ಭರಿತಬೋನ ಭರಿತಬೋನವೆಂದು ಒಂದೆ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭರಿತಬೋನ ಭರಿತಬೋನವೆಂದು ಒಂದೆ ವೇಳೆ ಬಾಚಿಸಿಕೊಂಡು ಲಿಂಗಕ್ಕೆ ಕೊಟ್ಟೆವು ಲಿಂಗಪ್ರಸಾದವಾಯಿತ್ತೆಂದು ಬಿಗಿಬಿಗಿದು ಕಟ್ಟಿಕೊಂಡು ಮತ್ತೊಂದು ಪದಾರ್ಥ ಬಂದರೆ ಲಿಂಗವ ಬಿಡಲಮ್ಮರಯ್ಯ. ಆ ಪದಾರ್ಥವ ಕಂಡು ಮನದಲ್ಲಿ ಬಯಸಿ ಕುದಿಕುದಿದು ಕೋಟಲೆಗೊಂಡು ಹಲ್ಲು ಬಾಯಾರುತ್ತಿಪ್ಪರಯ್ಯ. ಅದೇಕೆ ಲಿಂಗವ ಬಿಡಲಮ್ಮಿರಿ ಕೈಯೇನು ಎಂಜಲೆ? ಕೈಯೆಂಜಲಾದಂಗೆ ಬಾಯೆಲ್ಲಾ ಎಂಜಲು. ಬಾಯೆಂಜಲಾದವಂಗೆ ಸರ್ವಾಂಗವೆಲ್ಲಾ ಎಂಜಲು. ಎಂಜಲಂದರೆ ಅಮೇಧ್ಯ. ಅಮೇಧ್ಯದ ಮೇಲೆ ಲಿಂಗವ ಧರಿಸಿಪ್ಪಿ[ರೇನು] ಹೇಳಿರಣ್ಣ? ಈ ಸಂದೇಹಿಭ್ರಾಂತಿಯ ಕೈವಿಡಿಯಲೊಲ್ಲರು ನಿಮ್ಮಶರಣರು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.