ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭವಪಾಶದಿಂದೆ ಕಟ್ಟುವಡೆದು ಕಂಗೆಟ್ಟ ಮನುಜನು ಶ್ರೀಗುರುವಿನ ಕರುಣವ ಪಡೆಯಬೇಕಾಗಿ ಆ ಗುರುವಿನಿರವ ಬೆದಕುತ್ತಿರುವಲ್ಲಿ
ಶಿಷ್ಯತಂಡವನೊಳಕೊಂಡ ಒರ್ವ ದೇಶಿಕನ ಕಂಡು
ಕೆಲಕಾಲ ಆತನ ಸೇವೆಯಲ್ಲಿರಬೇಕು. ಆತನಲ್ಲಿ ಜ್ಞಾನಾಚಾರಂಗಳಿಲ್ಲದುದ ಕಂಡಡೆ ಆತನನ್ನುಳಿದು ಗುರುಲಕ್ಷಣದಿಂದೊಪ್ಪುವ ಮತ್ತೊರ್ವ ಮಹಿಮನೆಡೆಗೈದಿ ಪರಕಿಸಿ ಮನದಟ್ಟಾದಲ್ಲಿ ಆತನಿಂದೆ ಜ್ಞಾನದೀಕ್ಷೆಯ ಪಡೆಯಬೇಕು. ಇದು ಸದ್ಭಾವಿಗಳ ಸನ್ಮಾರ್ಗವಯ್ಯಾ
ಕೂಡಲಚೆನ್ನಸಂಗಮದೇವಾ.