ಬಳಿಕ ಉದಾಸೀನತ್ವವು. ನಿಯಮದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಳಿಕ ನಿಯಮದ ಲಕ್ಷಣವೆಂತೆಂದೊಡೆ : ಸಕಲ ವಿಷಯಂಗಳಲ್ಲಿ ಉದಾಸೀನತ್ವವು. ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು. ಸತ್‍ಕೃತ್ಯದಲ್ಲಿ ಎರಕತೆಯು. ದೇಹಶೋಷಣರೂಪವಾದ ತಪವು. ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು. ಭಸ್ಮನಿಷ್ಠಾದಿ ವ್ರತವು
ಶಿವಲಿಂಗಾರ್ಚನೆಯು. ಪ್ರಣವ ಪಂಚಾಕ್ಷರಾದಿ ಮಂತ್ರಜಪವು. ಲೋಕವಿರುದ್ಧ ವೇದವಿರುದ್ಧವಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂಗಳ ಕೇಳುವುದು. ಸತ್‍ಪಾತ್ರದಾನಯುಕ್ತವಾಗಿಹುದು ನಿಯಮಯೋಗ ನೋಡಾ ಅಖಂಡೇಶ್ವರಾ.