ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ.
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಬಟ್ಟಬಯಲೊಳಗೊಂದು ಐವಾಗಿಲ ಪಟ್ಟಣ. ಆ ಪಟ್ಟಣಕ್ಕೆ ಒಡಲಿಲ್ಲದಾದ ಅರಸು ನೋಡಾ ! ಆ ಅರಸಂಗೆ ಅರುವರು ಅರಸಿಯರು; ಮೂವರು ಸುರೂಪಿಯರು ಮೂವರು ಕುರೂಪಿಯರು; ಇವರಿಗೊಬ್ಬರಿಗೊಬ್ಬರಿಗೊಂದೊಂದು ಪರಿಯ ಕೂಟ ನೋಡಾ ! ಐವರ ಕಣ್ಣ ಕಟ್ಟಿ ಒಬ್ಬಳನೆ ನೆನೆದಡೆ ಪ್ರತಿಯಿಲ್ಲದ ಸುಖವು ಸಯವಾದ ಕಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣ ಪ್ರಭುವಿಂಗೆ ನಮೋ ನಮೋ ಎನುತಿರ್ದೆನು