ಭಾನುವಿನಂತಿಪ್ಪುದು ಜ್ಞಾನ ಭಾನುಕಿರಣದಂತಿಪ್ಪುದು ಭಕ್ತಿ. ಭಾನುವನುಳಿದು ಕಿರಣಂಗಳಿಲ್ಲ ಕಿರಣಂಗಳನುಳಿದು ಭಾನುವಿಲ್ಲ. ಜ್ಞಾನವಿಲ್ಲದ ಭಕ್ತಿ ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ ?