ಬಿಂದುಮಾಯಿಕವಿಲ್ಲದಂದು ಮೂವತ್ತಾರುತತ್ವಂಗಳುತ್ಪತ್ತಿಯಾಗದಂದು, ತತ್

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬಿಂದುಮಾಯಿಕವಿಲ್ಲದಂದು ಮೂವತ್ತಾರುತತ್ವಂಗಳುತ್ಪತ್ತಿಯಾಗದಂದು
ತತ್ ಪದ ತ್ವಂ ಪದ ಅಸಿ ಪದವೆಂಬ ಪದತ್ರಯಂಗಳಿಲ್ಲದಂದು
ತತ್ ಪದವೆ ಲಿಂಗ
ತ್ವಂ ಪದವೆ ಅಂಗ
ಅಸಿ ಪದವೆ ಲಿಂಗಾಂಗಸಂಯೋಗ. ಈ ಅಂಗ ಲಿಂಗ ಸಂಬಂಧವೆಂದು
ಈ ತತ್ವಮಸ್ಯಾದಿ ವಾಕ್ಯಾರ್ಥವಿಲ್ಲದಂದು
ಅಲ್ಲಿಂದತ್ತತ್ತ ನೀನು ಪರಾತ್ಪರನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.