ಭವಿಯ ಮನೆಯಲ್ಲಿ ಭವಿಪಾಕವಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭವಿಯ ಮನೆಯಲ್ಲಿ ಭವಿಪಾಕವಲ್ಲದೆ ಭಕ್ತನ ಮನೆಯಲ್ಲಿ ಭವಿಪಾಕವಿಲ್ಲ. ಆ ಭಕ್ತನೂ ಆ ಭಕ್ತನ ಸ್ತ್ರೀಯೂ ಲಿಂಗ ಮುಂತಾಗಿ ಗುರುಲಿಂಗ ಜಂಗಮಕ್ಕೆ ಬೇಕೆಂದು ಭಕ್ತಿರತಿಯಿಂದ ಲಿಂಗಹಸ್ತದಲ್ಲಿ ಮಾಡಿದ ಸರ್ವದ್ರವ್ಯಂಗಳು ಸಕಲಪದಾರ್ಥಂಗಳೆಲ್ಲವೂ ಶುದ್ಧಪಾಕ
ಅತ್ಯಂತ ಪವಿತ್ರಪಾಕ
ಲಿಂಗಕ್ಕೆ ಸಲುವುದು. ಅದನತಿಗಳೆದಡೆ ದ್ರೋಹ
ಲಿಂಗಕ್ಕೆ ಕೊಟ್ಟುಕೊಳಬೇಕು ಕೂಡಲಚೆನ್ನಸಂಗಮದೇವಾ