ಬಸವಣ್ಣನ ಉಂಗುಷ*ದಲ್ಲಿ, ಅಷ್ಟಾಷಷ್ಟಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಸವಣ್ಣನ ಉಂಗುಷ*ದಲ್ಲಿ
ಅಷ್ಟಾಷಷ್ಟಿ ತೀರ್ಥಂಗಳ ಉದಕವ ಮೀರಿದ ಮಹಾತೀರ್ಥದೊಟ್ಟಿಲ ಕಂಡೆನಯ್ಯಾ ! ಬಸವಣ್ಣನ ಆಧಾರ ಲಿಂಗ ನಾಭಿ ಪರಿಯಂತರವು ಗುರುಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನ ನಾಭಿ ಹೃದಯ ಪರಿಯಂತರವು ಲಿಂಗಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನಗಳ ಮುಖ ಭ್ರೂಮಧ್ಯ ಉನ್ಮನಿ ಉತ್ತಮಾಂಗ ಪರಿಯಂತರವು ಜಂಗಮಸ್ವರೂಪದೊಟ್ಟಿಲ ಕಂಡೆನಯ್ಯಾ. ಬಸವಣ್ಣನ ವಿಶ್ವತೋಮುಖವನುಳ್ಳ ಶರೀರದೊಳಗೆ
ಈ ಪರಿಯ ಕಂಡಾತನೆ ಭಕ್ತ
ಜಂಗಮವೆಂಬೆನು ಕಾಣಾ ಗುಹೇಶ್ವರಾ.