ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ
ಮಾಹೇಶ್ವರಸ್ಥಲ ಪ್ರಸಾದಿಸ್ಥಲದಲ್ಲಡಗಿ
ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲದಲ್ಲಡಗಿ
ಪ್ರಾಣಲಿಂಗಿಸ್ಥಲ ಶರಣಸ್ಥಲದಲ್ಲಡಗಿ
ಶರಣಸ್ಥಲ ಐಕ್ಯಸ್ಥಲದಲ್ಲಡಗಿ
ಇಂತೀಷಡಂಗಯೋಗ ಸಮರಸವಾಗಿ ಷಡುಸ್ಥಲವ ಮೀರಿ ನಿರವಯಸ್ಥಲವನೆಯ್ದಿ
ಆ ನಿರವಯಸ್ಥಲ ನಿರಾಳದಲ್ಲsಗಿ
ಆ ನಿರಾಳ ನಿತ್ಯನಿರಂಜನ ಪರವಸ್ತು ತಾನಾಯಿತ್ತಾಗಿ
ಕ್ರಿಯಾನಿಷ್ಪತ್ತಿ ಜ್ಞಾನನಿಷ್ಪತ್ತಿ ಭಾವನಿಷ್ಪತ್ತಿ
ಮಾಡುವ ಕ್ರೀಗಳೆಲ್ಲಾ ನಿಷ್ಪತ್ತಿಯಾಗಿ
ಅರಿವ ಅರುಹೆಲ್ಲಾ ಅಡಗಿ
ಭಾವಿಸುವ ಭಾವವೆಲ್ಲ ನಿರ್ಭಾವವಾಗಿ
ನಿರ್ಲೇಪಕ ನಿರಂಜನ ವಸ್ತು ತಾನು ತಾನಾದಲ್ಲದೆ
ಧ್ಯಾನಿಸಲಿಕೇನೂ ಇಲ್ಲ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ
ಷಟ್‍ಸ್ಥಲಜ್ಞಾನಸಾರಾಯಸ್ವರೂಪನೆಂದು ಹೇಳಲ್ಪಟ್ಟನು.