ಭಕ್ತನಾದರೆ ಕಿಂಕಿಲನಾಗಿರಬೇಕು. ಮಾಹೇಶ್ವರನಾದರೆ ಆದಿ ಅನಾದಿಯನರಿಯದಿರಬೇಕು. ಪ್ರಸಾದಿಯಾದರೆ ಒಡಲಗುಣವಿರಹಿತನಾಗಿರಬೇಕು. ಪ್ರಾಣಲಿಂಗಿಯಾದರೆ ಪ್ರಸಾದ(ಬಾಹ್ಯವಿಚಾರ?)ವಿಲ್ಲದಿರಬೇಕು. ಶರಣನಾದರೆ ನಿಸ್ಸಂಗಿಯಾಗಿರಬೇಕು. ಐಕ್ಯನಾದರೆ ಬಯಲು ಬಯಲಾಗಿರಬೇಕು. ಇಂತೀ ಸ್ಥಲವನರಿದಲ್ಲದೆ
ಕೂಡಲಚೆನ್ನಸಂಗನಲ್ಲಿ ಸುಸಂವೇದ್ಯನೆಂದೆನಿಸಬಾರದು.