ಬಸವನ ಕಲ್ಪವೃಕ್ಷ ನಾಮವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಸವನ
ನಾಮವು
ಕಾಮಧೇನು
ಕಾಣಿರೊ.
ಬಸವನ
ನಾಮವು
ಕಲ್ಪವೃಕ್ಷ
ಕಾಣಿರೊ.
ಬಸವನ
ನಾಮವು
ಚಿಂತಾಮಣಿ
ಕಾಣಿರೊ.
ಬಸವನ
ನಾಮವು
ಪರುಷದಖಣಿ
ಕಾಣಿರೊ.
ಬಸವನ
ನಾಮವು
ಸಂಜೀವನಮೂಲಿಕೆ
ಕಾಣಿರೊ.
ಇಂತಪ್ಪ
ಬಸವನಾಮಾಮೃತವು
ಎನ್ನ
ಜಿಹ್ವೆಯತುಂಬಿ
ಹೊರಸೂಸಿ
ಮನವ
ತುಂಬಿತ್ತು.

ಮನವತುಂಬಿ
ಹೊರಸೂಸಿ
ಸಕಲಕರಣೇಂದ್ರಿಯಂಗಳ
ತುಂಬಿತ್ತು.

ಸಕಲ
ಕರಣೇಂದ್ರಿಯಂಗಳ
ತುಂಬಿ
ಹೊರಸೂಸಿ
ಸರ್ವಾಂಗದ
ರೋಮಕುಳಿಗಳನೆಲ್ಲ
ವೇಧಿಸಿತ್ತಾಗಿ
ನಾನು
ಬಸವಾಕ್ಷರವೆಂಬ
ಹಡಗವೇರಿ
ಬಸವ
ಬಸವ
ಬಸವಾ
ಎಂದು
ಭವಸಾಗರವ
ದಾಟಿದೆನಯ್ಯಾ
ಅಖಂಡೇಶ್ವರಾ.