ಫಲಪದವಿಯ ಮಾಡಲಾಗದು ಬಯಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ. ಫಲಪದವಿಯ ಬಯಸಿ ಮಾಡಲಾಗದು ಲಿಂಗಪೂಜೆಯ. ಫಲಪದವಿಯ ಬಯಸಿ ಮಾಡಲಾಗದು ಜಂಗಮಾರ್ಚನೆಯ. ಅದೇನು ಕಾರಣವೆಂದೊಡೆ : ಬಯಕೆಯ ಭಕ್ತಿಯ
ಪೂರ್ವಪುರಾತನರು ಮಚ್ಚರು. ನಮ್ಮ ಅಖಂಡೇಶ್ವರದೇವನು ಹಂಗಿನ ಭಕ್ತರನೊಲ್ಲ ನೋಡಾ.