ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು. ಅಶನ
ವ್ಯಸನ
ಹಸಿವು
ತೃಷೆ
ನಿದ್ರೆ ಇಚ್ಛೆಗೆ ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ ! ಅನಂತ ಮೇಳಾಪದಚ್ಚಗೋಷಿ*ಯ ಭಂಡರೆಲ್ಲ ಇನ್ನು ಬಲ್ಲರೆ
ಹೇಳಿರೆ ! ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರದಿಚ್ಛೆಗೆ ಹರಿದಾಡುವ ಹಂದಿಗಳೆಲ್ಲ ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ.