ವಿಷಯಕ್ಕೆ ಹೋಗು

ಭವಿಯ ಮನೆಯಲ್ಲಿ ಭವಿಯ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಭವಿಯ ಮನೆಯಲ್ಲಿ ಭವಿಯ ಹಸ್ತದಲ್ಲಿ ಭವಿಪಾಕವಲ್ಲದೆ
ಭಕ್ತರ ಮನೆಯಲ್ಲಿ ಭಕ್ತರ ಹಸ್ತದಲ್ಲಿ ಭವಿಪಾಕವುಂಟೆ ? ಇಲ್ಲ ಇಲ್ಲ. ಸುಡಲಿವದಿರ ಭಕ್ತಿಯೆಂತಹುದೊ
ಯುಕ್ತಿಯಂತಹುದೊ
ಶೀಲವೆಂತಹುದೊ ! ಸದ್ಭಕ್ತಿಯಿಂದ ಮಾಡಿ ನೀಡುವ ಭಕ್ತನು ಭಕ್ತದೇಹಿಕದೇವ ಆತ ತಾನೆ ಪರಶಿವನು. ಆ ಭಕ್ತನ ಹಸ್ತದಿಂದ ಬಂದ ದ್ರವ್ಯಪದಾರ್ಥಂಗಳೆಲ್ಲವೂ ಪ್ರಸನ್ನತ್ವದಿಂದ ಬಂದುವಾಗಿ ಪ್ರಸಾದ
ಲಿಂಗಕ್ಕೆ ಕೊಟ್ಟು ಕೊಂಬುದು. ಅದು ತಾನೆ ಶುದ್ಧ ಸಿದ್ಧ ಪ್ರಸಿದ್ಧಪ್ರಸಾದವು. ಆ ಮಹಿಮನು ಭಕ್ತದೇಹಿಕದೇವನೆಂದು ಭಾವಶುದ್ಧಿಯಿಂದ ಪ್ರಸಾದವ ಕೊಂಡಡೆ ಅದೇ ಮಹಾಪ್ರಸಾದ ಕೂಡಲಚೆನ್ನಸಂಗಯ್ಯಾ.