ಭಕ್ತ ಜಂಗಮದ ಷಟ್‍ಸ್ಥಲದ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭಕ್ತ ಜಂಗಮದ ಷಟ್‍ಸ್ಥಲದ
ಸಕೀಲ ಸಂಬಂಧವನಾರು ಬಲ್ಲರು ಹೇಳಾ ಅದೇನು ಕಾರಣವೆಂದಡೆ: ಹಸಿವುಳ್ಳವ ಭಕ್ತನಲ್ಲ ವಿಷಯವುಳ್ಳವ ಮಹೇಶ್ವರನಲ್ಲ ಆಸೆಯುಳ್ಳವ ಪ್ರಸಾದಿಯಲ್ಲ ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ ತನುಗುಣವುಳ್ಳವ ಶರಣನಲ್ಲ ಜನನ-ಮರಣವುಳ್ಳವ ಐಕ್ಯನಲ್ಲ ಈ ಆರರ ಅರಿವಿನ ಅರ್ಥದ
ಸಂಪತ್ತಿನ ಭೋಗ ಹಿಂಗಿದರೆ
ಸ್ವಯಂ ಜಾತನೆಂಬೆ ಆ ದೇಹ ನಿಜದೇಹವೆಂಬೆ ಆ ದೇಹ ಗುರುಗುಹೇಶ್ವರನೆಂಬೆ.