ಭಕ್ತನೆಂದೆನಿಸಿಕೊಂಬುದಯ್ಯಾ ಭಕ್ತಿವಿಡಿದು, ಮಾಹೇಶ್ವರನೆನಿಸಿಕೊಂಬುದಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತನೆಂದೆನಿಸಿಕೊಂಬುದಯ್ಯಾ ಭಕ್ತಿವಿಡಿದು
ಮಾಹೇಶ್ವರನೆನಿಸಿಕೊಂಬುದಯ್ಯಾ ನಿಷೆ*ವಿಡಿದು
ಪ್ರಸಾದಿಯೆನಿಸಿಕೊಂಬುದಯ್ಯಾ ಅವಧಾನವಿಡಿದು
ಪ್ರಾಣಲಿಂಗಿಯೆನಿಸಿಕೊಂಬುದಯ್ಯಾ ಅನುಭಾವವಿಡಿದು
ಶರಣನೆನಿಸಿಕೊಂಬುದಯ್ಯಾ [ಆನಂದದಿಂದ] ಐಕ್ಯನೆನಿಸಿಕೊಂಬುದಯ್ಯಾ ಸಮರಸದಿಂದ. ಇಂತೀ ಷಡುಸ್ಥಲಸಾಹಿತ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಸಹಜನೆನಿಸಿಕೊಂಬುದಯ್ಯಾ.