ಭವಿಯೆಂಬುದು ಹುಸಿ ಭಕ್ತಿಯೆಂಬುದು ಉಪದೇಶ. ಶೀಲವೆಂಬುದು ಸಂಕಲ್ಪ ಸಮತೆಯೆಂಬುದು ಸೂತಕ._ ಇಂತೀ ಚತುರ್ವಿಧದೊಳಗಿಲ್ಲ ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!