ವಿಷಯಕ್ಕೆ ಹೋಗು

ಬಂದೆಹೆನೆಂದು ಬಾರದೆ ಇದ್ದಡೆ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಬಂದೆಹೆನೆಂದು ಬಾರದೆ ಇದ್ದಡೆ
ಬಟ್ಟೆಗಳ ನೋಡುತ್ತಿದ್ದೇನಯ್ಯಾ. ಇನ್ನಾರನಟ್ಟುವೆ
ಇನ್ನಾರನಟ್ಟುವೆ
ಇನ್ನಾರ ಪಾದವ ಹಿಡಿವೆನಯ್ಯಾ ಕೂಡಲಸಂಗನ ಶರಣರು ಬಾರದಿದ್ದಡೆ ಅಟ್ಟುವೆನೆನ್ನ ಪ್ರಾಣವನು.