ಬೆಲ್ಲದ ನೀರೆರೆದಡೇನು, ಬೇವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬೆಲ್ಲದ ನೀರೆರೆದಡೇನು
ಬೇವು ಸಿಹಿಯಪ್ಪುದೆ ಕತ್ತುರಿಯ ಲೇಪನವಿತ್ತಡೇನು
ನೀರುಳ್ಳೆಯ ದುರ್ಗಂಧ ದೂರಪ್ಪುದೆ ? ಕಸುಗಾಯ ಹಿಸುಕಿದಡೇನು
ಹಣ್ಣಿಗೆ ಹವಣಪ್ಪುದೆ ? ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು
ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ ಕೂಡಲಚೆನ್ನಸಂಗಮದೇವಾ ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ ?