Library-logo-blue-outline.png
View-refresh.svg
Transclusion_Status_Detection_Tool

ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಭಕ್ತಿಯರಿಯಿರಿ
ಭಕ್ತರಾದ ಪರಿಯೆಂತಯ್ಯಾ ? ಭಾವಶುದ್ಧವಿಲ್ಲ
ಮಹೇಶ್ವರರೆಂತಪ್ಪಿರಯ್ಯಾ ? ಅರ್ಪಿತದನುವರಿದು ಅರ್ಪಿಸಲರಿಯಿರಿ
ಪ್ರಸಾದವ ಗ್ರಹಿಸುವ ಪರಿಯೆಂತಯ್ಯಾ ? ನಡೆ-ನುಡಿ ಎರಡಾಗಿ ಇದೆ
ಪ್ರಾಣಲಿಂಗಸಂಬಂಧಿಯೆಂತಾದಿರಿ ? ಇಂದ್ರಿಯಂಗಳು ಭಿನ್ನವಾಗಿ
ಶರಣರಾದ ಪರಿಯೆಂತಯ್ಯಾ ? ವಿಧಿ ನಿಷೇಧ ಭ್ರಾಂತಿ ಮುಕ್ತಿಯಾದ ಪರಿಯನರಿಯಿರಿ
ಐಕ್ಯರೆಂತಪ್ಪಿರಿ ? ಈ ಪಡುಸ್ಥಲದ ಕ್ರಿಯಾಕರ್ಮವರ್ಮ ಆರಿಗೆಯೂ ಅರಿಯಬಾರದು. ಈ ವರ್ಮವರಿದಡೆ ಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ.