ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ ಹೊಂದದ ಶಿಶುವ ಕಂಡೆ. ಮುಟ್ಟಿ ಪೂಜಿಸಹೋದಡೆ ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು ಮುಟ್ಟಲಿಲ್ಲ ನೋಡಲಿಲ್ಲ
ಪೂಜೆಗೆ ಕಟ್ಟಳೆ ಮುನ್ನಿಲ್ಲ. ಗುಹೇಶ್ವರ ಬಯಲು !