ವಿಷಯಕ್ಕೆ ಹೋಗು

ಭಾವವಿಲ್ಲದ ಮೂರ್ತಿಗೊಂಡಾತ ಬಯಲಮೂರ್ತಿಯಾದವ

ವಿಕಿಸೋರ್ಸ್ದಿಂದ


ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಭಾವವಿಲ್ಲದ
ಬಯಲಮೂರ್ತಿಯಾದವ
ಭಕ್ತ.

ಭಕ್ತನ
ಹೃದಯದಲ್ಲಿ
ಮೂರ್ತಿಗೊಂಡಾತ
ಜಂಗಮ.

ಜಂಗಮದ
ಅಂಗೈಯೊಳಿರ್ಪುದು
ಲಿಂಗ.

ಲಿಂಗದ
ಗರ್ಭದೊಳಗೆ
ಸಕಲ
ಸ್ಥಲಕುಳಂಗಳಿರ್ಪವು
ನೋಡಾ
ಅಖಂಡೇಶ್ವರಾ.