ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ ? ವೇಶಿ ಭಕ್ತೆಯಾದರೇನಯ್ಯಾ ಎಂಜಲ ತಿಂಬುದ ಬಿಡದನ್ನಕ್ಕ ? ಅರಸು ಭಕ್ತನಾದರೇನಯ್ಯಾ
ಅಹಂಕಾರವಳಿಯದನ್ನಕ್ಕ ?_ ಇಂತೀ ಮೂವರಿಗೆ ಲಿಂಗವ ಕೊಟ್ಟಾತ ವ್ಯವಹಾರಿ
ಕೊಂಡಾತ ಲಾಭಗಾರ_ ಇವರ ಭಕ್ತಿಯೆಂಬುದು
ಒಕ್ಕಲಗಿತ್ತಿ ಹೊಸ್ತಿಲ ಪೂಜೆಯ ಮಾಡಿ
ಇಕ್ಕಾಲಿಕ್ಕಿ ದಾಟಿದಂತಾಯಿತ್ತು. ಹಟ್ಟಿಯ ಹೊರಗೆ ಬೆನವನ ಪೂಜೆಯ ಮಾಡಿ ತಿಪ್ಪೆಯೊಳಗೆ ಬಿಟ್ಟಂತಾಯಿತ್ತು. ಜಂಗಮದ ಪೂಜೆಯ ಮಾಡಿ ನೈಷೆ*ಯಿಲ್ಲದ ಭ್ರಷ್ಟರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?