ವಿಷಯಕ್ಕೆ ಹೋಗು

ಭವರೋಗವೈದ್ಯನೆಂದು ನಾ ನಿಮ್ಮ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ
ಭಕ್ತಿದಾಯಕ ನೀನು ಕರುಣಿಸು ಲಿಂಗತಂದೆ. ಜಯ ಜಯ ಶ್ರೀ ಮಹಾದೇವ
ಜಯ ಜಯ ಶ್ರೀ ಮಹಾದೇವ
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು. ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು. 484