ಭಕ್ತನಂಗವಾವುದು, ಮಾಹೇಶ್ವರನಂಗವಾವುದು, ಪ್ರಸಾದಿಯಂಗವಾವುದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತನಂಗವಾವುದು
ಮಾಹೇಶ್ವರನಂಗವಾವುದು
ಪ್ರಸಾದಿಯಂಗವಾವುದು
ಪ್ರಾಣಲಿಂಗಿಯಂಗವಾವುದು
ಶರಣನಂಗವಾವುದು
ಐಕ್ಯನಂಗವಾವುದು ಎಂದರೆ
ಈ ಅಂಗಸ್ಥಲಗಳ ಭೇದವ ಹೇಳಿಹೆನಯ್ಯ; ಭಕ್ತಂಗೆ ಪೃಥ್ವಿಯಂಗ. ಮಾಹೇಶ್ವರಂಗೆ ಜಲವೆ ಅಂಗ. ಪ್ರಸಾದಿಗೆ ಅಗ್ನಿಯೆ ಅಂಗ. ಪ್ರಾಣಲಿಂಗಿಗೆ ವಾಯುವೆ ಅಂಗ. ಶರಣಂಗೆ ಆಕಾಶವೆ ಅಂಗ. ಐಕ್ಯಂಗೆ ಆತ್ಮನೆ ಅಂಗ ಇಂತೀ ಅಂಗಸ್ಥಲಂಗಳ ಭೇದವ ತಿಳಿಯುವುದಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.