ವಿಷಯಕ್ಕೆ ಹೋಗು

ಬಣ್ಣವುಂಡ ಚಿನ್ನದಂತೆ, ಬೆಣ್ಣೆ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಬಣ್ಣವುಂಡ ಚಿನ್ನದಂತೆ
ಬೆಣ್ಣೆ ಉಂಡ ಘೃತದಂತೆ
ಪ(ಸ್ವ?)ರವುಂಡ ಶಬ್ದದಂತೆ
ಪರಿಮಳವುಳ್ಳ ಪುಷ್ಪದಂತೆ
ಗುಹೇಶ್ವರಲಿಂಗದಲ್ಲಿ ಹೊರೆಯಿಲ್ಲದಿರ್ಪ ಸಂಗನಬಸವಣ್ಣನ ಭಕ್ತಿಯಾಚಾರದ ಮಹಾತ್ಮೆಯೆಂತು ಪೇಳಾ ಮಡಿವಾಳ ಮಾಚಯ್ಯಾ.