ಭಕ್ತಿಯ ವಿರತಿಯ ಮರ್ಮವನರಿಯೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತಿಯ ಮರ್ಮವನರಿಯೆ
ಜ್ಞಾನದ ಕುರುಹನರಿಯೆ
ವೈರಾಗ್ಯದ ದೃಢವನರಿಯೆ
ವಿರತಿಯ ಹೊಲಬನರಿಯೆ
ಮುಕ್ತಿಯ ಪಥವನರಿಯೆ
ಭಕ್ತಿ ಜ್ಞಾನ ವೈರಾಗ್ಯ ವಿರತಿಗಳಿಂದೆ ಮುಕ್ತರಾದ ಮಹಾಶರಣರ ತೊತ್ತಿನ ಮಗ ನಾನಯ್ಯ ಅಖಂಡೇಶ್ವರಾ.