Library-logo-blue-outline.png
View-refresh.svg
Transclusion_Status_Detection_Tool

ಭವಕ್ಕೆ ಬಿತ್ತುವಪ್ಪ ಬಯಕೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಭವಕ್ಕೆ ಬಿತ್ತುವಪ್ಪ ಬಯಕೆ ಇಹನ್ನಬರ ಕಾಮನ ಕಾಟವು ಕಡೆಗಾಣದಯ್ಯಾ. ಲಿಂಗದೇವನ ಮರಹಿನಿಂದಪ್ಪ ಮರಣಬಾಧೆ ಇಹನ್ನಬರ ಕಾಲದೂತರ ಭೀತಿಯು ತಪ್ಪದಯ್ಯಾ. ತನುತ್ರಯದ ಅಭಿಮಾನ ಇಹನ್ನಬರ ಸಂಸಾರಸಂತಾಪ ಓರೆಯಾಗದಯ್ಯಾ. ಕೂಡಲಚೆನ್ನಸಂಗಮದೇವಾ
_ ಇದು ಸೃಷ್ಟಿ ಸ್ಥಿತಿ ಸಂಹಾರರೂಪವಪ್ಪ ನಿನ್ನ ಮಾಯದ ಮಾಟವೆಂದರಿದೆನಯ್ಯಾ.