ವಿಷಯಕ್ಕೆ ಹೋಗು

ಬಿತ್ತು ಬೆಳೆಯಿತ್ತು, ಕೆಯ್ಯ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಬಿತ್ತು ಬೆಳೆಯಿತ್ತು
ಕೆಯ್ಯ ಕೊಯ್ಯಿತ್ತು
ಗೂಡು ಮುರಿಯಿತ್ತು
ಕುತ್ತುರಿಯೊಟ್ಟಿತ್ತು
ಒಕ್ಕಿತ್ತು ತೂರಿತ್ತು ಅಳೆಯಿತ್ತು
ಸಲಗೆ ತುಂಬಿತ್ತು. ಕೂಡಲಸಂಗಮದೇವಯ್ಯಾಮೇಟಿ ಕಿತ್ತಿತ್ತು
ಕಣ ಹಾಳಾಯಿತ್ತಯ್ಯಾ.