ವಿಷಯಕ್ಕೆ ಹೋಗು

ಬೀಜದೊಳಗೆ ಹೆಸರು ಅಂಕುರವಿರ್ಪುದು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು. ಅಂಕುರ ಬೀಜವೆಂದು ಹೆಸರು ಎರಡಾದಡೇನು ? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ ಬಸವಣ್ಣನೆ ಶಿವನು
ಶಿವನೆ ಬಸವಣ್ಣನು. ಬಸವಣ್ಣ ಶಿವನೆಂಬ ಹೆಸರೆರಡಾದಡೇನು ? ಅಖಂಡವಸ್ತು ಒಂದೇ ಆದಕಾರಣ
ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ ದೇವರದೇವಾ.