ಭಕ್ತಿಯೆಂಬುದು ಬಾರಿ ಬಾಯ ಧಾರೆ
ಅದೆಂತೆಂದಡೆ: ಕಂಗಳಿನ ವರಿಯದಂತೆ ಸುತ್ತಲರಿದು; ಮಧ್ಯಾಹ್ನದ ಆದಿತ್ಯನಂತೆ ನೋಡಲರಿದು
ಪಾಪಿಯ ಕೂಸಿನಂತೆ ಎತ್ತಲರಿದು
ಒಳು(ವಾಳಿರಿ)ಗುದುರಿಯಂತೆ ಒ(ಹ ರಿ)ತ್ತಲರಿದು
ಸಜ್ಜನವುಳ್ಳ ಸತಿಯಂತೆ ಉಳಿಯಲರಿದು
ಪಾದರಸದಂತೆ ಹಿಡಿಯಲರಿದು
ಮೊದಲುಗೆಟ್ಟ ಹರದನಂತೆ ಕೆತ್ತಿಕೊಂಡಿಹುದು
ಭಕ್ತಿಯ ಮುಖ ಎತ್ತಲೆಂದರಿಯಬಾರದು. ಇದು ಕಾರಣ_ಕೂಡಲಚೆನ್ನಸಂಗಯ್ಯ ಹಿಡಿಯಬಲ್ಲವರಿಗಳವಟ್ಟಿತ್ತು ಹೊಡೆ(ಹಿಡಿರಿ)ಯಲರಿಯದವರಿಗೆ ವಿಗುರ್ಬಣೆಯಾಗಿತ್ತು.