Library-logo-blue-outline.png
View-refresh.svg
Transclusion_Status_Detection_Tool

ಬಯಲಿಂಗೆ ಕಡೆಯಿಲ್ಲ ಮರುತಂಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಬಯಲಿಂಗೆ
ಕಡೆಯಿಲ್ಲ
ಮರುತಂಗೆ
ತಡೆಯಿಲ್ಲ.
ರುಚಿಗೆ
ಖಂಡಿತವಿಲ್ಲ
ಸುಖಕ್ಕೊಗಡಿಕೆಯಿಲ್ಲ.
ಸುಖವೆ
ಪರಬ್ರಹ್ಮಾನಂದವಾಗಿ
ಶೂನ್ಯತೃಪ್ತಿಗೆ
ಸೂತಕವಿಲ್ಲ
!
ಸಾಕಾರಕ್ಕೆ
ಸತ್‍ಕ್ರಿಯೆಯಿಂದರ್ಪಿಸಬೇಕು.
ಅದೆಂತೆಂದಡೆ:
ಲೋಹದ
ಸಂಗದಿಂದ
ಅಗ್ನಿ
ಬಡಿವಡೆದಂತೆ
ರೂಪುಗೂಡಿದ
ರುಚಿಯ
ಸತ್ಕ್ರಿಯೆಯಿಂದರ್ಪಿಸಬೇಕು
ನಮ್ಮ
ಗುಹೇಶ್ವರಲಿಂಗದಲ್ಲಿ
ಸಂದು
ಸಂಶಯವಿಲ್ಲದೆ.