ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು,
ಗೋಚರ
ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು
ಜಂಗಮವ ಕಂಡು ಗೃಹಕ್ಕೆ ಬಿಜಯಂಗೈಸಿ ತಂದು
ತೊತ್ತಿನ ಕೈಯಲ್ಲಿ ಅಗ್ಗವಣಿಯ ತಂದಿರಿಸಿ ಪಾದಾರ್ಚನೆಯ ಮಾಡುವ ಭಕ್ತನ ಯುಕ್ತಿಯ ಕೇಳಿರಣ್ಣಾ ! ಭಕ್ತರ ಬಸುರಲ್ಲಿ ಬರುತ ಬರುತಲಾ ತೊತ್ತಿನ ಬಸುರಲ್ಲಿ ಬರುತ್ತಿಪ್ಪನು ಕಾಣಾ ಕೂಡಲಚೆನ್ನಸಂಗಮದೇವಾ.