ಭಕ್ತಿಯೆಂಬುದು ಯುಕ್ತಿಯೊಳಗು
ಪೂಜೆಯೆಂಬುದು ನಿರ್ಮಾಲ್ಯದೊಳಗು. ಪ್ರಸಾದವೆಂಬುದು ಓಗರದೊಳಗು
ಆಚಾರವೆಂಬುದು ಅನಾಚಾರದೊಳಗು. ಧರ್ಮವೆಂಬುದು ಅಧರ್ಮದೊಳಗು
ಸುಖವೆಂಬುದು ದುಃಖದೊಳಗು. ವ್ರತವೆಂಬುದು ವೈರಾಗ್ಯದೊಳಗು
ನೇಮವೆಂಬುದು ಉದ್ದೇಶದೊಳಗು. ಅಹಿಂಸೆಯೆಂಬುದು ಹಿಂಸೆಯೊಳಗು!_ಇವಾವಂಗವೂ ಇಲ್ಲದೆ ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!