ಬೊಬ್ಬೆಯ ಬಾಯಿ, ಬಾಚದ

ವಿಕಿಸೋರ್ಸ್ದಿಂದ



Pages   (key to Page Status)   


ಬೊಬ್ಬೆಯ ಬಾಯಿ
ಬಾಚದ ಮಂಡೆ
ಮೀರಿದ ಶರಣಂಗಲ್ಲದೆ ಇಲ್ಲ. ಓಡಿನ ಊಟ
ಕಾಡಿನಲ್ಲಿ ಇಕ್ಕೆ
ಮೀರಿದ ಶರಣಂಗಲ್ಲದೆ ಇಲ್ಲ. ವಿರಕ್ತೋ ವಾsಥ ಯುಕ್ತೋ ವಾ ಸಸ್ತ್ರ್ಯಾದಿವಿಷಯೇಷ್ವಪಿ ಪಾಪೈರ್ನೈವ ಪ್ರಲಿಪ್ಯೇತ ಪದ್ಮಪತ್ರಮಿವಾಂಭಸಾ ಎಂದುದಾಗಿ
ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣರು ಮಲೆಯೊಳಗಿರ್ದಡೇನು ? ಮೊಲೆಯೊಳಗಿರ್ದಡೇನು ?