ಭವದ
ಬಟ್ಟೆಯ
ದೂರವನೇನ
ಹೇಳುವೆನಯ್ಯಾ
?
ಎಂಬತ್ತುನಾಲ್ಕು
ಲಕ್ಷ
ಊರಲ್ಲಿ
ಎಡೆಗೆಯ್ಯಬೇಕು.
ಒಂದೂರಭಾಷೆಯೊಂದೂರಲಿಲ್ಲ.
ಒಂದೂರಲ್ಲಿ
ಕೊಂಡಂಥ
ಆಹಾರ
ಮತ್ತೊಂದೂರಲಿಲ್ಲ.
ಇಂತೀ
ಊರ
ಹೊಕ್ಕ
ತಪ್ಪಿಂಗೆ
ಕಾಯವ
ಭೂಮಿಗೆ
ಸುಂಕವ
ತೆತ್ತು
ಜೀವವನುಳುಹಿಕೊಂಡು
ಬರಬೇಕಾಯಿತ್ತು.
ಇಂತೀ
ಮಹಾಘನದ
ಬೆಳಕಿನೊಳಗೆ
ಕಳೆದುಳಿದು
ಸುಳಿದಾಡಿ
ನಿಮ್ಮ
ಪಾದವ
ಕಂಡು
ಸುಯಿಧಾನಿಯಾದೆ
ಕಾಣಾ
ಚೆನ್ನಮಲ್ಲಿಕಾರ್ಜುನಯ್ಯಾ