ರತ್ನಖಚಿತ ಸಿಂಹಾಸನದಲ್ಲಿ ಕರುಣಸಿಂಹನ ದಿವ್ಯವಾದ ಉಜ್ವಲಮೂರ್ತಿಯು ವಿರಾಜ ಮಾನವಾಗಿರುವಂತೆ ಅವಳಿಗೆ ತೋರಿತು! ಆ ಜ್ಯೋತಿರ್ಮಯವಾದ ಸ್ವರ್ಗ ರಾಜ್ಯದಲ್ಲಿ ಪ್ರವೇಶಿಸಿದ ಕುಮಾರನ ತೇಜೋಮಯ ಮೂರ್ತಿಯು ಅಧಿಕವಾದ ಉಜ್ವಲತೆಯನ್ನು ಧಾರಣಮಾಡಿತ್ತು. ತೇಜಃಪುಂಜವಾದ ಆ ಮುಖಮಂಡಲದ ಮೇಲೆ ಲವಮಾತ್ರವೂ ಕಲಂಕವಿದ್ದಿಲ್ಲ. ವಿಷಾದ, ಕ್ಲಾ೦ತಿ ಮೊದಲಾದ ಯಾವ ಕಳೆಯೂ ಆ ಮುಖದಲ್ಲಿದ್ದಿಲ್ಲ. ಆ ಮೂರ್ತಿಯ ನೇತ್ರಗಳಲ್ಲಿ ಆಶೆಯೂ, ದೃಷ್ಟಿಯಲ್ಲಿ ದಿವ್ಯಸ್ನೇಹವೂ, ಓಷ್ಠ ಪ್ರಾಂತದಲ್ಲಿ ಸ್ವರ್ಗಿಯ ಹಾಸ್ಯವೂ, ಹೃದಯದಲ್ಲಿ ಚಿರಕಾಲೀನ ಜೀವಂತಪ್ರೇಮವೂ ವಾಸಮಾಡು ತಿದ್ದುವು. ಆ ಅಜ್ಞಾತವಾದ ಸಾಮ್ರಾಜ್ಯದಲ್ಲಿ ಹೋಗಿ ಉಜ್ವಲವೂ, ತೇಜಃಪೂರ್ಣವೂ ಆದ ಸ್ವರ್ಗೀಯ ಸಿಂಹಾಸನದಲ್ಲಿ ಕುಳಿತು ಕುಮಾರನು ಹಾಸ್ಯಮುಖದಿಂದ ಅಂಗುಲಿ ನಿರ್ದೆಶಮಾಡುತ್ತ ಲಲಿತೆಯನ್ನು ಕುರಿತು ಹೀಗೆ ಹೇಳುತ್ತಿರುವಂತೆ ತೋರಿತು. (ಲಲಿತೇ, ಹೃದಯೇಶ್ವರಿ! ಪ್ರಿಯೇ ಇಲ್ಲಿ ಬಾ ! ಇಲ್ಲಿ ಬರಲು ಹೆದರುವೆಯೇಕೆ ? ಇದೋ ನೋಡು. ನಿನಗೋಸ್ಕರವಾಗಿ ಈ ದಿವ್ಯಸಿಂಹಾಸನದಲ್ಲಿ ಅರ್ಧ ಸ್ಥಳವನ್ನು ಹಾಗೆಯೇ ಬಿಟ್ಟಿದ್ದೇನೆ. ಈ ಸ್ಥಾನದಲ್ಲಿ ಯಾವತರದ ಚಿಂತೆಯೂ ಇಲ್ಲ; ಯಾತನೆಗಳಿಲ್ಲ; ವಿರಹವಿಲ್ಲ; ನಿರಾಶೆ, ನಿಂದೆ, ಅವಮಾನಾದಿಗಳ ಹೆಸರು ಕೂಡ ಇಲ್ಲಿ ಇಲ್ಲ. ಹಾಗಾದರೆ ಇಲ್ಲಿ ಏನಿರುವುದೆಂದು ಕೇಳುತ್ತೀಯೋ? ಕೇವಲ ಚಿರಶಾಂತಿಯೂ, ಅನಂತವೂ ಸ್ವರ್ಗಿ ಯವೂ ಆದ ವಿಮಲಪ್ರೇಮವೂ, ಮಧುರಸ್ನೇಹವೂ ಇಲ್ಲಿ ಪೂರ್ಣತ್ವದಿಂದ ವಾಸಿಸ ಇವೆ, ಲಲಿತೇ! ಇಂತಹ ರಮಣೀಯವಾದ ಸ್ಥಳಕ್ಕೆ ಬರಲು ನೀನು ಶಂಕಿಸುತಿ, ರುವಿಯೇಕೆ ? ” ಮನಃಕಲ್ಪಿತವಾದ ಈ ದೃಶ್ಯವನ್ನು ನೋಡಿ ಆ ಯಾತನಾಮಯ ಸ್ಥಿತಿಯಲ್ಲಿಯೂ ಲಲಿತೆಯ ಮುಖಮಂಡಲದ ಮೇಲೆ ಹರ್ಷಚ್ಛಾಯೆಯು ಪಸರಿಸಿತು. ನಿರಾಶೆಯ ಘೋರ ವಾಡ ಅಂಧಕಾರದಲ್ಲಿ ಆಶಾಕಿರಣವೊಂದು ಪ್ರಕಾಶಿಸಲು ಆ ಅಂಧಕಾರದಲ್ಲಿ ತೋಳ ಲುತ್ತೆ ಬಿದ್ದಿರುವ ಪ್ರಾಣಿಗೆ ಹೇಗೆ ಉತ್ಕಟವಾದ ಆನಂದವಾಗುವುದೋ ಅದರಂತೆಯೇ ರಾಜಕುಮಾರಿಗೆ ಈ ಸಮಯದಲ್ಲಿ ಅಪೂರ್ವವಾದ ಆನಂದವಾಯಿತು. ಹೃದಯವಲ್ಲ ಮಾಗೂ ಷಣ. ww.v2. • ••••• vvvvvvvvvvvvvvk ಭನ ಪ್ರೇಮಪೂರ್ಣವಾದ ಸಂಬೋಧನದಿಂದ ಆಕೆಯ ಹೃದಯದಲ್ಲಿಯೂ , ಮುಖಚ ರ್ಯೆಯಲ್ಲಿಯೂ ತುಂಬಿಕೊಂಡಿದ್ದ ವಿಷಣ್ಣತೆಯು ಕ್ಷಣಾರ್ಧದಲ್ಲಿ ನಷ್ಟವಾಯಿತು. ದುಷ್ಟ ರಾದ ಸರತನಸಿಂಹಾದಿ ಜನರು ಸಮೀಪಕ್ಕೆ ಬರುತ್ತಿರುವುದನ್ನು ನೋಡಿದೊಡನೆಯೇ ಲಲಿಣೆಯು ಕುಮಾರನ ನಡುಕಟ್ಟಿನಲ್ಲಿದ್ದ ತೀಕವಾದ ಕತ್ತಿಯನ್ನು ಹೊರಗೆ ಹಿರಿದಳು. ಮತ್ತು ಕರುಣಸಿಂಹನ ಎದೆಯ ಮೇಲೆ ತಲೆಯನ್ನಿಟ್ಟು “ ಪ್ರಾಣಪ್ರಿಯಾ ! ಇಗೋ ಬಂದೆನು ! ” ಎನ್ನುತ್ತ ಕತ್ತಿಯನ್ನು ಎದೆಯಲ್ಲಿ ಚುಚ್ಚಿಕೊಂಡಳು ! ಕ್ಷಣಾರ್ಧದಲ್ಲಿಯೇ ಕುಮರನ ರಕ್ತಪ್ರವಾಹದಲ್ಲಿ ಲಲಿತೆಯ ಪವಿತ್ರವಾದ ರಕ್ತಪ್ರವಾಹವ ಕೂರಿ ಹೋಯಿತು ! ರಜನಂದಿನಿಯಾದ ಲಲಿತೆಯು ಎಲ್ಲರ ಸಮಕ್ಷದಲ್ಲಿಯೇ ನಗನಗುತ್ತ ಸ್ವರ್ಗದಲ್ಲಿ ತನ್ನ ಹೃದಯವಲ್ಲಭನ ಕಡೆಗೆ ಹೊರಟು ಹೋದಳು ! ಅಲ್ಪಾವಧಿಯಲ್ಲಿಯೇ ಭೀಮಸಿಂಹಾದಿ ಜನರು ಅಲ್ಲಿಗೆ ಬಂದು ಮುಟ್ಟಿದರು. ಆ ಹೃದಯಭೇದಕವಾದ ದೃಶ್ಯವನ್ನು ನೋಡಿ ಭೀಮಸಿಂಹನ ಹೃದಯವು ನಿದೀರ್ಣವಾ ಯಿತು. ಶೋಕದಿಂದ ಶಂಖವಾದ್ಯ ಮಾಡುತ್ತ ಆತನು ಲಲಿತೆಯ ಮೈಮೇಲೆ ಬಿದ್ದನು. ತೀವ್ರವಾದ ಪಶ್ಚಾತ್ತಾಪದಿಂದ ಆತನ ಪಾಪಹೃದಯವು ಚೂರ್ಣವಿಚೂರ್ಣವಾಯಿತು. ನೋಡುನೋಡುವರಷ್ಟರಲ್ಲಿ ಆತನ ಪ್ರೀತಿಯಮಗಳಾದ ಲಲಿತೆಯು ಆತನನ್ನು ತಿರಸ್ಕರಿಸಿ ಸ್ವರ್ಗಕ್ಕೆ ಹೊರಟು ಹೋದಳು ! ಲಲಿತೆಯ ಮೇಲಿದ್ದಷ್ಟು ಭೀಮಸಿಂಹನ ಪ್ರೀತಿಯು ಇನ್ನಾರ ಮೇಲೂ ಇದ್ದಿಲ್ಲ. ಅವಳು ಆತನ ಸುಖಸರ್ವಸ್ವವಾಗಿದ್ದಳು. ಆ ಸರ್ವಸ್ವವು ಈ ಪ್ರಕಾರ ಬಯಲಾಗಲು ಭೀಮಸಿಂಹನು ಭ್ರಮಿಷ್ಯನಂತಾದನು! ಆತನ ತಲೆ ತಿರುಗಿತು. ತನ್ನ ಹತ್ತರದಲ್ಲಿ ನಿಂತುಕೊಂಡಿದ್ದ ಇಬ್ಬರು ಶರೀರರಕ್ಷಕರನ್ನು ಉದ್ದೇಶಿಸಿ ಆತನು ಕಠೋರಸ್ವರದಿಂದ ಮಾತನಾಡಿದನು. * ಫತೇಸಿಂಹ, ಮಾಧವ ಸಿಂಗ ಈ ಪಾಪಿಯಾದ ಸರತಾನಸಿಂಹನನ್ನೂ ಆತನ ಮಗನಾದ ಈ ಚಾಂಡಾಲ ದುರ್ಜ ಯಸಿಂಹನನ್ನೂ ಈಗಲೇ ಸೆರೆಹಿಡಿದು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನಾಳಿನ ದಿವಸ ಅವರನ್ನು ಕಡಿದು ಚೂರು ಚೂರು ಮಾಡಿರಿ! ಈ ದುರಾತ್ಮರ ಕಪಟ ಪಾಶದಲ್ಲಿ ಸಿಕ್ಕು ಬಿದ್ದು ನಾನು ನನ್ನ ಜೀವನಸರ್ವಸ್ವವಾದ ಪ್ರಿಯಲಲಿತೆಯನ್ನು ಕಳೆದುಕೊಂಡು ಕೂಡ್ರಬೇಕಾಯಿತು. ಲಲಿತೇ, ಮಗೂ ಲಲಿತೇ ? ಹಾ !” ದುರ್ಗಪತಿಯ ಅಪ್ಪಣೆಯಂತೆ ಹತಭಾಗಿಗಳಾದ ಸರತಾನಸಿಂಹನೂ ದುರ್ಜಯ ಸಿಂಹನೂ ಸೆರೆ ಹಿಡಿಯಲ್ಪಟ್ಟರು. ದೂಳಿಯಲ್ಲಿ ಬಿದ್ದು, ನಿಶ್ಚಲವೂ ನಿಷ್ಪಂದವೂ ರಕ್ತ ಮಲಿನವೂ ಆದ ಆ ಪ್ರಣಯಿಯುಗದ ದೇಹಗಳನ್ನು ಭೀಮಸಿಂಹನು ಅನಿಮಿಷನೇತ ಗಳಿದ ಜೋಡುತ್ತ ಅಶ್ರುವರ್ಷವವನ್ನು ಮಾಡಹತ್ತಿದನು. ಆತನ ದೃಷ್ಟಿಯು ಲಲಿ ತಯ ಶಾಂತವೂ ತೇಜೋಮಯವೂ ಆದ ಮುಖವನ್ನು ನೋಡುವದರಲ್ಲಿ ಮಗ್ನವಾಯಿತು. ಪ್ರೇಮಮಂದಿರ. M ಇಷ್ಟರಲ್ಲಿ ಯಾರೋ ಒಬ್ಬರು “ ಭೀಮಸಿಂಹಾ! ” ಎಂದು ದೊಡ್ಡ ದನಿಯಿಂದ ಒದರಿದರು ? ಆದರೆ ದುರ್ಗಪತಿಗೆ ಆ ಕೂಗು ಕೇಳಿಸಲಿಲ್ಲ. ಆದುದರಿಂದ ಪರ್ವತ ಪ್ರದೇಶ ವೆಲ್ಲ ಪ್ರತಿಧ್ವನಿತವಾಗುವಂತಹ ಕಠೋರಸ್ವರದಿಂದ ಅದೇ ಶಬ್ದವು ಮತ್ತೆ ಕೇಳಿಸಿತು. ( ಭೀಮಸಿಂಹಾ ! ” ಹತಭಾಗಿಯಾದ ಭೀಮಸಂಹನು ಆತ್ಮವಿಚಾರದೊಳಗಿಂದ ಒಮ್ಮೆಲೆ ಎಚ್ಚತ್ರನು ಕಣ್ಣೆರೆದು ನೋಡಿದನು. ಪುಷ್ಯ ದೇಹಿಯಾದ ಒಬ್ಬ ಸನ್ಯಾಸಿಯ ಸೌಮ್ಯಮೂತಿ ಯಾದ ಒಬ್ಬ ತರುಣನೀರನೂ ಆತನ ಎದುರಿನಲ್ಲಿ ನಿಂತುಕೊಂಡಿದ್ದರು. ಕೋಪದೃಷ್ಟಿ ಯಿಂದ ಭೀಮಸಿಂಹನನ್ನು ನೋಡುತ್ತ ಆ ವೀರಪುರುಷನು ಕ್ರುದ್ದ ಸ್ವರದಿಂದ ಮಾತನಾ ಡಿದನು. (( ಅಧಮಾ! ಚಾಂಡಾಲಾ !! ನನ್ನ ಕರುಣಸಿಂಹನು ಎಲ್ಲಿ ? ” ದುರ್ಗಾಧಿಪತಿಯು ಸಬ್ದನಾದನು; ನಿಶ್ಚಲನಾದನು; ಅವನ ಬಾಯಿಂದ ಶಬ್ದ ಗಳು ಹೊರಡಲಿಲ್ಲ. ಅವನ ಶಕ್ತಿಯೆಲ್ಲವೂ ಲೋಪವನ್ನು ಹೊಂದಿತು; ಸರ್ವಶರೀರವು ನಡುಗಹತ್ತಿತು; ಹೃದಯವು ಶೂನ್ಯವಾಯಿತು; ಆತನ ದೃಷ್ಟಿಯೊಳಗಿನ, ಚೈತನ್ಯವು ನಷ್ಟವಾಯಿತು; ಆತನ ಕಣ್ಣಳಗಿನ ಬಾಷ್ಪಸಂಗ್ರಹವು ಕೂಡ ಬರಿದಾಯಿತು? ಆ ವೀರಪುರುಷನು ಯಾರೆಂಬದು ಭೀಮಸಿಂಹನಿಗೆ ಆಗಲೇ ಗೊತ್ತಾಯಿತು. ಕೂಡಲೇ ಆತನು ಆ ವೀರನ ಪಾದಗಳಿಗೆ ಸಾಷ್ಟಾಂಗವಾಗಿ ಎರಗಿದನು. « ಭೀಮಸಿಂಹ, ನನ್ನ ಕರುಣನು ಎಲ್ಲಿ? ” (1 ಜಹಾಪನಾಹ ಈ ದಾಸನನನ್ನು ಕ್ಷಮಿಸಿರಿ, ಇದೋ ನೋಡಿರಿ. ನಿಮ್ಮ ಪ್ರಿಯ ಸೇನಾಪತಿಯಾದ ಕರುಣಸಿಂಹನು ! ಮತ್ತು ಇವಳೇ ನ-ನನ್ನ ಲಲಿತಯ ! ಹಾಯ ! ಹಾಯ ! ತಾವು ಒಂದು ಗಳಿಗೆಗೆ ಮುಂಚೆಯೇ ಬಂದಿದ್ದರೆ...! " ಸೌಮ್ಯಮೂರ್ತಿಯಾದ ತರುಣವೀರನು ಬೇರೆ ಯಾವನೂ ಆಗಿರದೆ ದಿಲೀಪ ಯಾದ ಅಕಬರಬಾದಶಹನೇ ಆಗಿದ್ದನು. ಕರುಣಸಿಂಹನು ಸಂಕಟದಲ್ಲಿ ಸಿಕ್ಕಿರುವ ಸುದ್ದಿಯನ್ನು ಕೃಷ್ಣಾ ಕುಮಾರಿಯು ಚಂದ್ರಚೂಡನಿಗೆ ತಿಳಿಸಿದಳು. ಕರುಣಸಿಂಹನು ಬಿಡುಗಡೆ ಹೊಂದಬೇಕಾದರೆ ಅಕಬರಬಾದಶನ ಹೊರತು ಗತ್ಯಂತರವಿಲ್ಲವೆಂದು ಭಾವಿಸಿ ಚಂದ್ರಚೂಡನು ಸಮೀಪದಲ್ಲಿಯೇ ಬೀಡಾರವನ್ನು ಹೊಡೆದಿದ್ದ ಅಕಬರನಿಗೆ ಈ ವೃತ್ತಾಂತವನ್ನು ತಿಳಿಸಿದನು. ಆ ಮೇಲೆ ಇಬ್ಬರೂ ಕೂಡಿ ಕರುಣಸಿಂಹನನ್ನು ಬಿಡಿ ಸುವುದಕ್ಕಾಗಿ ದುರ್ಗಕ್ಕೆ ಬಂದರು. ಆದರೆ ಹಾಯ! ಹಾಯ ! ಅವರು ಬರುವುದರೊಳ ಗಾಗಿಯೇ ಕಥೆಯಲ್ಲ ಮುಗಿದು ಹೋಗಿತ್ತು !!! LO* ವಾಗ್ಯೂಷಣ, vywwwwwwwwYw vvvvvvvvvvvvvvvvvvvvv
- ಪಾಪಿಷ್ಟನಾದ ಭೀಮಸಿಂಹನಿಂದ ನಡೆದ ಸಂಗತಿಯೆಲ್ಲವೂ ಅಕಬರನಿಗೆ ವಿದಿತ ವಾಯಿತು. ಅದನ್ನು ಕೇಳಿ ಅಕಬರನು ಸಂತಪ್ತನಾದನು. ಬಳಿಯಲ್ಲಿಯೇ ಆತನ ಶರೀ ರರಕ್ಷಕರಾದ ಮೊಗಲ ಶಿಪಾಯಿಗಳು ನಿಂತುಕೊಂಡಿದ್ದರು. ಅಕಬರಬಾದಶಹನು ಕೂಡಲೇ ಆ ಶಿಪಾಯರಿಗೆ ಅಪ್ರಣೆ ಮಾಡಿದನು. ( ಈ ಚಾಂಡಾಲರೆಲ್ಲರನ್ನೂ ಈಗಿಂದೀ ಗಲೇ ಸೆರೆಹಿಡಿಯಿರಿ. ಯಾವ ಪಾಷಾಣಹೃದಯನು ನನ್ನ ಪ್ರಿಯ ಕರುಣನ ಪ್ರಾಣಾಪ ಹರಣಕ್ಕೆ ಕಾರಣನೋ, ಹೊಟ್ಟೆಯಲ್ಲಿ ಹುಟ್ಟಿದ ಮಗಳ ಸತ್ಯನಾಶವನ್ನು ಮಾಡುವುದಕ್ಕೆ ಕೂಡ ಯಾವ ದುರಾತ್ಮನು ಹೇಸಲಿಲ್ಲವೋ ಅಂತಹ ನರಾಧಮನಿಗೆ ಯೋಗ್ಯವಾದ ಶಿಕ್ಷೆಯಾವುದೆಂಬುದು ಈಗ ನನಗೆ ತಿಳಿಯುವುದಿಲ್ಲ. ಇವರೆಲ್ಲರನ್ನೂ ನನ್ನ ಶಿಬಿರಕ್ಕೆ ಹಿಡಿದುಕೊಂಡು ಹೋಗಿರಿ, ನಾಳಿನ ದಿವಸ ಇವರ ವಿಚಾರಣೆ ಮಾಡುವೆನು. •
ಸೇನಾಪತಿಯಾದ ಅಸಸಖಾನನು ಕೂಡಲೇ ಬಾದಶಹನ ಅಪ್ಪಣೆಯಂತ ಆಚರಿ ಸಿದನು. ಭೀಮಸಿಂಹ ಮೊದಲಾದವರೆಲ್ಲರೂ ಸೆರೆಹಿಡಿಯಲ್ಪಟ್ಟರು. ಬಳಿಕ ದಿಲೀಪ ತಿಯು ಅಸಫಖಾನನಿಗೆ ಹೇಳಿದನು. (( ಅಸಸಖಾನ, ನಿಮಗೆ ಇನ್ನೊಂದು ಕೆಲಸವನ್ನು ಹೇಳುತ್ತೇನೆ. ಹದಿನೈದು ದಿವಸಗಳೊಳಗಾಗಿ ಈ ದುಷ್ಕ ಭೀಮಸಿಂಹನ ದುರ್ಗವನ್ನೆಲ್ಲ ಉಧ್ಯಸ್ತ 'ಮಾರಿ ನೆಲಸಮ ಮಾಡಿಬಿಡಬೇಕು. ದುರ್ಗದೊಳಗಿನ ಬೆಲೆಯುಳ್ಳ ಒಡವೆ ಗಳನ್ನೆಲ್ಲ. ಮಾರಿ ಬಂದ ಹಣದಿಂದ ಇದೇ ಸ್ಥಳದಲ್ಲೊಂದು ಭವ್ಯವಾದ ಮಂದಿರವನ್ನು ಕಟ್ಟುವಂತೆ ವ್ಯವಸ್ಥೆಯಾಗಬೇಕು. ಆ ಮಂದಿರಕ್ಕೆ « ಪ್ರೇಮಮಂದಿರ ”ವೆಂಬ ಹೆಸ ಇಟ್ಟು ಅದರಲ್ಲಿ ರತ್ನಖಚಿತವಾದೊಂದು ಮಂಟಪದಲ್ಲಿ ಸಂಗಮವರೀ ಕಲ್ಲಿಂದ ನಿರ್ಮಿ ತವಾದ ಈ ಪ್ರೇಮಿಯುಗದ ಪ್ರತಿಮಾದ್ವಯವನ್ನು ಸ್ಥಾಪಿಸಬೇಕು. ಇವರಿಬ್ಬರ ವಿಮಲಪ್ರೇಮದ ಸೃತಿಯು ಚಿರಸ್ಥಾಯಿಯಾಗುವಂತೆ ಮಾಡಲು ಬೇರೆ ಉಪಾಯವು ನನಗೆ ತೋಚಲೊಲ್ಲದು. ” ಆ ಸಮಯದಲ್ಲಿ ಸೂರ್ಯನು ಅಸ್ತಾಚಲದ ಕಡೆಗೆ ನಡೆದಿದ್ದನು, ಆಕಾಶದ ನಾಲ್ಕೂ ಕಡೆಗಳಲ್ಲಿಯೂ ಖಿನ್ನತೆಯೂ ಮಲಿನತೆಯೂ ತುಂಬಿಕೊಂಡ್ಡಿದ್ದುವು. ಅದನ್ನು ನೋಡಿದರೆ ಲಲಿತಕರುಣರ ವಿರಹದಿಂದ ಪ್ರಕೃತಿಯು ಶೋಕಾಕುಲವಾಗಿದೆಯೋ ಎಂಬಂತೆ ತೋರುತ್ತಿತ್ತು ! - ಚಂದ್ರಚೂಡನು ಲಲಿತಾಕರಣಸಿಂಹರ ದೇಹಗಳನ್ನು ಶೂನ್ಯದೃಷ್ಟಿಯಿಂದ ನೋಡುತ್ತ ನಿಂತುಕೊಂಡಿದ್ದನು. ಅಕಬರನು ಒಂದು ದೀರ್ಘ ವಿಶ್ವಾಸವನ್ನು ಬಿಟ್ಟು ಚಂದ್ರಚೂಡನನ್ನುದ್ದೇಶಿಸಿ ಮಾತನಾಡಿದನು. ( ಸಾಧುವರ್ಯರೇ ನಡೆಯಿರಿ. ಈ ವಿವಾದ ಪೂರ್ಣವಾದ ದೃಶ್ಯವನ್ನು ಎಷ್ಟು ಹೊತ್ತಿನವರೆಗೆ ನೋಡುತ್ತ ನಿಂತುಕೊಂಡರೂ, ಸ್ವರ್ಗ ಲೋಕದಲ್ಲಿ ಅನಂದದಿಂದ ವಿಹರಿಸುತ್ತಿರುವ ಈ ಪ್ರೇಮಿದ್ವಂದ್ವವು ಹತಭಾಗಿಗಳಾದ ನನಗೆ ಬಂದು ಭೆಟ್ಟಿಯಾಗುವಂತಿಲ್ಲ! ಹಾಯ! ಹಾಯ ! ಕರುಣಸಿಂಹನು ನನಗೆ ಬೆನಿ ಪ್ರೇಮಮಂದಿರ, JMvvvvvvv
- Y\\# # # 1 # # # # ೪ * *
\ \ + 1 1 1 1 1 1 # #\ \/\ Y /\/y Vys Y! # ನಿಂದ ಬಿದ್ದ ತಮ್ಮನಿಗಿಂತಲೂ ಹೆಚ್ಚು ಪ್ರೀತಿಯವನಾಗಿದ್ದನು. ಚಂದ್ರಚೂಡರೇ ? ಕರು ಣನ ಸುಕುಮಾರ ದೇಹಕ್ಕೆ ಕಿಂಚಿದಾಘಾತವಾದರೆ ಅದರಿಂದ ನನ್ನ ಹೃದಯಕ್ಕೆ ಅತ್ಯಂತ ವೇದನೆಯಾಗುತ್ತಿತ್ತು; ಹೀಗಿದ್ದು ಚಿತಾಗ್ನಿಯ ಜ್ವಾಲೆಯಿಂದ ಈ ದೇಹವು ಉರಿಯುತ್ತಿರುವಾಗ ಈ ಪಾಪಿಷ ವಾದ ಕಣ್ಣುಗಳಿಂದ ಅದನ್ನು ನಾನು ಹೇಗೆ ನೋಡಲಿ !!! ಅಲ್ಪಾವಕಾಶದಲ್ಲಿಯೇ ಪ್ರಮೋದಭವನದ ಎದುರಿನ ಪರ್ವತಪ್ರದೇಶವು ಘೋರ ಸ್ಮಶಾನದ ರೂಪವನ್ನು ಹೊಂದಿತು. ಲಲಿತಕರುಣಸಿಂಹರ ಚಿತಗಳು ಚಟಚಟ್ ? ಎಂದು ಧ್ವನಿಮಾಡುತ್ತ ಹೊತ್ತಲಾರಂಭಿಸಿದುವು. ಆ ಚಿತಗಳ ಆಕಾಶಭೇದಕವಾದ ಜ್ವಾಲೆಯಿಂದ ದಿಂಡಲವೆಲ್ಲ ಕೆಂಪಾಗಿ ಹೋಯಿತು. ಕಡಕಡಾಟವನ್ನು ಮಾಡುತ್ತ ಚಿತಾಗ್ನಿಯು ಆ ಪ್ರಣಯಿಯುಗಲದ ಪಾರ್ಥಿವದೇಹಗಳನ್ನು ಭಸ್ಮಗೊಳಿಸುತ್ತಿತ್ತು! ಇನ್ನೂ ಸ್ವಲ್ಪ ಹೊತ್ತು ಕಳೆದು ಹೋಯಿತು. ಚಿತಾಗ್ನಿಯು ಇನ್ನೂ ಹೊಂದಿ ಶಾಂತವಾಗಿದ್ದಿಲ್ಲ. ಅದರ ಉದ್ದಾಮತೆಯು ಬಹುಮಟ್ಟಿಗೆ ಕಡಿಮೆಯಾಗಿದ್ದರೂ, ಕೈಗೆ ಸಿಕ್ಕ ಪದಾರ್ಥಗಳನ್ನು ನುಂಗುವುದಕ್ಕಾಗಿ ಅದು ಇನ್ನೂ ತನ್ನ ಜ್ವಾಲಾರಸನೆಗಳನ್ನು ಚಾಚುತ್ತಲೇ ಇತ್ತು. ಅದರ ಹೊಗೆಯು ಇನ್ನೂ ಕುಂಡಲಾಕಾರವನ್ನು ಹೊಂದಿ ಆಕಾಶ ವೆಲ್ಲವನ್ನೂ ವ್ಯಾಪಿಸುತ್ತಿತ್ತು. - ಈ ಭಯಂಕರವಾದ ಸಮಯದಲ್ಲಿ ಕಾವಿಯ ಬಟ್ಟೆಯನ್ನುಟ್ಟುಕೊಂಡು ಸುವರ್ಣ ಕಲಶವನ್ನು ಕೈಯಲ್ಲಿ ಹಿಡಿದುಕೊಂಡು ಒಬ್ಬ ತರುಣ ಭೈರವಿಯು ಅಲ್ಲಿಗೆ ಬಂದಳು. ಅರ್ಧದಗ್ಗವಾದ ಚಿತೆಯನ್ನು ಅನಿಮಿಷನೇತ್ರಗಳಿಂದ ನೋಡುತ್ತ ನಿಂತುಕೊಂಡಳು. ಉನ್ಮಾದಗ್ರಸ್ತಳಾದ ಭ್ರಮಿಷ್ಠೆಯಂತೆ ಅವಳು ಓಡುತ್ತೊಡುತ್ತ ಚಿತೆಯ ಹುರಕ್ಕೆ ಬಂದು ಕೈಯೊಳಗಿನ ಕಲಶದಲ್ಲಿದ್ದ ಕ್ಷೀರವನ್ನು ಚಿತೆಯ ಮೇಲೆ ಸೇಚನಮಾಡಿ ಆ ಪವಿತ್ರಚಿತೆಯ ಅಂತಿಮಾಗ್ನಿ ಸ್ಟಲಿಂಗವನ್ನು ನಿಂದಿಸಿದಳು, ಆ ಭೈರವಿಯ ಮೂರ್ತಿಯು ಅತ್ಯಂತ ಶಾಂತವಾಗಿತ್ತು, ಚಂಚಲತೆಯ ಸ್ಪರ್ಶವೇ ಅವಳಿಗಾಗಿದ್ದಿಲ್ಲ. ಹೃದಯದಲ್ಲಿ ಭೀತಿಯು ಎಳ್ಳಷ್ಟಾದರೂ ಇದ್ದಿಲ್ಲ. ಆಕೆಯು ಚಿತೆಗೆ ತೀರ ಸಮೀಪದಲ್ಲಿ ನಿಂತುಕೊಂಡು ಅದಕ್ಕೆ ನಮಸ್ಕರಿಸಿ ಮಾತನಾಡಿದಳು, « ಸಾಧೀ ಲಲಿತೇ! ನೀನು ನಿನ್ನ ಕೃತಿಯಿಂದ ನಿಜವಾಗಿಯೂ ಸ್ತ್ರೀಜಾತಿಯನ್ನು ಧನ್ಯವಾಗಿ ಮಾಡಿದೆ. ಈಗ ನೀನು ಸ್ವರ್ಗದಲ್ಲಿ ಮಣಿಖಚಿತವಾದ ಸಿಂಹಾಸನದ ಮೇಲೆ ಹೃದಯ ವಲ್ಲಭನ ಅರ್ಧಾಂಗಿಯಾಗಿ ಕುಳಿತುಕೊಂಡಿರಬಹುದು. ಲಲಿತೇ! ಪತಿಯೊಡನೆ ಸಹ ಗಮನ ಮಾಡಿ ನೀನು ಚಿರಕಾಲಿಕವಾದ ಶಾಂತಿಯನ್ನು ಹೊಂದಿದೆ. ಅಭಾಗಿನಿಯಾದ ನಾನಾದರೋ ಜೀವದಿಂದಿದ್ದರೂ ನರಕವಾಸವನ್ನು ಅನುಭವಿಸುತ್ತಲಿದ್ದೇನೆ. ಸತೀ ಕುಲಶಿರೋಮಣಿಯಾದ ಲಲಿತೇ! ಅಮರಧಾಮದಲ್ಲಿ ಹೃದಯೇಶ್ವರನೊಡನೆ ಪ್ರೇಮ ವಾಗ ಷಣ, we ರಾಜ್ಯವನ್ನು ಚಿರಕಾಲ ಉಪಭೋಗಿಸು. ನಿಮ್ಮಿಬ್ಬರಿಗೂ ಇನ್ನೆಂದೆಂದಿಗೂ ನಿಯೋಗ ವಾಗದಿರಲಿ! ೨೨ ಭೈರವಿಯ ಕಣ್ಣಳಗಿಂದ ಅಶ್ರುಗಳು ಸುರಿಯಹತ್ತಿದುವು. ಆಕೆಯು ಪುನಃ ಮಾತನಾಡಿದಳು. ಕರುಣಸಿಂಹರೇ, ಹೃದಯೇಶ್ವರರೇ ಇಷ್ಟು ದಿವಸಗಳ ವರೆಗೆ ನಾನು ಹೃದಯೇಶ್ವರರೆಂದು ಬಹಿರಂಗವಾಗಿ ಕರೆದಿದ್ದಿಲ್ಲ. ಆದರೆ ಇಂದು ಈ ನಿರ್ಜನ ಸ್ಮಶಾನದಲ್ಲಿ ಉಚ್ಚಸ್ವರದಿಂದ “ ಹೃದಯೇಶ್ವಠಾ !' ಎಂದು ನಿಮ್ಮನ್ನು ಕರೆಯುತ್ತಲಿ ದೇನೆ ಈ ಜನ್ಮದಲ್ಲಂತೂ ನೀವು ನನಗೆ ಲಭಿಸಲಿಲ್ಲ. ನಾನು ಸತ್ತೇ ಹೊರತು ನೀವು' ಸಿಕ್ಕಲಾರಿರೆಂಬುದನ್ನೂ ನಾನು ತಿಳಿದಿದ್ದೇನೆ. ಲಲಿತೆಯು ಸಾಯುವುದಕ್ಕೆ ಸಿದ್ಧಳಾದದ ರಿಂದಲೇ ನಿಮ್ಮ ಲಾಭವ' ಅದಳಗಾಯಿತು. ಆದುದರಿಂದ ನಾನಾದರೂ ಮರಣವ ೦ಗೀಕರಿಸಿ ಹೃದಯೇಶ್ವರನ ಲಾಭವನ್ನು ಮಾಡಿಕೊಳ್ಳುವೆನು ! " ಹೀಗೆಂದು ಭೈರವಿಯಾದ ಆ ಕೃಷ್ಣಾ ಕುಮಾರಿಯು ಆ ಪರ್ವತದ ಅತೈತ ವಾದ ಶಿಖರದ ಮೇಲೆ ಹೋಗಿ ನಿಂತುಕೊಂಡಳು. ಅಲ್ಲಿಂದ ಶಾಂತಳೂ ಶ್ಯಾಮಲೆಯೂ ಆದ ನಿಸಗಸುಂದರಿಯನ್ನು ನಿರೀಕ್ಷಿಸಿದಳು. ಚೆರಗಾದಳು ! ಎಲ್ಲೆಡೆಯಲ್ಲಿಯೂ ಅಂಧ: ಕಾರವೇ ಅವಳಿಗೆ ಗೋಚರವಾಯಿತು! ನರಕದೊಳಗಿನ ದಾರುಣದೃಶ್ಯವೇ ಈಗ ಅವಳ ಕಣ್ಣ ಮುಂದೆ ಕಟ್ಟಿದಂತಾಯಿತು. ಭಯಭೀತಳಾಗಿ ಪುನಃ ಮೇಲಕ್ಕೆ ನೋಡಿ ದಳು. ಲಲಿತಕರುಣಸಿಂಹರು ನಶ್ವರದೇಹಗಳನ್ನು ಪರಿತ್ಯಾಗಮಾಡಿ, ದಿವ್ಯದೇಹಗ ಇಂದ ಮಂಡಿತರಾಗಿ, ಒಬ್ಬರೊಬ್ಬರ ಕೈಯಲ್ಲಿ ಕೈಯನ್ನು ಹಾಕಿಕೊಂಡು, ಮೆಲ್ಲಮೆಲ್ಲನೆ ವಿನೋದದಿಂದ ವಿಹಾಶಮಾಡುತ್ತಲಿರುವುದು ಅವಳ ದೃಷ್ಟಿಗೆ ಬಿತ್ತು ಕೃಷ್ಣ ನೀಲ, ಶುದ್ರ, ರಕ್ತ ಮೊದಲಾದ : ವಿನಿಧವರ್ಣದ ಮೇಘಗಳು ಆ ಪ್ರೇಮಿಂಚುಗದ ಚರಣ ಗಳನ್ನು ನಮ್ರತೆಯಿಂದ ಚುಂಬಿಸುತ್ತಿರುವಂತೆಯೂ, ಉಜ್ವಲವಾದ ತಾರಕಗಳು ಅವರ ಸುತ್ತಲೂ ಕ್ರೀಡಿಸುತ್ತಿರುವಂತೆಯೂ ಕೃಷ್ಣಾ ಕುಮಾರಿಗೆ ಗೋಚರವಾಯಿತು. ಲಲಿತೆ ಯು ಮೇಘಮಂಡಲದೊಳಗಿಂದ ತನ್ನನ್ನು ಕುರಿತು ಈ ಪ್ರಕಾರ ಹೇಳುತ್ತಿರುವಂತೆ ಅವಳಿಗೆ ಕೇಳಿಸಿತು. “ ನೋಡು ಕೃ! ಕರುಣಸಿಂಹರು ನನ್ನವರು! ಜನ್ಯ ಜನ್ಮಾಂತರಗಳಲ್ಲಿಯೂ ಅಸಂತಕಾಲದವರೆಗೂ ಅವರು ನನ್ನ ವರಾಗಿಯೇ ಇರುವರು! ನೀನು ನಮ್ಮ ಸಂಗಡ ಬರಲಿಲ್ಲ. ಆದುದರಿಂದ ನೀನು ಅಲ್ಲಿಯೇ ಮರಣಪರ್ಯಂತವೂ ಶೋಕಾಗ್ನಿಯಿಂದ ಬೇಯುತ್ತ ಇರಬೇಕಾಗುವುದು! ಕೃಷ್ಣ! ನಮ್ಮವ್ವಾ, ಹೀಗೆಯೇ ಎಷ್ಟು ದಿವಸಗಳವರೆಗೆ ನೀನು ಬೆಂದು ಬೆಂಡಾಗುತ್ತಲಿರುವೆ? ” ಪರ್ವತಶಿಖರದ ಕೆಳಭಾಗದಲ್ಲಿ ತರಂಗಭಂಗಗಳಿಂದ ಪ್ರವಹಿಸುತ್ತಲಿರುವ ಸುನೀಲ ಮುಕ್ತಾವಲಿಯ ಮೃದುಮಂದವಾದ ಕರುಣಸಂಗೀತವು ಕುಮಾರಿಗೆ ಕೇಳಬರುತ್ತಿತ್ತು. ಆ ಅಂಧಕಾರದಲ್ಲಿಯೇ ಅವಳು ಕೆಳಗೆ ನೋಡಿದಳು, ಪ್ರೇಮಮಂದಿರ. ಫೋನರೂಪವಾದ ಅಂಗುಲಿಗಳನ್ನು ಅಲ್ಲಾಡಿಸುತ್ತ ಚಂಚಲಸ್ವಭಾವದ ಮುಕಾವಲಿಯು ತಿರಸ್ಕಾರಭಾವದಿಂದ “ ಕೃಷ್ಣ, ಹೀಗೆಯೇ ನೀನು ಎಷ್ಟು ದಿವಸಗಳವರೆಗೆ ಬೆಂದು ಬೆಂಡಾಗುತ್ತಲಿರುವೆ?” ಎಂದು ತನ್ನನ್ನು ಕುರಿತು ನುಡಿಯುತ್ತಿರುವಂತೆ ಅವಳಿಗೆ ತೋರಿತು ! ಸರ್ವರೂ ಈ ಪ್ರಕಾರ ಸಹಾನುಭೂತಿಯನ್ನು ತೋರಿಸುತ್ತಿರಲು ಕೃಷ್ಣಾ ಕುಮಾ ರಿಯು ಅದನ್ನು ಉಪೇಕ್ಷಿಸುವುದು ಅಶಕ್ಯವಾಯಿತು. ಈಗ ಆಕೆಯ ಹೃದಯದಲ್ಲಿ ನಿರಾ ಶೆಯ ಪ್ರಲಯಾಗ್ನಿಯು ಭಯಂಕರವಾಗಿ ಉರಿಯುತ್ತಿತ್ತು. ಹಾಯ? ಆ ಅಗ್ನಿಜ್ವಾಲೆಯು ಅತಿಶಯ - ಭಯಂಕರವಾದುದು! ಆ ತಾಪವನ್ನು ಸಹಿಸುವುದು ಕೃಷ್ಣಗೆ ಶಕ್ಯವಾಗ ಲಿಲ್ಲ! ಶೂನ್ಯಮನಸ್ಕಳಾಗಿ ಆ ಉನ್ನತವಾದ ಶಿಖರದ ಮೇಲಿಂದ ಮುಕ್ತಾವಳಿಯ ಮಡುವಿನಲ್ಲಿ - ಧಡಮ್ಮ'ನೆ ಹಾರಿಕೊಂಡಳು ! ಮರುದಿವಸ ಮುಂಜಾನೆ ಮುಕ್ತಾವಲಿಯ ಮಡುವಿನಲ್ಲಿ ಕೃಷ್ಣಾ ಕುಮಾರಿಯ ಪ್ರೇತವು ತರಂಗಗಳ ಮೇಲೆ ತೇಲುತ್ತಿರುವದನ್ನು ಒಬ್ಬ ಒಕ್ಕಲಿಗನು ಕಂಡನು. ಪಾಪ! ಕೃಷ್ಟಯು ಸತ್ತುಹೋದುದೇನೋ ನಿಜ, ಆದರೂ ಅವಳಿಗೆ ಕರುಣಸಿಂಹನು ಲಭಿಸ ಲಿಲ್ಲ! ಸದೋಷಪ್ರೇಮದ ಮೂಲಕ ಸ್ವರ್ಗದ್ವಾರದಲ್ಲಿ ಪ್ರವೇಶಿಸಲು ಅವಳು ಅನರ್ಹ ಳಾದಳು! ಕಾಲಮಾಹಾತ್ಮದಿಂದ ಈಗ ' ಪ್ರೇಮಮಂದಿರ'ವು ನಷ್ಟವಾಗಿ ಹೋಗಿದೆ. ಅದರೆ ಲಲಿತಾಕರುಣಸಿಂಹರ ವಿಮಲಪ್ರೇಮದ ಸ್ಥಿರ ಸ್ಮಾರಕವಾದ ಆ ಬೆಟ್ಟವು ರಜ ಪೂತಸ್ಥಾನದಲ್ಲಿ ಪ್ರವಾಸಮಾಡುವವರಿಗೆ ಈಗಲಾದರೂ ಗೋಚರವಾಗುತ್ತದೆ?