ಭಾವ ಬೀಸರವಾಯಿತ್ತು, ಮನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು ; ಆನೇವೆನಯ್ಯಾ ? ಆಳಿತನದ ಮನ ತಲೆಕೆಳಗಾಯಿತ್ತು ; ಆನೇವೆನಯ್ಯಾ ? ಬಿಚ್ಚಿ ಬೇರಾಗದ ಭಾವವಾಗೆ
ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ
ಚೆನ್ನಮಲ್ಲಿಕಾರ್ಜುನಾ ?