ವಿಷಯಕ್ಕೆ ಹೋಗು

ಬೀಜದ ಅಡಗಿರ್ದ ಮರೆಯಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರ್ಗತವಾದಂತೆ
ಮುಗಿಲಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ
ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನವು ತನ್ನ ಲೀಲೆಯಿಂದೆ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯಾ ಅಖಂಡೇಶ್ವರಾ.