ವಿಷಯಕ್ಕೆ ಹೋಗು

ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಭಕ್ತಂಗೆ ಲಿಂಗವಾವುದು
ಮಾಹೇಶ್ವರಂಗೆ ಲಿಂಗವಾವುದು
ಪ್ರಸಾದಿಗೆ ಲಿಂಗವಾವುದು
ಪ್ರಾಣಲಿಂಗಿಗೆ ಲಿಂಗವಾವುದು
ಶರಣಂಗೆ ಲಿಂಗವಾವುದು
ಐಕ್ಯಂಗೆ ಲಿಂಗವಾವುದುಯೆಂದರೆ ಈ ಲಿಂಗಸ್ಥಲಂಗಳ ಭೇದವ ಹೇಳಿಹೆನಯ್ಯ. ಭಕ್ತಂಗೆ ಆಚಾರಲಿಂಗ. ಮಾಹೇಶ್ವರಂಗೆ ಗುರುಲಿಂಗ. ಪ್ರಸಾದಿಗೆ ಶಿವಲಿಂಗ. ಪ್ರಾಣಲಿಂಗಿಗೆ ಜಂಗಮಲಿಂಗ. ಶರಣಂಗೆ ಪ್ರಸಾದಲಿಂಗ. ಐಕ್ಯಂಗೆ ಮಹಾಲಿಂಗವೆಂದು ಹೇಳಲ್ಪಟ್ಟಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.