ವಿಷಯಕ್ಕೆ ಹೋಗು

ಬಿಂದುಶೂನ್ಯವಾದ ಲಿಂಗವೇ ಅಂಗವಾಗಿ,

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಬಿಂದುಶೂನ್ಯವಾದ ಲಿಂಗವೇ ಅಂಗವಾಗಿ
ಕಾಯಶೂನ್ಯನಯ್ಯ ಭಕ್ತನು. ನಾದಶೂನ್ಯವಾದ ಜಂಗಮವೆ ಪ್ರಾಣವಾಗಿ
ಪ್ರಾಣಶೂನ್ಯನಯ್ಯ ಅನಾದಿಭಕ್ತನು. ತನ್ನಂಗಸ್ವರೂಪವಪ್ಪ ಲಿಂಗಕ್ಕೆ ತನ್ನ ಪ್ರಾಣಸ್ವರೂಪವಪ್ಪ ಪರಮ ಚೈತನ್ಯಜಂಗಮದ ಪ್ರಸನ್ನ ಪ್ರಸಾದವೇ ಆ ಲಿಂಗಕ್ಕೆ ಪ್ರಾಣಕಳೆ ನೋಡಾ. ಆ ಲಿಂಗದ ಪ್ರಾಣಕಳೆಯ ಆ ಜಂಗಮಕ್ಕೆ ಪದಾರ್ಥವ ಮಾಡಿ ಸಮರ್ಪಿಸಿ
ಆ ಘನ ಚೈತನ್ಯವೆಂಬ ಪರಮ ಜಂಗಮಲಿಂಗದ ಪರಿಣಾಮ ಪ್ರಸಾದಿಯಯ್ಯ ಭಕ್ತನು. ಲಿಂಗ ಜಂಗಮ ಪ್ರಸಾದ ಭಕ್ತ ಇಂತೀ ಚತುರ್ವಿಧವು ಒಂದಾಗಿ ನಿಂದ ನಿಲವು ನೀನೆ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.