Library-logo-blue-outline.png
View-refresh.svg
Transclusion_Status_Detection_Tool

ಭಕ್ತರಾದೆವೆಂಬರು ಭಕ್ತಿಯ ಪರಿಯನರಿಯರು ಭಕ್ತರೆಂತಾದಿರಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಭಕ್ತರಾದೆವೆಂಬರು_ಭಕ್ತಿಯ ಪರಿಯನರಿಯರು ಭಕ್ತರೆಂತಾದಿರಯ್ಯಾ ? ಮಾಹೇಶ್ವರರಾದೆವೆಂಬರು
_ಆದಿ ಅನಾದಿಯ ಅರಿಯದನ್ನಕ್ಕ ಮಾಹೇಶ್ವರರೆಂತಾದಿರಯ್ಯಾ ? ಪ್ರಸಾದಿಗಳಾದೆವೆಂಬರು
_ಪ್ರಸಾದದ ಅರ್ಪಿತ ಆಯತವನರಿಯದೆ ಪ್ರಸಾದವ ಗ್ರಹಿಸುವನ್ನಕ್ಕ ಪ್ರಸಾದಿಗಳೆಂತಾದಿರಯ್ಯಾ ? ಪ್ರಾಣಲಿಂಗಿಗಳಾದೆವೆಂಬರು_ನಡೆ ನುಡಿ ಭಾವ ಎರಡಾಗಿದೆ ಪ್ರಾಣಲಿಂಗಿಗಳೆಂತಾದಿರಯ್ಯಾ ? ಶರಣನಾದೆವೆಂಬರು_ಇಂದ್ರಿಯಂಗಳ ಭಿನ್ನವಿಟ್ಟು ವರ್ತಿಸುವನ್ನಕ್ಕ ಶರಣರೆಂತಾದಿರಯ್ಯಾ ? ಐಕ್ಯವಾದೆವೆಂಬರು_ಧರ್ಮಕರ್ಮ ಚತುರ್ವಿಧದ ಫಲಪದ ಮೋಕ್ಷ ಜನನ ಮರಣ ಬೆನ್ನ ಬಿಡದೆ ಐಕ್ಯರೆಂತಾದಿರಯ್ಯಾ ? ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.