ವಿಷಯಕ್ಕೆ ಹೋಗು

ಭಕ್ತ ಜಂಗಮಕ್ಕೆ, ಲೆತ್ತ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಭಕ್ತ ಜಂಗಮಕ್ಕೆ
ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ
ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ ಪರಸತಿ ಪರಧನ ಪರದೈವ ಭವಿಸಂಗ_ಇಷ್ಟುಳ್ಳನ್ನಕ್ಕ
ಅವನು ನಾಯಡಗು ನರಮಾಂಸ ಕ್ರಿಮಿಮಲ ಭುಂಜಕನು ಸುರಾಪಾನಸೇವಕನಪ್ಪನಲ್ಲದೆ
ಭಕ್ತನಲ್ಲ
ಜಂಗಮನಲ್ಲ
ಅದೆಂತೆಂದಡೆ: ಅಕ್ಷದೂತವಿನೋದಶ್ಚ ನೃತ್ಯಗೀತೇಷು ಮೋಹನಂ ಅಪಶಬ್ದಪ್ರಯೋಗಶ್ಚ ಜ್ಞಾನಹೀನಸ್ಯಕಾರಣಂ ತಸ್ಕರಂ ಪಾರದಾರಂಚ ಅನ್ಯದೈವಮುಪಾಸಕಂ ಅನೃತಂ ನಿಂದಕಶ್ಚೈವ ತಸ್ತ್ಯತೇ ಸ್ಯುಶ್ಚಾಂಡಲವಂಶಜಾಃ ಎಂದುದಾಗಿ ಈತನು ಗುಣಾವಗುಣವನೊಡಗೂಡಿಕೊಂಡು ನಡೆದಡೆ ಭಕ್ತ ಜಂಗಮನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ