ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಬ್ರಾಹ್ಮಣದೇಹಿಕನಲ್ಲ
ಕ್ಷತ್ರಿಯದೇಹಿಕನಲ್ಲ
ವೈಶ್ಯದೇಹಿಕನಲ್ಲ
ಶೂದ್ರದೇಹಿಕನಲ್ಲ
ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು. ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು. ಲೈಂಗ್ಯಪುರಾಣೇಃ `ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವೀ ಲಿಂಗಾರ್ಚಕಶ್ಚ ಶ್ವಪಚೋ ದ್ವಿಜಕೋಟಿವಿಶೇಷಿತಃ _ಎಂದುದಾಗಿ
ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ ಆತನೆ ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದುಕೋಟಿಯಾದಡೆಯೂ ಶ್ವಪಚರಿಂದ ಕರಕಷ್ಟ ನೋಡಾ
ಕೂಡಲಚೆನ್ನಸಂಗಮದೇವಾ.