ಭಕ್ತರ ಮಠವನರಸಿಕೊಂಡು ಹೋಗಿ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭಕ್ತರ ಮಠವನರಸಿಕೊಂಡು ಹೋಗಿ ಭಕ್ತದೇಹಿಕ ದೇವನೆಂದು ಶ್ರುತಿವಾಕ್ಯವ ಕೇಳಿ ಭಕ್ತನೆ ದೇವನೆಂದರಿದು ಯುಕ್ತಿಯನರಸುವ ಪಾತಕರ ವಿಧಿಗಿನ್ನೆಂತೊ ? ಭಕ್ತರ ಮಠಕ್ಕೆ ಹೋಗಿ `ಅದು ಇದು' ಎಂಬ ಸಂದೇಹಪಾತಕ ನೀ ಕೇಳಾ ಭಕ್ತರ ಮಠದೊಳಗೆ ಭಕ್ತಿರಸದ ಬೆಳಸು
ಲಿಂಗದ ಬೆಳೆ
ಪ್ರಸಾದದ ರಾಶಿ
ಇಂತಪ್ಪ ಪ್ರಸಾದದಲ್ಲಿಗೆ ಹೋಗಿ ಸೂತಕವನರಸುವ ಪಾತಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?