ಬೇವಿನ ಬೀಜವ ಬಿತ್ತಿ,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಬೇವಿನ ಬೀಜವ ಬಿತ್ತಿ
ಬೆಲ್ಲದ ಕಟ್ಟಿಯ ಕಟ್ಟಿ
ಆಕಳ ಹಾಲನೆರೆದು
ಜೇನುತುಪ್ಪವ ಹೊಯ್ದಡೆ
ಸಿಹಿಯಾಗಬಲ್ಲುದೆ
ಕಹಿಯಹುದಲ್ಲದೆ ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು
ಕೂಡಲಸಂಗಮದೇವಾ.