ವಿಷಯಕ್ಕೆ ಹೋಗು

ಭಾಂಡ ಭಾಜನ ಪದಾರ್ಥ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಭಾಂಡ ಭಾಜನ ಪದಾರ್ಥ ತ್ರೈವಿಧ ಪ್ರಸಾದವವ್ವಾ
ಅಂಗಲೇಪನ ಸರ್ವಪ್ರಸಾದವವ್ವಾ
ರೋಮ ರೋಮ ಪ್ರಸಾದವವ್ವಾ
ಸ್ವಯಂ ಕೂಡಲಚೆನ್ನಸಂಗನ ಪ್ರಸಾದವವ್ವಾ.