ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬ್ರಹ್ಮಾಬ್ರಹ್ಮರಿಲ್ಲದಂದು
ವಿಷ್ಣು ಮಾಯಾಜಾಲವಿಲ್ಲದಂದು ಸೃಷ್ಟ್ಯಸೃಷ್ಟಿಯಿಲ್ಲದಂದು
ಕಾಳಿಂಗ ಕರೆಕಂಠರಿಲ್ಲದಂದು
ಉಮೆಯ ಕಲ್ಯಾಣವಿಲ್ಲದಂದು
ದ್ವಾದಶಾದಿತ್ಯರಿಲ್ಲದಂದು
ನಂದಿಕೇಶ್ವರನಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು ದೇಹಾಹಂಕಾರ ಪ್ರಕೃತಿಯಿಲ್ಲದಂದು
ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು