ಭಾವವೇ ? ಬ್ರಹ್ಮವಾದ

ವಿಕಿಸೋರ್ಸ್ದಿಂದ



Pages   (key to Page Status)   


ಭಾವವೇ
ಬ್ರಹ್ಮವಾದ
ಬಳಿಕ
ಇನ್ನಾವ
ವೇಷವ
ತೊಡಲೇತಕೋ
?
ತನುವೇ
ಲಿಂಗವಾದ
ಬಳಿಕ
ಆವ
ಫಲಪದದ
ಹಂಗೇತಕೊ
?
ಮನದಲ್ಲಿ
ತನಗೆ
ತಾನೆ
ಸ್ವಾತ್ಮಜ್ಞಾನ
ಉದಯವಾದ
ಬಳಿಕ
ಇನ್ನು
ಹಲವು
ಶಾಸ್ತ್ರವನೋದಿ
ತಿಳಿಯಬೇಕೆಂಬ
ಸಂದೇಹವೇತಕೊ
?
ಒಳಹೊರಗೆ
ಸರ್ವಾಂಗದಲ್ಲಿ
ಮಹಾಜ್ಞಾನವೆ
ತುಂಬಿದ
ಬಳಿಕ
ಮುಂದೆ
ಮುಕ್ತಿಯ
ಪಡೆಯಬೇಕೆಂಬ
ಭ್ರಾಮಕವೇತಕೊ
?
ಇದು
ಸತ್ಯದ
ನಡೆಯಲ್ಲ
;
ಶರಣರ
ಮೆಚ್ಚಲ್ಲ
;
ನಮ್ಮ
ಅಖಂಡೇಶ್ವರನ
ಒಲುಮೆ
ಮುನ್ನವೆ
ಅಲ್ಲ.