ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯಗುಣ. ಬೇಕೆಂಬುದು ಇನಿತಿಲ್ಲ; ಬೇಡೆಂಬುದು ಇನಿತಿಲ್ಲ. ಈ ಉಭಯವ ಅತಿಗಳೆದು ಭೋಗಿಸಬಲ್ಲಡೆ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೆಂಬೆ